ಕನ್ನಡ ಸುದ್ದಿ  /  ಮನರಂಜನೆ  /  Kalki Collection: 5ನೇ ದಿನ ಕಲ್ಕಿ 2898 ಎಡಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಎಷ್ಟು? ಮೊದಲ ಸೋಮವಾರ ಮಂಕಾಯಿತೇ ಪ್ರಭಾಸ್‌ ಸಿನಿಮಾ

Kalki collection: 5ನೇ ದಿನ ಕಲ್ಕಿ 2898 ಎಡಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಎಷ್ಟು? ಮೊದಲ ಸೋಮವಾರ ಮಂಕಾಯಿತೇ ಪ್ರಭಾಸ್‌ ಸಿನಿಮಾ

Kalki 2898 AD box office collection day 5: ಪ್ರಭಾಸ್‌- ದೀಪಿಕಾ ಪಡುಕೋಣೆ ನಟನೆಯ, ನಾಗ್‌ ಅಶ್ವಿನ್‌ ನಿರ್ದೇಶನದ ಕಲ್ಕಿ 2898 ಎಡಿ ಸಿನಿಮಾವು ತೆರೆ ಕಂಡಬಳಿಕ ವೀಕೆಂಡ್‌ನಲ್ಲಿ ಭರ್ಜರಿ ಕಮಾಯಿ ಮಾಡಿತ್ತು. ಆದರೆ, ಸಹಜವಾಗಿ ಮೊದಲ ಸೋಮವಾರ ಕಲೆಕ್ಷನ್‌ ಕಡಿಮೆಯಾಗಿದೆ. ಐದನೇ ದಿನ ಕೇವಲ 20 ಕೋಟಿ ರೂಪಾಯಿ ಗಳಿಕೆ ಮಾಡಿದೆ.

Kalki collection: 5ನೇ ದಿನ ಕಲ್ಕಿ 2898 ಎಡಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌
Kalki collection: 5ನೇ ದಿನ ಕಲ್ಕಿ 2898 ಎಡಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌

Kalki 2898 AD box office collection day 5: ನಾಗ್ ಅಶ್ವಿನ್ ಅವರ ಕಲ್ಕಿ 2898 ಎಡಿ ಜೂನ್ 27 ರಂದು ಬಿಡುಗಡೆಯಾಗಿ ದೇಶ-ವಿದೇಶಗಳಲ್ಲಿ ಹೊಸ ಸಂಚಲನ ಮೂಡಿಸಿದೆ. ಸಕ್‌ನಿಲ್ಕ್‌.ಕಾಂ ಪ್ರಕಾರ , ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ನಟನೆಯ ಈ ಸಿನಿಮಾ ಭಾರತದಲ್ಲಿ ಎಲ್ಲಾ ಭಾಷೆಗಳಲ್ಲಿ 335 ಕೋಟಿ ರೂ. ಗಳಿಕೆ ಮಾಡಿದೆ.

ಕಲ್ಕಿ 2898 ಎಡಿ ಬಾಕ್ಸ್ ಆಫೀಸ್ ಕಲೆಕ್ಷನ್

ಸಕ್‌ನಿಲ್ಕ್‌.ಕಾಂ ಪೋರ್ಟಲ್ ಪ್ರಕಾರ, ಕಲ್ಕಿ 2898 ಎಡಿ ತನ್ನ ಆರಂಭಿಕ ದಿನದಂದು 95.3 ಕೋಟಿ ರೂಪಾಯಿ ಗಳಿಸಿತ್ತು. ಶುಕ್ರವಾರ ಭಾರತದ ಎಲ್ಲಾ ಭಾಷೆಗಳಲ್ಲಿ 57.6 ಕೋಟಿ ರೂ ಗಳಿಸಿತ್ತು. ಈ ಚಿತ್ರವು 5 ನೇ ದಿನದಂದು 26.31 ಕೋಟಿ ರೂ.ಗಳನ್ನು ಗಳಿಸುವ ಮೂಲಕ ಸ್ಥಿರವಾದ ಓಟಕ್ಕೆ ಸಾಕ್ಷಿಯಾಯಿತು. ಭಾರತದಲ್ಲಿ ಇಲ್ಲಿಯವರೆಗೆ ಒಟ್ಟಾರೆ 335.31 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ವೀಕೆಂಡ್‌ ಕಲೆಕ್ಷನ್‌: ಶನಿವಾರ: 66.2 ಕೋಟಿ ರೂ ಮತ್ತು ಭಾನುವಾರ: 88.2 ಕೋಟಿ ರೂ ಗಳಿಕೆ ಮಾಡಿದೆ. ಈ ಸಿನಿಮಾ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಬಿಡುಗಡೆಯಾಗಿದೆ. 2 ಡಿ ಮತ್ತು 3 ಡಿ ಅವತರಣಿಕೆಯಲ್ಲಿ ಬಿಡುಗಡೆಯಾಯಿತು.

ಟ್ರೆಂಡಿಂಗ್​ ಸುದ್ದಿ

ಜಾಗತಿಕ ಬಾಕ್ಸ್‌ ಆಫೀಸ್‌ ಕಲೆಕ್ಷನ್‌

ಕಲ್ಕಿ 2898 ಎಡಿ ಸಿನಿಮಾವು ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ಜಾಗತಿಕವಾಗಿ 500 ಕೋಟಿ ರೂ.ಗಳ ಕ್ಲಬ್ಗೆ ಪ್ರವೇಶಿಸಿದೆ.

ಚಿತ್ರ ವೀಕ್ಷಿಸಿದ ಅಮಿತಾಬ್‌ ಬಚ್ಚನ್‌

ತನ್ನ ತಂದೆಯೊಂದಿಗೆ ಅಭಿಷೇಕ್‌ ಬಚ್ಚನ್‌ ಈ ಚಿತ್ರವನ್ನು ವೀಕ್ಷಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿದ್ದಾರೆ. ಈ ಸಿನಿಮಾ ಜಸ್ಟ್‌ ವಾವ್‌ ಎಂದಿದ್ದಾರೆ. ಈ ಸಿನಿಮಾವು ಪೌರಾಣಿಕ ಅಂಶಗಳೊಂದಿಗೆ ಭವಿಷ್ಯದ ವೈಜ್ಞಾನಿಕ ಅಂಶಗಳನ್ನು ಜೋಡಿಸಿದೆ. ಪ್ರಭಾಸ್‌ ಕಾಶಿಯ ಭೈರವ ಎಂಬ ವ್ಯಕ್ತಿಯಾಗಿ, ದೀಪಿಕಾ ಪಡುಕೋಣೆ ಸುಮತಿ ಎಂಬ ಲ್ಯಾಬ್‌ ಗರ್ಲ್‌ ಆಗಿ ನಟಿಸಿದ್ದಾರೆ. ಅಮಿತಾಬ್‌ ಬಚ್ಚನ್‌ ಅವರು ಪುರಾಣದ ಅಶ್ವತ್ಥಾಮನ ಪಾತ್ರದಲ್ಲಿ ಚಿತ್ರವನ್ನು ಆವರಿಸಿದ್ದಾರೆ. ಕಾಂಪ್ಲೆಕ್ಸ್‌ನ ನಾಯಕ ಸುಪ್ರೀಂ ಯಾಸ್ಕಿನ್‌ ಪಾತ್ರವನ್ನು ಕಮಲ್‌ ಹಾಸನ್‌ ನಿರ್ವಹಿಸಿದ್ದಾರೆ. ಕಾಶಿ ಬಿಟ್ಟು ಕಾಂಪ್ಲೆಕ್ಸ್‌ನಲ್ಲಿ ನೆಲೆಸಲು ಪ್ರಯತ್ನಿಸುವ ಭೈರವನು ಕೊನೆಗೆ ಅಶ್ವತ್ಥಾಮನಿಗೆ ನೆರವಾಗುತ್ತಾನ? ಜಗತ್ತನ್ನು ಉಳಿಸಲು ಪ್ರಯತ್ನಿಸುತ್ತಾನ? ಕಲ್ಕಿ ಅವತಾರವನ್ನು ರಕ್ಷಿಸುತ್ತಾನ ಇತ್ಯಾದಿ ಕುತೂಹಲಗಳನ್ನು ಕಲ್ಕಿ 2898 ಎಡಿ ಅಧ್ಯಾಯ 1 ಮೂಡಿಸಿದೆ.

ಈ ಚಿತ್ರದಲ್ಲಿ ದಿಶಾ ಪಟಾನಿ ರೊಕ್ಸಿಯಾಗಿ ನಟಿಸಿದ್ದಾರೆ. ವಿಜಯ್ ದೇವರಕೊಂಡ, ಮೃಣಾಲ್ ಠಾಕೂರ್, ದುಲ್ಕರ್ ಸಲ್ಮಾನ್, ಫರಿಯಾ ಅಬ್ದುಲ್ಲಾ ಮತ್ತು ಇತರರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಕಥೆಯು ಮಹಾಭಾರತದ ಕುರುಕ್ಷೇತ್ರ ಯುದ್ಧದ 6000 ವರ್ಷಗಳ ನಂತರ ನಡೆಯುತ್ತದೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರವು ಹಿಂದೂ ಧರ್ಮಗ್ರಂಥಗಳಿಂದ ಸ್ಫೂರ್ತಿ ಪಡೆದಿದೆ. ಈ ಚಿತ್ರವನ್ನು 600 ಕೋಟಿ ರೂ.ಗಳ ಬೃಹತ್ ಬಜೆಟ್ ನಲ್ಲಿ ನಿರ್ಮಿಸಲಾಗಿದೆ.