ಕನ್ನಡ ಸುದ್ದಿ  /  ಮನರಂಜನೆ  /  Kalki 2898 Ad: ಇಂದು ಕಲ್ಕಿ 2898 ಎಡಿ ಸಿನಿಮಾದ ಟ್ರೇಲರ್‌ ಬಿಡುಗಡೆ; ನಟಿ ದೀಪಿಕಾ ಪಡುಕೋಣೆ ಅವತಾರಕ್ಕೆ ಬೂಮ್‌ ಅಂದ ಗಂಡ

Kalki 2898 AD: ಇಂದು ಕಲ್ಕಿ 2898 ಎಡಿ ಸಿನಿಮಾದ ಟ್ರೇಲರ್‌ ಬಿಡುಗಡೆ; ನಟಿ ದೀಪಿಕಾ ಪಡುಕೋಣೆ ಅವತಾರಕ್ಕೆ ಬೂಮ್‌ ಅಂದ ಗಂಡ

Kalki 2898 AD Movie Trailer Release Today: ಕಲ್ಕಿ 2898 ಎಡಿ ಚಿತ್ರತಂಡವು ದೀಪಿಕಾ ಪಡುಕೋಣೆಯ ಹೊಸ ಪೋಸ್ಟರ್‌ ಬಿಡುಗಡೆ ಮಾಡಿದೆ. ಇದರಿಂದ ಅಭಿಮಾನಿಗಳು ಖುಷಿಯಾಗಿದ್ದಾರೆ. ಕಲ್ಕಿ ಸಿನಿಮಾದ ಟ್ರೇಲರ್‌ ಇಂದು ಬಿಡುಗಡೆಯಾಗುತ್ತಿದೆ. ಸೋಮವಾರ ಸಂಜೆ 6 ಗಂಟೆಗೆ ಕಲ್ಕಿ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗುತ್ತಿದೆ.

Kalki 2898 AD: ಇಂದು ಕಲ್ಕಿ 2898 ಎಡಿ ಸಿನಿಮಾದ ಟ್ರೇಲರ್‌ ಬಿಡುಗಡೆ
Kalki 2898 AD: ಇಂದು ಕಲ್ಕಿ 2898 ಎಡಿ ಸಿನಿಮಾದ ಟ್ರೇಲರ್‌ ಬಿಡುಗಡೆ

ಬೆಂಗಳೂರು: ಕಲ್ಕಿ 2898 ಎಡಿಯ ಹೊಸ ಪೋಸ್ಟರ್‌ನಲ್ಲಿ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಲುಕ್‌ಗೆ ಅಭಿಮಾನಿಗಳು ಖುಷಿಯಾಗಿದ್ದಾರೆ. ನಿನ್ನೆ ದೀಪಿಕಾ ಪಡುಕೋಣೆ ಅವರ ಪೋಸ್ಟರ್‌ ಅನ್ನು ವೈಜಯಂತಿ ಮೂವೀಸ್‌ ಬಿಡುಗಡೆ ಮಾಡಿದ್ದು "ನಮ್ಮ ಭರವಸೆ ಇವಳಿಂದ ಆರಂಭವಾಗುತ್ತದೆ. ಕಲ್ಕಿ 2898 ಎಡಿ ಟ್ರೈಲರ್ ಸೋಮವಾರ ಬಿಡುಗಡೆಯಾಗಲಿದೆ" ಎಂದು ಅಪ್‌ಡೇಟ್‌ ನೀಡಿದೆ. ಕಲ್ಕಿ ಸಿನಿಮಾದಲ್ಲಿ ಯಾವುದೋ ಹಾಲಿವುಡ್‌ ಸಿನಿಮಾವನ್ನು ನೆನಪಿಸುವಂತೆ ದೀಪಿಕಾ ಪಡುಕೋಣೆ ವಿಭಿನ್ನ ಲುಕ್‌ನಲ್ಲಿ ಕಾಣಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ದೀಪಿಕಾ ಪಡುಕೋಣೆ ಪೋಸ್ಟರ್‌ಗೆ ರಣವೀರ್‌ ಪ್ರತಿಕ್ರಿಯೆ

ದೀಪಿಕಾ ಪಡುಕೋಣೆ ಪೋಸ್ಟರ್‌ಗೆ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ. ದೀಪಿಕಾ ಪಡುಕೋಣೆ ಈ ಪೋಸ್ಟರ್‌ ಅನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟರ್‌ನಲ್‌ಲಿ ದುಃಖ ಮತ್ತು ನಿರಾಶೆಯ ಮುಖಭಾವ ಕಾಣಿಸುತ್ತಿದೆ. ಈ ಪೋಸ್ಟರ್‌ಗೆ ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ. ದೀಪಿಕಾ ಪತಿ ರಣವೀರ್‌ ಸಿಂಗ್‌ "ಬೂಮ್‌ (ಬೆಂಕಿ ಎಮೋಜಿ), ಅದ್ಭುತ" ಎಂದು ಕಾಮೆಂಟ್‌ ಮಾಡಿದ್ದಾರೆ.

ಅಭಿಮಾನಿಗಳ ಪ್ರತಿಕ್ರಿಯೆ ಹೀಗಿತ್ತು

"ದೀಪಿಕಾ, ನೀವು ಅಕ್ಷರಶಃ ಸಿನಿಮಾ ಮತ್ತು ನನ್ನ ಹೃದಯವನ್ನು ಆಳುತ್ತಿದ್ದೀರಿ" ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ. "ಅದ್ಭುತ" "ಈ ಸಿನಿಮಾಕ್ಕಾಗಿ ಕಾಯುತ್ತಿದ್ದೇನೆ" "ಹಾಲಿವುಡ್‌ ಆಳ್ವಿಕೆ ಮಾಡಲು ಬರುತ್ತಿದ್ದಾರೆ" "ನನ್ನ ರಾಣಿ ಕೊನೆಗೂ ಬಂದಳು" "ದೀಪಿಕಾ ಮಾಸ್‌ ಲುಕ್‌" ಎಂದೆಲ್ಲ ಅಭಿಮಾನಿಗಳು ಈ ಪೋಸ್ಟರ್‌ಗೆ ಕಾಮೆಂಟ್‌ ಮಾಡಿದ್ದಾರೆ.

ಕಲ್ಕಿ 2898 ಎಡಿ ಸಿನಿಮಾದ ಬಗ್ಗೆ

ಇದು ವೈಜ್ಞಾನಿಕ ಥ್ರಿಲ್ಲರ್‌ ಸಿನಿಮಾ. ಈ ಸಿನಿಮಾದ ಬಹುನಿರೀಕ್ಷಿತ ಟ್ರೇಲರ್‌ ಇಂದು ಸಂಜೆ ಆರು ಗಂಟೆಗೆ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಪ್ರಭಾಸ್, ಕಮಲ್ ಹಾಸನ್ ಮತ್ತು ದಿಶಾ ಪಟಾನಿ ಕೂಡ ನಟಿಸಿದ್ದಾರೆ. ಕಲ್ಕಿ 2898 ಕ್ರಿ.ಶ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶಿಸಿದ್ದಾರೆ. ಈ ಚಿತ್ರವು ಭವಿಷ್ಯದಲ್ಲಿ ನಡೆಯುವ ಪುರಾಣ-ಪ್ರೇರಿತ ವೈಜ್ಞಾನಿಕ ಉತ್ಸವವಾಗಿದೆ ಎಂದು ಹೇಳಲಾಗುತ್ತದೆ. ವೈಜಯಂತಿ ಮೂವೀಸ್ ನಿರ್ಮಿಸಿರುವ ಈ ಚಿತ್ರ ಜೂನ್ 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಕಳೆದ ತಿಂಗಳು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ನಡುವಿನ ಐಪಿಎಲ್ ಪಂದ್ಯದ ಸಮಯದಲ್ಲಿ ಚಿತ್ರದ ಅಮಿತಾಬ್ ಬಚ್ಚನ್‌ ಅವರ ಲುಕ್‌ ಅನ್ನು ಬಿಡುಗಡೆ ಮಾಡಲಾಗಿತ್ತು. 21 ಸೆಕೆಂಡುಗಳ ಟೀಸರ್ ಅಮಿತಾಬ್‌ ಬಚ್ಚನ್‌ ಗುಹೆಯೊಳಗೆ ಇದ್ದು, ಅಶ್ವತ್ಥಾಮನ ಪಾತ್ರದ ನೋಟ ನೀಡಿದ್ದರು. ಈ ಕ್ಲಿಪ್‌ನಲ್ಲಿ ಅಮಿತಾಬ್‌ಗೆ ಬಾಲಕನೊಬ್ಬ ಹಲವು ಪ್ರಶ್ನೆಗಳನ್ನು ಕೇಳುವ ಚಿತ್ರಣವಿದೆ. ಈ ಪುಟ್ಟ ಕ್ಲಿಪ್‌ ಅತ್ಯಂತ ಪವರ್‌ಫುಲ್‌ ಆಗಿತ್ತು. ಚಿತ್ರದ ಕುರಿತು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿತ್ತು.

ಕಲ್ಕಿ ಸಿನಿಮಾದ ಟ್ರೇಲರ್‌

ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಬಹುನಿರೀಕ್ಷಿತ ಸಿನಿಮಾ ಕಲ್ಕಿ 2898 ಎಡಿ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಸಿನಿಮಾ ನೋಡಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ವೈಜ್ಞಾನಿಕ ಮಹಾಕಾವ್ಯವೆಂದು ಪ್ರಚಾರ ಪಡೆಯುತ್ತಿರುವ ಈ ಸಿನಿಮಾದ ಟ್ರೇಲರ್‌ ಇಂದು ಬಿಡುಗಡೆಯಾಗಲಿದೆ. ಪ್ರಭಾಸ್‌ ಕಲ್ಕಿ ಸಿನಿಮಾವನ್ನು ಅಂತಾರಾಷ್ಟ್ರೀಯ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿದೆ ಎಂದು ಹೇಳಿದ್ದರು. "ಇಡೀ ಚಿತ್ರವನ್ನು ಅಂತಾರಾಷ್ಟ್ರೀಯ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿದೆ. ಇದೇ ಕಾರಣಕ್ಕೆ ಇದು ಅತ್ಯಧಿಕ ಬಜೆಟ್‌ನ ಸಿನಿಮಾವಾಗಿದೆ ಎಂದು ಅವರು ಹೇಳಿದ್ದರು.

ಟಿ20 ವರ್ಲ್ಡ್‌ಕಪ್ 2024