Devara Collection: ದೇವರೇ ಇದೆಂಥ ಆರಂಭ, ಮೊದಲ ದಿನವೇ 100 ಕೋಟಿ; ಜೂನಿಯರ್ ಎನ್‌ಟಿಆರ್ ದೇವರ ಸಿನಿಮಾದ ಗಳಿಕೆಯ ಮುನ್ನೋಟ
Devara Collection: ಜೂನಿಯರ್ ಎನ್‌ಟಿಆರ್ ನಟನೆಯ ದೇವರ ಸಿನಿಮಾ ಚಿತ್ರಮಂದಿರಗಳಲ್ಲಿ ಇಂದು ಬಿಡುಗಡೆಯಾಗಿದ್ದು, ಭರ್ಜರಿ ಆರಂಭ ಪಡೆದಿದೆ. ಈ ಸಿನಿಮಾದ ಪ್ರಿ ಸೇಲ್ಸ್ ಟಿಕೆಟ್ ಮತ್ತು ಜಾಗತಿಕ ಬಾಕ್ಸ್ ಆಫೀಸ್ ವರದಿಯನ್ನು ಕಂಡು ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ದೇವರ ಚಲನಚಿತ್ರವು ಮೊದಲ ದಿನವೇ 100 ಕೋಟಿ ಕ್ಲಬ್ ಸೇರುವ ಮುನ್ಸೂಚನೆ ದೊರಕಿದೆ.
Devara Collection: ಬಹುನಿರೀಕ್ಷಿತ ತೆಲುಗು ಸಿನಿಮಾ ದೇವರ (Jr NTR's Devara: Part One) ಬಿಡುಗಡೆಯಾಗಿದೆ. ಈ ಚಿತ್ರದ ಜಾಗತಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮತ್ತು ಪ್ರಿ ಬುಕ್ಕಿಂಗ್ ಕಲೆಕ್ಷನ್ ನೋಡಿ ಜೂನಿಯರ್ ಎನ್‌ಟಿಆರ್ ಅಭಿಮಾನಿಗಳು ಉಘೇ ಉಘೇ ಎನ್ನುತ್ತಿದ್ದಾರೆ. ದೇವರ ಸಿನಿಮಾದ ಮೊದಲ ದಿನದ ಗಳಿಕೆಯೇ 100 ಕೋಟಿ ರೂಪಾಯಿ ದಾಟಲಿದೆ ಎಂದು ಬಾಕ್ಸ್ ಆಫೀಸ್ ಪಂಡಿತರು ಅಭಿಪ್ರಾಯಪಡುತ್ತಿದ್ದಾರೆ. ಈ ಮೂಲಕ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನವೇ 100 ಕೋಟಿ ಗಳಿಕೆ ಮಾಡಿದ ಎರಡನೇ ತೆಲುಗು ಸಿನಿಮಾದ ನಟ ಜೂನಿಯರ್ ಎನ್‌ಟಿಆರ್ ಆಗಲಿದೆ. ಈ ಹಿಂದೆ ಪ್ರಭಾಸ್ ಇದೇ ದಾಖಲೆ ಮಾಡಿದ್ದರು.
ದೇವರ ಅಡ್ವಾನ್ಸಡ್ ಬುಕ್ಕಿಂಗ್ ಕಲೆಕ್ಷನ್
ನಿನ್ನೆ ರಾತ್ರಿಯ ಲೆಕ್ಕದಲ್ಲಿ ನೋಡುವುದಾದರೆ ಭಾರತದಲ್ಲಿ ಒಟ್ಟು 10.74 ಲಕ್ಷ ದೇವರ ಸಿನಿಮಾ ಟಿಕೆಟ್‌ಗಳು ಅಡ್ವಾನ್ಸಡ್ ಬುಕ್ಕಿಂಗ್ ಆಗಿವೆ. ದೇಶದ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 27.52 ಕೋಟಿ ರೂಪಾಯಿ ಅಡ್ವಾನ್ಸಡ್ ಬುಕ್ಕಿಂಗ ಮೂಲಕ ಕಲೆಕ್ಷನ್ ಮಾಡಿದೆ. ಇದು ಆನ್‌ಲೈನ್ ಬುಕ್ಕಿಂಗ್‌ನ ಲೆಕ್ಕ ಮಾತ್ರ. ಬ್ಲಾಕ್ ಸೀಟ್ ಬುಕ್ಕಿಂಗ್ ಲೆಕ್ಕ ಇದರಲ್ಲಿ ಇಲ್ಲ. ಬ್ಲಾಕ್ ಸೀಟುಗಳ ಕಲೆಕ್ಷನ್ ಈಗಾಗಲೇ 42.63 ಕೋಟಿ ರೂಪಾಯಿ ತಲುಪಿದೆ ಎಂದು ಟ್ರೇಡ್ ವೆಬ್‌ಸೈಟ್ ಸಕ್‌ನಿಲ್ಕ್.ಕಾಂ ವರದಿ ಮಾಡಿದೆ.
ನಿರೀಕ್ಷೆಯಂತೆ ತೆಲುಗು ಮಾರುಕಟ್ಟೆಯಲ್ಲಿ ಕೊರಟಲ ಶಿವ ನಿರ್ದೇಶನದ ದೇವರ ಸಿನಿಮಾದ ಟಿಕೆಟ್ ಬುಕ್ಕಿಂಗ್ ಹೆಚ್ಚಾಗಿದೆ. ಮೊದಲ ದಿನ ಬ್ಲಾಕ್ ಸೀಟ್ ಹೊರತುಪಡಿಸಿ 10.19 ಲಕ್ಷ ಟಿಕೆಟ್‌ಗಳು ತೆಲುಗು ಮಾರುಕಟ್ಟೆಯಲ್ಲಿ ಬುಕ್ಕಿಂಗ್ ಆಗಿವೆ. ಇದರಿಂದ 26.49 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಆಗಿದೆ.
ದೇವರ ಸಿನಿಮಾ: ಜಾಗತಿಕ ಬಾಕ್ಸ್ ಆಫೀಸ್ ವರದಿ
ಮೊದಲ ದಿನ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಪ್ರಿ ಸೇಲ್ಸ್ ಟಿಕೆಟ್‌ನಲ್ಲಿ ದೇವರ ಸಿನಿಮಾ ಸುಮಾರು 50 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ವಿದೇಶಿ ಮಾರುಕಟ್ಟೆಯಲ್ಲಿ ಸುಮಾರು 42 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಸಿನಿಮಾ ಪಂಡಿತರ ಪ್ರಕಾರ ಮೊದಲ ದಿನ ದೇವರ ಸಿನಿಮಾದ ಕಲೆಕ್ಷನ್ 100 ಕೋಟಿ ರೂಪಾಯಿ ದಾಟಲಿದೆ. ಮೊದಲ ದಿನವೇ ಹಾಲಿವುಡ್‌ನ ಈಜಿಪ್ಟಿಯನ್ ಥಿಯೇಟರ್‌ನಲ್ಲಿ 9 ನಿಮಿಷದಲ್ಲಿ 516 ಸೀಟುಗಳು ಬುಕಕ್ ಆಗಿದ್ದವು. ಅಮೆರಿಕ ಹೊರತುಪಡಿಸಿ ಆಸ್ಟ್ರೇಲಿಯಾ, ಇಂಗ್ಲೆಂಡ್‌ನಲ್ಲೂ ಸಾವಿರಾರು ದೇವರ ಸಿನಿಮಾದ ಟಿಕೆಟ್‌ಗಳು ಮಾರಾಟವಾಗಿವೆ.
ಜೂನಿಯರ್ ಎನ್‌ಟಿಆರ್‌ನ ಅತ್ಯಧಿಕ ಗಳಿಕೆಯ ಸಿನಿಮಾ
ದೇವರ ಸಿನಿಮಾವು ಜೂನಿಯರ್ ಎನ್‌ಟಿಆರ್ ನಟಿಸಿದ (ಏಕಾಂಗಿಯಾಗಿ ಹೀರೋ ಆಗಿ ನಟಿಸಿದ) ಅತ್ಯಧಿಕ ಗಳಿಕೆಯ ಮೊದಲ ಸಿನಿಮಾವಾಗಲಿದೆ. ಈ ಸಿನಿಮಾ 30 ದಿನಗಳ ಬಳಿಕ ಓಟಿಟಿಗೆ ಬಾರದು. ಚಿತ್ರಮಂದಿರಗಳಲ್ಲಿಯೇ ಕನಿಷ್ಠ 50 ದಿನ ಪ್ರದರ್ಶನ ವಿಸ್ತರಿಸುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ.
ದೇವರ ಸಿನಿಮಾದ ತಾರಾಗಣ
ದೇವರ ಸಿನಿಮಾದಲ್ಲಿ ಜೂನಿಯರ್ ಎನ್‌ಟಿಆರ್, ಜಾಹ್ನವಿ ಕಪೂರ್, ಸೈಫ್ ಆಲಿ ಖಾನ್, ಚೈತ್ರಾ ರೈ, ಶ್ರುತಿ ಮರಾಠೆ ಸೇರಿದಂತೆ ಪ್ರಮುಖ ಕಲಾವಿದರು ನಟಿಸಿದ್ದಾರೆ.
ದೇವರ ಚಿತ್ರವನ್ನುಎನ್‌ಟಿಆರ್ ಆರ್ಟ್ಸ್ (“ಬಿಂಬಿಸಾರ”) ಮತ್ತು ಯುವಸುಧಾ ಆರ್ಟ್ಸ್ ಬ್ಯಾನರ್‌ಗಳ ಅಡಿಯಲ್ಲಿ ಕೊಸರಾಜು ಹರಿ ಕೃಷ್ಣ ಮತ್ತು ಸುಧಾಕರ್ ಮಿಕ್ಕಿಲಿನೇನಿ ನಿರ್ಮಿಸಿದ್ದಾರೆ. ನಂದಮೂರಿ ಕಲ್ಯಾಣ್ ರಾಮ್ ಅರ್ಪಿಸಿದ್ದಾರೆ.