ಕನ್ನಡ ಸುದ್ದಿ  /  ಮನರಂಜನೆ  /  ಅಯ್ಯೋ ದೇವರೇ, ದೇವರ ಚಿತ್ರತಂಡದ ಮೇಲೆ ಜೇನುನೊಣಗಳ ದಾಳಿ; ಜೂನಿಯರ್‌ ಎನ್‌ಟಿಆರ್‌ ಅಭಿಮಾನಿಗಳಿಗೆ ಆತಂಕ

ಅಯ್ಯೋ ದೇವರೇ, ದೇವರ ಚಿತ್ರತಂಡದ ಮೇಲೆ ಜೇನುನೊಣಗಳ ದಾಳಿ; ಜೂನಿಯರ್‌ ಎನ್‌ಟಿಆರ್‌ ಅಭಿಮಾನಿಗಳಿಗೆ ಆತಂಕ

Devara Part 1: ಜೂನಿಯರ್‌ ಎನ್‌ಟಿಆರ್‌ ಮತ್ತು ಜಾನ್ವಿ ಕಪೂರ್‌ ನಟನೆಯ ದೇವರ ಸಿನಿಮಾದ ಶೂಟಿಂಗ್‌ ವೇಳೆ ಜೇನುನೊಣಗಳು ದಾಳಿ ನಡೆಸಿವೆ. ಅರಣ್ಯ ಪ್ರದೇಶದಲ್ಲಿ ಈ ಸಿನಿಮಾದ ಪ್ರಮುಖ ದೃಶ್ಯಗಳನ್ನು ಶೂಟಿಂಗ್‌ ಮಾಡುವ ವೇಳೆ ಈ ಘಟನೆ ಸಂಭವಿಸಿದೆ.

ದೇವರ ಚಿತ್ರತಂಡದ ಮೇಲೆ ಜೇನುನೊಣಗಳ ದಾಳಿ
ದೇವರ ಚಿತ್ರತಂಡದ ಮೇಲೆ ಜೇನುನೊಣಗಳ ದಾಳಿ

ಬೆಂಗಳೂರು: ಜೂನಿಯರ್‌ ಎನ್‌ಟಿಆರ್‌ ಅಭಿಮಾನಿಗಳ ಚಿಂತೆಗೆ ಕಾರಣವಾಗುವಂತಹ ಸುದ್ದಿಯೊಂದು ಬಂದಿದೆ. ದೇವರ ಶೂಟಿಂಗ್‌ ಸಮಯದಲ್ಲಿ ಜೇನುನೊಣಗಳು ದಾಳಿ ಮಾಡಿದ್ದು, ಹಲವು ಕಲಾವಿದರು ಗಾಯಗೊಂಡಿದ್ದಾರೆ. ಆಂಧ್ರಪ್ರದೇಶದ ಅಲ್ಲೂರಿ ಜಿಲ್ಲೆಯ ಪಡೆರೂವಿನ ಮೂಡಕೊಂಡಮ್ಮದಲ್ಲಿ ದೇವರ ಸಿನಿಮಾದ ಪ್ರಮುಖ ದೃಶ್ಯಗಳ ಶೂಟಿಂಗ್‌ ನಡೆಯುತ್ತಿತ್ತು. ಅಲ್ಲಿ ಜೇನುನೊಣಗಳು ದಾಳಿ ಮಾಡಿದೆ. ಈ ಸಮಯದಲ್ಲಿ ಜೂನಿಯರ್‌ ಎನ್‌ಟಿಆರ್‌ ಈ ಶೂಟಿಂಗ್‌ನಲ್ಲಿ ಇರಲಿಲ್ಲ. ಅವರು ವಾರ್‌2 ಶೂಟಿಂಗ್‌ನಲ್ಲಿದ್ದರು.

ಟ್ರೆಂಡಿಂಗ್​ ಸುದ್ದಿ

ಈ ಪ್ರದೇಶದಲ್ಲಿ ದೇವರ ಚಿತ್ರತಂಡವು ಶೂಟಿಂಗ್‌ ಮಾಡುತ್ತಿದ್ದ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಜೇನುನೊಣಗಳು ದಾಳಿ ಮಾಡಿವೆ. ಆದರೆ, ಆತಂಕ ಪಡಬೇಕಾಗಿಲ್ಲ. ಈ ಸಮಯದಲ್ಲಿ ಸಾಕಷ್ಟು ಕಲಾವಿದರು ಜೇನುನೊಣಗಳ ದಾಳಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರಿಗೆ ಗಾಯಗಳಾಗಿವೆ.

ಕೊರ್ಟಾಲ ಶಿವ ನಿರ್ದೇಶನದ ದೇವರ ಸಿನಿಮಾದಲ್ಲಿ ಬಾಲಿವುಡ್‌ ನಟಿ ಜಾನ್ವಿ ಕಪೂರ್‌ ನಾಯಕಿಯಾಗಿ ನಟಿಸುತ್ತಿದ್ದಾರೆ. ಸೈಫ್‌ ಆಲಿ ಖಾನ್‌ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅನಿರುದ್ಧ್‌ ರವಿಚಂದರ್‌ ಸಂಗೀತವಿದೆ. ಈ ಪಾನ್‌ ಇಂಡಿಯಾ ಸಿನಿಮಾವು ಅಕ್ಟೋಬರ್‌ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ವೈಜಾಗ್‌ ಸುತ್ತಮುತ್ತ ದೇವರ ಸಿನಿಮಾದ ಶೂಟಿಂಗ್‌ ನಡೆಯುತ್ತಿದೆ. ಅರಣ್ಯ ಪ್ರದೇಶದಲ್ಲಿ ಶೂಟಿಂಗ್‌ ನಡೆಸುವ ಸಮಯದಲ್ಲಿ ಜೇನುನೊಣಗಳು ದಾಳಿ ಮಾಡಿವೆ. ಇದು ಆರ್‌ಆರ್‌ಆರ್‌ ಸಿನಿಮಾದ ಬಳಿಕದ ಜೂನಿಯರ್‌ ಎನ್‌ಟಿಆರ್‌ ಸಿನಿಮಾವಾಗಿದೆ. ಈಗಾಗಲೇ ದೇವರ ಸಿನಿಮಾದ ಪೋಸ್ಟರ್‌ ಮತ್ತು ಗ್ಲಿಂಪ್ಸ್‌ ರಿಲೀಸ್‌ ಆಗಿದ್ದು, ನಿರೀಕ್ಷೆ ಹೆಚ್ಚಿಸಿವೆ. ದುಬಾರಿ ಬಜೆಟ್‌ನ ಈ ಸಿನಿಮಾ ಪಾರ್ಟ್‌ 1 ಮತ್ತು ಪಾರ್ಟ್‌ 2 ಎಂಬ ಎರಡು ಭಾಗಗಳಾಗಿ ಬಿಡುಗಡೆಯಾಗಲಿದೆ.

ದೇವರ: ಪಾರ್ಟ್‌ 1 ಸಿನಿಮಾದ ಕುರಿತು

ಕೊರ್ತಲಾ ಶಿವ ನಿರ್ದೇಶನದ ದೇವರ: ಪಾರ್ಟ್‌ 1 ಈ ವರ್ಷದ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾವಾಗಿದೆ. ಸುಧಾಕರ್‌ ಮಿಕ್ಕಿನೇನಿ ಮತ್ತು ಕೊಸರಾಜು ಹರಿಕೃಷ್ಣ ಅವರು ಯುವಸುಧಾ ಆರ್ಟ್ಸ್‌ ಮತ್ತು ಎನ್‌ಟಿಆರ್‌ ಆರ್ಟ್ಸ್‌ನಡಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಎನ್‌ಟಿ ರಾಮರಾವ್‌ ಜೂನಿಯರ್‌, ಸೈಫ್‌ ಆಲಿ ಖಾನ್‌, ಜಾನ್ವಿ ಕಪೂರ್‌, ಪ್ರಕಾಶ್‌ ರಾಜ್‌, ಶ್ರೀಕಾಂತ್‌, ಶೈನ್‌ ಟಾಮ್‌ ಚಕೋ ಮತ್ತು ನರೈನ್‌ ಮುಂತಾದವರು ನಟಿಸುತ್ತಿದ್ದಾರೆ.

ಜಾನ್ವಿ ಕಪೂರ್‌ ಎರಡನೇ ತೆಲುಗು ಸಿನಿಮಾ

ತೆಲುಗು ನಟ ರಾಮ್‌ ಚರಣ್‌ ಮುಂಬರುವ ಸಿನಿಮಾದ ಹೆಸರು ಇನ್ನೂ ಘೋಷಣೆಯಾಗಿಲ್ಲ. ಇದು ರಾಮ್‌ ಚರಣ್‌ ನಟನೆಯ 16ನೇ ಸಿನಿಮಾವಾಗಿರುವ ಕಾರಣ ಆರ್‌ಸಿ 16 ಎಂದು ತಾತ್ಕಾಲಿಕ ಹೆಸರಿಡಲಾಗಿದೆ. ಈ ಸಿನಿಮಾವನ್ನು ಬುಚ್ಚಿ ಬಾಬಾ ಸನಾ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾದಲ್ಲಿ ಸ್ಯಾಂಡಲ್‌ವುಡ್‌ ನಟ ಶಿವರಾಜ್‌ ಕುಮಾರ್‌ ನಟಿಸುವ ಕುರಿತು ಈ ಹಿಂದೆ ವದಂತಿಗಳಿದ್ದವು. ಸದ್ಯ ಈ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ. ಈ ಸಿನಿಮಾಕ್ಕೆ ಜಾನ್ವಿ ಕಪೂರ್‌ ನಾಯಕಿಯಾಗಿ ಆಯ್ಕೆಯಾಗಿದ್ದರು.

IPL_Entry_Point