ಕನ್ನಡ ಸುದ್ದಿ  /  ಮನರಂಜನೆ  /  Kalki 2898 Ad: 12 ದಿನದಲ್ಲಿ ಕಲ್ಕಿ ಗಳಿಸಿದ್ದೆಷ್ಟು? ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್‌ ಮುಗಿಸಿದ ಪ್ರಭಾಸ್‌-ದೀಪಿಕಾ ಪಡುಕೋಣೆ

Kalki 2898 AD: 12 ದಿನದಲ್ಲಿ ಕಲ್ಕಿ ಗಳಿಸಿದ್ದೆಷ್ಟು? ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್‌ ಮುಗಿಸಿದ ಪ್ರಭಾಸ್‌-ದೀಪಿಕಾ ಪಡುಕೋಣೆ

Kalki 2898 AD box office collection day 12: ನಾಗ್‌ ಅಶ್ವಿನ್‌ ನಿರ್ದೇಶನದ ಪ್ರಭಾಸ್‌ ಮತ್ತು ದೀಪಿಕಾ ಪಡುಕೋಣೆ ನಟನೆಯ ಕಲ್ಕಿ 2898 ಎಡಿ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್‌ ಮುಂದುವರೆಸಿದೆ. ಈ ಸಿನಿಮಾ ಜುಲೈ 27ರಂದು ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗಿತ್ತು.

Kalki 2898 AD: 12 ದಿನದಲ್ಲಿ ಕಲ್ಕಿ ಗಳಿಸಿದ್ದೆಷ್ಟು?
Kalki 2898 AD: 12 ದಿನದಲ್ಲಿ ಕಲ್ಕಿ ಗಳಿಸಿದ್ದೆಷ್ಟು?

ಕಲ್ಕಿ 2898 ಎಡಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ರಿಪೋರ್ಟ್‌: ನಾಗ್‌ ಅಶ್ವಿನ್‌ ನಿರ್ದೇಶನ ಪ್ರಭಾಸ್‌, ದೀಪಿಕಾ ಪಡುಕೋಣೆ, ಅಮಿತಾಬ್‌ ಬಚ್ಚನ್‌, ಕಮಲ್‌ ಹಾಸನ್‌ ನಟನೆಯ ಕಲ್ಕಿ 2898 ಎಡಿ ಸಿನಿಮಾವು ಭಾರತದಲ್ಲಿ 12 ದಿನಗಳಲ್ಲಿ 521.4 ಕೋಟಿ ರೂಪಾಯಿ ಗಳಿಸಿದೆ ಎಂದು ಸಕ್‌ನಿಲ್ಕ್‌.ಕಾಂ ವರದಿ ತಿಳಿಸಿದೆ. ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಕಳೆದ 11 ದಿನಗಳಲ್ಲಿ 900 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಕಲ್ಕಿ 2898 ಎಡಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌

ಕಲ್ಕಿ ಸಿನಿಮಾವು ಜೂನ್‌ 27ರಂದು 95.3 ಕೋಟಿ ರೂಪಾಯಿ ಗಳಿಸಿತ್ತು. ಮರುದಿನ ಶುಕ್ರವಾರ 59.3 ಕೋಟಿ ರೂ. ಗಳಿಸಿತ್ತು. ಮೊದಲ ವೀಕೆಂಡ್‌ನಲ್ಲಿ ಬಿಸ್ನೆಸ್‌ ಪಿಕಪ್‌ ಆಗಿತ್ತು. ಮೊದಲ ಶನಿವಾರ 66.2 ಕೋಟಿ ರೂಪಾಯಿ ಮತ್ತು ಭಾನುವಾರ 88.2 ಕೋಟಿ ರೂಪಾಯಿ ಗಳಿಸಿತ್ತು.

ಬಳಿಕ ವಾರದ ಇತರೆ ದಿನಗಳಲ್ಲಿ ಕಲ್ಕಿ ಬಿಸ್ನೆಸ್‌ ಕಡಿಮೆಯಾಗಿತ್ತು. ಸೋಮವಾರ 34.15 ಕೋಟಿ ರೂಪಾಯಿ, ಮಂಗಳವಾರ 27.05 ಕೋಟಿ ರೂಪಾಯಿ, ಬುಧವಾರ 22.7 ಕೋಟಿ ರೂಪಾಯಿ, 21.8 ಕೋಟಿ ರೂಪಾಯಿ, ಶುಕ್ರವಾರ 16.9 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಎರಡನೇ ವಾರ ಮತ್ತೆ ಬಿಸ್ನೆಸ್‌ ಪಿಕಪ್‌ ಆಗಿತ್ತು. ಎರಡನೇ ವಾರದ ಮೊದಲ ಶನಿವಾರ ಮತ್ತು ಭಾನುವಾರ ಕ್ರಮವಾಗಿ 34.15 ಕೋಟಿ ರೂಪಾಯಿ ಮತ್ತು 44.35 ಕೋಟಿ ರೂಪಾಯಿ ಗಳಿಸಿತ್ತು. ಮತ್ತೆ ನಿನ್ನೆ ಅಂದರೆ ಸೋಮವಾರ ಗಳಿಕೆ ಶೇಕಡ 74ರಷ್ಟು ಇಳಿಕೆ ಆಗಿತ್ತು. ಒಟ್ಟು 521.4 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.

ಟ್ರೆಂಡಿಂಗ್​ ಸುದ್ದಿ

ಕಲ್ಕಿ ಸಿನಿಮಾದ ಕುರಿತು ಮೃಣಾಲ್‌ ಠಾಕೂರ್‌ ಮಾತು

ಕಲ್ಕಿ 2898 ಎಡಿ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮೃಣಾಲ್‌ ಠಾಕೂರ್‌ ಈ ಸಿನಿಮಾದ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದೇ ಸಮಯದಲ್ಲಿ ಚಿತ್ರದ ಶೂಟಿಂಗ್‌ನ ಬಿಹಾಂಡ್‌ ಸೀನ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ. "ಖಂಡಿತವಾಗಿಯೂ ಇದು ದೃಶ್ಯ ವೈಭವ. ತಂಡದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸಲೇಬೇಕು. ಸಿನಿಮಾದ ಕಲಾವಿದರಿಂದ ಸೆಟ್‌ವರೆಗೆ, ಮ್ಯೂಸಿಕ್‌ವರೆಗೆ, ವಿಎಫ್‌ಎಕ್ಸ್‌ ತಂಡದವರೆಗೆ ಎಲ್ಲರಿಗೂ ಧನ್ಯವಾದ ಹೇಳಬೇಕು. ಇಂತಹ ಮಾಸ್ಟರ್‌ ಪೀಸ್‌ ಸಿನಿಮಾ ತಂದ ನಾಗ್‌ ಅಶ್ವಿನ್‌ಗಾರು ನಿಮಗೆ ಅಭಿನಂದನೆಗಳು" ಎಂದು ಮೃಣಾಲ್‌ ಠಾಕೂರ್‌ ಟ್ವೀಟ್‌ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಸಿನಿಮಾದ ಇತರೆ ಕಲಾವಿದರ ನಟನೆಯನ್ನೂ ಹೊಗಳಿದ್ದಾರೆ. "ಅಮಿತಾಬ್‌ ಬಚ್ಚನ್‌ ಸರ್‌ ನೀವು ನಿಜಕ್ಕೂ ಶಾಹೆನ್‌ಶಾ, ಅಶ್ವತ್ಥಾಮನಾಗಿ ನಿಮ್ಮ ಪರ್ಫಾಮೆನ್ಸ್‌ ಖಂಡಿತಾ ಅಮೋಘ. ನೀವು ಪ್ರತಿದೃಶ್ಯದಲ್ಲೂ ಅಮೋಘವಾಗಿ ಕಾಣಿಸಿಕೊಂಡಿದ್ದು, ನನಗೆ ಈಗಲೂ ಕಣ್ಣ ಮುಂದೆ ಕಾಣಿಸುತ್ತಿದೆ. ದೀಪಿಕಾ ಪಡುಕೋಣೆ ನೀವು ಸುಮತಿ ಪಾತ್ರಕ್ಕೆ ಜೀವ ತುಂಬಿದ್ದೀರಿ. ಪರದೆ ಮೇಲೆ ನಿಮ್ಮನ್ನು ನೋಡಿ ತುಂಬಾ ಇಷ್ಟಪಟ್ಟೆ" ಎಂದು ಅವರು ಟ್ವೀಟ್‌ ಮಾಡಿದ್ದಾರೆ.

"ಪ್ರಭಾಸ್‌ ಗಾರು ನೀವು ಈ ಸಿನಿಮಾದಲ್ಲಿ ಭರ್ಜರಿಯಾಗಿ ನಟಿಸಿದ್ದೀರಿ. ಭೈರವನಾಗಿ ನಿಮ್ಮ ನಟನೆಯನ್ನು ತುಂಬಾ ಇಷ್ಟಪಟ್ಟೆ. ಬುಜ್ಜಿ ಕೀರ್ತಿ ಸುರೇಶ್‌ ಜತೆಗಿನ ನಿಮ್ಮ ಬಾಂಡ್‌ ನನಗೆ ತುಂಬಾ ಇಷ್ಟವಾಯಿತು. ಇದು ತುಂಬಾ ಕ್ಯೂಟ್‌. ಕಮಲ್‌ ಹಾಸನ್‌ ಸಾರ್‌, ನಾನು ನಿಮಗಾಗಿ ಎರಡನೇ ಭಾಗಕ್ಕಾಗಿ ಕಾಯುತ್ತಿದ್ದೇನೆ" ಎಂದು ಅವರು ಟ್ವೀಟ್‌ ಮಾಡಿದ್ದಾರೆ.