ದೇವರ ಚುಟ್ಟಮಲ್ಲೆ ಹಾಡು ಬಂದಾಗ ಪ್ರೇಕ್ಷಕರಿಂದ ಥಿಯೇಟರ್‌ನಲ್ಲಿ ಆಹ್ಹಾ... ಆಹ್ಹಾ ಕೋರಸ್; ನ್ಯಾಷನಲ್ ಕ್ರಶ್ ಆಗ್ತಾರ ಜಾಹ್ನವಿ ಕಪೂರ್?
ದೇವರ ಸಿನಿಮಾ ಬಿಡುಗಡೆ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಜಾಹ್ನವಿ ಕಪೂರ್ ಟ್ರೆಂಡಿಂಗ್‌ನಲ್ಲಿದ್ದಾರೆ. ಈಕೆಯ ಅಂದಚಂದದ ಫೋಟೋಗಳನ್ನು ಹಂಚಿಕೊಂಡು ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ. ಇದೇ ಸಮಯದಲ್ಲಿ ಚಿತ್ರಮಂದಿರಗಳಲ್ಲೂ ದೇವರ ಸಿನಿಮಾದ ಚುಟ್ಟಮಲ್ಲೆ ಹಾಡಿನಲ್ಲಿ "ಆಹ್ಹಾ" ಎಂದು ಬಂದಾಗ ಪ್ರೇಕ್ಷಕರು "ಆಹ್ಹಾ ಆಹ್ಹಾ" ಎಂದು ಕೋರಸ್ ಹಾಡಿದ್ದಾರೆ.
ದೇವರ ಸಿನಿಮಾದ ಮೂಲಕ ಜಾಹ್ನವಿ ಕಪೂರ್ ಟಾಲಿವುಡ್‌ಗೆ ಎಂಟ್ರಿ ನೀಡಿದ್ದಾರೆ. ಈ ಬಾಲಿವುಡ್ ಬ್ಯೂಟಿ ಇಷ್ಟು ದಿನ ಹಿಂದಿ ಸಿನಿಮಾ ಪ್ರೇಕ್ಷಕರನ್ನು ಸೆಳೆದಿದ್ದರು. ಇದೀಗ ದಕ್ಷಿಣ ಭಾರತದ ಪ್ರೇಕ್ಷಕರಿಗೂ ಹತ್ತಿರವಾಗಿದ್ದಾರೆ. ದೇವರ ಸಿನಿಮಾ ಬಿಡುಗಡೆ ಸಮಯದಲ್ಲಿ ಜಾಹ್ನವಿ ಕಪೂರ್ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದ್ದಾರೆ. ಜಾಹ್ನವಿಯ ಸುಂದರ ಫೋಟೋಗಳನ್ನು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಹಲವು ಚಿತ್ರಮಂದಿರಗಳಲ್ಲಿ ದೇವರ ಸಿನಿಮಾದ ಚುಟ್ಟಮಲ್ಲೆ ಹಾಡು ಬಂದಾಗ ಪ್ರೇಕ್ಷಕರು ಕುಣಿದು ಕುಪ್ಪಳಿಸಿದ್ದಾರೆ. ಈ ಹಾಡಿನ "ಆಹ್ಹಾ" ಸದ್ದಿಗೆ ಪ್ರೇಕ್ಷಕರು ಕೂಡ "ಆಹ್ಹಾ ಆಹ್ಹಾ" ಎಂದಿದ್ದಾರೆ. ಒಟ್ಟಾರೆ, ದೇವರ ಸಿನಿಮಾದ ಸಮಯದಲ್ಲಿ ಜೂನಿಯರ್ ಎನ್‌ಟಿಆರ್ ಮಾತ್ರವಲ್ಲದೆ ಜಾಹ್ನವಿ ಕಪೂರ್ ಕೂಡ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಈಕೆಗೆ ಚಿತ್ರದಲ್ಲಿ ನಟನೆಗೆ ಕೆಲವು ದೃಶ್ಯಗಳಿದ್ದರೂ (ಜೂನಿಯರ್ ಎನ್‌ಟಿಆರ್‌ಗೆ ಹೋಲಿಸಿದರೆ) ತನ್ನ ಮುದ್ದಾದ ನಟನೆಯಿಂದ ಗಮನ ಸೆಳೆದಿದ್ದಾರೆ. ಇದೇ ಸಮಯದಲ್ಲಿ ಈಕೆ ಹೊಸ ನ್ಯಾಷನಲ್ ಕ್ರಶ್ ಆಗುತ್ತಾರ? ಎಂಬ ಪ್ರಶ್ನೆಯೂ ಮೂಡಿದೆ.
ಚುಟ್ಟಮಲ್ಲೆ ಹಾಡಿಗೆ ಪ್ರೇಕ್ಷಕರು ಫಿದಾ
ದೇವರ ಸಿನಿಮಾದಲ್ಲಿ ಚುಟ್ಟಮಲ್ಲೆ, ಫಿಯರ್ ಸಾಂಗ್, ರೆಡ್ ಸೀ, ಸ್ವತ್ತಿಮುತ್ತೆ, ದಾವುಡಿ, ಗಣಪತಿ ದೇವರ, ಆಲ್ ಹೈಲ್ ದಿ ಟೈಗರ್, ಧೀರೆ ಧೀರೆ ಸೇರಿದಂತೆ ಹಲವು ಹಾಡುಗಳಿವೆ. ಇವುಗಳಲ್ಲಿ ಚುಟ್ಟಮಲ್ಲೆ ಪ್ರಣಯದ ಹಾಡು. ಜೂನಿಯರ್ ಎನ್‌ಟಿಆರ್ ಮತ್ತು ಜಾಹ್ನವಿ ಕಪೂರ್ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಹಾಡಿಗೆ ಥಿಯೇಟರ್‌ನಲ್ಲಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಈ ಹಾಡಿನಲ್ಲಿ ಅಲ್ಲಲ್ಲಿ "ಆಹ್ಹಾ" ಎಂಬ ಉದ್ಘಾರ ಇದೆ. ಇದಕ್ಕೆ ತಕ್ಕಂತೆ ಚಿತ್ರಮಂದಿರಗಳಲ್ಲಿಯೂ ಪ್ರೇಕ್ಷಕರು ಈ ಹಾಡು ಬಂದಾಗ "ಆಹ್ಹಾ ಆಹ್ಹಾ" ಎಂದು ಕೋರಸ್ ಹಾಡಿದ್ದಾರೆ. ಈ ಕುರಿತಾದ ಸಾಕಷ್ಟು ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರು ಹಂಚಿಕೊಂಡಿದ್ದಾರೆ. ಆದರೆ, ಚಿತ್ರತಂಡ ರಿಪೋರ್ಟ್ ಮಾಡಿದ ಬಳಿಕ ಈ ವಿಡಿಯೋಗಳು ಟ್ವಿಟ್ಟರ್‌ನಲ್ಲಿ ಮಾಯವಾಗಿವೆ.
ನ್ಯಾಷನಲ್ ಕ್ರಶ್ ಆಗ್ತಾರ ಜಾಹ್ನವಿ ಕಪೂರ್?
ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನರು ಜಾಹ್ನವಿ ಕಪೂರ್, ಆಲಿಯಾ ಭಟ್, ಕಿಯಾರ ಅಡ್ವಾಣಿ, ತೃಪ್ತಿ ದಿಮ್ರಿ ಸೇರಿದಂತೆ ಹಲವು ನಟಿಯರ ಫೋಟೋಗಳನ್ನು ಹಂಚಿಕೊಂಡು ಈಗ ಹೇಳಿ ನಿಮ್ಮ ಫೇವರಿಟ್ ನಟಿ ಯಾರು ಎಂದು ಕೇಳುತ್ತಿದ್ದಾರೆ. ಸಾಕಷ್ಟು ಜನರು ಜಾಹ್ನವಿ ಕಪೂರ್‌ನ ಇಷ್ಟಪಡುತ್ತಿರುವುದು ಕಾಮೆಂಟ್‌ಗಳಲ್ಲಿ ಕಾಣಿಸಿದೆ. ಜಾಹ್ನವಿ ಕಪೂರ್ ಸಖತ್ ಹಾಟ್, ಸಖತ್ ಕ್ಯೂಟ್ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ.
ಜಾಹ್ನವಿ ಕಪೂರ್ ಪರಿಚಯ
ಬಾಲಿವುಡ್‌ನಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಜಾಹ್ನವಿ ಕಪೂರ್ ಹಲವು ಹಿಂದಿ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದಾರೆ. ದೇವರ ಸಿನಿಮಾದ ಮೂಲಕ ದಕ್ಷಿಣ ಭಾರತಕ್ಕೂ ಎಂಟ್ರಿ ನೀಡಿದ್ದಾರೆ. ಇವರು ದಿವಂಗತ ನಟಿ ಶ್ರೀದೇವಿ ಮತ್ತು ನಿರ್ಮಾಪಕ ಬೋನಿ ಕಪೂರ್ ಮಗಳು. ಧಡಕ್ ಎಂಬ ಸಿನಿಮಾದ ಮೂಲಕ 2018ರಲ್ಲಿ ಸಿನಿರಂಗಕ್ಕೆ ಎಂಟ್ರಿ ನೀಡಿದರು. ಈ ಚಿತ್ರ ವಾಣಿಜ್ಯಿಕವಾಗಿ ಯಶಸ್ಸು ಪಡೆದಿತ್ತು. ಇದಾದ ಬಳಿಕ ಕೆಲವು ಸಿನಿಮಾಗಳು ಅಂತಹ ಯಶಸ್ಸು ಪಡೆಯದೇ ಇದ್ದರೂ ಈಕೆಗೆ ಹಲವು ಪ್ರಶಸ್ತಿಗಳನ್ನು ತಂದುಕೊಟ್ಟಿತು. ಗುಜ್ಜಾನ್ ಸಕ್ಸೆನಾ: ದಿ ಕಾರ್ಗಿಲ್ ಗರ್ಲ್ ಸಿನಿಮಾದ ನಟನೆಗೆ ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ಯುವತಿಯೊಬ್ಬಳು ಫ್ರೀಜರ್‌ನಲ್ಲಿ ಬಾಕಿಯಾದ ಬದುಕುಳಿಯುವ ಕೈಎ ಮಿಲ್ಲಿ ಪ್ರೇಕ್ಷಕರ ಮೆಚ್ಚುಗೆ ಪಡೆಯಿತು. ಮಿಸ್ಟರ್ ಆಂಡ್ ಮಿಸ್ಸೆಸ್ ದೋನಿ ಸಿನಿಮಾದಲ್ಲೂ ನಟಿಸಿದ್ದಾರೆ. ಈ ಸಿನಿಮಾ ಈ ವರ್ಷ ಬಿಡುಗಡೆಯಾಗಿತ್ತು. ಬಿವಾಲ್, ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ, ತೇರಿ ಭೂತೋನ್ ಮೇನ್ ಐಸಾ ಉಜ್ಜಾ ಜೀಯೆ ಮುಂತಾದ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಉಲ್ಜಾ ಎಂಬ ಸಿನಿಮಾ ಈ ವರ್ಷ ಬಿಡುಗಡೆಯಾಗಿದೆ. ಜಾಹ್ನವಿ ನಟಿಸಿರುವ ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ ಎಂಬ ಸಿನಿಮಾ ಶೂಟಿಂಗ್ ನಡೆಯುತ್ತಿದೆ.
ಇಂದು ಬಿಡುಗಡೆಯಾಗಿರುವ ದೇವರ ಸಿನಿಮಾದ ಕುರಿತು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜೂನಿಯರ್ ಎನ್‌ಟಿಆರ್ ಅಭಿಮಾನಿಗಳು ಈ ಸಿನಿಮಾವನ್ನು ಹಾಡಿಹೊಗಳುತ್ತಿದ್ದಾರೆ. ಆದರೆ, ಸಾಕಷ್ಟು ಜನರು ಈ ಸಿನಿಮಾದ ಕುರಿತು ಒಂದಿಷ್ಟು ನೆಗೆಟಿವ್ ಅಭಿಪ್ರಾಯಗಳನ್ನೂ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ, ಈ ವಾರಾಂತ್ಯದಲ್ಲಿ ಚಿತ್ರಮಂದಿರದಲ್ಲಿ ದೇವರ ಅಬ್ಬರ ಮುಂದುವರೆಯುವ ಎಲ್ಲಾ ಸೂಚನೆಗಳಿವೆ.