ಕನ್ನಡ ಸುದ್ದಿ  /  Entertainment  /  Tollywood News Janhvi Kapoor Joins Ram Charan In Her Second Telugu Film Rc 16janhvi Kapoor 27th Birthday Pcp

RC 16: ರಾಮ್‌ ಚರಣ್‌ ಸಿನಿಮಾಕ್ಕೆ ಜಾನ್ವಿ ಕಪೂರ್‌ ಆಯ್ಕೆ; ಬೋನಿ ಕಪೂರ್‌ ಮಗಳ ಹುಟ್ಟುಹಬ್ಬದ ದಿನ ಗುಡ್‌ನ್ಯೂಸ್‌ ನೀಡಿದ ಸಿನಿತಂಡ

ಟಾಲಿವುಡ್‌ನ ಖ್ಯಾತ ನಟ ರಾಮ್‌ ಚರಣ್‌ ಅವರ ಮುಂದಿನ ಹೆಸರಿಡದ ಆರ್‌ಸಿ 16 ಚಿತ್ರಕ್ಕೆ ನಾಯಕಿಯಾಗಿ ಬಾಲಿವುಡ್‌ ನಟಿ ಜಾನ್ವಿ ಕಪೂರ್‌ ಆಯ್ಕೆಯಾಗಿದ್ದಾರೆ. ಜಾನ್ವಿ ಕಪೂರ್‌ 27ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಮೈತ್ರಿ ಮೂವಿ ಮೇಕರ್ಸ್‌ ಈ ಮಾಹಿತಿ ಮಾಡಿದೆ.

ರಾಮ್‌ ಚರಣ್‌ ಸಿನಿಮಾಕ್ಕೆ ಜಾನ್ವಿ ಕಪೂರ್‌ ಆಯ್ಕೆ
ರಾಮ್‌ ಚರಣ್‌ ಸಿನಿಮಾಕ್ಕೆ ಜಾನ್ವಿ ಕಪೂರ್‌ ಆಯ್ಕೆ (Instagram)

ಬಾಲಿವುಡ್‌ ನಟಿ ಜಾನ್ವಿ ಕಪೂರ್‌ ಇದೀಗ ತೆಲುಗು ಭಾಷೆಯಲ್ಲಿ ತನ್ನ ಎರಡನೇ ಪ್ರಾಜೆಕ್ಟ್‌ಗೆ ಓಕೆ ಎಂದಿದ್ದಾರೆ. ರಾಮ್‌ ಚರಣ್‌ ಮುಂದಿನ ಆರ್‌ಸಿ 16 ಸಿನಿಮಾದಲ್ಲಿ ಇವರು ನಟಿಸಲಿದ್ದಾರೆ ಮೈತ್ರಿ ಮೂವಿ ಮೇಕರ್ಸ್‌ ಈ ಕುರಿತು ಬುಧವಾರ ಎಕ್ಸ್‌ನಲ್ಲಿ ಟ್ವಿಟ್‌ ಮಾಡಿದೆ. ಇಂದು ಜಾನ್ವಿ ಕಪೂರ್‌ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಸಿನಿತಂಡ ಈ ಶುಭ ಸುದ್ದಿ ಹಂಚಿಕೊಂಡಿದೆ.

ತೆಲುಗಿನಲ್ಲಿ ಜಾನ್ವಿ ಕಪೂರ್‌ ಎರಡನೇ ಸಿನಿಮಾ

ರಾಮ್‌ ಚರಣ್‌ ಮುಂಬರುವ ಸಿನಿಮಾದ ಹೆಸರು ಇನ್ನೂ ಘೋಷಣೆಯಾಗಿಲ್ಲ. ಇದು ರಾಮ್‌ ಚರಣ್‌ ನಟನೆಯ 16ನೇ ಸಿನಿಮಾವಾಗಿರುವ ಕಾರಣ ಆರ್‌ಸಿ 16 ಎಂದು ಕೋಡ್‌ವರ್ಡ್‌ ಇಡಲಾಗಿದೆ. ಈ ಸಿನಿಮಾವನ್ನು ಬುಚ್ಚಿ ಬಾಬಾ ಸನಾ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾದಲ್ಲಿ ಸ್ಯಾಂಡಲ್‌ವುಡ್‌ ನಟ ಶಿವರಾಜ್‌ ಕುಮಾರ್‌ ನಟಿಸುವ ಕುರಿತು ಈ ಹಿಂದೆ ವದಂತಿಗಳಿದ್ದವು. ಸದ್ಯ ಈ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ."ಆರ್‌ಸಿ16 ಬೋರ್ಡ್‌ಗೆ ಸುಂದರಿ ಜಾನ್ವಿ ಕಪೂರ್‌ರನ್ನು ಸ್ವಾಗತಿಸುತ್ತಿದ್ದೇವೆ. ಹ್ಯಾಪಿ ಬರ್ತ್‌ಡೇ ಜಾನ್ವಿ ಕಪೂರ್‌" ಎಂದು ಮೈತ್ರಿ ಮೂವಿ ಮೇಕರ್ಸ್‌ ಟ್ವೀಟ್‌ ಮಾಡಿದೆ.

ಈ ಸಿನಿಮಾದ ಕುರಿತು ಬೋನಿ ಕಪೂರ್‌ ಏನಂದ್ರು?

ಕಳೆದ ತಿಂಗಳು ಜಾನ್ವಿ ಕಪೂರ್‌ ತಂದೆ ಬೋನಿ ಕಪೂರ್‌ ಈ ಸಿನಿಮಾದ ಕುರಿತು ಮಾತನಾಡಿದ್ದರು. "ಈಗಾಗಲೇ ಜೂನಿಯರ್‌ ಎನ್‌ಟಿಆರ್‌ ಜತೆ ನನ್ನ ಮಗಳು ಸಿನಿಮಾ ಶೂಟಿಂಗ್‌ನಲ್ಲಿದ್ದಾಳೆ. ಸೆಟ್‌ನಲ್ಲಿ ಕಳೆಯುವ ಪ್ರತಿಕ್ಷಣವನ್ನೂ ಅವಳು ಆನಂದಿಸುತ್ತಿದ್ದಾಳೆ. ಇನ್ಮುಂದೆ ಇವಳು ರಾಮ್‌ ಚರಣ್‌ ಜತೆಗೂ ನಟಿಸಲಿದ್ದಾಳೆ. ಈ ಇಬ್ಬರು ಹುಡುಗರು ತುಂಬಾ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವಳು ಸಾಕಷ್ಟು ತೆಲುಗು ಸಿನಿಮಾ ವೀಕ್ಷಿಸುತ್ತಾಳೆ. ಅವರ ಜತೆ ನಟಿಸುವಂತಹ ಅವಕಾಶ ಪಡೆಯುತ್ತಿದ್ದಾಳೆ. ಈ ಸಿನಿಮಾಗಳು ಯಶಸ್ವಿಯಾದ ಬಳಿಕ ಇವಳಿಗೆ ಇನ್ನಷ್ಟು ಆಫರ್‌ ದೊರಕಬಹುದು. ನನ್ನ ಮಗಳು ಚೆನ್ನಾಗಿ ಮಾಡುತ್ತಾಳೆ ಎಂಬ ನಂಬಿಕೆ ನನಗಿದೆ" ಎಂದು ಬೋನಿ ಕಪೂರ್‌ ಹೇಳಿದ್ದರು.

ಟಾಲಿವುಡ್‌ನಲ್ಲಿ ಜಾನ್ವಿ ಕಪೂರ್‌

ಬೋನಿ ಕಪೂರ್‌ ಮಗಳು ಜಾನ್ವಿ ಕಪೂರ್‌ ತೆಲುಗು ಚಿತ್ರರಂಗಕ್ಕೆ ದೇವರ ಚಿತ್ರದ ಮೂಲಕ ಎಂಟ್ರಿ ನೀಡಿದ್ದರು. ಜೂನಿಯರ್‌ ಎನ್‌ಟಿಆರ್‌ ಮತ್ತು ಸೈಫ್‌ ಆಲಿ ಖಾನ್‌ ಜತೆ ನಟಿಸುತ್ತಿದ್ದಾರೆ. ಈ ಸಿನಿಮಾ ಈ ವರ್ಷ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ. ಇದೇ ಸಮಯದಲ್ಲಿ ಜಾನ್ವಿ ನಟನೆಯ ಉಲ್ಜಾ ಸಿನಿಮಾವೂ ಬಿಡುಗಡೆಗೆ ಕಾಯುತ್ತಿದೆ.

ಜಾನ್ವಿ ನಟನೆಯ ಇತರೆ ಸಿನಿಮಾಗಳು

ಜಾನ್ವಿ ಕಪೂರ್‌ ಇನ್ನೂ ಹಲವು ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಂಡಿದ್ದಾರೆ. ಮಿಸ್ಟರ್‌ ಆಂಡ್‌ ಮಿಸ್ಸೆಸ್‌ ಮಹಿ ಚಿತ್ರದಲ್ಲಿ ಇವರು ನಟಿಸಲಿದ್ದಾರೆ. ರಾಜ್‌ಕುಮಾರ್‌ ರಾವ್‌ ಜತೆ ಇವರು ನಟಿಸಲಿದ್ದಾರೆ. ಇದು ಸ್ಪೋರ್ಟ್ಸ್‌ ಡ್ರಾಮ. ರೋಹಿ ಸಿನಿಮಾದ ಬಳಿಕ ಇದು ರಾಜ್‌ಕುಮಾರ್‌ ಮತ್ತು ಜಾನ್ವಿ ಎರಡನೇ ಸಿನಿಮಾ. ಈ ಸಿನಿಮಾವನ್ನು ಶರಣ್‌ ಶರ್ಮಾ ನಿರ್ದೇಶಿಸುತ್ತಿದ್ದಾರೆ. ಇವರು ದಿ ಕಾರ್ಗಿಲ್‌ ಗರ್ಲ್‌ ಚಿತ್ರದ ಮೂಲಕ ನಿರ್ದೇಶನ ಆರಂಭಿಸಿದ್ದರು. ಕರಣ್‌ ಜೋಹರ್‌ ಅವರ ಧರ್ಮ ಪ್ರೊಡಕ್ಷನ್‌ನ ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ ಚಿತ್ರದಲ್ಲೂ ಜಾನ್ವಿ ಕಾಣಿಸಿಕೊಲ್ಳಲಿದ್ದಾರೆ. ಈ ಸಿನಿಮಾ ಏಪ್ರಿಲ್‌ 2025ರಲ್ಲಿ ಬಿಡುಗಡೆಯಾಗಲಿದೆ.