ಟಾಲಿವುಡ್‌ ನ್ಯೂಸ್:‌ ಪತಿಯೊಂದಿಗೆ ಸೇರಿ ಯುವತಿ ಮೇಲೆ ಹಲ್ಲೆ ಆರೋಪ; ಜಾನಿ ಮಾಸ್ಟರ್‌ ಪತ್ನಿ ಆಯೇಷಾ ಬಂಧನ ಸಾಧ್ಯತೆ
ಕನ್ನಡ ಸುದ್ದಿ  /  ಮನರಂಜನೆ  /  ಟಾಲಿವುಡ್‌ ನ್ಯೂಸ್:‌ ಪತಿಯೊಂದಿಗೆ ಸೇರಿ ಯುವತಿ ಮೇಲೆ ಹಲ್ಲೆ ಆರೋಪ; ಜಾನಿ ಮಾಸ್ಟರ್‌ ಪತ್ನಿ ಆಯೇಷಾ ಬಂಧನ ಸಾಧ್ಯತೆ

ಟಾಲಿವುಡ್‌ ನ್ಯೂಸ್:‌ ಪತಿಯೊಂದಿಗೆ ಸೇರಿ ಯುವತಿ ಮೇಲೆ ಹಲ್ಲೆ ಆರೋಪ; ಜಾನಿ ಮಾಸ್ಟರ್‌ ಪತ್ನಿ ಆಯೇಷಾ ಬಂಧನ ಸಾಧ್ಯತೆ

ಕೊರಿಯೋಗ್ರಾಫರ್‌ ಜಾನಿ ಮಾಸ್ಟರ್‌ ಪ್ರಕರಣ ಟಾಲಿವುಡ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಜಾನಿ ಮಾಸ್ಟರ್‌, ಯುವತಿಯ ಮೇಲೆ ಅತ್ಯಾಚಾರ ಮಾಡಿದ್ದೂ ಅಲ್ಲದೆ ಆಕೆಯನ್ನು ಬೆದರಿಸಿದ್ದಾರೆ, ಆಕೆ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಪತಿ ಜೊತೆ ಸೇರಿ ಸಂತ್ರಸ್ತೆ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಪತ್ನಿ ಆಯೆಷಾ ಕೂಡಾ ಬಂಧನವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಟಾಲಿವುಡ್‌ ನ್ಯೂಸ್:‌ ಪತಿಯೊಂದಿಗೆ ಸೇರಿ ಯುವತಿ ಮೇಲೆ ಹಲ್ಲೆ ಆರೋಪ; ಜಾನಿ ಮಾಸ್ಟರ್‌ ಪತ್ನಿ ಆಯೇಷಾ ಬಂಧನ ಸಾಧ್ಯತೆ
ಟಾಲಿವುಡ್‌ ನ್ಯೂಸ್:‌ ಪತಿಯೊಂದಿಗೆ ಸೇರಿ ಯುವತಿ ಮೇಲೆ ಹಲ್ಲೆ ಆರೋಪ; ಜಾನಿ ಮಾಸ್ಟರ್‌ ಪತ್ನಿ ಆಯೇಷಾ ಬಂಧನ ಸಾಧ್ಯತೆ

21 ವರ್ಷದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಟಾಲಿವುಡ್‌ ಕೊರಿಯೋಗ್ರಾಫರ್‌ ಜಾನಿ ಮಾಸ್ಟರ್‌ ಅರೆಸ್ಟ್‌ ಆಗಿದ್ದಾರೆ. ಸದ್ಯಕ್ಕೆ ಜಾನಿ ಮಾಸ್ಟರ್‌ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಸುದ್ದಿ ತೆಲುಗು ಚಿತ್ರರಂಗದಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಈ ನಡುವೆ ಯಾವುದೇ ಸಮಯದಲ್ಲಾದರೂ ಜಾನಿ ಮಾಸ್ಟರ್‌ ಪತ್ನಿ ಆಯೆಷಾ ಕೂಡಾ ಆರೆಸ್ಟ್‌ ಆಗಬಹುದು ಎನ್ನಲಾಗುತ್ತಿದೆ.

4 ವರ್ಷಗಳ ಹಿಂದೆಯೇ ಅತ್ಯಾಚಾರ

4 ವರ್ಷಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಪರಿಚಯವಾಗಿದ್ದ ಅಪ್ರಾಪ್ತ ಯುವತಿಯನ್ನು ಜಾನಿ ಮಾಸ್ಟರ್‌ ತಮ್ಮ ತಂಡಕ್ಕೆ ಸೇರಿಸಿಕೊಂಡಿದ್ದರು. ಆದರೆ ಮುಂಬೈಗೆ ಚಿತ್ರೀಕರಣಕ್ಕೆ ಹೋದ ಸಮಯದಲ್ಲಿ ಹೋಟೆಲ್‌ ರೂಮ್‌ನಲ್ಲಿ ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು ಅಂದಿನಿಂದ ಅನೇಕ ಬಾರಿ ಸಂತ್ರಸ್ತೆಯ ಮೇಲೆ ಅತ್ಯಾಚಾರ ಮಾಡುತ್ತಲೇ ಬಂದಿದ್ದಾಗಿ ಆಕೆ ದೂರಿನಲ್ಲಿ ಉಲ್ಲೇಖಿಸಿದ ಕಾರಣ ಪೊಲೀಸರು ಜಾನಿ ಮಾಸ್ಟರ್‌ ಅರೆಸ್ಟ್‌ ಮಾಡಿದ್ದರು. ಆತನ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಿದ್ದರು. ಜಾನಿ ಮಾಸ್ಟರ್‌ ಕೂಡಾ ತಪ್ಪು ಒಪ್ಪುಕೊಂಡಿರುವುದಾಗಿ ವರದಿ ಆಗಿತ್ತು.

ಸಂತ್ರಸ್ತೆ ಮೇಲೆ ಜಾನಿ ಮಾಸ್ಟರ್‌ ಪತ್ನಿ ದೂರು

ಪತಿ ಅರೆಸ್ಟ್‌ ಆಗುತ್ತಿದ್ದಂತೆ ಜಾನಿ ಮಾಸ್ಟರ್‌ ಪತ್ನಿ ಆಯೆಷಾ, ಆಕ್ರೋಶ ವ್ಯಕ್ತಪಡಿಸಿದ್ದರು. ಪತಿಯನ್ನು ಅರೆಸ್ಟ್‌ ಮಾಡಿದ್ದಕ್ಕೆ ಕಾರಣವೇನು? ಅವರು ಅತ್ಯಾಚಾರ ಮಾಡಿರುವುದಕ್ಕೆ ಸಾಕ್ಷಿ ಏನಿದೆ ಎಂದು ಪ್ರಶ್ನಿಸಿದ್ದರು. ಜೊತೆಗೆ ತೆಲುಗು ಫಿಲ್ಮ್‌ ಚೇಂಬರ್‌ಗೆ ಪತ್ರ ಬರೆದು ನಮಗೆ ನ್ಯಾಯ ಒದಗಿಸಿಕೊಂಡುವಂತೆ ಮನವಿ ಮಾಡಿದ್ದರು. ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆ ಹುಡುಗಿ ಚಿತ್ರರಂಗದಲ್ಲಿ ಬೆಳೆಯಲು ನನ್ನ ಪತಿಯನ್ನು ಬಳಸಿಕೊಂಡಳು, ಆಕೆಗೆ ಇದೇ ಕೆಲಸ, ಹಣ ಇರುವವರನ್ನು ಬಲೆಗೆ ಬೀಳಿಸಿಕೊಳ್ಳುತ್ತಾಳೆ ಎಂದು ಆರೋಪಿಸಿದ್ದರು. ಆದರೆ ಪ್ರಕರಣದಲ್ಲಿ ಆಯೆಷಾ ಪಾತ್ರ ಕೂಡಾ ಇದೆ ಎನ್ನಲಾಗುತ್ತಿದೆ. ಜಾನಿ ಮಾಸ್ಟರ್‌, ಆ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದಾಗ ವಿಚಾರವನ್ನು ಎಲ್ಲೂ ತಿಳಿಸದಂತೆ ಬೆದರಿಕೆ ಒಡ್ಡಿದ್ದರು.

ಯಾವುದೇ ಸಮಯದಲ್ಲಾದರೂ ಆಯೆಷಾ ಬಂಧನ ಸಾಧ್ಯತೆ

ಪತಿ ಜೊತೆ ಸೇರಿದ ಆಯೆಷಾ ಕೂಡಾ ಆ ಅಪ್ರಾಪ್ತೆಗೆ ಬೆದರಿಕೆ ಹಾಕಿದ್ದರು, ಆಕೆಯ ಮೇಲೆ ಹಲ್ಲೆ ಕೂಡಾ ಮಾಡಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಯಾವುದೇ ಸಮಯದಲ್ಲಾದರೂ ಆಯೆಷಾ ಕೂಡಾ ಅರೆಸ್ಟ್‌ ಆಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಫಿಲ್ಮ್‌ ಚೇಂಬರ್‌ಗೆ ನೀಡಿದ ದೂರಿನಲ್ಲಿ ಆಯೆಷಾ, ಆ ಹುಡುಗಿ ನನ್ನ ಪತಿಯನ್ನು ಮನೆಗೆ ಬರಲು ಬಿಡುತ್ತಿರಲಿಲ್ಲ. ನಾನು ಈ ಬಗ್ಗೆ ವಿಚಾರಿಸಿದ್ದಕ್ಕೆ ಅವರು ನನ್ನ ಅಣ್ಣ ಇದ್ದಂತೆ, ನೀವು ನನ್ನ ಅತ್ತಿಗೆಯಂತೆ ಎಂದು ಹೇಳುತ್ತಿದ್ದಳು. ಆಕೆಗೆ ಇತರ ಶ್ರೀಮಂತ ವ್ಯಕ್ತಿಗಳ ಜೊತೆ ಅಫೇರ್‌ ಇದೆ. ಆದರೆ ನನ್ನ ಪತಿ ಮೇಲೆ ಆಕೆ ಮಾಡಿರುವ ಆರೋಪ ಸುಳ್ಳು ಎಂದು ಆಯೇಷಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಯಾವುದು ಸತ್ಯ ಯಾವುದು ಸುಳ್ಳು ಅನ್ನೋದು ತನಿಖೆಯಿಂದಷ್ಟೇ ಬೆಳಕಿಗೆ ಬರಬೇಕಿದೆ.

Whats_app_banner