ಆರ್‌ಆರ್‌ಆರ್‌ ದಾಖಲೆ ಹಿಂದಿಕ್ಕುವಲ್ಲಿ ದೇವರ ವಿಫಲ; ಮೊದಲ ದಿನ ಜ್ಯೂನಿಯರ್‌ ಎನ್‌ಟಿಆರ್‌ ಸಿನಿಮಾ ವರ್ಲ್ಡ್‌ವೈಡ್‌ ಗಳಿಸಿದ್ದು ಎಷ್ಟು?-tollywood news junior ntr movie failed to break rrr record devara first day collection telugu film industry rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಆರ್‌ಆರ್‌ಆರ್‌ ದಾಖಲೆ ಹಿಂದಿಕ್ಕುವಲ್ಲಿ ದೇವರ ವಿಫಲ; ಮೊದಲ ದಿನ ಜ್ಯೂನಿಯರ್‌ ಎನ್‌ಟಿಆರ್‌ ಸಿನಿಮಾ ವರ್ಲ್ಡ್‌ವೈಡ್‌ ಗಳಿಸಿದ್ದು ಎಷ್ಟು?

ಆರ್‌ಆರ್‌ಆರ್‌ ದಾಖಲೆ ಹಿಂದಿಕ್ಕುವಲ್ಲಿ ದೇವರ ವಿಫಲ; ಮೊದಲ ದಿನ ಜ್ಯೂನಿಯರ್‌ ಎನ್‌ಟಿಆರ್‌ ಸಿನಿಮಾ ವರ್ಲ್ಡ್‌ವೈಡ್‌ ಗಳಿಸಿದ್ದು ಎಷ್ಟು?

ಕೊರಟಾಲ ಶಿವ ನಿರ್ದೇಶನದ ದೇವರ ಸಿನಿಮಾ ಮೊದಲ ದಿನ 100 ಕೋಟಿ ರೂ ಗಳಿಸಬಹುದು ಎಂದು ಅಂದಾಜು ಮಾಡಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿ ಸಿನಿಮಾ ವಿಶ್ವಾದ್ಯಂತ 140 ಕೋಟಿ ರೂ. ಗಳಿಸಿದೆ. ಆರ್‌ಆರ್‌ಆರ್‌ ಚಿತ್ರದ ನಂತರ ದೇವರ ಸಿನಿಮಾ 100 ಕೋಟಿ ರೂ. ಕ್ಲಬ್‌ ಸೇರಿದ ಜ್ಯೂನಿಯರ್‌ ಎನ್‌ಟಿಆರ್‌ ಅಭಿನಯದ 2ನೇ ಸಿನಿಮಾವಾಗಿದೆ.

ಆರ್‌ಆರ್‌ಆರ್‌ ದಾಖಲೆ ಹಿಂದಿಕ್ಕುವಲ್ಲಿ ದೇವರ ವಿಫಲ; ಮೊದಲ ದಿನ ಜ್ಯೂನಿಯರ್‌ ಎನ್‌ಟಿಆರ್‌ ಸಿನಿಮಾ ಗಳಿಸಿದ್ದು ಎಷ್ಟು?
ಆರ್‌ಆರ್‌ಆರ್‌ ದಾಖಲೆ ಹಿಂದಿಕ್ಕುವಲ್ಲಿ ದೇವರ ವಿಫಲ; ಮೊದಲ ದಿನ ಜ್ಯೂನಿಯರ್‌ ಎನ್‌ಟಿಆರ್‌ ಸಿನಿಮಾ ಗಳಿಸಿದ್ದು ಎಷ್ಟು?

ಜ್ಯೂನಿಯರ್‌ ಎನ್‌ಟಿಆರ್‌ ಅಭಿನಯದ ದೇವರ ಚಿತ್ರಕ್ಕೆ ಅದ್ದೂರಿ ಸ್ವಾಗತ ದೊರೆತಿದೆ. ಗುರುವಾರ ಮಧ್ಯರಾತ್ರಿಯೇ ಕೆಲವರು ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ 4 ಗಂಟೆಯಿಂದ ಮೊದಲ ಶೋ ಆರಂಭಿಸಿ ಮೊದಲ ದಿನ ಒಟ್ಟು 6 ಶೋಗಳಿಗೆ ಆಂಧ್ರ, ತೆಲಂಗಾಣ ಸರ್ಕಾರ ಅನುಮತಿ ನೀಡಿತ್ತು. ಇಂದಿನಿಂದ 9 ದಿನಗಳ ಕಾಲ ದಿನಕ್ಕೆ 5 ಶೋ ಇರಲಿದೆ.

ಮೊದಲ ದಿನ ನಿರೀಕ್ಷೆಗೂ ಮೀರಿ ಬಾಕ್ಸ್‌ ಆಫೀಸ್‌ ದೋಚಿದ ದೇವರ

ಸ್ಟಾರ್‌ ನಟರ ಸಿನಿಮಾ ರಿಲೀಸ್‌ ಆದಾಗ ಚಿತ್ರದ ಮೊದಲ ದಿನದ ಕಲೆಕ್ಷನ್‌ ಬಗ್ಗೆ ತಿಳಿಯಲು ಅಭಿಮಾನಿಗಳು ಕುತೂಹಲದಿಂದ ಇರುತ್ತಾರೆ. ತಾರಕ್‌ ಚಿತ್ರದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಬಗ್ಗೆಯೂ ಬಹಳ ಕುತೂಹಲವಿದೆ. ಏಕೆಂದರೆ ಈ ಸಿನಿಮಾ ಅವರೇ ನಟಿಸಿದ್ದ ಆರ್‌ಆರ್‌ಆರ್‌ ಚಿತ್ರದ ದಾಖಲೆಯನ್ನು ಮುರಿಯಬಹುದು ಎನ್ನಲಾಗಿತ್ತು. ದೇವರ ಸಿನಿಮಾ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಚಿತ್ರದ ದಾಖಲೆ ಮುರಿಯುವಲ್ಲಿ ವಿಫಲವಾಗಿದೆ. ಆದರೆ ನಿರೀಕ್ಷೆಗೂ ಮೀರಿ ಮೊದಲ ದಿನ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದಿದೆ. ಆರ್‌ಆರ್‌ಆರ್‌ ಸಿನಿಮಾ ಮೊದಲ ದಿನ 223 ಕೋಟಿ ರೂ ಕಲೆಕ್ಷನ್‌ ಮಾಡಿತ್ತು. ದೇವರ ಚಿತ್ರ ವರ್ಲ್ಡ್‌ವೈಡ್‌ ಮೊದಲ ದಿನ 140 ಕೋಟಿ ರೂ. ಗಳಿಸಿದೆ. ಸಿನಿಮಾ ಮೊದಲ ದಿನ 100 ಕೋಟಿ ಸಂಗ್ರಹಿಸಿಬಹುದು ಎಂದು ಅಂದಾಜು ಮಾಡಲಾಗಿತ್ತು. ಅದರೆ ಅದಕ್ಕೂ ಮೀರಿ ಸಿನಿಮಾ ಕಲೆಕ್ಷನ್‌ ಮಾಡಿದೆ.

2024 ರಲ್ಲಿ ಮೊದಲ ದಿನ 100 ಕೋಟಿ ರೂ ಕ್ಲಬ್‌ ಸೇರಿದ 2ನೇ ಸಿನಿಮಾ

ಸಿನಿ ವಿಮರ್ಶಕರ ಪ್ರಕಾರ ಸಿನಿಮಾ ಅಡ್ವಾನ್ಸ್‌ ಬುಕಿಂಗ್‌ನಿಂದಲೇ 30 ಕೋಟಿ ರೂ. ಗಳಿಸಿತ್ತು. ಜೊತೆಗೆ ಒಟಿಟಿ ಹಕ್ಕುಗಳು ಕೂಡಾ ಭಾರೀ ಬೆಲೆಗೆ ಮಾರಾಟವಾಗಿತ್ತು. ಆಂಧ್ರ ಹಾಗೂ ತೆಲಂಗಾಣ ಎರಡೂ ರಾಜ್ಯಗಳು ಸೇರಿ ಮೊದಲ ದಿನ ಸಿನಿಮಾ 65 ಕೋಟಿ ರೂ ಬಾಚಿಕೊಂಡಿದೆ. ಕರ್ನಾಟಕದಲ್ಲಿ ದೇವರ 10 ಕೋಟಿ ರೂ. ಗಳಿಸಿದೆ. ಈ ವರ್ಷ ತೆರೆ ಕಂಡ ಸಿನಿಮಾಗಳಲ್ಲಿ ಪ್ರಭಾಸ್‌ ಅಭಿನಯದ ಕಲ್ಕಿ 2898 AD ಸಿನಿಮಾ ಮೊದಲ ದಿನ ವಿಶ್ವಾದ್ಯಂತ 175 ಕೋಟಿ ರೂ ಗಳಿಸಿತ್ತು. ರಿಲೀಸ್‌ ಆದ ಮೊದಲ ದಿನ 100 ಕೋಟಿ ರೂ. ಕಲೆಕ್ಷನ್‌ ದಾಟಿದ ಚಿತ್ರಗಳಲ್ಲಿ ದೇವರ 2ನೇ ಸ್ಥಾನದಲ್ಲಿದೆ. ಜ್ಯೂನಿಯರ್‌ ಎನ್‌ಟಿಆರ್‌ ಇದುವರೆಗೂ ನಟಿಸಿದ ಸಿನಿಮಾಗಳಲ್ಲಿ ದೇವರ, ಮೊದಲ ದಿನ 100 ಕೋಟಿ ರೂ. ದಾಟಿದ ಸಿನಿಮಾಗಳಲ್ಲಿ ಎರಡನೇ ಚಿತ್ರವಾಗಿದೆ. ಮೊದಲ ಸಿನಿಮಾ ಆರ್‌ಆರ್‌ಆರ್‌. 300 ಕೋಟಿ ಬಜೆಟ್‌ನಲ್ಲಿ ತಯಾರಾದ ಸಿನಿಮಾ ಮುಂದಿನ ದಿನಗಳಲ್ಲಿ ಎಷ್ಟು ಗಳಿಸಲಿದೆ ಕಾದು ನೋಡಬೇಕು.

ಡಬಲ್‌ ರೋಲ್‌ನಲ್ಲಿ ಜ್ಯೂನಿಯರ್‌ ಎನ್‌ಟಿಆರ್‌

ಯುವಸುಧಾ ಆರ್ಟ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್ ಬ್ಯಾನರ್‌ ಜೊತೆ ಸೇರಿ ದೇವರ ಚಿತ್ರವನ್ನು ನಿರ್ಮಿಸಿದ್ದು ಕೊರಟಾಲ ಶಿವ ನಿರ್ದೇಶನ ಮಾಡಿದ್ದಾರೆ. ಅನಿರುದ್ಧ್‌ ರವಿಚಂದರ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಜ್ಯೂ ಎನ್‌ಟಿಆರ್‌ ದೇವರ ಹಾಗೂ ವರ ಎಂಬ ಡಬಲ್‌ ರೋಲ್‌ನಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮೂಲಕ ಜಾಹ್ನವಿ ಕಪೂರ್‌ ದಕ್ಷಿಣ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಭೈರಾ ಹೆಸರಿನ ವಿಲನ್‌ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಪ್ರಕಾಶ್ ರಾಜ್, ಶ್ರೀಕಾಂತ್, ಶೈನ್ ಟಾಮ್ ಚಾಕೊ, ನರೇನ್, ಕಲೈಯರಸನ್, ಮುರಳಿ ಶರ್ಮಾ ಮತ್ತು ಅಭಿಮನ್ಯು ಸಿಂಗ್ ಸಿನಿಮಾದಲ್ಲಿದ್ದಾರೆ. 2026 ರಲ್ಲಿ ದೇವರ ಭಾಗ 2 ಸಿನಿಮಾ ತೆರೆಗೆ ಬರಲಿದೆ.

mysore-dasara_Entry_Point