ಕನ್ನಡ ಸುದ್ದಿ  /  ಮನರಂಜನೆ  /  ಕೊನೆಗೂ ಮದುವೆ ಮುನ್ಸೂಚನೆ ನೀಡಿ, ಫ್ಯಾನ್ಸ್‌ ತಲೆಗೆ ಹುಳ ಬಿಟ್ಟ ಡಾರ್ಲಿಂಗ್‌ ಪ್ರಭಾಸ್‌; ಅಷ್ಟಕ್ಕೂ ಹುಡುಗಿ ಯಾರಿರಬಹುದು?

ಕೊನೆಗೂ ಮದುವೆ ಮುನ್ಸೂಚನೆ ನೀಡಿ, ಫ್ಯಾನ್ಸ್‌ ತಲೆಗೆ ಹುಳ ಬಿಟ್ಟ ಡಾರ್ಲಿಂಗ್‌ ಪ್ರಭಾಸ್‌; ಅಷ್ಟಕ್ಕೂ ಹುಡುಗಿ ಯಾರಿರಬಹುದು?

ನಮ್ಮ ಜೀವನಕ್ಕೆ ವಿಶೇಷ ವ್ಯಕ್ತಿಯ ಆಗಮನವಾಗಲಿದೆ ಎಂದು ನಟ ಪ್ರಭಾಸ್‌ ಸೋಷಿಯಲ್‌ ಮೀಡಿಯಾ ಸ್ಟೋರಿ ಹಂಚಿಕೊಳ್ಳುತ್ತಿದ್ದಂತೆ ಅಭಿಮಾನಿಗಳ ಎದೆಬಡಿತ ಹೆಚ್ಚಾಗಿದೆ. ಅಷ್ಟಕ್ಕೂ ಇದು ಮದುವೆ ವಿಷಯ ಎಂದೇ ಎಲ್ಲ ಕಡೆ ಸುದ್ದಿಯಾಗುತ್ತಿದೆ.

ಕೊನೆಗೂ ಮದುವೆ ಮುನ್ಸೂಚನೆ ನೀಡಿ, ಫ್ಯಾನ್ಸ್‌ ತಲೆಗೆ ಹುಳ ಬಿಟ್ಟ ಡಾರ್ಲಿಂಗ್‌ ಪ್ರಭಾಸ್‌; ಅಷ್ಟಕ್ಕೂ ಹುಡುಗಿ ಯಾರಿರಬಹುದು?
ಕೊನೆಗೂ ಮದುವೆ ಮುನ್ಸೂಚನೆ ನೀಡಿ, ಫ್ಯಾನ್ಸ್‌ ತಲೆಗೆ ಹುಳ ಬಿಟ್ಟ ಡಾರ್ಲಿಂಗ್‌ ಪ್ರಭಾಸ್‌; ಅಷ್ಟಕ್ಕೂ ಹುಡುಗಿ ಯಾರಿರಬಹುದು?

Prabhas: ಸೌತ್‌ನ ಸ್ಟಾರ್‌ ನಟ ಪ್ರಭಾಸ್‌ ಸಿನಿಮಾ ವಿಚಾರಕ್ಕೆ ಸುದ್ದಿಯಾದಷ್ಟೇ ವೈಯಕ್ತಿಕ ವಿಚಾರಕ್ಕೂ ಆಗಾಗ ಮುನ್ನೆಲೆಗೆ ಬರುತ್ತಲೇ ಇರುತ್ತಾರೆ. ಅದರಲ್ಲೂ ಮದುವೆ ಸುದ್ದಿಯಂತೂ ಅವರಿಗೇ ಕೇಳಿ ಕೇಳಿ ಸಾಕಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ನಿತ್ಯ ಅವರ ಫ್ಯಾನ್ಸ್‌ ಇದೇ ವಿಚಾರದ ಬಗ್ಗೆ ಪ್ರಶ್ನೆ ಮಾಡುತ್ತಲೇ ಇರುತ್ತಾರೆ. ಪ್ರಭಾಸ್‌ ಮದುವೆ ವಿಚಾರ ಟ್ರೆಂಡ್‌ನಲ್ಲಿರುವ ಟಾಪಿಕ್.‌ ಅದರಲ್ಲೂ ಅನುಷ್ಕಾ ಶೆಟ್ಟಿ ಅವರನ್ನೇ ನಟ ಪ್ರಭಾಸ್‌ ಮದುವೆ ಆಗಲಿದ್ದಾರೆ ಎಂಬಂಥ ಸುದ್ದಿಗಳಿಗೇನೂ ಕೊರತೆ ಇಲ್ಲ. ಹೀಗೆ ಫ್ಯಾನ್ಸ್‌ ಬಾಯಿಂದ ಬರುತ್ತಿದ್ದ ಮಾತೀಗ, ಸ್ವತಃ ಪ್ರಭಾಸ್‌ ಕಡೆಯಿಂದಲೇ ಬಂದಿದೆ.

ಟ್ರೆಂಡಿಂಗ್​ ಸುದ್ದಿ

ಹೌದು, ಪ್ರಭಾಸ್‌ ಮದುವೆಯಾಗುತ್ತಿದ್ದಾರೆ! ಈ ವಿಚಾರವನ್ನು ಸ್ವತಃ ಅವರೇ ಸೋಷಿಯಲ್‌ ಮೀಡಿಯಾದಲ್ಲಿ ಸ್ಟೋರಿ ಶೇರ್‌ ಮಾಡಿದ್ದಾರೆ. ಈ ಸುದ್ದಿ ಕೇಳಿದ ಪ್ರಭಾಸ್‌ ಅವರ ಅಭಿಮಾನಿಗಳು ಹುಚ್ಚೆದ್ದು ಕುಣಿದಾಡುತ್ತಿದ್ದಾರೆ. ಇನ್ನು ಕೆಲವರು ನಟನ ಸ್ಟೋರಿಯನ್ನೇ ಸ್ಕ್ರೀನ್‌ ಶಾಟ್‌ ರೂಪದಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಳ್ಳುತ್ತ ಸಂಭ್ರಮಿಸುತ್ತಿದ್ದಾರೆ. ಹಾಗಾದರೆ, ಪ್ರಭಾಸ್‌ ಪೋಸ್ಟ್‌ನಲ್ಲೇನಿದೆ? ಇದು ಖಂಡಿತವಾಗಿಯೂ ಮದುವೆ ಕುರಿತ ಪೋಸ್ಟಾ? ಮುಂದೆ ಓದಿ.

ಹೌದು, ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮತ್ತೊಮ್ಮೆ ದೇಶದಾದ್ಯಂತ ಟ್ರೆಂಡಿಂಗ್‌ನಲ್ಲಿದ್ದಾರೆ. ಆದರೆ ಈ ಬಾರಿ ಅದು ಸಿನಿಮಾಗೆ ಸಂಬಂಧಿಸಿದ್ದಲ್ಲ, ಬದಲಿಗೆ ಮದುವೆ ಕುರಿತ ಸುದ್ದಿ! ಅವರ ಇನ್‌ಸ್ಟಾ ಸ್ಟೋರಿ ಪೋಸ್ಟ್ ಸಾಮಾಜಿಕ ಜಾಲತಾಣಗಳನ್ನು ಶೇಕ್‌ ಮಾಡುತ್ತಿದೆ. ಪೋಸ್ಟ್ ನೋಡಿದವರೆಲ್ಲಾ ಪ್ರಭಾಸ್ ಮದುವೆ ಬಗ್ಗೆ ಮಾತನಾಡುತ್ತಿದ್ದು, ನಮ್ಮ ಜೀವನದಲ್ಲಿ ಒಬ್ಬ ವಿಶೇಷ ವ್ಯಕ್ತಿ ಬರಲಿದ್ದಾರೆ, ನಿರೀಕ್ಷಿಸಿ ಎಂದಿದ್ದಾರೆ.

ಪ್ರಭಾಸ್‌ ಪೋಸ್ಟ್‌ನಲ್ಲೇನಿದೆ?

ಪ್ರಭಾಸ್‌ ಟಾಲಿವುಡ್‌ನ ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್. ಇವರ ಮದುವೆಗಾಗಿ ಅವರ ಅಭಿಮಾನಿ ಬಳಗವೇ ಕಾಯುತ್ತಿದೆ. ಹೀಗಿರುವಾಗಲೇ ಶುಭ ಶುಕ್ರವಾರದಂದು ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿಯೊಂದನ್ನು ಶೇರ್‌ ಮಾಡಿದ್ದಾರೆ. ಅದನ್ನು ನೋಡಿದ ಫ್ಯಾನ್ಸ್‌ ಸೀಟಿನ ತುದಿಗೆ ಬಂದು ಕೂತಿದ್ದಾರೆ. ಅಷ್ಟಕ್ಕೂ ಪ್ರಭಾಸ್‌ ಬರೆದಿದ್ದೇನೆಂದರೆ, "ಡಾರ್ಲಿಂಗ್ಸ್‌!! ಕೊನೆಗೂ ವಿಶೇಷವಾದವರೊಬ್ಬರು ನಮ್ಮ ಜೀವನವನ್ನು ಪ್ರವೇಶಿಸಲಿದ್ದಾರೆ.. ಸ್ವಲ್ಪ ಕಾಯಿರಿ" ಎಂದು ಬರೆದುಕೊಂಡಿದ್ದಾರೆ.

ಅನುಷ್ಕಾ ಹೆಸರು ಮತ್ತೆ ಮುನ್ನೆಲೆಗೆ

ನಟ ಪ್ರಭಾಸ್‌ ಹೆಸರು ಮಂಗಳೂರು ಮೂಲದ ನಟಿ ಅನುಷ್ಕಾ ಶೆಟ್ಟಿ ಅವರೊಂದಿಗೆ ಮಾತ್ರ ತಳುಕು ಹಾಕಿಕೊಂಡಿದೆ. ಈ ಜೋಡಿ ಒಟ್ಟಿಗೆ ಸಾಕಷ್ಟು ಬ್ಲಾಕ್‌ ಬಸ್ಟರ್‌ ಸಿನಿಮಾಗಳನ್ನು ನೀಡಿದೆ. ಅಂದಿನಿಂದಲೂ ಈ ಜೋಡಿ ನಡುವೆ ಏನೋ ಇದೆ, ಇಬ್ಬರೂ ಡೇಟಿಂಗ್‌ನಲ್ಲಿದ್ದಾರೆ, ಇನ್ನೇನು ಮದುವೆಯಾಗಲಿದ್ದಾರೆ ಎಂಬ ಗಾಸಿಪ್‌ಗಳು ಹರಿದಾಡುತ್ತಲೇ ಇದ್ದವು. ಆದರೆ, ಆ ಬಗ್ಗೆ ಅನುಷ್ಕಾ ಶೆಟ್ಟಿ ಆಗಲಿ, ಪ್ರಭಾಸ್‌ ಆಗಲಿ ತುಟಿ ಬಿಚ್ಚಿಲ್ಲ. ಅಭಿಮಾನಿಗಳ ಪ್ರಶ್ನೆಗೂ ಉತ್ತರಿಸುವ ಗೋಜಿಗೆ ಹೋಗಿರಲಿಲ್ಲ. ಇದೀಗ ಸ್ವತಃ ಪ್ರಭಾಸ್‌ ಮದುವೆ ಸುಳಿವು ನೀಡಿದ್ದಾರೆ ಎಂದೇ ಹೇಳಲಾಗುತ್ತಿದೆ.

ಕಲ್ಕಿ ಕುರಿತ ಸುದ್ದಿ ಎಂದೂ ಊಹೆ

ಪ್ರಭಾಸ್ ಶೇರ್‌ ಮಾಡಿರುವ ಸ್ಟೋರಿ ನೋಡಿದರೆ, ಇದು ಮದುವೆ ಕುರಿತ ಪೋಸ್ಟ್ ಎಂದೇ ಎಲ್ಲರೂ ಊಹಿಸುತ್ತಿದ್ದಾರೆ. ಬೆಳಗ್ಗೆಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರವೇ ಚರ್ಚೆಯಲ್ಲಿದೆ. ಇದು ಖಂಡಿತಾ ಮದುವೆಗೆ ಸಂಬಂಧಿಸಿದ ಸುದ್ದಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಆದರೆ ಇದು ಕಲ್ಕಿ 2898 ಚಿತ್ರದ ಅಪ್‌ಡೇಟ್ ಎಂದು ಇತರರು ಊಹಿಸುತ್ತಿದ್ದಾರೆ. ಅದು ಏನೇ ಸುದ್ದಿಯಾದರೂ ಪ್ರಭಾಸ್‌ ಅವರೇ ಹೇಳುವವರೆಗೂ ಸ್ಪಷ್ಟತೆ ಇರುವುದಿಲ್ಲ.

ಇನ್ನು ಸಿನಿಮಾ ಬಗ್ಗೆ ಹೇಳುವುದಾದರೆ, ಸಲಾರ್‌ ಯಶಸ್ಸಿನ ಬಳಿಕ ಕಲ್ಕಿ ಚಿತ್ರದ ಬಿಡುಗಡೆಯ ಕೆಲಸಗಳಲ್ಲಿ ನಟ ಪ್ರಭಾಸ್‌ ಬಿಜಿಯಾಗಿದ್ದಾರೆ. ತಾರಾಗಣ ಮತ್ತು ಬಜೆಟ್‌ ವಿಚಾರವಾಗಿಯೇ ಸದ್ದು ಮಾಡಿರುವ ಈ ಸಿನಿಮಾ, ಜೂನ್‌ 27ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ನಾಗ್‌ ಅಶ್ವಿನ್‌ ಈ ಚಿತ್ರದ ನಿರ್ದೇಶಕರು. ಅಮಿತಾಬ್‌ ಬಚ್ಚನ್‌, ದೀಪಿಕಾ ಪಡುಕೋಣೆ, ಕಮಲ್‌ ಹಾಸನ್‌ ಸೇರಿ ಸಾಕಷ್ಟು ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿದ್ದಾರೆ.

ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.

ಟಿ20 ವರ್ಲ್ಡ್‌ಕಪ್ 2024