Kalki Day 1 Collection: ಬಾಕ್ಸ್ ಆಫೀಸ್‌ನಲ್ಲಿ ಬಂಗಾರದ ಬೆಳೆ ತೆಗೆದ ಕಲ್ಕಿ 2898 ಎಡಿ; ಬಾಹುಬಲಿ, ಆರ್‌ಆರ್‌ಆರ್ ದಾಖಲೆ ಸರಿಗಟ್ಟಿತೇ?
Kalki 2898 AD Day 1 Box Office Collection: ಪ್ರಭಾಸ್, ದೀಪಿಕಾ ಪಡುಕೋಣೆ ಮುಖ್ಯಪಾತ್ರದಲ್ಲಿ ನಟಿಸಿರುವ ಕಲ್ಕಿ 2898 ಎಡಿ ಸಿನಿಮಾವು ಮೊದಲ ದಿನವೇ 180 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಬಾಹುಬಲಿ, ಆರ್‌ಆರ್‌ಆರ್ ಸಿನಿಮಾಗಳ ಬಳಿಕ ಉತ್ತಮ ಆರಂಭ ಪಡೆದ ಮೂರನೇ ಸಿನಿಮಾವೆಂಬ ಖ್ಯಾತಿಗೆ ಪಾತ್ರವಾಗಿದೆ.
Kalki 2898 AD Day 1 Box Office Collection: ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 ಎಡಿ ಸಿನಿಮಾವು ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿದೆ. ಪ್ರಭಾಸ್- ದೀಪಿಕಾ ಪಡುಕೋಭೆ ಅಭಿನಯದ ಈ ಚಿತ್ರವು ಹಾಲಿವುಡ್ ಚಿತ್ರಗಳಿಗೆ ಸೆಡ್ಡು ಹೊಡೆಯುವಂತೆ ಇದ್ದು, ಪ್ರೇಕ್ಷಕರನ್ನು ಹೊಸ ಪ್ರಪಂಚಕ್ಕೆ ಕರೆದೊಯ್ಯುತ್ತಿದೆ. ಈ ಚಿತ್ರದಲ್ಲಿ ಪುರಾಣ ಮತ್ತು ಭವಿಷ್ಯದ ವಿಷಯಗಳನ್ನಿಟ್ಟುಕೊಂಡ ಸುಂದರ ಕಥೆ, ಅದ್ಭುತ ಗ್ರಾಫಿಕ್ಸ್, ಸಾಹಸ ದೃಶ್ಯಗಳು ಪ್ರೇಕ್ಷಕರನ್ನು ಮೋಡಿ ಮಾಡಿವೆ. ಮೊದಲ ದಿನ ಬೆಳಗ್ಗೆ 5 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಥಿಯೇಟರ್‌ನಲ್ಲಿ ಕಲ್ಕಿ ಸಿನಿಮಾ ಪ್ರದರ್ಶನಗೊಂಡಿದೆ. ಇದರಿಂದಾಗಿ ಕಲ್ಕಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿದೆ.
ಕಲ್ಕಿ 2898 ಎಡಿ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್
ಪ್ರಭಾಸ್, ದೀಪಿಕಾ ಪಡುಕೋಣೆ ಮುಖ್ಯಪಾತ್ರದಲ್ಲಿ ನಟಿಸಿರುವ ಕಲ್ಕಿ 2898 ಎಡಿ ಸಿನಿಮಾವು ಮೊದಲ ದಿನವೇ 180 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿದೆ. ಬಾಹುಬಲಿ, ಆರ್‌ಆರ್‌ಆರ್ ಸಿನಿಮಾಗಳ ಬಳಿಕ ಉತ್ತಮ ಆರಂಭ ಪಡೆದ ಮೂರನೇ ಸಿನಿಮಾವೆಂಬ ಖ್ಯಾತಿಗೆ ಪಾತ್ರವಾಗಿದೆ. ಆರಂಭಿಕ ಲೆಕ್ಕಾಚಾರಗಳ ಪ್ರಕಾರ ಕಲ್ಕಿ 2898 ಎಡಿ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ 180 ಕೋಟಿ ರೂಪಾಯಿಗೆ ತಲುಪಿದೆ.
ಯಾವ ಸಿನಿಮಾ ಎಷ್ಟೆಷ್ಟು ಗಳಿಕೆ ಮಾಡಿದೆ?
ಮೊದಲ ದಿನ ಅತ್ಯಧಿಕ ಗಳಿಕೆ ಮಾಡಿದ ಸಿನಿಮಾಗಳಲ್ಲಿ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ನಟಿಸಿದ ಆರ್‌ಆರ್‌ಆರ್ ಸಿನಿಮಾ ಮೊದಲ ಸ್ಥಾನದಲ್ಲಿದೆ. ಆರ್‌ಆರ್‌ಆರ್ ಸಿನಿಮಾ ಮೊದಲ ದಿನ 220 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಎರಡನೇ ಸ್ಥಾನ ಬಾಹುಬಲಿ 2 ಪಡೆದಿದೆ. ಬಾಹುಬಲಿ 214 ಕೋಟಿ ರೂಪಾಯಿ ಗಳಿಸಿತ್ತು. ಮೂರನೇ ಸ್ಥಾನವನ್ನು 180 ಕೋಟಿ ರೂಪಾಯಿ ಗಳಿಸಿದ ಕಲ್ಕಿ ಪಡೆದಿದೆ. ನಾಲ್ಕನೇ ಸ್ಥಾನ ಸಲಾರ್ ಪಡೆದಿದೆ. ಸಲಾರ್ 165 ಕೋಟಿ ರೂಪಾಯಿ ಗಳಿಸಿದೆ. ಮೊದಲ ದಿನ ಕನ್ನಡದ ಕೆಜಿಎಫ್ 2 ಸಿನಿಮಾವು 163 ಕೋಟಿ ರೂಪಾಯಿ ಪಡೆದಿದೆ. ಲಿಯೋ 140 ಕೋಟಿ ರೂಪಾಯಿ, ಆದಿಪುರುಷ್ 131 ಕೋಟಿ ರೂ., ಸಾಹೋ 126 ಕೋಟಿ ರೂಪಾಯಿ, ಜವಾನ್ 126 ಕೋಟಿ, ಅನಿಮಲ್ 120 ಕೋಟಿ ರೂಪಾಯಿ ಗಳಿಕೆ ಮಾಡಿ ನಂತರದ ಸ್ಥಾನಗಳನ್ನು ಪಡೆದಿವೆ.
ಆಸಕ್ತಿದಾಯಕ ಅಂಶವೆಂದರೆ, ಕಲ್ಕಿ 2898 ಎಡಿ ಸಿನಿಮಾವು ನಿರೀಕ್ಷೆಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ. ಮೊದಲ ದಿನದ ಶೋನಲ್ಲಿ ಅಮೆರಿಕದಲ್ಲಿ 40 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿದೆ. ಜಾಗತಿಕವಾಗಿ ಮೊದಲ ದಿನ ಒಟ್ಟಾರೆ 55 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಜಾಗತಿಕವಾಗಿ ಒಟ್ಟಾರೆ ಕಲ್ಕಿ 2898 ಎಡಿ ಸಿನಿಮಾವು 202 ಕೋಟಿ ರೂಪಾಯಿ ಗಳಿಕೆ ಮಾಡಿ ಉತ್ತಮ ಆರಂಭ ಪಡೆದಿದೆ. ಈ ಸಿನಿಮಾದ ಕುರಿತು ಪ್ರೇಕ್ಷಕರಿಂದ ಉತ್ತಮ ವಿಮರ್ಶೆ ವ್ಯಕ್ತವಾಗಿದೆ. ಬಾಯ್ಮಾತಿನ ಪ್ರಚಾರದ ಮೂಲಕವೇ ಈ ಸಿನಿಮಾದ ಜನಪ್ರಿಯತೆ ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ ಮುಂದಿನ ದಿನಗಳಲ್ಲಿ ಗಳಿಕೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಈ ವಾರಾಂತ್ಯದೊಳಗೆ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡುವ ಸೂಚನೆಯಿದೆ.
ಕಲ್ಕಿ 2898 ಎಡಿ ಸಿನಿಮಾದ ತಾರಾಗಣ
ಅಮಿತಾಬ್ ಬಚ್ಚನ್- ಅಶ್ವತ್ಥಾಮ
ಪ್ರಭಾಸ್ - ಭೈರವ, ಕರ್ಣ
ದೀಪಿಕಾ ಪಡುಕೋಣೆ - SUM-80 ಅಲಿಯಾಸ್ ಸುಮತಿ, ಕಲ್ಕಿಯ ತಾಯಿ
ಕಮಲ್ ಹಾಸನ್ - ಸುಪ್ರೀಮ್ ಯಾಸ್ಕಿನ್, ಕಾಂಪ್ಲೆಕ್ಸ್‌ನ ದೇವರು
ದಿಶಾ ಪಟಾನಿ- ರಾಕ್ಸಿ
ರಾಜೇಂದ್ರ ಪ್ರಸಾದ್- ರೂಮಿ
ಶೋಭನಾ- ಮರಿಯಮ್ ಆಗಿ
ಕಮಾಂಡರ್ ಮಾನಸ್- ಶಾಶ್ವತ ಚಟರ್ಜಿ
ಬ್ರಹ್ಮಾನಂದಂ- ರಾಜನ್
ಪಶುಪತಿ -ವೀರನ್ (ಶಂಬಲಾದ ಬಂಡಾಯಗಾರ)
ಅನ್ನಾ ಬೆನ್ -ಕೈರಾ, ವೀರನ್‌ನ ಸಹವರ್ತಿ ಮತ್ತು ಶಂಬಲಾದಿಂದ ಬಂಡಾಯಗಾರ್ತಿ
ಹರ್ಷಿತ್ ಮಲ್ಗಿರೆಡ್ಡಿ- ಲ್ಯೂಕ್
ಕಾವ್ಯ ರಾಮಚಂದ್ರನ್- ಲಿಲ್ಲಿಯಾಗಿ, ಕಾಂಪ್ಲೆಕ್ಸ್‌ನಲ್ಲಿ ರಹಸ್ಯ ಬಂಡಾಯಗಾರ್ತಿ
ಅಯಾಜ್ ಪಾಶಾ- ಅಜ್ಜು
ಅನಿಲ್ ಜಾರ್ಜ್- ಸಲಹೆಗಾರ ಬಾನಿಯಾಗಿ
ರಾಯ- ಕೀಯಾ ನಾಯರ್
ವಿನಯ್ ಕುಮಾರ್ -ಸಿರಿಯಸ್
ರೋನಿ- ವೆಂಕಟ ರಮಣ
ಹಮೀಶ್ ಬಾಯ್ಡ್ -ಯೂರಿಯಾಗಿ
ಲಿಯಾನ್ -ಸಂಘವಾ ಶಿನ್
BU-JZ-1 ಅಲಿಯಾಸ್ ಬುಜ್ಜಿ- ಕೀರ್ತಿ ಸುರೇಶ್ (ಧ್ವನಿ)
ಅತಿಥಿ ಪಾತ್ರಗಳು
ಕೃಷ್ಣಕುಮಾರ್ - ಕೃಷ್ಣ
ವಿಜಯ್ ದೇವರಕೊಂಡ- ಅರ್ಜುನ
ದಿವ್ಯಾ ಪಾತ್ರದಲ್ಲಿ ಮೃಣಾಲ್ ಠಾಕೂರ್
ದುಲ್ಕರ್ ಸಲ್ಮಾನ್- ಭೈರವನ ರಕ್ಷಕ
ಉತ್ತರಾಳಾಗಿ -ಮಾಳವಿಕಾ ನಾಯರ್
ಎಸ್‌ಎಸ್ ರಾಜಮೌಳಿ (ಬೌಂಟಿ ಹಂಟರ್), ಭೈರವನ ಪ್ರತಿಸ್ಪರ್ಧಿ
ರಾಮ್ ಗೋಪಾಲ್ ವರ್ಮಾ - ಚಿಂಟು
ಕೆವಿ ಅನುದೀಪ್ -ಕಾಂಪ್ಲೆಕ್ಸ್‌ನಲ್ಲಿ ಡ್ಯಾನ್ಸರ್
ಫರಿಯಾ ಅಬ್ದುಲ್ಲಾ - ಕಾಂಪ್ಲೆಕ್ಸ್‌ನಲ್ಲಿ ಡ್ಯಾನ್ಸರ್
ಶ್ರೀನಿವಾಸ್ ಅವಸರಲ
ಪ್ರಭಾಸ್-ದೀಪಿಕಾ ಪಡುಕೋಣೆ ಅಭಿನಯದ ಕಲ್ಕಿ ಸಿನಿಮಾದ ಸಮಗ್ರ ಮಾಹಿತಿ ಇಲ್ಲಿದೆ