ಕನ್ನಡ ಸುದ್ದಿ  /  ಮನರಂಜನೆ  /  Kalki 2898 Ad: ಕಲ್ಕಿಯಲ್ಲಿ ಸೂಪರ್ ಸ್ಟಾರ್ ಕಮಲ್ ಹಾಸನ್ ನಟನೆ; ಯಾವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ?

Kalki 2898 AD: ಕಲ್ಕಿಯಲ್ಲಿ ಸೂಪರ್ ಸ್ಟಾರ್ ಕಮಲ್ ಹಾಸನ್ ನಟನೆ; ಯಾವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ?

ಕಲ್ಟಿ 2898 ಎಡಿ ಸಿನಿಮಾದಲ್ಲಿ ತಮಿಳು ಸೂಪರ್ ಸ್ಟಾರ್ ಕಮಲ್ ಹಾಸನ್ ಕೂಡ ನಟಿಸಿದ್ದಾರೆ. ಸಕಲ ಕಲಾ ವಲ್ಲಭ ಈ ಬಹು ನಿರೀಕ್ಷಿತ ಸಿನಿಮಾದಲ್ಲಿ ಯಾವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ ಅನ್ನೋದರ ಮಾಹಿತಿ ಇಲ್ಲಿದೆ.

 ಕಲ್ಕಿಯಲ್ಲಿ ಸೂಪರ್ ಸ್ಟಾರ್ ಕಮಲ್ ಹಾಸನ್ ನಟನೆ; ಯಾವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ?
ಕಲ್ಕಿಯಲ್ಲಿ ಸೂಪರ್ ಸ್ಟಾರ್ ಕಮಲ್ ಹಾಸನ್ ನಟನೆ; ಯಾವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ?

ಬೆಂಗಳೂರು: ಭಾರತೀಯ ಚಿತ್ರರಂಗದಲ್ಲಿ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದ್ದ ಟಾಲಿವುಡ್‌ನ ಡಾರ್ಲಿಂಗ್ ಪ್ರಭಾಸ್ (Prabhas)-ದೀಪಿಕಾ ಪಡುಕೋಣೆ (Deepika Padukone) ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಕಲ್ಕಿ 2898 ಎಬಿ (Kalki 2898 AD) ಸಿನಿಮಾ ಇಂದು (ಜೂನ್ 27, ಗುರುವಾರ) ಬಿಡುಗಡೆಯಾಗಿದೆ. ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದೆ. ಇನ್ನ ಈ ಸಿನಿಮಾದಲ್ಲಿ ಟಾಲಿವುಡ್ ರೆಬಸ್ ಸ್ಟಾರ್ ಪ್ರಭಾಸ್, ಬಾಲಿವುಡ್ ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ ಜೊತೆಗೆ ದೊಡ್ಡ ಸ್ಟಾರ್‌ಗಳ ಬಳಗವೇ ಇದೆ. ಅದರಲ್ಲಿ ಸೂಪರ್ ಸ್ಟಾರ್ ಕಮಲ್ ಹಾಸನ್ (Kamal Haasan) ಕೂಡ ಇದ್ದಾರೆ. ಸಕಲ ಕಲಾ ವಲ್ಲಭ ಕಮನ್ ಹಾಸನ್ ಯಾವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ ಅನ್ನೋದನ್ನು ನೋಡೋಣ.

ನಾಗ್ ಅಶ್ವಿನ್ ಅವರ ಪೌರಾಣಿಕ ವೈಜ್ಞಾನಿಕ ಥ್ರಿಲ್ಲರ್ ಸಿನಿಮಾ ಕಲ್ಕಿ 2898 ಎಡಿ ಯಲ್ಲಿ ಯಾಸ್ಕಿನ್ ಪಾತ್ರದಲ್ಲಿ ನಟ ಕಮಲ್ ಹಾಸನ್ ಕಾಣಿಸಿಕೊಂಡಿದ್ದಾರೆ. ಕಲ್ಕಿ 2898 ಎಡಿ ಸಿನಿಮಾ ಹಿಂದಿರುವ ಅರ್ಥವನ್ನು ನೋಡುವುದಾದರೆ ಇದು ಹಿಂದೂ ದೇವರಾದ ಭಗವಾನ ವಿಷ್ಣುವಿನ ಆಧುನಿಕ ಅವತಾರವನ್ನುವಾಗಿದ್ದು, ದುಷ್ಟ ಶಕ್ತಿಗಳಿಂದ ರಕ್ಷಿಸಲು ಭೂಮಿಗೆ ಇಳಿಯುವ ಕಥೆಯನ್ನ ಆಧರಿಸಿರುವ ಸಿನಿಮಾ ಆಗಿದೆ.

ಕಲ್ಕಿ ವಿಷ್ಣುವಿನ ಹತ್ತನೆಯ ಮತ್ತು ಕೊನೆಯ ಅವತಾರವಾಗಿದೆ ಎಂದು ಹೇಳಲಾಗಿದೆ. 2024ರ ಜೂನ್ 27ರ ಗುರುವಾರ ದೇಶಾದ್ಯಂತ ಥೀಯೆಟರ್‌ಗಳಲ್ಲಿ ಬಿಡುಗಡೆಯಾಗಿದೆ. ಪ್ರಭಾಸ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ದಿಶಾ ಪಟಾನಿ ಹಾಗೂ ದುಲ್ಕರ್ ಸಲ್ಮಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)