Mangli Car Accident: ಮಂಗ್ಲಿ ಕಾರು ಅಪಘಾತ, ನಾನು ಸುರಕ್ಷಿತ, ವದಂತಿ ನಂಬಬೇಡಿ ಎಂದ ಜನಪ್ರಿಯ ಗಾಯಕಿ-tollywood news famous singer mangli car accident on hyderabad bengaluru national highway escaped unhurt pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Mangli Car Accident: ಮಂಗ್ಲಿ ಕಾರು ಅಪಘಾತ, ನಾನು ಸುರಕ್ಷಿತ, ವದಂತಿ ನಂಬಬೇಡಿ ಎಂದ ಜನಪ್ರಿಯ ಗಾಯಕಿ

Mangli Car Accident: ಮಂಗ್ಲಿ ಕಾರು ಅಪಘಾತ, ನಾನು ಸುರಕ್ಷಿತ, ವದಂತಿ ನಂಬಬೇಡಿ ಎಂದ ಜನಪ್ರಿಯ ಗಾಯಕಿ

Mangli Car Accident: ಜನಪ್ರಿಯ ಗಾಯಕಿ ಮಂಗ್ಲಿ ಕಾರು ಇತ್ತೀಚೆಗೆ ಅಪಘಾತಗೊಂಡಿರುವ ಕುರಿತು ವರದಿಯಾಗಿದೆ. ಮಾರ್ಚ್‌ 15ರ ಶುಕ್ರವಾರ ರಾತ್ರಿ ವೇಳೆ ಹೈದರಾಬಾದ್‌-ಬೆಂಗಳೂರು ಹೆದ್ದಾರಿಯ ಶಂಶಾಬಾದ್‌ನ ತೊಂಡುಪಲ್ಲಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

Mangli Car Accident: ಮಂಗ್ಲಿ ಕಾರು ಅಪಘಾತ
Mangli Car Accident: ಮಂಗ್ಲಿ ಕಾರು ಅಪಘಾತ

ಬೆಂಗಳೂರು: ಕನ್ನಡ, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಜನಪ್ರಿಯ ಗಾಯಕಿಯಾಗಿ ಹೆಸರು ಮಾಡಿರುವ ಮಂಗ್ಲಿ ಅವರ ಕಾರು ಇತ್ತೀಚೆಗೆ ಅಪಘಾತಗೊಂಡಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಾರ್ಚ್‌ 15ರ ಶುಕ್ರವಾರ ರಾತ್ರಿ ವೇಳೆ ಹೈದರಾಬಾದ್‌-ಬೆಂಗಳೂರು ಹೆದ್ದಾರಿಯ ಶಂಶಾಬಾದ್‌ನ ತೊಂಡುಪಲ್ಲಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಭಾರತೀಯ ದಂಡ ಸಂಹಿತೆ ಕಾಯಿದೆಯ ಸೆಕ್ಷನ್‌ 279ರ ಅನ್ವಯ ಎಫ್‌ಐಆರ್‌ ನೋಂದಣಿ ಮಾಡಲಾಗಿದೆ.

ಗಾಯಕಿ ಮಂಗ್ಲಿ ಪ್ರತಿಕ್ರಿಯೆ

ಇದೀಗ ಮಂಗ್ಲಿ ಇನ್‌ಸ್ಟಾಗ್ರಾಂನಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. "ಒಂದೆರಡು ದಿನಗಳ ಹಿಂದೆ ಅನಿರೀಕ್ಷಿತವಾಗಿ ಸಣ್ಣ ಅಪಘಾತವಾಗಿದೆ. ದಯವಿಟ್ಟು ಹರಡುತ್ತಿರುವ ವದಂತಿಗಳನ್ನು ನಂಬಬೇಡಿ. ನಿಮ್ಮ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳು" ಎಂದು ಪೋಸ್ಟ್‌ ಮಾಡಿದ್ದಾರೆ.

ಘಟನೆ ಕುರಿತು ಮಂಗ್ಲಿ ಪ್ರತಿಕ್ರಿಯೆ
ಘಟನೆ ಕುರಿತು ಮಂಗ್ಲಿ ಪ್ರತಿಕ್ರಿಯೆ

ಮಂಗ್ಲಿ ತಂಡದ ಸದಸ್ಯರೊಬ್ಬರು ಹಿಂದೂಸ್ತಾನ್ ಟೈಮ್ಸ್‌ಗೆ ಘಟನೆ ಕುರಿತು ವಿವರ ನೀಡಿದ್ದಾರೆ. "ಆ ದಿನ ಕಾರಿನಲ್ಲಿದ್ದ ಎಲ್ಲರೂ ಆರೋಗ್ಯವಾಗಿದ್ದಾರೆ. ಕಾರ್ಯಕ್ರಮದಿಂದ ಹಿಂತುರುಗಿ ಬರುವ ವೇಳೆ ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಇದು ದೊಡ್ಡ ಅಪಘಾತವಲ್ಲ; ಮೇಡಂ (ಮಂಗ್ಲಿ) ಸೇರಿದಂತೆ ನಮ್ಮಲ್ಲಿ ಯಾರೂ ಕಾರಿನಲ್ಲಿ ಇರಲಿಲ್ಲ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನ ಹಿಂಭಾಗಕ್ಕೆ ಹಾನಿಯಾಗಿದೆ. ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ಚಿಂತಿಸುವ ಅಗತ್ಯವಿಲ್ಲ" ಎಂದು ಮಾಹಿತಿ ನೀಡಿದ್ದಾರೆ.

ಕಾರಿನಲ್ಲಿದ್ದ ಇತರರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ವರದಿಯಾಗಿತ್ತು. ಆದರೆ, ಘಟನೆ ನಡೆದ ಸಂದರ್ಭದಲ್ಲಿ ಇವರು ಕಾರಿನಲ್ಲಿ ಇರಲಿಲ್ಲ ಎಂದು ಇದೀಗ ಸ್ಪಷ್ಟವಾಗಿದೆ.

ಮಂಗ್ಲಿ ಇತ್ತೀಚೆಗೆ ಎಂಎಎ ಸೂಪರ್‌ ಸಿಂಗರ್‌ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಯಾವುದೇ ಬಾಹ್ಯ ಗಾಯಗಳು ಕಾಣಿಸಿಲ್ಲ ಎಂದು ವರದಿಗಳು ತಿಳಿಸಿವೆ. ಮಂಗ್ಲಿ ತನ್ನ ಬಂಜಾರ ವೇಷಭೂಷಣ ಮತ್ತು ತೆಲಂಗಾಣ ಹಾಡುಗಳ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಇವರು ಕನ್ನಡದ ಹಲವು ಚಿತ್ರಗೀತೆಗಳಿಗೆ ಧ್ವನಿ ನೀಡಿದ್ದಾರೆ. ಕಾಟೇರ ಸಿನಿಮಾದ ಪಸಂದಾಗವ್ನೆ ಹಾಡನ್ನೂ ಇವರು ಹಾಡಿದ್ದರು.

mysore-dasara_Entry_Point