ಕನ್ನಡ ಸುದ್ದಿ  /  ಮನರಂಜನೆ  /  Kalki 2898 Ad: ವಾರಾಂತ್ಯದೊಳಗೆ 500 ಕೋಟಿ ಬಾಚುತ್ತಾ ಪ್ರಭಾಸ್‌ ಅಭಿನಯದ ಕಲ್ಕಿ ಸಿನಿಮಾ? ಹೀಗಿದೆ ಬಾಕ್ಸ್‌ ಆಫೀಸ್‌ ಭವಿಷ್ಯ

Kalki 2898 AD: ವಾರಾಂತ್ಯದೊಳಗೆ 500 ಕೋಟಿ ಬಾಚುತ್ತಾ ಪ್ರಭಾಸ್‌ ಅಭಿನಯದ ಕಲ್ಕಿ ಸಿನಿಮಾ? ಹೀಗಿದೆ ಬಾಕ್ಸ್‌ ಆಫೀಸ್‌ ಭವಿಷ್ಯ

ಪ್ರಭಾಸ್‌, ದೀಪಿಕಾ ಪಡುಕೋಣೆ, ಅಮಿತಾಬ್‌ ಬಚ್ಚನ್‌ ನಟನೆಯ ಕಲ್ಕಿ 2898 ಎಡಿ ಸಿನಿಮಾ ಇಂದು (ಜೂನ್‌ 27) ಬಿಡುಗಡೆಯಾಗಿದೆ. ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ ಇದಾಗಿದ್ದು, ಬಿಡುಗಡೆಯಾದ ಮೊದಲ ದಿನವೇ ವಿಶ್ವದಾದ್ಯಂತ 180 ರಿಂದ 200 ಕೋಟಿ ಗಳಿಸುವ ನಿರೀಕ್ಷೆ ಇದೆ. ವಾರಾಂತ್ಯದೊಳಗೆ ಸಿನಿಮಾವು 500 ಕೋಟಿ ಗಳಿಸುವ ಸಾಧ್ಯತೆಯನ್ನೂ ನಿರೀಕ್ಷಿಸಲಾಗಿದೆ.

ವಾರಾಂತ್ಯದೊಳಗೆ 500 ಕೋಟಿ ಬಾಚುತ್ತಾ ಪ್ರಭಾಸ್‌ ಅಭಿನಯದ ಕಲ್ಕಿ ಸಿನಿಮಾ?
ವಾರಾಂತ್ಯದೊಳಗೆ 500 ಕೋಟಿ ಬಾಚುತ್ತಾ ಪ್ರಭಾಸ್‌ ಅಭಿನಯದ ಕಲ್ಕಿ ಸಿನಿಮಾ?

ಸಿನಿಮಾ ಸೆಟ್ಟೇರಿದ ದಿನಗಳಿಂದಲೂ ಭಾರಿ ನಿರೀಕ್ಷೆ ಮೂಡಿಸಿದ್ದ ಕಲ್ಕಿ 2898 ಎಡಿ ಇಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಮುಂಗಡ ಬುಕ್ಕಿಂಗ್‌ನಲ್ಲೇ ಅದ್ಭುತ ರೆಸ್ಪಾನ್‌ ಪಡೆದಿದೆ ಈ ಸಿನಿಮಾ. ಭಾರತದಲ್ಲೇ 120 ಕೋಟಿಗೂ ಅಧಿಕ ಗಳಿಕೆ ನೀಡುವ ಭರವಸೆ ಮೂಡಿಸಿತ್ತು. ಮೊದಲ ದಿನ ಪ್ರಭಾಸ್‌ ನಟನೆಯ ಈ ಸಿನಿಮಾ 90 ರಿಂದ 100 ಕೋಟಿ ಗಳಿಕೆ ಮಾಡಬಹುದು ಎಂದು ಅಂದಾಜಿಸಲಾಗುತ್ತಿದೆ. ಭಾರತದಲ್ಲಿ ಮೊದಲ ದಿನವೇ ಸಿನಿಮಾವು 2 ಮಿಲಿಯನ್‌ ಟಿಕೆಟ್‌ಗಳನ್ನು ಮಾರಾಟ ಮಾಡಿದೆ. sacnilk ವೆಬ್‌ಸೈಟ್‌ ಪ್ರಕಾರ ಭಾರತದಲ್ಲಿ 60 ಕೋಟಿ ಮೊತ್ತದ ಟಿಕೆಟ್‌ಗಳು ಮುಂಗಡ ಬುಕ್ಕಿಂಗ್‌ ಆಗಿವೆ.

ಸಲಾರ್‌ ಭಾಗ- 1, ಆರ್‌ಆರ್‌ಆರ್‌ ಹಾಗೂ ಕೆಜಿಎಫ್‌-2 ಬಳಿಕ ಬಾಕ್ಸ್‌ನಲ್ಲಿ ಈ ಮಟ್ಟಿಗೆ ಗಳಿಕೆ ಕಂಡಿದ್ದು ಕಲ್ಕಿ ಸಿನಿಮಾ ಎನ್ನಲಾಗುತ್ತಿದೆ. ಸದ್ಯ ಕಲ್ಕಿ ಸಿನಿಮಾವು ಪ್ರಭಾಸ್‌ ನಟನೆಯ ಆದಿಪುರುಷ್‌ ಹಾಗೂ ಸಾಹೋ ಸೇರಿದಂತೆ ಹಿಂದಿನ ಸಿನಿಮಾಗಳ ದಾಖಲೆಯನ್ನು ಮುರಿಯಲು ಸಿದ್ಧವಾಗಿದೆ. ಆದರೂ ಬಾಹುಬಲಿ 2 ಸಿನಿಮಾ ಅಗ್ರಸ್ಥಾನದಲ್ಲೇ ಉಳಿಯಲಿದೆ. ನಾಗ್‌ ಅಶ್ವಿನ್‌ ನಿರ್ದೇಶನದ ಕಲ್ಕಿ ಸಿನಿಮಾವು ಎಸ್‌ಎಸ್‌ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾದ ಮೊದಲ ದಿನದ ಗಳಿಕೆಯನ್ನು ಹಿಂದಿಕ್ಕುವುದರಲ್ಲಿ ಸಂಶಯವಿಲ್ಲ.

ಟ್ರೆಂಡಿಂಗ್​ ಸುದ್ದಿ

sacnilk ವೆಬ್‌ಸೈಟ್‌ನ ಮಾಹಿತಿಯ ಪ್ರಕಾರ ವಿವಿಧ ಸಿನಿಮಾಗಳ ಮೊದಲ ದಿನಕ್ಕೆ ಮುಂಗಡ ಬುಕ್ಕಿಂಗ್‌ ಆಗಿ ಗಳಿಕೆ ಕಂಡಿದ್ದು ಇಷ್ಟು:

ಬಾಹುಬಲಿ 2: 100 + ಕೋಟಿ

ಕೆಜಿಎಫ್‌ 2: 80.3 ಕೋಟಿ

ಕಲ್ಕಿ: 60 ಕೋಟಿ (ಅಂದಾಜು)

ಆರ್‌ಆರ್‌ಆರ್‌: 58.73 ಕೋಟಿ

ಸಲಾರ್‌: 48.94 ಕೋಟಿ

ಸಾಹೋ: 35 ಕೋಟಿ

ಆದಿಪುರುಷ್‌: 26.39 ಕೋಟಿ

ಇಂದು ಬಿಡುಗಡೆಯಾದ ಕಲ್ಕಿ ಸಿನಿಮಾವು ವಾರಾಂತ್ಯದಲ್ಲಿ ಉತ್ತಮ ಗಳಿಕೆ ಕಾಣಬಹುದು ಎಂದು ಅಂದಾಜಿಸಲಾಗುತ್ತಿದೆ. ದುಲ್ಕರ್‌ ಸಲ್ಮಾನ್‌ ಹಾಗೂ ವಿಜಯ್‌ ದೇವರಕೊಂಡ ವಿಶೇಷ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾವು ಈ ವಾರಾಂತ್ಯದೊಳಗೆ 500 ಕೋಟಿ ಬಾಚಿಕೊಳ್ಳುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ. ಅಂದಾಜಿನ ಪ್ರಕಾರ ಮೊದಲ ದಿನ 180 ರಿಂದ 200 ಕೋಟಿ ಗಳಿಕೆ ಕಾಣುವ ಸಾಧ್ಯತೆ ಇದೆ. ಭಾನುವಾರದೊಳಗೆ ವಿಶ್ವದಾದ್ಯಂತ ಕಲ್ಕಿ ಸಿನಿಮಾ 500 ಕೋಟಿ ಗಳಿಸಿದರೂ ಆಶ್ಚರ್ಯವಿಲ್ಲ ಎಂದು ಬಾಕ್ಸ್‌ ಆಫೀಸ್‌ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ವಿಶ್ವದಲ್ಲೇ ಅತಿ ಹೆಚ್ಚು ಆರಂಭಿಕ ಗಳಿಕೆ ಕಂಡ ಸಿನಿಮಾಗಳಲ್ಲಿ ಕಲ್ಕಿ ಮೂರನೇ ಸ್ಥಾನ ಗಳಿಸುವ ಸಾಧ್ಯತೆ ಇದೆ. 'ಆರ್‌ಆರ್‌ಆರ್‌' ( 223 ಕೋಟಿ) ಮತ್ತು 'ಬಾಹುಬಲಿ 2' (217 ಕೋಟಿ) ಸದ್ಯ ಮೊದಲು ಹಾಗೂ ಎರಡನೇ ಸ್ಥಾನದಲ್ಲಿದೆ.

ಭಾರತೀಯ ಸಿನಿರಂಗದ ವಿವಿಧ ಭಾಷೆಯ ನಟರು ಈ ಸಿನಿಮಾದಲ್ಲಿ ನಟಿಸಿದ್ದು , ಭಾರಿ ನಿರೀಕ್ಷೆ ಹುಟ್ಟುಹಾಕಿರುವುದು ಸುಳ್ಳಲ್ಲ. ಪ್ರಭಾಸ್‌, ಕಮಲ್‌ಹಾಸನ್‌, ದೀಪಿಕಾ ಪಡುಕೋಣೆ, ಅಮಿತಾಬ್‌ ಬಚ್ಚನ್‌, ದುಲ್ಕರ್‌ ಸಲ್ಮಾನ್‌, ದಿಶಾ ಪಟಾಣಿ, ರಾಣಾ ದುಗ್ಗಬಾಟಿ, ಕೀರ್ತಿ ಸುರೇಶ್‌, ಬ್ರಹ್ಮಾನಂದಂ, ವಿಜಯ್‌ ದೇವರಕೊಂಡ ಮೊದಲಾದವರು ಈ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಟಾಲಿವುಡ್‌ನ ಖ್ಯಾತ ನಿರ್ದೇಶಕ್‌ ನಾಗ್‌ ಅಶ್ವಿನ್‌ ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ರಾಮ್‌ಗೋಪಾಲ್‌ ವರ್ಮಾ ಹಾಗೂ ಎಸ್‌ಎಸ್‌ ರಾಜಮೌಳಿ ಕೂಡ ಅತಿಥಿ ಪಾತ್ರದಲ್ಲಿ ನಟಿಸಿರುವುದು ವಿಶೇಷ. 

 

ಪ್ರಭಾಸ್-ದೀಪಿಕಾ ಪಡುಕೋಣೆ ಅಭಿನಯದ ಕಲ್ಕಿ ಸಿನಿಮಾದ ಸಮಗ್ರ ಮಾಹಿತಿ ಇಲ್ಲಿದೆ