ಕನ್ನಡ ಸುದ್ದಿ  /  ಮನರಂಜನೆ  /  Daksha Nagarkar: ತೊಡೆಯ ರಹಸ್ಯ ಕೇಳಿದ ಅಭಿಮಾನಿಗೆ ಮಸಾಲೆ ವಡೆ ಎಂದ ದಕ್ಷ ನಗರ್‌ಕರ್‌; ನಟಿಯ ದಿಟ್ಟ ಉತ್ತರಕ್ಕೆ ಖುಷಿಪಟ್ಟ ಫ್ಯಾನ್ಸ್‌

Daksha Nagarkar: ತೊಡೆಯ ರಹಸ್ಯ ಕೇಳಿದ ಅಭಿಮಾನಿಗೆ ಮಸಾಲೆ ವಡೆ ಎಂದ ದಕ್ಷ ನಗರ್‌ಕರ್‌; ನಟಿಯ ದಿಟ್ಟ ಉತ್ತರಕ್ಕೆ ಖುಷಿಪಟ್ಟ ಫ್ಯಾನ್ಸ್‌

Daksha Nagarkar: ಟಾಲಿವುಡ್‌ನ ಜನಪ್ರಿಯ ನಟಿ ದಕ್ಷ ನಗರ್ಕರ್‌ಗೆ ಸೋಷಿಯಲ್‌ ಮೀಡಿಯಾದಲ್ಲಿ ಅಭಿಮಾನಿಯೊಬ್ಬರು "ನಾನು ನಿಮ್ಮ ತೊಡೆಯ ಅಭಿಮಾನಿ, ನಿಮ್ಮ ತೊಡೆಯ ರಹಸ್ಯವೇನು?" ಎಂಬ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ನಟಿ ಉತ್ತರ ನೀಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Daksha Nagarkar: ತೊಡೆಯ ರಹಸ್ಯ ಕೇಳಿದ ಅಭಿಮಾನಿಗೆ ಮಸಾಲೆ ವಡೆ ಎಂದ ದಕ್ಷ ನಗರ್‌ಕರ್‌
Daksha Nagarkar: ತೊಡೆಯ ರಹಸ್ಯ ಕೇಳಿದ ಅಭಿಮಾನಿಗೆ ಮಸಾಲೆ ವಡೆ ಎಂದ ದಕ್ಷ ನಗರ್‌ಕರ್‌ (Instagram- akshanagarka)

ಸೋಷಿಯಲ್‌ ಮೀಡಿಯಾದಲ್ಲಿ ಸಿನಿಮಾ ನಟಿಯರಿಗೆ ದೊಡ್ಡ ಮಟ್ಟದ ಅಭಿಮಾನಿಗಳ ಬಳಗ ಇರುತ್ತದೆ. ನಟಿಯರು ಇನ್‌ಸ್ಟಾಗ್ರಾಂ ಇತ್ಯಾದಿಗಳಲ್ಲಿ ಹೊಸ ಫೋಟೋ ಅಪ್ಲೋಡ್‌ ಮಾಡಿದರೆ ಅದಕ್ಕೆ ಬಗೆಬಗೆಯ ಕಾಮೆಂಟ್‌ಗಳು ಬರುತ್ತವೆ. ಕೆಲವೊಂದು ಕಾಮೆಂಟ್‌ಗಳನ್ನು ನೋಡಿದಾಗ ನಟಿಯರು ಕೋಪಗೊಳ್ಳುವುದುಂಟು. ಆದರೆ, ಕೆಲವರು ಇಂತಹವುಗಳನ್ನು ನಿರ್ಲಕ್ಷಿಸುತ್ತಾರೆ. ಇದೇ ರೀತಿ ಸಿನಿಮಾ ನಟರು ಅಥವಾ ನಟಿಯರು ಸೋಷಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳ ಜತೆ ಸಂವಾದ ನಡೆಸುತ್ತಾರೆ. ಕಿಚ್ಚ ಸುದೀಪ್‌ ಅವರು ಟ್ವಿಟ್ಟರ್‌ನಲ್ಲಿ ಆಸ್ಕ್‌ ಕಿಚ್ಚ ಎಂಬ ಹ್ಯಾಷ್‌ಟ್ಯಾಗ್‌ನಡಿ ಅಭಿಮಾನಿಗಳ ಪ್ರಶ್ನೆಗಳಿಗೆ ಆಗಾಗ ಉತ್ತರಿಸುತ್ತಾರೆ. ಇದೇ ರೀತಿ ಹಲವು ಸೆಲೆಬ್ರಿಟಿಗಳು ಸಮಯ ಸಿಕ್ಕಾಗ ಫ್ಯಾನ್ಸ್‌ ಜತೆ ಕಾಲ ಕಳೆಯುತ್ತಾರೆ.

ಟಾಲಿವುಡ್‌ನ ಜನಪ್ರಿಯ ನಟಿ ದಕ್ಷ ನಗರ್ಕರ್‌ ಅವರೂ ಇತ್ತೀಚೆಗೆ ತಮ್ಮ ಅಭಿಮಾನಿಗಳ ಜತೆ ಸೋಷಿಯಲ್‌ ಮೀಡಿಯಾದಲ್ಲಿ ಕಾಲ ಕಳೆದಿದ್ದಾರೆ. ಅಭಿಮಾನಿಗಳಲ್ಲಿ ಪ್ರಶ್ನೆ ಕೇಳಲು ತಿಳಿಸಿದ್ದಾರೆ. ಸಾಕಷ್ಟು ಜನರು ಇವರ ಸಿನಿಮಾ ಕರಿಯರ್‌ ಬಗ್ಗೆ ಕೇಳಿದ್ದಾರೆ. ಇವರ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಇಂತಹ ಪ್ರಶ್ನೆಗಳಿಗೆ ದಕ್ಷ ನಗರ್‌ಕಾರ್‌ ಸಾವಧಾನವಾಗಿ ಉತ್ತರಿಸಿದ್ದಾರೆ. ಆದರೆ, ಓರ್ವ ಅಭಿಮಾನಿಯ ಪ್ರಶ್ನೆಯನ್ನು ಅವರು ನಿರ್ಲಕ್ಷಿಸಬಹುದಿತ್ತು. "ನಿಮ್ಮ ತೊಡೆಯ ದೊಡ್ಡ ಅಭಿಮಾನಿ ನಾನು (Fan of your Thodalu), ಏನಿದರ ರಹಸ್ಯ?" ಎಂದು ಆ ಅಭಿಮಾನಿ ಕೇಳಿದ್ದರು. ಇದಕ್ಕೆ ದಕ್ಷ ನೀಡಿದ ಉತ್ತರ ಈಗ ವೈರಲ್‌ ಆಗಿದೆ.

ಟ್ರೆಂಡಿಂಗ್​ ಸುದ್ದಿ

ತೊಡೆಯ ರಹಸ್ಯ ಕೇಳಿದ ಅಭಿಮಾನಿಗೆ ಉತ್ತರದಲ್ಲಿಯೇ ದಕ್ಷ ಮಸಾಲ ವಡೆ ತಿನ್ನಿಸಿದ್ದಾರೆ. ಅಂದರೆ, ಆತನ ಪ್ರಶ್ನೆಗೆ "ನಾನು ಮಸಾಲ ವಡೆ ತಿನ್ನುತ್ತೇನೆ" ಎಂದು ಉತ್ತರಿಸಿದ್ದಾರೆ. ಕೆಟ್ಟದಾಗಿ ಪ್ರಶ್ನೆ ಕೇಳಿದ ಅಭಿಮಾನಿಯ ಕುರಿತು ಕೋಪಗೊಳ್ಳದೆ ದಿಟ್ಟ ಉತ್ತರ ನೀಡಿದ್ದಾರೆ. ಮುಜುಗರಗೊಳ್ಳುವಂತಹ ಪ್ರಶ್ನೆಗೆ ಅವರು ಹಾಸ್ಯದ ದಾಟಿಯಲ್ಲಿ ಉತ್ತರ ನೀಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ಹಾಸ್ಯವಾಗಿ ಉತ್ತರ ನೀಡಿದ ದಕ್ಷ ನಗರ್ಕರ್‌ ಅವರ ಒಳ್ಳೆಯ ಮನಸ್ಸಿಗೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಿನಿಮಾ ನಟಿಯರ ಸೌಂದರ್ಯದ ಕುರಿತು ಅಭಿಮಾನಿಗಳಲ್ಲಿ ಕುತೂಹಲ ಇರುತ್ತದೆ. ಆದರೆ, ಸೋಷಿಯಲ್‌ ಮೀಡಿಯಾದ ಈ ಕಾಲದಲ್ಲಿ ಕೆಲವರು ಕೆಟ್ಟದಾಗಿ, ಅಶ್ಲೀಲವಾಗಿ ಕಾಮೆಂಟ್‌ ಮಾಡುವುದುಂಟು. ಇಂತಹ ಘಟನೆಗಳು ಮೇರೆಮೀರಿದಾಗ ಸಿನಿಮಾ ನಟಿಯರು ಅಥವಾ ನಟರು ಕೆಲವೊಮ್ಮೆ ಕಾನೂನು ಕ್ರಮಕ್ಕೂ ಮುಂದಾಗುತ್ತಾರೆ.

ದಕ್ಷ ನಗರ್ಕರ್‌ ಪರಿಚಯ

ದಕ್ಷ ನಗರ್ಕರ್‌ ಅವರು ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಮಾಡೆಲ್‌ ಕೂಡ ಹೌದು. ಎಕೆ ರಾವ್‌ ಪಿಕೆ ರಾವ್‌ ಸಿನಿಮಾದ ಮೂಲಕ 2014ರಲ್ಲಿ ಇವರು ಟಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಹೋರ ಹೋರಿ, ಹುಷಾರು, ಝುಂಬಿ ರೆಡ್ಡಿ ಮುಂತಾದ ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ದಕ್ಷ ನಗರ್ಕರ್‌ ಅವರು ಮುಂಬೈನಲ್ಲಿ ಜನಿಸಿದರು. ಇವರ ತಾಯಿ ಕಾಸ್ಮೆಟಿಕ್‌ ಕಂಪನಿ ಹೊಂದಿದ್ದಾರೆ. ತಾಯಿಯ ಜತೆ ನೆಲೆಸುವ ಸಮಯದಲ್ಲಿ ಇವರು ಪಂಚಗಣಿ, ಹೈದರಾಬಾದ್‌, ಬೆಂಗಳೂರು, ದೆಹಲಿ ಸೇರಿದಂತೆ ವಿವಿಧ ಸ್ಥಳದಲ್ಲಿ ನೆಲೆಸಿದ್ದರು. ದಕ್ಷ ಅವರ ಕುಟುಂಬದಲ್ಲಿ ಹಲವು ಜನರು ವೈದ್ಯರಿದ್ದಾರೆ. ಈಕೆಯೂ ಕಾರ್ಡಿಯೊಲಜಿಸ್ಟ್‌ ಆಗಬೇಕೆಂದುಕೊಂಡಿದ್ದರು. ಬಳಿಕ ಇವರು ಮಾಡೆಲಿಂಗ್‌ ಮತ್ತು ನಟನೆಯನ್ನು ಕರಿಯರ್‌ ಆಗಿ ಆಯ್ಕೆ ಮಾಡಿಕೊಂಡಿದ್ದರು.