ದೇವರ ಸಿನಿಮಾ ದಾವೂದಿ ಹಾಡು ಸೇರಿದಂತೆ ಜ್ಯೂ ಎನ್‌ಟಿಆರ್‌-ಜಾನ್ವಿ ಕಪೂರ್‌ ಲವ್‌ ಸೀನ್‌ಗೆ ಕತ್ತರಿ: ಕಾರಣ ಏನು?-tollywood news devara movie run time reduced with janhvi kapoor junior ntr love scene and daavudi song rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ದೇವರ ಸಿನಿಮಾ ದಾವೂದಿ ಹಾಡು ಸೇರಿದಂತೆ ಜ್ಯೂ ಎನ್‌ಟಿಆರ್‌-ಜಾನ್ವಿ ಕಪೂರ್‌ ಲವ್‌ ಸೀನ್‌ಗೆ ಕತ್ತರಿ: ಕಾರಣ ಏನು?

ದೇವರ ಸಿನಿಮಾ ದಾವೂದಿ ಹಾಡು ಸೇರಿದಂತೆ ಜ್ಯೂ ಎನ್‌ಟಿಆರ್‌-ಜಾನ್ವಿ ಕಪೂರ್‌ ಲವ್‌ ಸೀನ್‌ಗೆ ಕತ್ತರಿ: ಕಾರಣ ಏನು?

ದೇವರ ಚಿತ್ರದ ರನ್‌ ಟೈಮ್‌ ಬಗ್ಗೆ ಒಂದು ಕುತೂಹಲಕಾರಿ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಸಿನಿಮಾದ ರನ್ ಟೈಮ್‌ 15 ಕಡಿಮೆಯಾಗಿದೆ ಎಂದು ವರದಿಯಾಗಿದೆ. ಅದಕ್ಕಾಗಿ ದಾವೂದಿ ಸಾಂಗ್‌ ಸೇರಿದಂತೆ ಜಾನ್ವಿ ಕಪೂರ್‌ ಹಾಗೂ ಜ್ಯೂನಿಯರ್‌ ಎನ್‌ಟಿಆರ್‌ ಅಭಿನಯದ ಕೆಲವೊಂದು ಲವ್‌ ಸೀನ್‌ಗಳಿಗೆ ಕತ್ತರಿ ಹಾಕಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ದೇವರ ಸಿನಿಮಾ ದಾವೂದಿ ಹಾಡು ಸೇರಿದಂತೆ ಜ್ಯೂ ಎನ್‌ಟಿಆರ್‌-ಜಾನ್ವಿ ಕಪೂರ್‌ ಲವ್‌ ಸೀನ್‌ಗೆ ಕತ್ತರಿ: ಕಾರಣ ಏನು?
ದೇವರ ಸಿನಿಮಾ ದಾವೂದಿ ಹಾಡು ಸೇರಿದಂತೆ ಜ್ಯೂ ಎನ್‌ಟಿಆರ್‌-ಜಾನ್ವಿ ಕಪೂರ್‌ ಲವ್‌ ಸೀನ್‌ಗೆ ಕತ್ತರಿ: ಕಾರಣ ಏನು? (PC: T-Series Telugu)

ಜ್ಯೂನಿಯರ್‌ ಎನ್‌ಟಿಆರ್ ಹಾಗೂ ಜಾನ್ವಿ ಕಪೂರ್‌ ಅಭಿನಯದ ಬಹುನಿರೀಕ್ಷಿತ ದೇವರ ಸಿನಿಮಾ ಸೆಪ್ಟೆಂಬರ್ 27 ರಂದು ಪ್ಯಾನ್-ಇಂಡಿಯನ್ ಮಟ್ಟದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಜನತಾ ಗ್ಯಾರೇಜ್ ಬ್ಲಾಕ್ ಬಸ್ಟರ್ ನಂತರ ಎನ್‌ಟಿಆರ್ ಹಾಗೂ ನಿರ್ದೇಶಕ ಕೊರಟಾಲ ಶಿವ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆಗಳಿವೆ. ಮಾಸ್ ಆ್ಯಕ್ಷನ್ ಎಂಟರ್‌ಟೈನರ್ ಆಗಿ ಬಿಡುಗಡೆಯಾಗುತ್ತಿರುವ ಈ ಸಿನಿಮಾ ಮೂಲಕ ಜಾನ್ವಿಕಪೂರ್ ಟಾಲಿವುಡ್‌ಗೆ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ.

ಅಡ್ವಾನ್ಸ್‌ ಬುಕಿಂಗ್‌ನಲ್ಲಿ ದಾಖಲೆ ಬರೆದ ಸಿನಿಮಾ

ಬಿಡುಗಡೆಗೆ ಇನ್ನು ಕೇವಲ ಒಂದು ವಾರ ಬಾಕಿ ಇರುವಂತೆಯೇ ದೇವರ ಚಿತ್ರ, ವಿದೇಶದಲ್ಲಿ ಮುಂಗಡ ಬುಕ್ಕಿಂಗ್‌ನಿಂದ ದಾಖಲೆ ಸೃಷ್ಟಿಸುತ್ತಿದೆ. ಶುಕ್ರವಾರದ ವೇಳೆಗೆ, ದೇವರ ಓವರ್‌ಸೀಸ್‌ ಮುಂಗಡ ಬುಕ್ಕಿಂಗ್ 11 ಕೋಟಿಯಷ್ಟು ಸಂಗ್ರಹಿಸಿಬಹುದು ಎಂದು ವರದಿಯಾಗಿದೆ. ಬಿಡುಗಡೆಯಾಗುವವರೆಗೆ 2 ಮಿಲಿಯನ್ ಮುಂಗಡ ಬುಕ್ಕಿಂಗ್ (ಸುಮಾರು16 ಕೋಟಿ) ಗುರಿ ತಲುಪುವುದು ಖಚಿತ ಎಂದು ಟ್ರೇಡ್ ವಲಯಗಳು ಹೇಳುತ್ತಿವೆ. ವಿದೇಶದಲ್ಲಿ ಅತಿ ಹೆಚ್ಚು ಮುಂಗಡ ಬುಕ್ಕಿಂಗ್‌ ಹೊಂದಿರುವ ಟಾಪ್ 5 ತೆಲುಗು ಸಿನಿಮಾಗಳಲ್ಲಿ ದೇವರ ಕೂಡಾ ಒಂದಾಗಿದೆ ಎಂದು ಹೇಳಲಾಗುತ್ತದೆ.

ದೇವರ ರನ್‌ ಟೈಮ್‌ ಇಳಿಕೆ

ಈ ಮಧ್ಯೆ, ನಿರ್ದೇಶಕ ಕೊರಟಾಲ ಶಿವ, ಚಿತ್ರತಂಡದೊಂದಿಗೆ ಚರ್ಚಿಸಿ ದೇವರ ರನ್‌ಟೈಮ್ ಬಗ್ಗೆ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ಚಿತ್ರದ ರನ್‌ ಟೈಮನ್ನು 15 ನಿಮಿಷಗಳಷ್ಟು ಕಡಿಮೆ ಮಾಡಲಾಗಿದೆ ಎನ್ನಲಾಗುತ್ತಿದೆ. ಆರಂಭದಲ್ಲಿ 2:57 ನಿಮಿಷಗಳ ರನ್‌ಟೈಮ್‌ನೊಂದಿಗೆ ದೇವರ ಚಿತ್ರವನ್ನು ಬಿಡುಗಡೆ ಮಾಡಲು ತಯಾರಕರು ಯೋಜಿಸಿದ್ದರು. ಆದರೆ ದಳಪತಿ ವಿಜಯ್ ಅಭಿನಯದ ದಿ ಗೋಟ್‌ ಹಾಗೂ ಇತ್ತೀಚಿಗೆ ಬಿಡುಗಡೆಯಾದ ಕೆಲವು ಸ್ಟಾರ್ ಹೀರೋಗಳು ಸುಮಾರು 3 ಗಂಟೆಗಳ ರನ್‌ಟೈಮ್‌ ಹೊಂದಿತ್ತು. ಇದರ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಇದೇ ಕಾರಣಕ್ಕೆ ಕೊರಟಾಲ ಶಿವ, ದೇವರ ಸಿನಿಮಾವನ್ನು 15 ನಿಮಿಷ ಕಡಿತಗೊಳಿಸಿದ್ದಾರಂತೆ. ಅಂತಿಮವಾಗಿ 2:42 ನಿಮಿಷಗಳ ಅಂತಿಮ ರನ್‌ಟೈಮ್‌ನೊಂದಿಗೆ ಈ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಲವ್‌ ಸೀನ್‌ಗೆ ಕತ್ತರಿ

ರನ್ ಸಮಯವನ್ನು ಕಡಿಮೆ ಮಾಡಲು, ಎನ್‌ಟಿಆರ್ ಮತ್ತು ಜಾನ್ವಿಕಪೂರ್ ಅಭಿನಯದ ಕೆಲವೊಂದು ಲವ್ ಟ್ರ್ಯಾಕ್‌ ಉದ್ದವನ್ನು ಕಡಿಮೆ ಮಾಡುವುದರ ಜೊತೆಗೆ ಕೆಲವು ಹಾಸ್ಯ ದೃಶ್ಯಗಳನ್ನು ತೆಗೆದುಹಾಕಲಾಗಿದೆ. ಅಷ್ಟೇ ಅಲ್ಲ, 2 ವಾರಗಳ ಹಿಂದೆ ರಿಲೀಸ್‌ ಆಗಿದ್ದ ದಾವೂದಿ ಹಾಡು ಸಿನಿಮಾದಲ್ಲಿ ಇರುವುದಿಲ್ಲವಂತೆ.

ಪ್ರೀ-ರಿಲೀಸ್ ಈವೆಂಟ್‌ಗೆ ಅತಿಥಿಗಳು ಯಾರು?

ದೇವರ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಸೆಪ್ಟೆಂಬರ್ 22 ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ . ಗುರುವಾರ ಈ ಕುರಿತು ದೇವರ ತಂಡ ಅಧಿಕೃತವಾಗಿ ಪ್ರಕಟಿಸಿದೆ. ಈ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ರಾಜಮೌಳಿ ಮತ್ತು ತ್ರಿವಿಕ್ರಮ್ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಪ್ರಚಾರ ಮಾಡಲಾಗುತ್ತಿದೆ. ಈ ಇಬ್ಬರು ನಿರ್ದೇಶಕರ ಜೊತೆಗೆ ಪ್ರಶಾಂತ್ ನೀಲ್ ಕೂಡ ದೇವರ ಪ್ರೀ ರಿಲೀಸ್ ಿವೆಂಟ್‌ಗೆ ವಿಶೇಷ ಅತಿಥಿಯಾಗಿ ಹಾಜರಾಗಲಿದ್ದಾರೆ ಎನ್ನಲಾಗಿದೆ.

ದೇವರ ಚಿತ್ರದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಖಳನಾಯಕನಾಗಿ ನಟಿಸಿದ್ದಾರೆ . ಶ್ರೀಕಾಂತ್, ಚೈತ್ರಾ ರಾಯ್, ಶೈನ್ ಟಾಮ್ ಚಾಕೋ ಮತ್ತು ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಎರಡು ಭಾಗಗಳಲ್ಲಿ ತೆರೆಕಾಣುತ್ತಿದೆ. ಮೊದಲ ಭಾಗವನ್ನು 300 ಕೋಟಿ ರೂ. ಬಜೆಟ್‌ನಲ್ಲಿ ತಯಾರಿಸಲಾಗಿದೆ. ಎನ್‌ಟಿಆರ್ ಸಹೋದರ ಹಾಗೂ ನಾಯಕ ಕಲ್ಯಾಣ್ ರಾಮ್ ಕೂಡಾ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರದ ಹಾಡುಗಳಿಗೆ ಅನಿರುದ್ಥ್‌ ರವಿಚಂದರ್‌ ಸಂಗೀತ ನೀಡಿದ್ದಾರೆ.

mysore-dasara_Entry_Point