ಕೆಳ ತುಟಿಗೆ ಬ್ಯಾಂಡೇಜ್‌ ಊದಿಕೊಂಡ ಮುಖ, ಕಾಸ್ಮೆಟಿಕ್‌ ಸರ್ಜರಿ ಮಾಡಿಸಿಕೊಂಡ್ರಾ ಎಂದ ಫ್ಯಾನ್ಸ್‌; ಮಂಚು ಲಕ್ಷ್ಮೀ ಹೇಳಿದ್ದೇ ಬೇರೆ-tollywood news lakshmi manchu latest photo goes viral which she is bandage to her lower lips rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಕೆಳ ತುಟಿಗೆ ಬ್ಯಾಂಡೇಜ್‌ ಊದಿಕೊಂಡ ಮುಖ, ಕಾಸ್ಮೆಟಿಕ್‌ ಸರ್ಜರಿ ಮಾಡಿಸಿಕೊಂಡ್ರಾ ಎಂದ ಫ್ಯಾನ್ಸ್‌; ಮಂಚು ಲಕ್ಷ್ಮೀ ಹೇಳಿದ್ದೇ ಬೇರೆ

ಕೆಳ ತುಟಿಗೆ ಬ್ಯಾಂಡೇಜ್‌ ಊದಿಕೊಂಡ ಮುಖ, ಕಾಸ್ಮೆಟಿಕ್‌ ಸರ್ಜರಿ ಮಾಡಿಸಿಕೊಂಡ್ರಾ ಎಂದ ಫ್ಯಾನ್ಸ್‌; ಮಂಚು ಲಕ್ಷ್ಮೀ ಹೇಳಿದ್ದೇ ಬೇರೆ

Manchu Lakshmi: ಅಮೆರಿಕಾ ಪ್ರವಾಸದಲ್ಲಿರುವ ತೆಲುಗು ನಟಿ ಮಂಚು ಲಕ್ಷ್ಮೀ ಇತ್ತೀಚೆಗಿನ ಫೋಟೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಈ ಫೋಟೋ ನೋಡಿ ಬಹುಶ: ಅವರು ಕಾಸ್ಮೆಟಿಕ್‌ ಸರ್ಜರಿ ಮಾಡಿಸಿಕೊಂಡಿರಬಹುದು ಎಂದುಕೊಂಡವರೇ ಹೆಚ್ಚು. ಅದರೆ ಲಕ್ಷ್ಮೀ, ತಾನು ಮಾತ್ರೆ ತೆಗೆದುಕೊಂಡಿದ್ದರಿಂದ ಈ ರೀತಿ ಸಮಸ್ಯೆ ಆಗಿದೆ ಎಂದು ಹೇಳಿಕೊಂಡಿದ್ದಾರೆ.

ಕೆಳತುಟಿಗೆ ಬ್ಯಾಂಡೇಜ್‌ ಊದಿಕೊಂಡ ಮುಖ, ತುಟಿಗೆ ಕಾಸ್ಮೆಟಿಕ್‌ ಸರ್ಜರಿ ಮಾಡಿಸಿಕೊಂಡ್ರಾ ಎಂದ ಫ್ಯಾನ್ಸ್‌; ಮಂಚು ಲಕ್ಷ್ಮೀ ಹೇಳಿದ್ದೇ ಬೇರೆ
ಕೆಳತುಟಿಗೆ ಬ್ಯಾಂಡೇಜ್‌ ಊದಿಕೊಂಡ ಮುಖ, ತುಟಿಗೆ ಕಾಸ್ಮೆಟಿಕ್‌ ಸರ್ಜರಿ ಮಾಡಿಸಿಕೊಂಡ್ರಾ ಎಂದ ಫ್ಯಾನ್ಸ್‌; ಮಂಚು ಲಕ್ಷ್ಮೀ ಹೇಳಿದ್ದೇ ಬೇರೆ (PC: telugucinemacom)

ತೆಲುಗು ಸಿನಿಮಾ ನಟಿ ಮಂಚು ಲಕ್ಷ್ಮಿ ಸಿನಿಮಾಗಳಿಂದ ಅಲ್ಲದಿದ್ದರೂ ತಮ್ಮ ಮಾತಿನ ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಜೊತೆಗೆ ಸೋಷಿಯಲ್‌ ಮೀಡಿಯಾದಲ್ಲಿ ಕೂಡಾ ಸಕ್ರಿಯರಾಗಿರುತ್ತಾರೆ. ಖ್ಯಾತ ಟಾಲಿವುಡ್‌ ನಟ ಮೋಹನ್‌ ಬಾಬು ಪುತ್ರಿ ಮಂಚು ಲಕ್ಷ್ಮಿ. ಇತ್ತೀಚೆಗೆ ತೆಲುಗು ಮಾಧ್ಯಮವೊಂದು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಲಕ್ಷ್ಮಿ ಮಂಚು ಫೋಟೋವೊಂದು ವೈರಲ್‌ ಆಗುತ್ತಿದೆ.

ಅಮೆರಿಕಾ ಪ್ರವಾಸದಲ್ಲಿರುವ ಮಂಚು ಲಕ್ಷ್ಮೀ

ಮಂಚು ಲಕ್ಷ್ಮೀ ಸದ್ಯಕ್ಕೆ ಮಗಳು, ಪತಿಯೊಂದಿಗೆ ಯುಸ್‌ ಟ್ರಿಪ್‌ನಲ್ಲಿ ಬ್ಯುಸಿ ಇದ್ದಾರೆ. ಅಮೆರಿಕದಲ್ಲಿ ತಾವು ಭೇಟಿ ನೀಡಿರುವ ಸುಂದರ ಸ್ಥಳಗಳ ಫೋಟೋಗಳನ್ನು ಲಕ್ಷ್ಮಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ತೆಲುಗು ಸಿನಿಮಾಕಾಮ್‌ ಎಂಬ ವೆಬ್‌ಸೈಟ್‌ವೊಂದರಲ್ಲಿ ಮಂಚು ಲಕ್ಷ್ಮೀ ಅವರ ಇತ್ತೀಚೆಗಿನ ಫೋಟೋವೊಂದನ್ನು ಹಂಚಿಕೊಳ್ಳಲಾಗಿದೆ. ಈ ಫೋಟೋ ನೋಡಿ ಲಕ್ಷ್ಮಿ ಅಭಿಮಾನಿಗಳು ಗಾಬರಿ ಆಗಿದ್ದಾರೆ. ನಮ್ಮ ಮೆಚ್ಚಿನ ನಟಿಗೆ ಏನಾಯ್ತು ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಫೋಟೋದಲ್ಲಿ ಮಂಚು ಲಕ್ಷ್ಮೀ ಕೆಳತುಟಿಗೆ ಬ್ಯಾಂಡೇಜ್‌ ಹಾಕಲಾಗಿದೆ. ಮುಖ ಊದಿದೆ. ಮಂಚು ಲಕ್ಷ್ಮೀ ಈ ಅಮೆರಿಕದಲ್ಲಿದ್ದಾರೆ. ಬಹುಶ: ಅವರು ತುಟಿಗೆ ಕಾಸ್ಮೆಟಿಕ್‌ ಸರ್ಜರಿ ಮಾಡಿಸಿಕೊಂಡಿರಬಹುದೇನೋ ಎಂದು ಇನ್ನೂ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಆ ಫೋಟೋ ವಿಚಾರವಾಗಿ ಆಕೆ ಹೇಳಿರುವುದೇ ಬೇರೆ.

ಇತ್ತೀಚೆಗೆ ಅಮೆರಿಕಾ ಹೋದಾಗ ಸಣ್ಣ ಜ್ವರ ಕಾಣಿಸಿಕೊಂಡಿತು. ಅದಕ್ಕಾಗಿ ನನಗೆ ತಿಳಿದಿರುವ ಒಂದು ಮಾತ್ರೆ ತೆಗೆದುಕೊಂಡೆ. ಆದರೆ ಜ್ವರ ಕಡಿಮೆ ಆದರೂ ತುಟಿ ಹಾಗೂ ಮುಖ ಊದಿಕೊಳ್ಳಲು ಆರಂಭಿಸಿತು. ನಮ್ಮ ದೇಹಕ್ಕೆ ಯಾವುದು ಬೇಕು ಯಾವುದು ಬೇಡ ಎಂಬುದನ್ನು ನಾವು ತಿಳಿದುಕೊಳ್ಳುವುದು ಬಹಳ ಅಗತ್ಯ. ಈ ಸಮಸ್ಯೆಗೆ ನಾನು ಇಲ್ಲೆ ಚಿಕಿತ್ಸೆ ಪಡೆಯುತ್ತಿದ್ದೇನೆ. ನಾನು ಈಗ ಗುಣಮುಖಳಾಗುತ್ತಿದ್ದೇನೆ. ನೀವು ಕೂಡಾ ಮನೆಯಲ್ಲಿದೆ ಎಂದು ಕೈಗೆ ಸಿಕ್ಕಿದ ಮಾತ್ರೆಯನ್ನು ತೆಗೆದುಕೊಳ್ಳಬೇಡಿ ಎಂದು ಲಕ್ಷ್ಮೀ ತಮ್ಮ ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ.

ಬಾಲ್ಯದಲ್ಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಲಕ್ಷ್ಮೀ

ಮಂಚು ಲಕ್ಷ್ಮೀ ತಂದೆ ಮೋಹನ್‌ ಬಾಬು ತೆಲುಗಿನಲ್ಲಿ ಸ್ಟಾರ್‌ ನಟರಾಗಿರುವುದರಿಂದ ಲಕ್ಷ್ಮೀಗೆ ಸಿನಿಮಾಗೆ ಬರುವುದು ಕಷ್ಟವೇನೂ ಆಗಲಿಲ್ಲ. ಬಾಲನಟಿಯಾಗಿ ಈಕೆ ಚಿತ್ರರಂಗಕ್ಕೆ ಬಂದರು. ಡಿಯರ್‌ ಏರ್‌, ಥ್ಯಾಂಕ್ಯೂ ಫಾರ್‌ ವಾಚಿಂಗ್‌, ಅನಘನಗಾ ಓ ಧೀರುಡು, ಡಿಪಾರ್ಟ್‌ಮೆಂಟ್‌, ಕಾದಲ್‌, ಚಂದಮಾಮ ಕಥಲು, ದೊಂಗಾಟ, ಸೈಜ್‌ ಝೀರೋ, ಪಿಟ್ಟ ಕಥಲು, ಮೋನ್ಸ್ಟರ್‌ ಸೇರಿದಂತೆ ಲಕ್ಷ್ಮೀ ಮಂಚು ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ವೆಬ್‌ ಸೀರೀಸ್‌ಗಳಲ್ಲಿ ಕೂಡಾ ನಟಿಸಿದ್ದಾರೆ. ನಟಿಯಾಗಿ ಮಾತ್ರವಲ್ಲದೆ ನಿರೂಪಕಿಯಾಗಿ, ನಿರ್ಮಾಪಕಿಯಾಗಿ ಕೂಡಾ ಗುರುತಿಸಿಕೊಂಡಿದ್ದಾರೆ.

ಶ್ರೀ, ನೇನು ಮೀಕು ತೆಲುಸಾ, ದೊಂಗಾಟ ಸೇರಿ 6 ಸಿನಿಮಾಗಳನ್ನು ಮಂಚು ಲಕ್ಷ್ಮೀ ನಿರ್ಮಿಸಿದ್ದಾರೆ. ಲಕ್ಷ್ಮೀ ಟಾಕ್‌ ಶೋ, ಪ್ರೇಮತೋ ಮೀ ಲಕ್ಷ್ಮೀ, ಸೂಪರ್‌ ಜೋಡಿ, ದೂಸುಕೆಲ್ತೇ, ಮಹಾರಾಣಿ, ಆಹಾ ಭೋಜನಂಬು ರಿಯಾಲಿಟಿ ಶೋಗಳಿಗೆ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ. ಸದ್ಯಕ್ಕೆ ತೆಲುಗಿನ ಆದಿಪರ್ವಂ ಸಿನಿಮಾದಲ್ಲಿ ಮಂಚು ಲಕ್ಷ್ಮೀ ಬ್ಯುಸಿಯಾಗಿದ್ದಾರೆ.