ಕನ್ನಡ ಸುದ್ದಿ  /  ಮನರಂಜನೆ  /  Jr Ntr: ಅಭಿಮಾನಿಗಳ ಗುಂಪಿನಲ್ಲಿ ಅಪ್ಪಚ್ಚಿಯಾದ್ರ ಜೂನಿಯರ್‌ ಎನ್‌ಟಿಆರ್‌? ಟಿಲ್ಲು ಸ್ಕ್ವೇರ್‌ ಇವೆಂಟ್‌ನಲ್ಲಿ ನಟನ ಗ್ರೇಟ್‌ ಎಸ್ಕೇಪ್‌

Jr NTR: ಅಭಿಮಾನಿಗಳ ಗುಂಪಿನಲ್ಲಿ ಅಪ್ಪಚ್ಚಿಯಾದ್ರ ಜೂನಿಯರ್‌ ಎನ್‌ಟಿಆರ್‌? ಟಿಲ್ಲು ಸ್ಕ್ವೇರ್‌ ಇವೆಂಟ್‌ನಲ್ಲಿ ನಟನ ಗ್ರೇಟ್‌ ಎಸ್ಕೇಪ್‌

Jr NTR Mobbed At Tillu Square Event: ಟಿಲ್ಲು ಸ್ಕ್ವೇರ್‌ ಸಕ್ಸಸ್‌ ಪಾರ್ಟಿಯಲ್ಲಿ ಭಾಗವಹಿಸಿದ ಜೂನಿಯರ್‌ ಎನ್‌ಟಿಆರ್‌ ಆ ಕಾರ್ಯಕ್ರಮ ಮುಗಿಸಿ ಕಾರಿನ ಬಳಿಗೆ ಹೋಗುವ ಸಂದರ್ಭದಲ್ಲಿ ಸಾಕಷ್ಟು ಕಷ್ಟ ಅನುಭವಿಸಿದ್ದರು. ಅಭಿಮಾನಿಗಳ ಗುಂಪಿನ ನಡುವೆ ಸಿಲುಕಿ ಕಾರನ್ನು ತಲುಪಿದ್ದೇ ದೊಡ್ಡ ಸಾಧನೆ ಎನ್ನುವಂತೆ ಇತ್ತು.

ಅಭಿಮಾನಿಗಳ ಗುಂಪಿನ ನಡುವೆ ಜೂನಿಯರ್‌ ಎನ್‌ಟಿಆರ್‌
ಅಭಿಮಾನಿಗಳ ಗುಂಪಿನ ನಡುವೆ ಜೂನಿಯರ್‌ ಎನ್‌ಟಿಆರ್‌

ಬೆಂಗಳೂರು: ಟಿಲ್ಲು ಸ್ಕ್ವೇರ್‌ ಸಿನಿಮಾದ ಯಶಸ್ಸಿನ ಖುಷಿಗಾಗಿ ಆಯೋಜಿಸಿದ ಪಾರ್ಟಿಯಲ್ಲಿ ಆರ್‌ಆರ್‌ಆರ್‌ ಖ್ಯಾತಿಯ ಜ್ಯೂನಿಯರ್‌ ಎನ್‌ಟಿಆರ್‌ ಭಾಗವಹಿಸಿದ್ದರು. ಸಿದ್ದು ಜೊನ್ನಲಗಡ್ಡ ಮತ್ತು ಅನುಪಮಾ ಪರಮೇಶ್ವರನ್‌ ನಟನೆಯ ಈ ಸಿನಿಮಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸ್‌ ಹೋಗುತ್ತಿದ್ದ ವೇಳೆಯಲ್ಲಿ ನಟನ ಸುತ್ತ ಅಭಿಮಾನಿಗಳ ನೂಕುನುಗ್ಗಲು ಹೆಚ್ಚಾಗಿತ್ತು. ಜನರಿಂದ ಸೇಫ್‌ ಆಗಿ ಜೂನಿಯರ್‌ ಎನ್‌ಟಿಆರ್‌ ಪಾರಾಗಿ ಬಂದಿರುವುದೇ ಹೆಚ್ಚು ಎನ್ನುವಂತೆ ಇತ್ತು. ನಟನ ಸುತ್ತಲೂ ಇದ್ದ ಭದ್ರತಾ ಸಿಬ್ಬಂದಿ ಹೇಗೋ ಕಷ್ಟಪಟ್ಟು ನಟನನ್ನು ಕಾರಿನ ಬಳಿಗೆ ತಲುಪಿಸಲು ಯಶಸ್ವಿಯಾದ್ರು. ಜೂನಿಯರ್‌ ಎನ್‌ಟಿಆರ್‌ ಜನರ ಗುಂಪಿನ ನಡುವೆ ಸಿಲುಕಿಕೊಂಡ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಅನುಪಮಾ ಪರಮೇಶ್ವರನ್‌ ಮತ್ತು ಸಿದ್ದು ಜೊನ್ನಲಗಡ್ಡ ನಟನೆಯ ಟಿಲ್ಲು ಸ್ಕ್ವೇರ್‌ ಸಿನಿಮಾವು ಚಿತ್ರಮಂದಿರಗಳಲ್ಲಿ ಮಾರ್ಚ್‌ 29ರಂದು ಬಿಡುಗಡೆಯಾಗಿತ್ತು. ಬಿಡುಗಡೆಯಾದ ಎರಡೇ ವಾರದಲ್ಲಿ ಈ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ 100 ಕೋಟಿ ರೂಪಾಯಿಗಿಂತಲೂ ಹೆಚ್ಚು ಗಳಿಕೆ ಮಾಡಿದೆ. ಈ ಸಿನಿಮಾದ ಯಶಸ್ಸಿನ ಪಾರ್ಟಿ ಹೈದರಾಬಾದ್‌ನಲ್ಲಿ ನಡೆಯಿತು. ಈ ಪಾರ್ಟಿಯಲ್ಲಿ ಜೂನಿಯರ್‌ ಎನ್‌ಟಿಆರ್‌ ಮತ್ತು ನಿರ್ದಶಕ ತ್ರಿವಿಕ್ರಮ್‌ ಶ್ರೀನಿವಾಸ್‌ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಆರ್‌ಆರ್‌ಆರ್‌ ನಟ ಕ್ರೂರವಾಗಿ ಜನರ ಗುಂಪಿನ ನಡುವೆ ಸಿಲುಕಿಕೊಂಡಂತೆ ವಿಡಿಯೋದಲ್ಲಿ ಭಾಸವಾಗಿದೆ.

ಕಾರ್ಯಕ್ರಮ ನಡೆಯುವ ಸ್ಥಳದಿಂದ ದೇವರ ನಟ ಜೂನಿಯರ್‌ ಎನ್‌ಟಿಆರ್‌ಗೆ ಹೊರಕ್ಕೆ ಹೋಗುವುದೇ ಕಷ್ಟವಾಗಿದೆ. ಇವರ ಇನ್ನೊಂದು ಬದಿಯಲ್ಲಿ ನಿರ್ದೇಶಕ ತ್ರಿವಿಕ್ರಮ್‌ ಶ್ರೀನಿವಾಸ್‌ ಕೂಡ ಇದ್ದರು. ಕಾರ್ಯಕ್ರಮ ನಡೆಯುವ ಸ್ಥಳದಿಂದ ಕಾರಿನ ಬಳಿಗೆ ಬರುವ ಪ್ರಕ್ರಿಯೆ ಸಮುದ್ರ ದಾಟುವಷ್ಟು ಕಷ್ಟವಾದಂತೆ ತೋರಿದೆ. ಅಭಿಮಾನಿಯೊಬ್ಬ ಆ ಗುಂಪಿನ ನಡುವೆ ಜೂನಿಯರ್‌ ಎನ್‌ಟಿಆರ್‌ ಪಾದವನ್ನು ಸ್ಪರ್ಶಿಸುವುದೂ ವಿಡಿಯೋದಲ್ಲಿ ಕಾಣಿಸಿದೆ. ಅಭಿಮಾನಿಗಳ ಇಂತಹ ಹಲವು ಪ್ರತಿಕ್ರಿಯೆಗಳ ನಡುವೆ ಹೇಗೋ ಜೂನಿಯರ್‌ ಎನ್‌ಟಿಆರ್‌ ಕಾರಿನ ಬಳಿಗೆ ತಲುಪಿದ್ದಾರೆ.

ಅನುಪಮಾ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಜೂನಿಯರ್‌ ಎನ್‌ಟಿಆರ್‌ ಮತ್ತು ತ್ರಿವಿಕ್ರಮ್‌ ಶ್ರೀನಿವಾಸ್‌ಗೆ ಸೋಷಿಯಲ್‌ ಮೀಡಿಯಾದಲ್ಲಿ ಧನ್ಯವಾದ ತಿಳಿಸಿದ್ದಾರೆ. "ಎಂಟು ವರ್ಷಷದ ಹಿಂದೆ ಕಾರ್ಯಕ್ರಮವೊಂದರ ಸ್ಟೇಜ್‌ನಲ್ಲಿ ನಾನು ತ್ರಿವಿಕ್ರಮ್‌ಗಾರು ಅವರನ್ನು ನೋಡಿದೆ. ಇದೀಗ ಇವರು ನಮ್ಮ ಜತೆ ಇದ್ದಾರೆ. ಇದು ನಿಜಕ್ಕೂ ಖುಷಿಯ ವಿಚಾರ. ತ್ರಿವಿಕ್ರಮ್‌ ಅವರೇ ನಿಮ್ಮ ಮಾರ್ಗದರ್ಶನ ನಮ್ಮನ್ನು ಇಲ್ಲಿಗೆ ತಲುಪಿಸಿದೆ. ಎನ್‌ಟಿಆರ್‌ ಅವರು ತನ್ನ ಮಾಸ್‌ ಮತ್ತು ಅನನ್ಯ ಪ್ರತಿಭೆಯಿಂದ ನಮಗೆ ಇಷ್ಟವಾದ ನಟ. ಅವರ ಜತೆ ಸ್ಟೇಜ್‌ ಹಂಚಿಕೊಳ್ಳುವ ಸಂದರ್ಭ ನಮಗೆ ಒದಗಿ ಬಂದಿರುವುದು ನಿಜಕ್ಕೂ ಅದೃಷ್ಟ" ಎಂದು ಅನುಪಮಾ ಪರಮೇಶ್ವರನ್‌ ಹೇಳಿದ್ದಾರೆ.

ದೇವರ ಸಿನಿಮಾ ಬಿಡುಗಡೆ ಯಾವಾಗ?

ಜೂನಿಯರ್‌ ಎನ್‌ಟಿಆರ್‌ ನಟನೆಯ ದೇವರ ಚಿತ್ರ ಇದೇ ತಿಂಗಳು ಏಪ್ರಿಲ್‌ನಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ಈ ಸಿನಿಮಾ ರಿಲೀಸ್‌ ಅನ್ನು ಅಕ್ಟೋಬರ್‌ 10ಕ್ಕೆ ಮುಂದೂಡಲಾಗಿದೆ. ಆರ್‌ಆರ್‌ಆರ್‌ ಬಳಿಕ ಈ ಚಿತ್ರ ದೊಡ್ಡ ಮಟ್ಟದ ಯಶಸ್ಸು ಕಾಣಬಹುದು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಟಿಲ್ಲು ಸ್ಕ್ವೇರ್‌ ಕಾರ್ಯಕ್ರಮದಲ್ಲಿ ಅಭಿಮಾನಿಗಳ ನಿರಾಸೆಯನ್ನು ಅರ್ಥ ಮಾಡಿಕೊಂಡ ಜೂನಿಯರ್‌ ಎನ್‌ಟಿಆರ್‌ ಸಮಧಾನ ಹೇಳಿದ್ದಾರೆ. "ಅಭಿಮಾನಿಗಳು ಹೆಮ್ಮೆಯಿಂದ ನೆಗೆಯುವಂತೆ ಮಾಡುವ ಸಿನಿಮಾ ದೇವರ. ಮುಗಿಯಿತು ಎಂದುಕೊಳ್ಳಬೇಡಿ. ದೇವರ ಬಿಡುಗಡೆ ತಡವಾದರೂ ಹೆಮ್ಮೆ ಪಡುವಂತೆ ಇರುತ್ತದೆ. " ಎಂದು ಜೂನಿಯರ್‌ ಎನ್‌ಟಿರ್‌ ಹೇಳಿದ್ದಾರೆ.

IPL_Entry_Point