ಕಲ್ಕಿ 2898 AD ಪಾರ್ಟ್‌ 2 ಬಗ್ಗೆ ಹೊರಬಿತ್ತು ಬಿಗ್‌ ಅಪ್‌ಡೇಟ್‌; ಶೇ 60ರಷ್ಟು ಶೂಟಿಂಗ್‌ ಪೂರ್ಣ, ರಿಲೀಸ್‌ ಯಾವಾಗ?
ಕನ್ನಡ ಸುದ್ದಿ  /  ಮನರಂಜನೆ  /  ಕಲ್ಕಿ 2898 Ad ಪಾರ್ಟ್‌ 2 ಬಗ್ಗೆ ಹೊರಬಿತ್ತು ಬಿಗ್‌ ಅಪ್‌ಡೇಟ್‌; ಶೇ 60ರಷ್ಟು ಶೂಟಿಂಗ್‌ ಪೂರ್ಣ, ರಿಲೀಸ್‌ ಯಾವಾಗ?

ಕಲ್ಕಿ 2898 AD ಪಾರ್ಟ್‌ 2 ಬಗ್ಗೆ ಹೊರಬಿತ್ತು ಬಿಗ್‌ ಅಪ್‌ಡೇಟ್‌; ಶೇ 60ರಷ್ಟು ಶೂಟಿಂಗ್‌ ಪೂರ್ಣ, ರಿಲೀಸ್‌ ಯಾವಾಗ?

ಕಲ್ಕಿ 2898 AD ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದಂತೆ, ಇದೇ ಚಿತ್ರದ ಸೀಕ್ವೆಲ್‌ ವಿಚಾರ ಇದೀಗ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಸ್ವತಃ ಚಿತ್ರ ನಿರ್ಮಾಣ ಸಂಸ್ಥೆ ಬಿಗ್‌ ಅಪ್‌ಡೇಟ್‌ ನೀಡಿದೆ.

ಕಲ್ಕಿ 2898 AD ಪಾರ್ಟ್‌ 2 ಬಗ್ಗೆ ಹೊರಬಿತ್ತು ಬಿಗ್‌ ಅಪ್‌ಡೇಟ್‌; ಶೇ 60ರಷ್ಟು ಶೂಟಿಂಗ್‌ ಪೂರ್ಣ, ರಿಲೀಸ್‌ ಯಾವಾಗ?
ಕಲ್ಕಿ 2898 AD ಪಾರ್ಟ್‌ 2 ಬಗ್ಗೆ ಹೊರಬಿತ್ತು ಬಿಗ್‌ ಅಪ್‌ಡೇಟ್‌; ಶೇ 60ರಷ್ಟು ಶೂಟಿಂಗ್‌ ಪೂರ್ಣ, ರಿಲೀಸ್‌ ಯಾವಾಗ?

Kalki 2898 AD part 2: ಕಲ್ಕಿ 2898 AD ಸಿನಿಮಾ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ಪಡೆದಿದೆ. ನಿರೀಕ್ಷೆಗೂ ಮೀರಿ ಜೀವಿಸುತ್ತಿದೆ. ನಾಗ್ ಅಶ್ವಿನ್ ನಿರ್ದೇಶನದ ಈ ಪೌರಾಣಿಕ ವೈಜ್ಞಾನಿಕ ಮತ್ತು ಕಾಲ್ಪನಿಕ ಚಿತ್ರದಲ್ಲಿ ಪ್ಯಾನ್ ಇಂಡಿಯಾ ರೆಬೆಲ್ ಸ್ಟಾರ್ ಪ್ರಭಾಸ್ ನಾಯಕನಾಗಿ ನಟಿಸಿದ್ದಾರೆ. ಜೂನ್ 27 ರಂದು ಸಾವಿರಾರು ಸ್ಕ್ರೀನ್‌ ಮೇಲೆ ಅದ್ಧೂರಿಯಾಗಿ ಬಿಡುಗಡೆಯಾದ ಈ ಚಿತ್ರ ಎರಡೇ ದಿನಗಳಲ್ಲಿ 300 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅದ್ಭುತ ದೃಶ್ಯಗಳು ಮತ್ತು ವಿಎಫ್‌ಎಕ್ಸ್‌ ಈ ಚಿತ್ರದ ಹೈಲೈಟ್.‌ ಕಲ್ಕಿ 2898 AD ಚಿತ್ರದ ಕಲ್ಕಿ ಸಿನಿಮಾಟಿಕ್ ಯೂನಿವರ್ಸ್ ಇದೀಗ ಸೀಕ್ವೆಲ್‌ ಆಗಲಿದೆ. ನಿರ್ಮಾಪಕ ಅಶ್ವಿನಿ ದತ್ ಕಲ್ಕಿ 2 ಬಗ್ಗೆ ಬಿಗ್‌ ಅಪ್‌ಡೇಟ್ ನೀಡಿದ್ದಾರೆ.

ಶೂಟಿಂಗ್‌ ಹಂತದಲ್ಲಿ ಕಲ್ಕಿ ಪಾರ್ಟ್‌ 2

ಕಲ್ಕಿ 2898 ADಯ ಕ್ಲೈಮ್ಯಾಕ್ಸ್ ಸೀಕ್ವೆಲ್‌ ಬಗ್ಗೆ ಸುಳಿವು ನೀಡಿತ್ತು. ಕುತೂಹಲ ಮತ್ತು ನಿರೀಕ್ಷೆಗಳನ್ನೂ ಹುಟ್ಟು ಹಾಕಿತ್ತು. ಇದರೊಂದಿಗೆ ಕಲ್ಕಿ 2 ಯಾವಾಗ ಬರಲಿದೆ ಎಂದು ಸಿನಿಪ್ರೇಮಿಗಳು ಕುತೂಹಲಿಗಳಾಗಿದ್ದರು. ಇದೀಗ ಚಿತ್ರದ ನಿರ್ಮಾಪಕ ಅಶ್ವಿನಿದತ್ ಸೀಕ್ವೆಲ್ ಬಗ್ಗೆ ಅಪ್‌ಡೇಟ್ ನೀಡಿದ್ದಾರೆ. ಕಲ್ಕಿ ಸಕ್ಸಸ್‌ ಮೀಟ್‌ನಲ್ಲಿ ಮಾತನಾಡಿದ ಅವರು, ಈಗಾಗಲೇ ಕಲ್ಕಿ 2 ಚಿತ್ರದ ಚಿತ್ರೀಕರಣ ಶೇ.60ರಷ್ಟು ಮುಗಿದಿದೆ ಎಂದಿದ್ದಾರೆ.

ಕಲ್ಕಿ 2 ಚಿತ್ರದ ಶೇಕಡಾ 60ರಷ್ಟು ಚಿತ್ರೀಕರಣ ನಡೆಯುತ್ತಿದ್ದರೂ ಕೆಲವು ಪ್ರಮುಖ ಭಾಗಗಳ ಚಿತ್ರೀಕರಣ ನಡೆಯಬೇಕಿದೆ ಎಂದು ಅಶ್ವಿನಿ ದತ್ ಬಹಿರಂಗಪಡಿಸಿದ್ದಾರೆ. ಸೀಕ್ವೆಲ್ ಬಿಡುಗಡೆ ದಿನಾಂಕ ಇನ್ನೂ ನಿರ್ಧಾರವಾಗಿಲ್ಲ. ಆದಾಗ್ಯೂ, 2025ರ ಹೊತ್ತಿಗೆ ತೆರೆಗೆ ತರುವ ಸಾಧ್ಯತೆಗಳಿವೆ ಎಂದಿದ್ದಾರೆ.

ಕಲ್ಕಿ ಎಷ್ಟು ಕೋಟಿ ಗಳಿಸಬಹುದು..

ಕಲ್ಕಿ 2898 AD ಚಿತ್ರಕ್ಕೆ ಭಾರತ ಮಾತ್ರವಲ್ಲ ವಿದೇಶದಲ್ಲೂ ದೊಡ್ಡ ಮಟ್ಟದ ಓಪನಿಂಗ್‌ ಸಿಕ್ಕಿದೆ. ಅಂದಾಜು ಈ ಸಿನಿಮಾ ಒಟ್ಟಾರೆ ಎಷ್ಟು ಕೋಟಿ ಗಳಿಸಬಹುದು ಎಂಬುದನ್ನು ನಿರ್ಮಾಪಕ ಅಶ್ವಿನಿದತ್ ಅಂದಾಜಿಸಿದ್ದಾರೆ. ಕಲ್ಕಿ 2898 ಎಡಿ ಸಿನಿಮಾ 1,400 ಕೋಟಿಯಿಂದ ರೂ.1,500 ಕೋಟಿ ವರೆಗೂ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ ಎಂದಿದ್ದಾರೆ.

ಕಲ್ಕಿ 2898 AD ಸಿನಿಮಾ ಪ್ರೇಕ್ಷಕರು ಮತ್ತು ಅನೇಕ ಸೆಲೆಬ್ರಿಟಿಗಳಿಂದ ಪ್ರಶಂಸೆಗಳ ಸುರಿಮಳೆಯಾಗಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ದೃಶ್ಯಗಳನ್ನು ನೋಡುತ್ತಿದ್ದೇವೆ ಎಂದು ಹಲವರು ಸೋಷಿಯಲ್‌ ಮೀಡಿಯಾ ವೇದಿಕೆಯಲ್ಲಿ ಹೊಗಳುತ್ತಿದ್ದಾರೆ. ನಿರ್ದೇಶಕ ನಾಗ್ ಅಶ್ವಿನ್ ಭಾರತೀಯ ಪುರಾಣವನ್ನು ಆಧರಿಸಿದ ವೈಜ್ಞಾನಿಕ ಕಾಲ್ಪನಿಕ ಸಿನಿಮಾಕ್ಕೆ ಹ್ಯಾಟ್ಸಾಫ್‌ ಹೇಳುತ್ತಿದ್ದಾರೆ.

ಕಲ್ಕಿ 2898 ಎಡಿ ಚಿತ್ರದಲ್ಲಿ ಪ್ರಭಾಸ್ ಮತ್ತು ಅಮಿತಾಬ್ ಬಚ್ಚನ್ ಅಭಿನಯಕ್ಕೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ. ಅಶ್ವತ್ಥಮ್ ಪಾತ್ರದಲ್ಲಿ ಅಮಿತಾಬ್‌ ಮಿಂಚು ಹರಿಸಿದರೆ, ದೀಪಿಕಾ ಪಡುಕೋಣೆ ಅದ್ಭುತವಾಗಿ ನಟಿಸಿದ್ದಾರೆ. ಕಮಲ್ ಹಾಸನ್ ಮತ್ತೊಮ್ಮೆ ವಿಭಿನ್ನ ಪಾತ್ರದಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಕಲ್ಕಿ 2898 AD ಎರಡು ದಿನದ ಕಲೆಕ್ಷನ್‌ ಎಷ್ಟು?

ಇನ್ನು ಕಲ್ಕಿ 2899 AD ಎರಡು ದಿನಗಳಲ್ಲಿ ಗಳಿಸಿದ್ದೆಷ್ಟು ಎಂಬುದನ್ನು ನೋಡುವುದಾದರೆ, ವಿಶ್ವಾದ್ಯಂತ ಈ ಸಿನಿಮಾ 298.5 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದೆ. ಇದನ್ನು ಚಿತ್ರತಂಡ ಅಧಿಕೃತವಾಗಿ ಬಹಿರಂಗಪಡಿಸಿದೆ. ಕಲ್ಕಿ 2898 ಎಡಿ ಚಿತ್ರವನ್ನು ಅಶ್ವಿನಿ ದತ್ ಅವರು ವೈಜಯಂತಿ ಮೂವೀಸ್ ಬ್ಯಾನರ್‌ನಡಿಯಲ್ಲಿ 600 ಕೋಟಿ ಬಜೆಟ್‌ನಲ್ಲಿ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸಿದ್ದಾರೆ.

Whats_app_banner