ರಾಮ್‌ ಗೋಪಾಲ್‌ ವರ್ಮಾ ಪಕ್ಕ ಹೊಸ ಚೆಲುವೆ; ನನ್ನ ಅಮ್ಮನಿಗೆ ಮದುವೆಯಾಗಲು ಗಂಡು ಹುಡುಕಿಕೊಡಿ ಎಂದ ನಟಿ ಜತೆ ಆರ್‌ಜಿವಿ-tollywood news film director ram gopal varma spotted with surekha vani daughter supritha naidu pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ರಾಮ್‌ ಗೋಪಾಲ್‌ ವರ್ಮಾ ಪಕ್ಕ ಹೊಸ ಚೆಲುವೆ; ನನ್ನ ಅಮ್ಮನಿಗೆ ಮದುವೆಯಾಗಲು ಗಂಡು ಹುಡುಕಿಕೊಡಿ ಎಂದ ನಟಿ ಜತೆ ಆರ್‌ಜಿವಿ

ರಾಮ್‌ ಗೋಪಾಲ್‌ ವರ್ಮಾ ಪಕ್ಕ ಹೊಸ ಚೆಲುವೆ; ನನ್ನ ಅಮ್ಮನಿಗೆ ಮದುವೆಯಾಗಲು ಗಂಡು ಹುಡುಕಿಕೊಡಿ ಎಂದ ನಟಿ ಜತೆ ಆರ್‌ಜಿವಿ

Ram Gopal Varma: ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಅವರ ಜತೆ ಹೊಸ ಯುವತಿಯೊಬ್ಬರು ಕಾಣಿಸಿಕೊಂಡಿದ್ದಾರೆ. ನಟಿ ಮತ್ತು ಮಾಡೆಲ್‌ ಸುಪ್ರಿತಾ ನಾಯ್ಡು ಜತೆಗೆ ಆರ್‌ಜಿವಿ ಕಾಣಿಸಿಕೊಂಡಿದ್ದಾರೆ.

ರಾಮ್‌ ಗೋಪಾಲ್‌ ವರ್ಮಾ ಪಕ್ಕ ಹೊಸ ಚೆಲುವೆ
ರಾಮ್‌ ಗೋಪಾಲ್‌ ವರ್ಮಾ ಪಕ್ಕ ಹೊಸ ಚೆಲುವೆ

ಬೆಂಗಳೂರು: ಭಾರತ ಚಿತ್ರತಂಗದ ಜನಪ್ರಿಯ ಸಿನಿಮಾ ನಿರ್ದೇಶಕರಾದ ರಾಮ್‌ ಗೋಪಾಲ್‌ ವರ್ಮಾ ಅವರ ಪಕ್ಕ ಹೊಸ ಯುವತಿಯೊಬ್ಬರು ಕಾಣಿಸಿಕೊಂಡಿದ್ದು "ಯಾರಿವರು?" ಎಂದು ಎಲ್ಲರೂ ಕುತೂಹಲಗೊಂಡಿದ್ದಾರೆ. ಗ್ಯಾಂಗ್‌ ವಾರ್‌, ರಾಜಕೀಯ ಸೇರಿದಂತೆ ವಿವಿಧ ಪ್ರಕಾರಗಳ ಸಿನಿಮಾಗಳನ್ನು ಮಾಡಿರುವ ಗೋಪಾಲ್‌ ವರ್ಮಾ ಇತ್ತೀಚೆಗೆ ಪಾರ್ಟಿಯೊಂದರಲ್ಲಿ ಯುವತಿಯೊಬ್ಬರ ಜತೆ ಕಾಣಿಸಿಕೊಂಡಿದ್ದಾರೆ.

ರಾಮ್‌ ಗೋಪಾಲ್‌ ವರ್ಮಾ ಅವರ ಜತೆ ಪಾರ್ಟಿಯಲ್ಲಿ ಕಾಣಿಸಿಕೊಂಡವರು ನಟಿ ಮತ್ತು ಮಾಡೆಲ್‌ ಸುಪ್ರಿತಾ ನಾಯ್ಡು. ಈ ಫೋಟೋಗಳನ್ನು ಸ್ವತಃ ಸುಪ್ರಿತಾ ನಾಯ್ಡು ತನ್ನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಡಿಂಕ್ಸ್‌ ಕುಡಿಯುತ್ತ ಸುಪ್ರಿತಾ ಮತ್ತು ರಾಮ್‌ ಗೋಪಾಲ್‌ ವರ್ಮಾ ಅವರು ಫೋಟೋಗೆ ಪೋಸ್‌ ನೀಡುವ ಫೋಟೋವನ್ನು ಇವರು ಹಂಚಿಕೊಂಡಿದ್ದಾರೆ.

ಆರ್‌ಜಿವಿ ಅವರು ಗ್ರೇ ಸ್ವೀಟ್‌ಶರ್ಟ್‌ ಧರಿಸಿದ್ದರು. ಸುಪ್ರಿತಾ ಅವರು ಕ್ಲಾಸಿಕ್‌ ಬಿಳಿ ಟೀ ಶರ್ಟ್‌ ಧರಿಸಿದ್ದರು. ಇಬ್ಬರು ಕ್ಯಾಮೆರಾ ಕಡೆಗೆ ನಗುತ್ತಾ ಪೋಸ್‌ ನೀಡಿದ್ದಾರೆ. ಈ ಫೋಟೋಗಳಿಗೆ "ಮಾಸ್ಟರ್‌ ಆಫ್‌ ಸಿನಿಮಾ" ಎಂದು ಸುಪ್ರಿತಾ ಕ್ಯಾಪ್ಷನ್‌ ನೀಡಿದ್ದಾರೆ. ಸುಪ್ರಿತಾ ಅವರು ಇಲ್ಲಿಯವರೆಗೆ ಚಿತ್ರರಂಗಕ್ಕೆ ಕಾಲಿಟ್ಟಿಲ್ಲ. ಸೋಷಿಯಲ್‌ ಮೀಡಿಯಾ ಪೋಸ್ಟ್‌ ಮೂಲಕವೇ ಫೇಮಸ್‌ ಆಗಿದ್ದಾರೆ. ಆರ್‌ಜಿವಿ ಜತೆಗೆ ಹೊಸ ಚಿತ್ರದಲ್ಲಿ ನಟಿಸುತ್ತಾರ? ಎಂಬ ಸಂದೇಹ ಅಭಿಮಾನಿಗಳಲ್ಲಿ ಮೂಡಿದೆ. ಅಂದಹಾಗೆ, ಸುಪ್ರಿತಾ ಅವರು ಜನಪ್ರಿಯ ನಟಿ ಸುರೇಖಾ ವಾಣಿಯವರ ಮಗಳು.

ನನ್ನ ಅಮ್ಮನಿಗೆ ಗಂಡುಹುಡುಕಿ ಕೊಡಿ

ಸುಪ್ರಿತಾ ಅವರು ಕೆಲವು ದಿನಗಳ ಹಿಂದೆ ಬೇರೊಂದು ಕಾರಣಕ್ಕೆ ಸುದ್ದಿಯಲ್ಲಿದ್ದರು. ನನ್ನ ಅಮ್ಮನಿಗೆ ಗಂಡು ಹುಡುಕಿ ಕೊಡಿ ಎಂದು ಈಕೆ ಹೇಳಿದ್ದು ವೈರಲ್‌ ಆಗಿತ್ತು. ನನ್ನ ತಾಯಿಯನ್ನು ಮದುವೆಯಾಗಲು ಯಾರೂ ಸಿಗುತ್ತಿಲ್ಲ. ಅಂಕಲ್‌ ಆಗಿದ್ದರೂ ಸರಿ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವವರು ಸಿಕ್ಕರೆ ಮದುವೆ ಮಾಡಿಸಲು ನನ್ನ ಅಭ್ಯಂತರ ಇಲ್ಲ ಎಂದು ಇವರು ಹೇಳಿದ್ದರು.

ಸುಪ್ರಿತಾ ಅವರು ಮನಿ ಮೈಂಡೆಡ್‌ ಗರ್ಲ್‌ ಫ್ರೆಂಡ್‌ ಎಂಬ ಶಾರ್ಟ್‌ ಮೂವಿಗೆ ನಿರ್ದೇಶನ ಮಾಡಿದ್ದರು. ಇದಾದ ಬಳಿಕ ವೆಲ್ಲಿಪೊ, ಗಾಯತ್ರಿ ಪೋತೆ ಪೋವೆ ಆಲ್ಬಂಗಳಲ್ಲಿ ಕಾಣಿಸಿಕೊಂಡಿದ್ದರು. ಯೂಟ್ಯೂಬ್‌ನಲ್ಲೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಸದ್ಯ ರಾಮ್‌ ಗೋಪಾಲ್‌ ವರ್ಮಾ ಜತೆ ಸುಪ್ರಿತಾ ಕಾಣಿಸಿಕೊಂಡಿರುವುದು ಹಲವು ಊಹಾಪೋಹಾಗಳಿಗೆ ಕಾರಣವಾಗಿದೆ. ಸುಪ್ರಿತಾ ಅವರು ಆರ್‌ಜಿವಿ ಅವರ ಮುಂದಿನ ಸಿನಿಮಾದಲ್ಲಿ ನಟಿಸ್ತಾರ? ಯಾವುದಾದರೂ ಸಿನಿಮಾ ಡೈರೆಕ್ಷನ್‌ ಕುರಿತು ಮಾತನಾಡುತ್ತಿದ್ದರಾ? ಇತ್ಯಾದಿ ಪ್ರಶ್ನೆಗಳು ಸುಪ್ರಿತಾ ಅಭಿಮಾನಿಗಳಲ್ಲಿ ಮೂಡಿದೆ.