ದೇವರ ನಂತರ ಮುಂದೇನು? ಭಾಗ 2 ಹೊರತುಪಡಿಸಿ ಜ್ಯೂ ಎನ್‌ಟಿಆರ್‌ ಅಭಿನಯದ ಮುಂಬರುವ ಸಿನಿಮಾಗಳು ಯಾವುವು?-tollywood news jr ntr upcoming movies after devara telugu film industry nandamuri taraka rama rao new movies rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ದೇವರ ನಂತರ ಮುಂದೇನು? ಭಾಗ 2 ಹೊರತುಪಡಿಸಿ ಜ್ಯೂ ಎನ್‌ಟಿಆರ್‌ ಅಭಿನಯದ ಮುಂಬರುವ ಸಿನಿಮಾಗಳು ಯಾವುವು?

ದೇವರ ನಂತರ ಮುಂದೇನು? ಭಾಗ 2 ಹೊರತುಪಡಿಸಿ ಜ್ಯೂ ಎನ್‌ಟಿಆರ್‌ ಅಭಿನಯದ ಮುಂಬರುವ ಸಿನಿಮಾಗಳು ಯಾವುವು?

ದೇವರ ಸಿನಿಮಾ ಸೆಪ್ಟೆಂಬರ್‌ 27 ರಂದು ತೆರೆ ಕಾಣುತ್ತಿದೆ. ಈ ಸಿನಿಮಾ ನಂತರ ಜ್ಯೂನಿಯರ್‌ ಎನ್‌ಟಿಆರ್‌ ಅಭಿನಯದ 3 ಸಿನಿಮಾಗಳು ತೆರೆ ಕಾಣಲಿವೆ. ಪ್ರಶಾಂತ್‌ ನೀಲ್‌ ಜೊತೆಗಿನ ಸಿನಿಮಾ, ಹಿಂದಿಯ ವಾರ್‌ 2 ಹಾಗೂ ದೇವರ 2 ಸಿನಿಮಾಗಳು 2026ರ ವೇಳೆಗೆ ರಿಲೀಸ್‌ ಆಗಲಿವೆ. ಇದನ್ನು ಹೊರತುಪಡಿಸಿ ಶೀಘ್ರದಲ್ಲೇ ಹೊಸ ಸಿನಿಮಾವನ್ನು ತಾರಕ್‌ ಅನೌನ್ಸ್‌ ಮಾಡಲಿದ್ದಾರೆ.

ದೇವರ ನಂತರ ಮುಂದೇನು? ಭಾಗ 2ರ ಹೊರತುಪಡಿಸಿ ಜ್ಯೂ ಎನ್‌ಟಿಆರ್‌ ಅಭಿನಯದ ಮುಂಬರುವ ಸಿನಿಮಾಗಳು ಯಾವುವು?
ದೇವರ ನಂತರ ಮುಂದೇನು? ಭಾಗ 2ರ ಹೊರತುಪಡಿಸಿ ಜ್ಯೂ ಎನ್‌ಟಿಆರ್‌ ಅಭಿನಯದ ಮುಂಬರುವ ಸಿನಿಮಾಗಳು ಯಾವುವು?

ಸದ್ಯಕ್ಕೆ ಎಲ್ಲೆಲ್ಲೂ ದೇವರ ಸಿನಿಮಾದ್ದೇ ಮಾತು. ಸಿನಿಮಾ ರಿಲೀಸ್‌ ದಿನಾಂಕ ಅನೌನ್ಸ್‌ ಆದಾಗಿನಿಂದ ಬಹಳ ಕ್ರೇಜ್‌ ಸೃಷ್ಟಿಸಿದೆ. ಸೆಪ್ಟೆಂಬರ್‌ 27 ರಂದು ಸಿನಿಮಾ ದೇಶಾದ್ಯಂತ ರಿಲೀಸ್‌ ಆಗುತ್ತಿದೆ. ತೆಲುಗು ಹೊರತುಪಡಿಸಿ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಚಿತ್ರದಲ್ಲಿ ಬಾಲಿವುಡ್ ನಟಿ ಜಾಹ್ನವಿ ಕಪೂರ್‌ ಹಾಗೂ ಸೈಫ್‌ ಅಲಿ ಖಾನ್‌ ಕೂಡಾ ನಟಿಸಿರುವುದರಿಂದ ಸಹಜವಾಗಿ ಉತ್ತರ ಭಾಗದ ಜನರಿಗೂ ಸಿನಿಮಾ ಬಗ್ಗೆ ಕುತೂಹಲ ಇದೆ.

ಅದ್ಧೂರಿಯಾಗಿ ಬಿಡುಗಡೆ ಆಗುತ್ತಿರುವ ದೇವರ

ದೇವರ ಸಿನಿಮಾ 2 ಭಾಗಗಳಲ್ಲಿ ತಯಾರಾಗುತ್ತಿದೆ. ಚಿತ್ರವನ್ನು ಯುವಸುಧಾ ಆರ್ಟ್ಸ್‌ ಹಾಗೂ ಎನ್‌ಟಿಆರ್‌ ಬ್ಯಾನರ್‌ ಅಡಿಯಲ್ಲಿ ಸುಧಾಕರ್‌ ಮಿಕ್ಕಿಲಿನೇನಿ, ಕೋಸರಾಜು ಹರಿಕೃಷ್ಣ, ನಂದಮೂರಿ ಕಲ್ಯಾಣ್‌ ರಾಮ್‌ ಜೊತೆ ಸೇರಿ ನಿರ್ಮಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅನಿರುದ್ಧ ರವಿಚಂದರ್‌ ಸಂಗೀತ ನೀಡುತ್ತಿದ್ದು ಈಗಾಗಲೇ ರಿಲೀಸ್‌ ಆಗಿರುವ ಹಾಡುಗಳು ಅಭಿಮಾನಿಗಳಿಗೆ ಇಷ್ಟವಾಗಿದೆ. 300 ಕೋಟಿ ರೂ. ಬಜೆಟ್‌ನಲ್ಲಿ ಸಿದ್ಧವಾಗಿರುವ ಸಿನಿಮಾದಲ್ಲಿ ಜ್ಯೂನಿಯರ್‌ ಎನ್‌ಟಿಆರ್‌ ದ್ವಿಪಾತ್ರದಲ್ಲಿ ನಟಿಸಿದ್ದು ಜಾಹ್ನವಿ ಕಪೂರ್‌ ನಾಯಕಿಯಾಗಿದ್ದಾರೆ. ಸೈಫ್‌ ಅಲಿ ಖಾನ್‌ ಭೈರ ಎಂಬ ವಿಲನ್‌ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಪ್ರಕಾಶ್‌ ರಾಜ್‌, ಶ್ರೀಕಾಂತ್‌, ಮುರಳಿ ಶರ್ಮಾ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ.

ಪ್ರಶಾಂತ್‌ ನೀಲ್‌ ಜ್ಯೂ ಎನ್‌ಟಿಆರ್‌ ಕಾಂಬಿನೇಶನ್‌ ಸಿನಿಮಾ

ದೇವರ ಸಿನಿಮಾ ರಿಲೀಸ್‌ ಆಗುತ್ತಿದ್ದಂತೆ ಸಹಜವಾಗಿ ಕೇಳಿ ಬರುವ ಪ್ರಶ್ನೆ, ಎನ್‌ಟಿಆರ್‌ ಮುಂದಿನ ಸಿನಿಮಾ ಯಾವುದು? ಅನ್ನೋದು. ಅದಕ್ಕೂ ಉತ್ತರ ಇದೆ. ದೇವರ ಭಾಗ 2 ಹೊರತುಪಡಿಸಿ ತಾರಕ್‌, ಇನ್ನೂ 2 ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಅದರಲ್ಲಿ ಪ್ರಶಾಂತ್‌ ನೀಲ್‌ ಜೊತೆಗಿನ ಸಿನಿಮಾ ಕೂಡಾ ಇದೆ. ಕೆಜಿಎಫ್‌ 2 ಮುಗಿಯುತ್ತಿದ್ದಂತೆ ಪ್ರಶಾಂತ್‌ ನೀಲ್‌ ಹಾಗೂ ಜ್ಯೂ ಎನ್‌ಟಿಆರ್‌ ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬಂತು. ಅದರೆ ಆ ಚಿತ್ರದ ನಂತರ ಪ್ರಶಾಂತ್‌ ನೀಲ್‌, ಸಲಾರ್‌ ಸಿನಿಮಾದಲ್ಲಿ ಬ್ಯುಸಿ ಆದರೆ, ಎನ್‌ಟಿಆರ್‌ ಆರ್‌ಆರ್‌ಆರ್‌ ಸಿನಿಮಾದತ್ತ ಹೊರಟರು. ಬಹುಶ: ದೇವರ ರಿಲೀಸ್‌ ಆಗುತ್ತಿದ್ದಂತೆ ಜ್ಯೂ ಎನ್‌ಟಿಆರ್‌ ಹಾಗೂ ಪ್ರಶಾಂತ್‌ ನೀಲ್‌ ಕಾಂಬಿನೇಶನ್‌ ಸಿನಿಮಾ ಸೆಟ್ಟೇರಬಹುದು ಎನ್ನಲಾಗುತ್ತಿದೆ. ಇದು ಎನ್‌ಟಿಆರ್‌ ಅಭಿನಯದ 31ನೇ ಸಿನಿಮಾ.

ಬಾಲಿವುಡ್‌ ಡೆಬ್ಯೂ ವಾರ್‌ 2

ಇದನ್ನು ಹೊರತುಪಡಿಸಿ ಜ್ಯೂನಿಯರ್‌ ಎನ್‌ಟಿಆರ್‌ ವಾರ್‌ 2 ಸಿನಿಮಾ 2025ಕ್ಕೆ ತೆರೆ ಕಾಣಲಿದೆ. ಈ ಮೂಲಕ ತಾರಕ್‌ ಮೊದಲ ಬಾರಿಗೆ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರವನ್ನು ಅಯಾನ್‌ ಮುಖರ್ಜಿ ನಿರ್ದೇಶಿಸುತ್ತಿದ್ದು ಆದಿತ್ಯ ಚೋಪ್ರಾ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ತಾರಕ್‌ ಜೊತೆ ಹೃತಿಕ್‌ ರೋಷನ್‌, ಕಿಯಾರ ಅಡ್ವಾಣಿ ನಟಿಸಲಿದ್ದಾರೆ. ಜ್ಯೂ ಎನ್‌ಟಿಆರ್‌ ಇನ್ನೂ ಕಥೆಗಳನ್ನು ಕೇಳುತ್ತಿದ್ದು ಶೀಘ್ರದಲ್ಲೇ ಹೊಸ ಸಿನಿಮಾ ಅನೌನ್ಸ್‌ ಮಾಡುವ ಸಾಧ್ಯತೆ ಇದೆ.

ದೇವರ ಭಾಗ 2

ಪ್ರಶಾಂತ್‌ ನೀಲ್‌ ಜೊತೆಗಿನ ಸಿನಿಮಾ ನಂತರ ದೇವರ 2 ಚಿತ್ರೀಕರಣ ಆರಂಭವಾಗಲಿದೆ. ಸೀಕ್ವೆಲ್‌ ಪ್ರೀ ಪ್ರೊಡಕ್ಷನ್‌ ಕೆಲಸಗಳು ಮುಗಿದಿದ್ದು ಶೂಟಿಂಗ್‌ ಶುರುವಾಗುವುದಷ್ಟೇ ಬಾಕಿ ಇದೆ. ಮುಗಿದು ಆ ಸಿನಿಮಾ 2026ಕ್ಕೆ ತೆರೆ ಕಾಣಲಿದೆ. ಬಾಹುಬಲಿ 1 ರಲ್ಲಿ ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ ಎಂಬ ಪ್ರಶ್ನೆ ಉದ್ಭವವಾಗಿತ್ತು. ದೇವರ ಭಾಗ 1ರ ಕ್ಲೈಮಾಕ್ಸ್‌ ಕೂಡಾ ಬಾಹುಬಲಿ ಚಿತ್ರದಂತೇ ಇದ್ದು ಇದಕ್ಕೆ ಭಾಗ 2ರಲ್ಲಿ ಉತ್ತರ ದೊರೆಯಲಿದೆ ಎನ್ನಲಾಗುತ್ತಿದೆ.

mysore-dasara_Entry_Point