Devara Climax: ದೇವರ ಸಿನಿಮಾದ ಕ್ಲೈಮ್ಯಾಕ್ಸ್‌ ಥೇಟ್‌ ಬಾಹುಬಲಿ 1ರಂತೆ ಇರುತ್ತೆ; ಜಾಹ್ನವಿ ಕಪೂರ್‌ ನೋಡಲು ಕಾಯಬೇಕು, ರತ್ನವೇಲು ಸುಳಿವು
ಕನ್ನಡ ಸುದ್ದಿ  /  ಮನರಂಜನೆ  /  Devara Climax: ದೇವರ ಸಿನಿಮಾದ ಕ್ಲೈಮ್ಯಾಕ್ಸ್‌ ಥೇಟ್‌ ಬಾಹುಬಲಿ 1ರಂತೆ ಇರುತ್ತೆ; ಜಾಹ್ನವಿ ಕಪೂರ್‌ ನೋಡಲು ಕಾಯಬೇಕು, ರತ್ನವೇಲು ಸುಳಿವು

Devara Climax: ದೇವರ ಸಿನಿಮಾದ ಕ್ಲೈಮ್ಯಾಕ್ಸ್‌ ಥೇಟ್‌ ಬಾಹುಬಲಿ 1ರಂತೆ ಇರುತ್ತೆ; ಜಾಹ್ನವಿ ಕಪೂರ್‌ ನೋಡಲು ಕಾಯಬೇಕು, ರತ್ನವೇಲು ಸುಳಿವು

Devara Climax: ಇದೇ ಸೆಪ್ಟೆಂಬರ್‌ 27ರಂದು ಬಿಡುಗಡೆಗೊಳ್ಳುವ ದೇವರ ಸಿನಿಮಾಕ್ಕೆ ಸಂಬಂಧಪಟ್ಟಂತೆ, ವಿಶೇಷವಾಗಿ ಕ್ಲೈಮ್ಯಾಕ್ಸ್‌ ಬಗ್ಗೆ ಸಿನಿಮಾಟೋಗ್ರಾಫರ್ ರತ್ನವೇಲು ಸಾಕಷ್ಟು ಸುಳಿವು ನೀಡಿದ್ದಾರೆ. ಈ ಚಿತ್ರದಲ್ಲಿ ಜಾಹ್ನವಿ ಕಪೂರ್‌ ಪಾತ್ರ ಯಾವಾಗ ಕಾಣಿಸಿಕೊಳ್ಳುತ್ತದೆ ಎಂಬ ವಿವರವನ್ನೂ ಅವರು ನೀಡಿದ್ದಾರೆ.

Devara Climax: ದೇವರ ಸಿನಿಮಾದ ಕ್ಲೈಮ್ಯಾಕ್ಸ್‌ ಥೇಟ್‌ ಬಾಹುಬಲಿ 1ರಂತೆ ಇರಲಿದೆ ಎಂದು ಸಿನಿಮಾಟೋಗ್ರಾಫರ್‌ ರತ್ನವೇಲು ಸುಳಿವು ನೀಡಿದ್ದಾರೆ.
Devara Climax: ದೇವರ ಸಿನಿಮಾದ ಕ್ಲೈಮ್ಯಾಕ್ಸ್‌ ಥೇಟ್‌ ಬಾಹುಬಲಿ 1ರಂತೆ ಇರಲಿದೆ ಎಂದು ಸಿನಿಮಾಟೋಗ್ರಾಫರ್‌ ರತ್ನವೇಲು ಸುಳಿವು ನೀಡಿದ್ದಾರೆ.

Devara Climax: ಇದೇ ಸೆಪ್ಟೆಂಬರ್‌ 27ರಂದು ಚಿತ್ರಮಂದಿರಗಳಲ್ಲಿ ದೇವರ ಸಿನಿಮಾ ಬಿಡುಗಡೆಯಾಗಲಿದೆ. ಹೈವೋಲ್ಟೇಜ್ ಆ್ಯಕ್ಷನ್ ಸಿನಿಮಾ ದೇವರ ಫೀವರ್ ಇದೀಗ ಎಲ್ಲೆಡೆ ಹಬ್ಬಿದೆ. ಈ ಚಿತ್ರದ ಟಿಕೆಟ್‌ಗಳ ಮುಂಗಡ ಬುಕ್ಕಿಂಗ್‌ ಆರಂಭವಾಗಿದೆ. ಬೆಂಗಳೂರು ಸೇರಿದಂತೆ ಎಲ್ಲೆಡೆ ಈ ಸಿನಿಮಾದ ಟಿಕೆಟ್‌ಗಳು ಬಿಕರಿಯಾಗುತ್ತಿವೆ. ಒಟ್ಟಾರೆ, ದೇವರ ಸಿನಿಮಾ ಬಂಪರ್‌ ಓಪನಿಂಗ್‌ ಪಡೆಯುವುದು ಪಕ್ಕಾ ಆಗಿದೆ. ಮ್ಯಾನ್ ಆಫ್ ಮಾಸ್ ಜೂನಿಯರ್‌ ಎನ್‌ಟಿಆರ್‌ ಅಭಿನಯದ ದೇವರ ಚಿತ್ರ ಇದೇ ಶುಕ್ರವಾರದಿಂದ ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳಲಿದೆ. ಇದೇ ಸಮಯದಲ್ಲಿ ಈ ಚಿತ್ರದ ಛಾಯಾಗ್ರಾಹಕ ರತ್ನವೇಲು ದೇವರ ಸಿನಿಮಾದ ಬಗ್ಗೆ ಸಾಕಷ್ಟು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ದೇವರ ಕ್ಲೈಮ್ಯಾಕ್ಸ್‌ ಬಾಹುಬಲಿ 1ರ ರೇಂಜ್‌ನಲ್ಲಿ ಇರಲಿದೆ

ನಿರ್ದೇಶಕ ರಾಜಮೌಳಿ ನಿರ್ದೇಶನದ ಬಾಹುಬಲಿ 1ರ ಕ್ಲೈಮ್ಯಾಕ್ಸ್ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು. ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ ಎಂಬ ಪ್ರಶ್ನೆ ಬಾಹುಬಲಿ 2 ಬಿಡುಗಡೆಯಾಗುವವರೆಗೂ ಎಲ್ಲರಲ್ಲೂ ಇತ್ತು. ದೇಶಾದ್ಯಂತ ಇದೇ ವಿಷಯದ ಬಗ್ಗೆ ಚರ್ಚೆಗಳು ನಡೆದವು. ದೇವರದಲ್ಲಿಯೂ ಇಷ್ಟೇ ಪ್ರಭಾವಶಾಲಿ ಕ್ಲೈಮ್ಯಾಕ್ಸ್‌ ಇರಲಿದೆ ಎಂದು ಸಿನಿಮಾಟೋಗ್ರಫರ್‌ ರತ್ನವೇಲು ಹೇಳಿದ್ದಾರೆ.

ದೇವರ ಕ್ಲೈಮ್ಯಾಕ್ಸ್ ಪ್ರೇಕ್ಷಕರಿಗೆ ಅವಿಸ್ಮರಣೀಯ ಅನುಭವವಾಗಲಿದೆ ಎಂದು ರತ್ನವೇಲು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.. "ಬಾಹುಬಲಿ 1 ರಂತೆ, ದೇವರ ಕ್ಲೈಮ್ಯಾಕ್ಸ್ ಪ್ರೇಕ್ಷಕರ ಮೇಲೆ ಪ್ರಬಲವಾದ, ಮರೆಯಲಾಗದ ಪ್ರಭಾವವನ್ನು ಬಿಡುತ್ತದೆ" ಎಂದು ರತ್ನವೇಲು ಹೇಳುತ್ತಾರೆ. ಇದರೊಂದಿಗೆ ದೇವರ ಕ್ಲೈಮ್ಯಾಕ್ಸ್ ಏನಾಗಲಿದೆ ಎಂಬ ಹೈಪ್ ಹೆಚ್ಚಾಗಿದೆ.

ಜಾಹ್ನವಿ ಕಪೂರ್‌ ಬರೋದ್ಯಾವಾಗ?

ದೇವರ ಚಿತ್ರದಲ್ಲಿ ಜಾಹ್ನವಿ ಕಪೂರ್ ಅವರನ್ನು ನೋಡಲು ಕಾಯಬೇಕು ಎಂದು ರತ್ನವೇಲು ಸುಳಿವು ನೀಡಿದ್ದಾರೆ. ಈ ಸಿನಿಮಾದಲ್ಲಿ ಜಾಹ್ನವಿ ಕಪೂ ಪ್ರವೇಶವು ದ್ವಿತೀಯಾರ್ಧದಲ್ಲಿ ಇರಲಿದೆ. ಈ ಸಿನಿಮಾದಲ್ಲಿ ದೇವರ ಪಾತ್ರ ಪವರ್‌ಫುಲ್ ಆಗಿರುತ್ತದೆ, ಆದರೆ ಚಿತ್ರಮಂದಿರದಿಂದ ಹೊರಬರುವಾಗ ಹೀರೋ ಪಾತ್ರ ಹೆಚ್ಚು ನೆನಪಿನಲ್ಲಿ ಉಳಿಯುತ್ತದೆ ಎಂದು ರತ್ನವೇಲು ಹೇಳಿದ್ದಾರೆ. ಭಾರೀ ಟ್ವಿಸ್ಟ್ ಇರುವ ನಿರೀಕ್ಷೆಯೂ ಇದೆ. ಈ ಚಿತ್ರದಲ್ಲಿ ಜೂನಿಯರ್‌ ಎನ್‌ಟಿಆರ್‌ ತಂದೆ ಮತ್ತು ಮಗನಾಗಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ.

ಕ್ಲೈಮ್ಯಾಕ್ಸ್‌ನಲ್ಲಿ ಎನ್‌ಟಿಆರ್‌

ಜ್ಯೂನಿಯರ್ ಎನ್‌ಟಿಆರ್ ಕೂಡ ಕರಣ್ ಜೋಹರ್ ಅವರೊಂದಿಗಿನ ಸಂದರ್ಶನದಲ್ಲಿ ದೇವರ ಕ್ಲೈಮ್ಯಾಕ್ಸ್ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಹೇಳಿದ್ದಾರೆ. ಕೊನೆಯ 40 ನಿಮಿಷಗಳು ಸಾಕಷ್ಟು ಕುತೂಹಲ ಕೆರಳಿಸುವಂತೆ ಇರಲಿದೆ. ಕೊನೆಯ ಹತ್ತು ನಿಮಿಷ ಭಾವನಾತ್ಮಕ ಪ್ರಯಾಣವಾಗಿರಲಿದೆ. ಒಟ್ಟಾರೆ ದೇವರ ಕ್ಲೈಮ್ಯಾಕ್ಸ್‌ ಕುರಿತು ನಿರೀಕ್ಷೆ ಹೆಚ್ಚಾಗಿದೆ.

ದೇವರ ಸಿನಿಮಾ ಭಾಗ-2 ಕೂಡ ಇರಲಿದೆ. ಎನ್ ಟಿಆರ್ ಕೂಡ ಈ ಹಿಂದೆ ಎರಡು ಭಾಗಗಳ ಬಗ್ಗೆ ಯೋಚಿಸಿರಲಿಲ್ಲ, ಆದರೆ ಹೇಳಬೇಕಾದ ಕಥೆ ತುಂಬಾ ದೊಡ್ಡದಾಗಿದೆ, ಹೀಗಾಗಿ ಒಂದೇ ಸಿನಿಮಾದಲ್ಲಿ ಅದನ್ನು ಮುಗಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ. ದೇವರ ಭಾಗ 1 ಮತ್ತು ಭಾಗ 2 ಸಾಕಷ್ಟು ಆಸಕ್ತಿದಾಯಕ ಕಥೆ ಹೊಂದಿದೆ ಎಂದು ಅವರು ಹೇಳಿದ್ದಾರೆ.

ದೇವರ ಚಿತ್ರವನ್ನು ಕೊರಟಾಲ ಶಿವ ನಿರ್ದೇಶಿಸಿದ್ದಾರೆ. ಸಮುದ್ರದ ಹಿನ್ನೆಲೆಯನ್ನು ಹೊಂದಿರುವ ಸಾಹಸ ಸಿನಿಮಾವಾಗಿ ಇದನ್ನು ರಚಿಸಲಾಗಿದೆ. ಎನ್‌ಟಿಆರ್‌ಗೆ ನಾಯಕಿಯಾಗಿ ಬಾಲಿವುಡ್ ಬೆಡಗಿ ಜಾಹ್ನವಿ ಕಪೂರ್ ನಟಿಸಿದ್ದಾರೆ. ಇವರು ಈ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ನೀಡಿದ್ದಾರೆ. ಈ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ವಿಲನ್ ಆಗಿ ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತದ ಬಗ್ಗೆಯೂ ಹೆಚ್ಚಿನ ನಿರೀಕ್ಷೆ ಇದೆ. ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಚಿತ್ರ ಸೆಪ್ಟೆಂಬರ್ 27 ರಂದು ಬಿಡುಗಡೆಯಾಗುತ್ತಿದೆ.