ಅತಿಯಾದ ಧೈರ್ಯ ಮೂರ್ಖತನ, ಮನುಷ್ಯನಿಗೆ ಭಯ ಇರ್ಬೇಕು; ದೇವರ ಸಿನಿಮಾ ಕುರಿತು ನಿರ್ದೇಶಕ ಕೊರಟಾಲ ಶಿವ ಹೇಳಿದ್ದು ಹೀಗೆ
ಕನ್ನಡ ಸುದ್ದಿ  /  ಮನರಂಜನೆ  /  ಅತಿಯಾದ ಧೈರ್ಯ ಮೂರ್ಖತನ, ಮನುಷ್ಯನಿಗೆ ಭಯ ಇರ್ಬೇಕು; ದೇವರ ಸಿನಿಮಾ ಕುರಿತು ನಿರ್ದೇಶಕ ಕೊರಟಾಲ ಶಿವ ಹೇಳಿದ್ದು ಹೀಗೆ

ಅತಿಯಾದ ಧೈರ್ಯ ಮೂರ್ಖತನ, ಮನುಷ್ಯನಿಗೆ ಭಯ ಇರ್ಬೇಕು; ದೇವರ ಸಿನಿಮಾ ಕುರಿತು ನಿರ್ದೇಶಕ ಕೊರಟಾಲ ಶಿವ ಹೇಳಿದ್ದು ಹೀಗೆ

Director Koratala Siva About Devara Movie: ಆಕ್ಷನ್ ಥ್ರಿಲ್ಲರ್ ಚಲನಚಿತ್ರ ‘ದೇವರ’ ನಿರ್ದೇಶಕ ಕೊರಟಾಲ ಶಿವ, ಚಿತ್ರದ ಕುರಿತು ಮಾತನಾಡಿದ್ದಾರೆ. ಸದ್ಯ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಡೈರೆಕ್ಟರ್, ಅತಿಯಾದ ಧೈರ್ಯ ಒಳ್ಳೆಯದಲ್ಲ. ಮನುಷ್ಯನಿಗೆ ಭಯ ಇರಬೇಕು ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಚಿತ್ರ ಕುರಿತು ಅವರ ಮಾತುಗಳು ಹೀಗಿವೆ.

ಮನುಷ್ಯನಿಗೆ ಭಯ ಇರ್ಬೇಕು; ದೇವರ ಸಿನಿಮಾ ಕುರಿತು ನಿರ್ದೇಶಕ ಕೊರಟಾಲ ಶಿವ ಹೇಳಿದ್ದು ಹೀಗೆ
ಮನುಷ್ಯನಿಗೆ ಭಯ ಇರ್ಬೇಕು; ದೇವರ ಸಿನಿಮಾ ಕುರಿತು ನಿರ್ದೇಶಕ ಕೊರಟಾಲ ಶಿವ ಹೇಳಿದ್ದು ಹೀಗೆ

ಮ್ಯಾನ್ ಆಫ್ ಮಾಸ್ ಜೂನಿಯರ್‌ ಎನ್‌ಟಿಆರ್‌ ಮುಖ್ಯ ಪಾತ್ರದಲ್ಲಿ ನಟಿಸಿರುವ ದೇವರ ಚಿತ್ರ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ. ಟ್ರೇಲರ್‌ ಬಿಡುಗಡೆಯಾದಂದಿನಿಂದ ಫ್ಯಾನ್ಸ್‌ ತಮ್ಮ ನೆಚ್ಚಿ‌ನ ದೇವರನನ್ನು ನೋಡಲು ಕಾಯುತ್ತಿದ್ದಾರೆ. ದೊಡ್ಡ ಬಜೆಟ್ ಚಿತ್ರವನ್ನು ಕೊರಟಾಲ ಶಿವ ನಿರ್ದೇಶಿಸಿದ್ದಾರೆ. ಜಾನ್ವಿ ಕಪೂರ್ ನಾಯಕಿಯಾಗಿ ಕಾಣಿಕೊಂಡ ಚಿತ್ರದಲ್ಲಿ, ಬಾಲಿವುಡ್‌ನ ಮತ್ತೊಬ್ಬ ಸ್ಟಾರ್ ಸೈಫ್ ಅಲಿ ಖಾನ್ ನೆಗೆಟಿವ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಿಕ್ಕಿಲಿನೇನಿ ಸುಧಾಕರ್ ಮತ್ತು ಹರಿಕೃಷ್ಣ ಕೆ ನಿರ್ಮಾಣದ ದೇವರ ಚಿತ್ರ ಸೆಪ್ಟೆಂಬರ್ 27ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ತೆರೆಗೆ ಅಪ್ಪಳಿಸುತ್ತಿದೆ.

ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವ ಚಿತ್ರ ನಿರ್ದೇಶಕ ಕೊರಟಾಲ ಶಿವ ತಮ್ಮ ಬಹುನಿರೀಕ್ಷಿತ ದೇವರ ಸಿನಿಮಾದ ಬಗ್ಗೆ ಕೆಲವೊಂದು ಸ್ವಾರಸ್ಯಕರ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಇನ್ನು ಮುಂದಿರುವುದು ಶಿವ ಅವರ ಮಾತುಗಳು

ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುವ ಕಾತರ

ದೇವರ ಸಿನಿಮಾ ಬಿಡುಗಡೆ ದಿನಾಂಕ ಹತ್ತಿರ ಬರುತ್ತಿದೆ. ಪರೀಕ್ಷೆ ಬರೆದ ನಂತರ ಫಲಿತಾಂಶಕ್ಕಾಗಿ ಕಾಯುವ ಉತ್ಸಾಹ ಮತ್ತು ಆತಂಕವನ್ನು ನೀವು ಊಹಿಸಬಹುದು. ಪ್ರತಿ ಸಿನಿಮಾ ಬಿಡುಗಡೆಗೂ ಮುನ್ನ ಈ ಆತಂಕ ಇರುತ್ತದೆ. ದೇವರ ಚಿತ್ರದ ಕಥೆ ಸಂಪೂರ್ಣ ಫಿಕ್ಷನಲ್ (ಕಾಲ್ಪನಿಕ). ಎಲ್ಲಿಯೂ ನೈಜ ಘಟನೆಗಳನ್ನು ಆಧರಿಸಿಲ್ಲ. ಅತಿಯಾದ ಧೈರ್ಯಕೂಡ ಮನುಷ್ಯನಿಗೆ ಒಳ್ಳೆಯದಲ್ಲ. ಅದು ಮೂರ್ಖತನವಾಗುತ್ತದೆ. ನಮಗೆ ಗೊತ್ತಿಲ್ಲದೆಯೇ ನಮ್ಮಲ್ಲಿ ಒಂದು ಭಯ ಇರುತ್ತದೆ. ಅದನ್ನು ಗೌರವಿಸಬೇಕು ಎಂಬುದನ್ನು ದೇವರ ಕಥೆ ಹೇಳುತ್ತದೆ.

ಭಯ ಇರಬೇಕು

ಭಯವಿಲ್ಲದೆ ಬದುಕಬೇಕು ಎಂದು ಬಯಸುವುದು ತಪ್ಪು. ಲಾ ಆಫ್‌ ಲ್ಯಾಂಡ್‌ (ಭೂಮಿಯ ನಿಯಮ) ಅನ್ನೋದನ್ನು ಎಲ್ಲರೂ ಪಾಲಿಸಬೇಕು. ಅದು ಭಯ. ಉದಾಹರಣೆಗೆ, ಟ್ರಾಫಿಕ್ ಬಳಿ ಕೆಂಪು ಸಿಗ್ನಲ್ ಬಂದಾಗ ನಾವೆಲ್ಲರೂ ನಿಲ್ಲುತ್ತೇವೆ. ನೀವೇಕೆ ನಿಲ್ಲಿಸಬೇಕು? ನಮ್ಮಲ್ಲಿ ಸ್ವಲ್ಪ ಭಯವಿರುವುದರಿಂದ ನಾವು ನಿಲ್ಲಿಸುತ್ತೇವೆ. ಅಂತಹ ಭಯ ಮನುಷ್ಯನಿಗೆ ತುಂಬಾ ಅವಶ್ಯಕವಾಗಿದೆ. ಅದನ್ನೇ ನಾನು ದೇವರ ಸಿನಿಮಾದಲ್ಲಿ ಹೇಳಿದ್ದೇನೆ.

ಹೊಣೆಗಾರಿಕೆಯೂ ಒಂದು ಭಯ. ಅಂತಹ ಭಯದಿಂದ ನಾವು ನಮ್ಮ ಕೆಲಸವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತೇವೆ. ಅದರಂತೆ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೇವೆ.

ಎನ್‌ಟಿಆರ್‌ ಜೊತೆಗೆ ಕೆಲಸ ಮಾಡುವುದು ವಿಶೇಷ ಅನುಭವ

ಎನ್‌ಟಿಆರ್ ಜೊತೆಗಿನ ಸಿನಿ ಜರ್ನಿ ನನಗೆ ಯಾವಾಗಲೂ ವಿಶೇಷ. ಅವರೊಂದಿಗೆ ಯಾವುದೇ ವಿಷಯವನ್ನು ಚರ್ಚಿಸುವಾಗ ಅವರು ಒಳ್ಳೆಯದೋ ಇಲ್ಲವೋ ಎಂಬ ಬಗ್ಗೆ ಡಿಪ್ಲೊಮ್ಯಾಟಿಕ್‌ ಆಗಿ ಉತ್ತರಿಸುವುದಿಲ್ಲ. ತಮ್ಮ ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ. ದೇವರ ಕುರಿತು ಹೇಳಿದಾಗ ಅವರು ಪ್ರತಿಕ್ರಿಯಿಸಿದ ರೀತಿ ನೋಡಿ ನಾವು ಮುಂದಿನ ಹಂತಕ್ಕೆ ಹೋಗಲು ನಿರ್ಧರಿಸಿದೆವು.

6 ತಿಂಗಳ ತಯಾರಿ

ದೇವರ ಸಿನಿಮಾವನ್ನು ಸೆಟ್‌ಗೆ ಕೊಂಡುಹೋಗಲು 6 ತಿಂಗಳು ತೆಗೆದುಕೊಂಡಿದ್ದೇವೆ. ಸಮುದ್ರದ ಮೇಲೆ ಶೂಟ್ ಮಾಡುವುದು ಹೇಗೆ. ಬೆಳಕಿನ ವ್ಯತ್ಯಾಸ, ಸಾಗರದ ರಚನೆ ಹೇಗೆ ಎನ್ನುವುದರ ಕುರಿತು ಅಧ್ಯಯನ ನಡೆಸಿದ್ದೇವೆ. ಅದಕ್ಕಾಗಿ ತುಂಬಾ ಸಮಯ ತೆಗೆದುಕೊಂಡಿದ್ದೇವೆ. ಈ ರೀತಿ ಯಾರೂ ಶೂಟಿಂಗ್‌ ಮಾಡಿರದಿದ್ದ ಕಾರಣದಿಂದ ನಮಗೆ ಸಲಹೆ ನೀಡುವವರು ಯಾರೂ ಇಲ್ಲ. ಅದಕ್ಕಾಗಿ ತುಂಬಾ ಸಮಯ ಹಿಡಿಯಿತು.

ಹಾಲಿವುಡ್‌ಗ ತಂತ್ರಜ್ಞರಿಗಿಂತ ಜಾಣರು

ನಮ್ಮ ತಂತ್ರಜ್ಞರ ಬಗ್ಗೆ ಹೆಚ್ಚು ಹೇಳಲಾರೆ. ಅವರೆಲ್ಲಾ ಬಹಳ ಪ್ರತಿಭಾವಂತರು. ಹೆಚ್ಚು ತಯಾರಿ ಇಲ್ಲದೆಯೂ ಅವರು ಕಾರ್ಯಗತಗೊಳಿಸಬಲ್ಲರು. ನಾವ್ಯಾರೂ ಹಾಲಿವುಡ್ ತಂತ್ರಜ್ಞರಲ್ಲ. ಕೊನೆಯ ಕ್ಷಣದ ಟೆನ್ಶನ್‌ನಲ್ಲಿ ಕೆಲಸ ಮಾಡುವುದು ನಮ್ಮ ಅಭ್ಯಾಸ. ಅವರಿಗೇನಾದರೂ ಹಾಲಿವುಡ್ ತಂತ್ರಜ್ಞರಂತೆ ತಯಾರಿಗೆ ಹೆಚ್ಚು ಸಮಯ ಕೊಟ್ಟರೆ ಅವರು ಪವಾಡವನ್ನೇ ಮಾಡುತ್ತಾರೆ.

Whats_app_banner