ಭಾರೀ ಮೊತ್ತಕ್ಕೆ ಜ್ಯೂ ಎನ್‌ಟಿಆರ್‌ ದೇವರ ಒಟಿಟಿ ರೈಟ್ಸ್‌ ಮಾರಾಟ; ಸ್ಟ್ರೀಮಿಂಗ್‌ ಯಾವಾಗ? ಯಾವ ಪ್ಲಾಟ್‌ಫಾರ್ಮ್‌?-tollywood news jr ntr devara sold out for ott when and where will stream telugu film industry rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಭಾರೀ ಮೊತ್ತಕ್ಕೆ ಜ್ಯೂ ಎನ್‌ಟಿಆರ್‌ ದೇವರ ಒಟಿಟಿ ರೈಟ್ಸ್‌ ಮಾರಾಟ; ಸ್ಟ್ರೀಮಿಂಗ್‌ ಯಾವಾಗ? ಯಾವ ಪ್ಲಾಟ್‌ಫಾರ್ಮ್‌?

ಭಾರೀ ಮೊತ್ತಕ್ಕೆ ಜ್ಯೂ ಎನ್‌ಟಿಆರ್‌ ದೇವರ ಒಟಿಟಿ ರೈಟ್ಸ್‌ ಮಾರಾಟ; ಸ್ಟ್ರೀಮಿಂಗ್‌ ಯಾವಾಗ? ಯಾವ ಪ್ಲಾಟ್‌ಫಾರ್ಮ್‌?

ದೇವರ ರಿಲೀಸ್‌ಗೆ ಒಂದು ದಿನವಷ್ಟೇ ಬಾಕಿ ಇದೆ. ಜ್ಯೂ ಎನ್‌ಟಿಆರ್‌ ಅಭಿಮಾನಿಗಳು ಸಿನಿಮಾವನ್ನು ಬರಮಾಡಿಕೊಳ್ಳಲು ಕಾಯುತ್ತಿದ್ದಾರೆ. ಈ ನಡುವೆ ದೇವರ ಒಟಿಟಿ ಹಕ್ಕುಗಳು 155 ಕೋಟಿ ರೂ. ಗೆ ಮಾರಾಟವಾಗಿದ್ದು ಸಿನಿಮಾ ಥಿಯೇಟರ್‌ನಲ್ಲಿ ತೆರೆ ಕಂಡ 50 ದಿನಗಳ ನಂತರ ಸ್ಟ್ರೀಮ್‌ ಆಗಬಹುದು ಎನ್ನಲಾಗುತ್ತಿದೆ.

ಭಾರೀ ಮೊತ್ತಕ್ಕೆ ಜ್ಯೂ ಎನ್‌ಟಿಆರ್‌ ದೇವರ ಒಟಿಟಿ ರೈಟ್ಸ್‌ ಮಾರಾಟ; ಸ್ಟ್ರೀಮಿಂಗ್‌ ಯಾವಾಗ? ಯಾವ ಪ್ಲಾಟ್‌ಫಾರ್ಮ್‌?
ಭಾರೀ ಮೊತ್ತಕ್ಕೆ ಜ್ಯೂ ಎನ್‌ಟಿಆರ್‌ ದೇವರ ಒಟಿಟಿ ರೈಟ್ಸ್‌ ಮಾರಾಟ; ಸ್ಟ್ರೀಮಿಂಗ್‌ ಯಾವಾಗ? ಯಾವ ಪ್ಲಾಟ್‌ಫಾರ್ಮ್‌?

ಜೂನಿಯರ್ ಎನ್‌ಟಿಆರ್‌ ಅಭಿನಯದ ಹೈವೋಲ್ಟೇಜ್ ಆಕ್ಷನ್ ಸಿನಿಮಾ ದೇವರ ಒಟಿಟಿ ಸ್ಟ್ರೀಮಿಂಗ್ ಕುರಿತು ಅಪ್‌ಡೇಟ್ ದೊರೆತಿದೆ. ದೇವರ ಬಿಡುಗಡೆಗೆ 1 ದಿನ ಇರುವಾಗಲೇ ಡಿಜಿಟಲ್ ಸ್ಟ್ರೀಮಿಂಗ್‌ನಲ್ಲಿ ಸುದ್ದಿಯೊಂದು ವೈರಲ್ ಆಗುತ್ತಿದೆ. ಸಿನಿಮಾ ಡಿಜಿಟಲ್‌ ರೈಟ್ಸ್‌ ಭಾರೀ ಮೊತ್ತಕ್ಕೆ ಮಾರಾಟವಾಗಿದ್ದು ಯಾವಾಗ ಸ್ಟ್ರೀಮಿಂಗ್‌ ಎಂಬ ಲೆಕ್ಕಾಚಾರ ನಡೆಯುತ್ತಿದೆ.

ಆಚಾರ್ಯ ಸೋಲಿನ ನಂತರ ತೆರೆಗೆ ಬರುತ್ತಿರುವ ಕೊರಟಾಲ ಶಿವ ಸಿನಿಮಾ

ಭಾರತೀಯ ಸಿನಿಮಾ ರಂಗದಲ್ಲಿ ದೇವರ ಸಿನಿಮಾ ಸಾಕಷ್ಟು ಬಝ್‌ ಸೃಷ್ಟಿಸಿದೆ. ದೇಶಾದ್ಯಂತ ಸಿನಿಮಾ ಸೆಪ್ಟೆಂಬರ್‌ 27 ರಂದು ತೆರೆ ಕಾಣುತ್ತಿದೆ. ಗುರುವಾರ ಮಧ್ಯರಾತ್ರಿ ನಂತರ ಆಂಧ್ರ ಹಾಗೂ ತೆಲಂಗಾಣದಲ್ಲಿ ಮಿಡ್‌ ನೈಟ್‌ ಶೋಗಳು ನಡೆಯಲಿವೆ. 'ದೇವರ' ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಸಿನಿಮಾ ಮೊದಲ ದಿನವೇ 100 ಕೋಟಿ ಲಾಭ ಮಾಡಬಹುದು ಎಂದು ಸಿನಿ ವಿಮರ್ಶಕರು ಲೆಕ್ಕ ಹಾಕುತ್ತಿದ್ದಾರೆ. ಚಿರಂಜೀವಿ ಜೊತೆಗೆ ಆಚಾರ್ಯ ಸಿನಿಮಾ ಫ್ಲಾಪ್ ಆದ ನಂತರ ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ ದೇವರ ಆಗಿದ್ದು ಬಹಳ ಕುತೂಹಲ ಕೆರಳಿಸಿದೆ. ದೇವರ ಸಿನಿಮಾ ಮೇಕಿಂಗ್‌ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಇದೆ ಎನ್ನಲಾಗುತ್ತಿದೆ.

ತಾರಕ್‌ ಅಭಿನಯವೇ ಸಿನಿಮಾದ ಪ್ಲಸ್‌ ಪಾಯಿಂಟ್

ಇತ್ತೀಚೆಗೆ ಬಿಡುಗಡೆಯಾದ ದೇವರ ಹಾಡುಗಳು, ಗ್ಲಿಂಪ್ಸ್, ಟೀಸರ್ ಮತ್ತು ಟ್ರೇಲರ್ ಬಹಳ ಆಕರ್ಷಕವಾಗಿವೆ. ಅಲ್ಲದೆ, ದೇವರ ಚಿತ್ರದಲ್ಲಿನ ಆಕ್ಷನ್ ಎಪಿಸೋಡ್ ತುಂಬಾ ಹೆಚ್ಚಾಗಿದೆ ಮತ್ತು ವಿಶೇಷವಾಗಿ ಸೆಕೆಂಡ್‌ ಹಾಫ್‌ ಬಹಳ ಅದ್ಭುತವಾಗಿದೆ ಎಂದು ಹಲವರು ವಿಮರ್ಶೆಗಳನ್ನು ನೀಡಿದ್ದಾರೆ. ತಾರಕ್ ಅಭಿನಯವೇ ಸಿನಿಮಾಗೆ ದೊಡ್ಡ ಶಕ್ತಿಯಾಗಿದ್ದು ದ್ವಿತೀಯಾರ್ಧದಲ್ಲಿ ಜಾನ್ವಿ ಕಪೂರ್ ಎಂಟ್ರಿಯಾಗಲಿದೆ ಎಂದು ವರದಿಯಾಗಿದೆ. ಅಲ್ಲದೇ ದೇವರ ಚಿತ್ರದ ಪ್ರಚಾರ ಕಾರ್ಯ ಜೋರಾಗಿ ನಡೆಯುತ್ತಿದೆ. ಟಾಲಿವುಡ್‌ನಿಂದ ಬಾಲಿವುಡ್‌ಗೆ ದೇವರ ಪ್ರಚಾರ ನಡೆಯುತ್ತಿದೆ. ನಿರ್ದೇಶಕ ಕೊರಟಾಲ ಶಿವ ಹಲವು ಸಂದರ್ಶನಗಳಲ್ಲಿ ಭಾಗವಹಿಸಿದ್ದಾರೆ.

ನೆಟ್‌ಫ್ಲಿಕ್ಸ್‌ಗೆ ದೇವರ ಹಕ್ಕು ಮಾರಾಟ

ಕಪಿಲ್ ಶೋನ ಸೀಸನ್ 2 ರಲ್ಲಿ ದೇವರ ತಂಡ ಭಾಗವಹಿಸಿದೆ. ಕಾರ್ಯಕ್ರಮದ ಪ್ರೋಮೋ ಸೆಪ್ಟೆಂಬರ್ 25 ರಂದು ಬಿಡುಗಡೆಯಾಗಿದೆ. ಸಿನಿಮಾ ರಿಲೀಸ್‌ಗೆ ಒಂದು ದಿನ ಮುಂಚಿತವಾಗಿ ಒಟಿಟಿ ಸ್ಟ್ರೀಮಿಂಗ್ ಕುರಿತು ಅಪ್‌ಡೇಟ್‌ ವೈರಲ್ ಆಗುತ್ತಿದೆ. ಪ್ರಮುಖ ಡಿಜಿಟಲ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ ದೇವರ ಒಟಿಟಿ ಹಕ್ಕುಗಳನ್ನು 155 ಕೋಟಿ ರೂ. ಕೊಟ್ಟು ಪಡೆದುಕೊಂಡಿದೆ ಎಂದು ವರದಿಯಾಗಿದೆ. ಆದರೆ ಥಿಯೇಟರ್‌ನಲ್ಲಿ ರಿಲೀಸ್‌ ಆದ 50 ದಿನಗಳ ನಂತರ ಮಾತ್ರ ದೇವರ OTT ಅನ್ನು ಸ್ಟ್ರೀಮ್ ಮಾಡಲು ತಯಾರಕರು ನೆಟ್‌ಫ್ಲಿಕ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಚರ್ಚೆ ಇದೆ. ಬಾಕ್ಸ್ ಆಫೀಸ್ ಕಲೆಕ್ಷನ್ ಹೆಚ್ಚಾಗಿರಲಿ, ಕಡಿಮೆಯೇ ಇರಲಿ ದೇವರ ಒಟಿಟಿ ಸ್ಟ್ರೀಮಿಂಗ್‌ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎನ್ನಲಾಗಿದೆ. ಬಹುಶ: ನವೆಂಬರ್‌ ಕೊನೆಯ ವಾರದಲ್ಲಿ ದೇವರ ಒಟಿಟಿಯಲ್ಲಿ ಸ್ಟ್ರೀಮ್‌ ಆಗಬಹುದು ಎಂಬ ಮಾತು ಕೇಳಿ ಬರುತ್ತಿದೆ.

mysore-dasara_Entry_Point