ದಿನೇ ದಿನೆ ಇಳಿಕೆ ಆಗ್ತಿದೆ ಕಲೆಕ್ಷನ್‌; ಜ್ಯೂನಿಯರ್‌ ಎನ್‌ಟಿಆರ್‌ ದೇವರ ಭಾಗ 1 ಐದನೇ ದಿನ ಬಾಕ್ಸ್‌ ಆಫೀಸಿನಲ್ಲಿ ಗಳಿಸಿದ್ದು ಎಷ್ಟು?-tollywood news junior ntr devara movie 5th day collection at box office telugu film industry rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ದಿನೇ ದಿನೆ ಇಳಿಕೆ ಆಗ್ತಿದೆ ಕಲೆಕ್ಷನ್‌; ಜ್ಯೂನಿಯರ್‌ ಎನ್‌ಟಿಆರ್‌ ದೇವರ ಭಾಗ 1 ಐದನೇ ದಿನ ಬಾಕ್ಸ್‌ ಆಫೀಸಿನಲ್ಲಿ ಗಳಿಸಿದ್ದು ಎಷ್ಟು?

ದಿನೇ ದಿನೆ ಇಳಿಕೆ ಆಗ್ತಿದೆ ಕಲೆಕ್ಷನ್‌; ಜ್ಯೂನಿಯರ್‌ ಎನ್‌ಟಿಆರ್‌ ದೇವರ ಭಾಗ 1 ಐದನೇ ದಿನ ಬಾಕ್ಸ್‌ ಆಫೀಸಿನಲ್ಲಿ ಗಳಿಸಿದ್ದು ಎಷ್ಟು?

ಕೊರಟಾಲ ಶಿವ ನಿರ್ದೇಶನದಲ್ಲಿ ಜ್ಯೂನಿಯರ್ ಎನ್‌ಟಿಆರ್ ಮತ್ತು ಸೈಫ್ ಅಲಿ ಖಾನ್ ಅಭಿನಯದ ದೇವರ ಸಿನಿಮಾ ದಿನದಿಂದ ದಿನಕ್ಕೆ ಕಲೆಕ್ಷನ್‌ನಲ್ಲಿ ಕುಸಿತ ಕಂಡಿದೆ. 5 ದಿನಗಳವರೆಗೂ ಭಾರತದಲ್ಲಿ ಕಲೆಕ್ಷನ್‌ 200 ಕೋಟಿ ದಾಟಿಲ್ಲ ಎಂದು ವರದಿಯಾಗಿದೆ.

ದಿನೇ ದಿನೆ ಇಳಿಕೆ ಆಗ್ತಿದೆ ಕಲೆಕ್ಷನ್‌; ಜ್ಯೂನಿಯರ್‌ ಎನ್‌ಟಿಆರ್‌ ದೇವರ ಭಾಗ 1 ಐದನೇ ದಿನ ಬಾಕ್ಸ್‌ ಆಫೀಸಿನಲ್ಲಿ ಗಳಿಸಿದ್ದು ಎಷ್ಟು?
ದಿನೇ ದಿನೆ ಇಳಿಕೆ ಆಗ್ತಿದೆ ಕಲೆಕ್ಷನ್‌; ಜ್ಯೂನಿಯರ್‌ ಎನ್‌ಟಿಆರ್‌ ದೇವರ ಭಾಗ 1 ಐದನೇ ದಿನ ಬಾಕ್ಸ್‌ ಆಫೀಸಿನಲ್ಲಿ ಗಳಿಸಿದ್ದು ಎಷ್ಟು? (PC: Devara Movie Instagram)

ಜ್ಯೂನಿಯರ್ ಎನ್‌ಟಿಆರ್ ಅಭಿನಯದ ದೇವರ ಸಿನಿಮಾ ಮೊದಲ ದಿನ ಬಾಕ್ಸ್‌ ಆಫೀಸಿನಲ್ಲಿ 140 ಕೋಟಿ ಗಳಿಸುವ ಮೂಲಕ ಭಾರೀ ಸದ್ದು ಮಾಡಿತ್ತು. 2ನೇ ದಿನ ಸ್ವಲ್ಪ ಇಳಿಕೆ ಕಂಡಿತ್ತು. ಆದರೆ 5 ದಿನಗಳಲ್ಲಿ ಕಲೆಕ್ಷನ್‌ನಲ್ಲಿ ಬಹಳ ಕುಸಿತ ಕಂಡಿದೆ. ಸಕ್ನಿಲ್‌ ವರದಿ ಪ್ರಕಾರ ಸಿನಿಮಾ ರಿಲೀಸ್‌ ಆದ 4 ದಿನಗಳಾದರೂ ಭಾರತದಲ್ಲಿ 200 ಕೋಟಿ ರೂ. ಕೂಡಾ ಗಳಿಸಿಲ್ಲ.

ಭಾರತದಲ್ಲಿ 200 ಕೋಟಿ ರೂ ದಾಟದ ಗಳಿಕೆ

ಕಳೆದ ಶುಕ್ರವಾರ, ಸೆಪ್ಟೆಂಬರ್‌ 27 ರಂದು ಸಿನಿಮಾ ತೆಲುಗು , ಕನ್ನಡ, ಹಿಂದಿ, ಮಲಯಾಳಂ, ತಮಿಳು ಸೇರಿ ಒಟ್ಟು 5 ಭಾಷೆಗಳಲ್ಲಿ ರಿಲೀಸ್‌ ಆಗಿತ್ತು. ಆಂಧ್ರ ಹಾಗೂ ತೆಲಂಗಾಣ ಎರಡೂ ರಾಜ್ಯಗಳು ಸೇರಿ ಮೊದಲ ದಿನ, ಸಿನಿಮಾ 65 ಕೋಟಿ ರೂ ಕಲೆಕ್ಷನ್‌ ಮಾಡಿದೆ. ಕರ್ನಾಟಕದಲ್ಲಿ ದೇವರ 10 ಕೋಟಿ ರೂ. ಗಳಿಸಿತ್ತು. ತೆಲುಗು ರಾಜ್ಯಗಳಲ್ಲಿ ರೂ. ಒಟ್ಟು 82 ಕೋಟಿ, ತಮಿಳುನಾಡಿನಲ್ಲಿ 2.5 ಕೋಟಿ ರೂ, ಕೇರಳದಲ್ಲಿ60 ಲಕ್ಷ ರೂ. ಉತ್ತರ ಭಾರತದ ರಾಜ್ಯಗಳಲ್ಲಿ 10 ಕೋಟಿ ರೂ ವಿದೇಶದಲ್ಲಿ 49 ಕೋಟಿ ರೂ ಕಲೆಕ್ಷನ್ ಮಾಡಿತ್ತು.

2ನೇ ದಿನ ಭಾರತದಲ್ಲಿ 50 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ತೆಲುಗು ರಾಜ್ಯಗಳಲ್ಲಿ 29 ಕೋಟಿ ರೂ, ಹಿಂದಿಯಲ್ಲಿ 9 ಕೋಟಿ ರೂ ಸಂಗ್ರಹಿಸಿದೆ. ವ್ಯಾಪಾರ ತಜ್ಞರ ಪ್ರಕಾರ, ವಿಶ್ವಾದ್ಯಂತ ಚಿತ್ರದ ಎರಡನೇ ದಿನದ ಕಲೆಕ್ಷನ್ ರೂ. 100 ಕೋಟಿ. ಇದರೊಂದಿಗೆ 'ದೇವರ' ಎರಡು ದಿನದೊಳಗೆ ರೂ. 200 ಕೋಟಿ ಕ್ಲಬ್ ಸೇರಿತ್ತು. ಹಾಗೆ ಮೂರನೇ ದಿನ ಭಾರತದಲ್ಲಿ 45 ಕೋಟಿ ರೂ. ಸಂಗ್ರಹಿಸಿತ್ತು. ಸೋಮವಾರ, ನಾಲ್ಕನೇ ದಿನ ಭಾರತದಲ್ಲಿ ಸಿನಿಮಾ ಒಟ್ಟು 12.75 ಕೋಟಿ ರೂ. ಗಳಿಸಿದೆ. ಅದರಲ್ಲಿ ತೆಲುಗು 8.2 ಕೋಟಿ ರೂ. ಹಿಂದಿಯಲ್ಲಿ 4 ಕೋಟಿ ರೂ. ಗಳಿಸಿದೆ. ಇದುವರೆಗೂ ಭಾರತದಲ್ಲಿ ಒಟ್ಟು 175 ಕೋಟಿ ಗಳಿಸಿದ್ದು ವಿಶ್ವಾದ್ಯಂತ ಒಟ್ಟು 304 ಕೋಟಿ ರೂ ಹಣ ಸಂಗ್ರಹಿಸಿದೆ. ಈ ವಿಚಾರವನ್ನು ಚಿತ್ರತಂಡವೇ ಅಧಿಕೃತವಾಗಿ ಹೇಳಿಕೊಂಡಿದೆ.

ಮಂಗಳವಾರ ಭಾರತದಲ್ಲಿ 14 ಕೋಟಿ ರೂ ಕಲೆಕ್ಷನ್‌

ದೇವರ ಭಾಗ 1 ಸೋಮವಾರ ಶೇಕಡಾ 22.55 ತೆಲುಗು ಆಕ್ಯುಪೆನ್ಸಿಯನ್ನು ದಾಖಲಿಸಿದೆ. ಅದರ ಹೊರತಾಗಿ, ಇದು ಹಿಂದಿ ವಲಯದಲ್ಲಿ ಶೇಕಡಾ 11.54 , ಕನ್ನಡದಲ್ಲಿ ಶೇಕಡಾ 19.74 ಶೇಕಡಾ ಮತ್ತು ತಮಿಳಿನಲ್ಲಿ ಶೇಕಡಾ 15.44 ಆಕ್ಯುಪೆನ್ಸಿಯನ್ನು ಹೊಂದಿತ್ತು. ಆದರೆ ಸೋಮವಾರಕ್ಕೆ ಹೋಲಿಸಿದರೆ ಮಂಗಳವಾರ ಕಲೆಕ್ಷನ್‌ ತುಸು ಹೆಚ್ಚಾಗಿದೆ ಮಂಗಳವಾರ ಭಾರತದಲ್ಲಿ 12.75 ಕೋಟಿ ರೂ ಕಲೆಕ್ಷನ್‌ ಮಾಡಿದರೆ ಬುಧವಾರ 14 ಕೋಟಿ ರೂ. ಸಂಗ್ರಹಿಸಿದೆ. ಮಂಗಳವಾರದ ಕಲೆಕ್ಷನ್‌ ಸೇರಿಸಿ ಇದುವರೆಗೂ ಭಾರತದಲ್ಲಿ ಒಟ್ಟು 187.35 ಕೋಟಿ ರೂ ಗಳಿಸಿದೆ ಎಂದು ಸಕ್ನಿಲ್‌ ವರದಿ ಮಾಡಿದೆ. ಸಿನಿಮಾ ಇದುವರೆಗೂ ವಿಶ್ವಾದ್ಯಂತ 304 ಕೋಟಿ ರೂ ಸಂಗ್ರಹಿಸಿದೆ ಎಂದು ಚಿತ್ರತಂಡ ಸೋಮವಾರ ಹೇಳಿಕೊಂಡಿತ್ತು. ಮಂಗಳವಾರದ ಕಲೆಕ್ಷನ್‌ ಸೇರಿ ಒಟ್ಟು ಎಷ್ಟು ಸಂಗ್ರಹಿಸಿದೆ ಅನ್ನೋದು ಶೀಘ್ರದಲ್ಲೇ ತಿಳಿಯಲಿದೆ.

ಸುಮಾರು 6 ವರ್ಷಗಳ ನಂತರ ಜ್ಯೂನಿಯರ್‌ ಎನ್‌ಟಿಆರ್‌ ಸೋಲೋ ಹೀರೋ ಆಗಿ ದೇವರ ಚಿತ್ರದ ಮೂಲಕ ಗುರುತಿಸಿಕೊಂಡಿದ್ದಾರೆ. ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. RRR ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ, ಜೊತೆಗೆ ಸೈಫ್ ಅಲಿ ಖಾನ್ , ಜಾಹ್ನವಿ ಕಪೂರ್, ಪ್ರಕಾಶ್ ರಾಜ್, ಶ್ರೀಕಾಂತ್ ಮೇಕಾ, ಟಾಮ್ ಶೈನ್ ಚಾಕೊ ಮತ್ತು ನರೇನ್. ಸೈಫ್ ಅಲಿ ಖಾನ್‌ ನಟಿಸಿದ್ದಾರೆ.

mysore-dasara_Entry_Point