Mahesh Babu: ರಾಜಮೌಳಿ ಮುಂದಿನ ಸಿನಿಮಾಕ್ಕೆ ಮಹೇಶ್‌ ಬಾಬು ಹೀರೋ; ಶೂಟಿಂಗ್‌ ಯಾವಾಗ ಆರಂಭ? ಇಲ್ಲಿದೆ ಹೆಚ್ಚಿನ ವಿವರ
ಕನ್ನಡ ಸುದ್ದಿ  /  ಮನರಂಜನೆ  /  Mahesh Babu: ರಾಜಮೌಳಿ ಮುಂದಿನ ಸಿನಿಮಾಕ್ಕೆ ಮಹೇಶ್‌ ಬಾಬು ಹೀರೋ; ಶೂಟಿಂಗ್‌ ಯಾವಾಗ ಆರಂಭ? ಇಲ್ಲಿದೆ ಹೆಚ್ಚಿನ ವಿವರ

Mahesh Babu: ರಾಜಮೌಳಿ ಮುಂದಿನ ಸಿನಿಮಾಕ್ಕೆ ಮಹೇಶ್‌ ಬಾಬು ಹೀರೋ; ಶೂಟಿಂಗ್‌ ಯಾವಾಗ ಆರಂಭ? ಇಲ್ಲಿದೆ ಹೆಚ್ಚಿನ ವಿವರ

ಎಸ್‌ಎಸ್‌ ರಾಜಮೌಳಿ ಮುಂದಿನ ಸಿನಿಮಾಕ್ಕೆ ಟಾಲಿವುಡ್‌ ನಟ ಮಹೇಶ್‌ ಬಾಬು ಹೀರೋ ಆಗಿರಲಿದ್ದಾರೆ. ಬಾಹುಬಲಿ, ಆರ್‌ಆರ್‌ಆರ್‌ ನಿರ್ದೇಶಕರ ಮುಂದಿನ ಸಿನಿಮಾದ ಕುರಿತು ಹೆಚ್ಚಿನ ವಿವರ ಇಲ್ಲಿದೆ.

Mahesh Babu: ರಾಜಮೌಳಿ ಮುಂದಿನ ಸಿನಿಮಾಕ್ಕೆ ಮಹೇಶ್‌ ಬಾಬು ಹೀರೋ
Mahesh Babu: ರಾಜಮೌಳಿ ಮುಂದಿನ ಸಿನಿಮಾಕ್ಕೆ ಮಹೇಶ್‌ ಬಾಬು ಹೀರೋ (Instagram)

ಬೆಂಗಳೂರು: ಆರ್‌ಆರ್‌ಆರ್‌ ಸಿನಿಮಾದ ಮೂಲಕ ಎಸ್‌ಎಸ್‌ ರಾಜಮೌಳಿ ದೇಶ-ವಿದೇಶಗಳಲ್ಲಿ ಫೇಮಸ್‌ ಆಗಿದ್ದಾರೆ. ಇದೀಗ ತನ್ನ ಮುಂದಿನ ಸಿನಿಮಾದ ಕುರಿತು ಗಮನ ಹರಿಸುತ್ತಿದ್ದಾರೆ. ಈ ಬಾರಿ ಇವರು ತೆಲುಗು ನಟ ಮಹೇಶ್‌ ಬಾಬುವಿನ ಜತೆ ಪ್ರೇಕ್ಷಕರಿಗೆ ಅಭೂತಪೂರ್ವ ಸಿನಿಮಾ ಅನುಭವ ನೀಡಲಿದ್ದಾರೆ. ಸದ್ಯ ಮಹೇಶ್‌ ಬಾಬು ನಟನೆಯ ರಾಜಮೌಳಿಯ ಮುಂದಿನ ಸಿನಿಮಾವು ನಿರ್ಮಾಣ ಪೂರ್ವ ಹಂತದಲ್ಲಿದೆ. ಈ ವರ್ಷವೇ ಈ ಸಿನಿಮಾದ ಶೂಟಿಂಗ್‌ ಆರಂಭವಾಗುವ ಸೂಚನೆಯಿದೆ.

ಎಸ್‌ಎಸ್‌ಎಂಬಿ29 ಶೂಟಿಂಗ್‌ ಶೀಘ್ರ

ಎಸ್‌ಎಸ್‌ ರಾಜಮೌಳಿ ಸಿನಿಮಾ ತಂಡದ ಮೂಲಗಳು ಹಿಂದೂಸ್ತಾನ್‌ ಟೈಮ್ಸ್‌ಗೆ ಒಂದಿಷ್ಟು ಮಾಹಿತಿ ನೀಡಿವೆ. "ಎಸ್‌ಎಸ್‌ಎಂಬಿ29 ಶೂಟಿಂಗ್‌ ಈ ವರ್ಷದ ಆಗಸ್ಟ್‌ ಅಥವಾ ಸೆಪ್ಟೆಂಬರ್‌ನಲ್ಲಿ ಆರಂಭವಾಗಲಿದೆ" ಎಂದು ಮೂಲಗಳು ತಿಳಿಸಿವೆ. "ಈ ಸಿನಿಮಾದ ಕುರಿತು ಚರ್ಚಿಸಲು ರಾಜಮೌಳಿ ಮತ್ತು ಕೆಎಲ್‌ ನಾರಾಯಣ ಅವರು ಮಹೇಶ್‌ ಬಾಬು ಅವರನ್ನು ದುಬೈನಲ್ಲಿ ಭೇಟಿಯಾಗಿದ್ದಾರೆ. ಮಹೇಶ್‌ ಬಾಬು ದುಬೈನಲ್ಲಿ ವೆಕೇಷನ್‌ನಲ್ಲಿದ್ದಾರೆ. ಸದ್ಯ ನಿರ್ದೇಶಕರು ಸಿನಿಮಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ನಟಿಸಲು ಸಿದ್ಧತೆ ನಡೆಸುವ ಸಲುವಾಗಿ ಮಹೇಶ್‌ ಬಾಬು ಕೂಡ ವರ್ಕ್‌ಶಾಪ್‌ಗಳಲ್ಲಿ ಭಾಗಿಯಾಗುತ್ತಿದ್ದಾರೆ. ಆಗಸ್ಟ್‌ ಅಥವಾ ಸೆಪ್ಟೆಂಬರ್‌ನಲ್ಲಿ ಶೂಟಿಂಗ್‌ ಆರಂಭಿಸಲು ಸಿದ್ಧತೆ ನಡೆಸಿವೆ" ಎಂದು ಮೂಲಗಳು ಹಿಂದೂಸ್ತಾನ್‌ ಟೈಮ್ಸ್‌ಗೆ ತಿಳಿಸಿವೆ.

ಇದಕ್ಕಾಗಿ ಹದಿನೈದು ವರ್ಷ ಕಾದ್ರಂತೆ ನಾರಾಯಣ

"ಮಹೇಶ್‌ ಬಾಬು ಮತ್ತು ರಾಜಮೌಳಿ ಜತೆ ಸಿನಿಮಾ ಮಾಡುವ ಸಲುವಾಗಿ ಕಳೆದ ಹದಿನೈದು ವರ್ಷದಿಂದ ಕಾಯುತ್ತಿದ್ದೇನೆ" ಎಂದು ಮಹಾ ಮ್ಯಾಕ್ಸ್‌ಗೆ ನೀಡಿದ ಸಂದರ್ಶನದಲ್ಲಿ ನಿರ್ಮಾಪಕ ಕೆಎಲ್‌ ನಾರಾಯಣ ಹೇಳಿದ್ದಾರೆ. "ನಾನು ಈ ಸಿನಿಮಾ ಮಾಡಲು ಕಾಯುತ್ತಿದ್ದೆ. ಅದಕ್ಕಾಗಿ ಇಷ್ಟೊಂದು ದೀರ್ಘಾವಧಿ ತೆಗೆದುಕೊಂಡೆ. ನಾನು ಅಂತಿಮಗೊಳಿಸದ ಇನ್ನೂ ಹಲವು ಸಿನಿಮಾಗಳಿವೆ. ರಾಜಮೌಳಿಯವರು ಬಾಹುಬಲಿ, ಆರ್‌ಆರ್‌ಆರ್‌ನಲ್ಲಿ ಬಿಝಿಯಾದ್ರು. ಮಹೇಶ್‌ ಬಾಬು ಮತ್ತು ರಾಜಮೌಳಿ ನನಗೆ ಹದಿನೈದು ವರ್ಷಗಳ ಹಿಂದೆ ಪ್ರಾಮೀಸ್‌ ಮಾಡಿದ್ದರು. ಅವರು ತಮ್ಮ ಮಾತುಗಳನ್ನು ಉಳಿಸಿಕೊಂಡಿದ್ದಾರೆ. ಈ ಸಿನಿಮಾ ಹಲವು ಎಪಿಸೋಡ್‌ಗಳನ್ನು ಹೊಂದಿರಲಿದೆ. ಆಫ್ರಿಕಾ, ವಿಯೆಟ್ನಾಂನಲ್ಲೂ ಶೂಟಿಂಗ್‌ ಇರಲಿದೆ" ಎಂದು ಕೆಎಲ್‌ ನಾರಾಯಣ್‌ ಹೇಳಿದ್ದಾರೆ.

ಮಹೇಶ್‌ ಬಾಬು ಮುಂಬರುವ ಸಿನಿಮಾಗಳು

ಮಹೇಶ್‌ ಬಾಬು ಇತ್ತೀಚೆಗೆ ತ್ರಿವಿಕ್ರಮ್‌ ಶ್ರೀನಿವಾಸ್‌ ನಿರ್ದೇಶನದ ಗುಂಟೂರು ಕಾರಂ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ವರ್ಷ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಈ ಸಿನಿಮಾ ರಿಲೀಸ್‌ ಆಗಿತ್ತು. ಎಲ್ಲರೂ ಮಹೇಶ್‌ ಬಾಬು ನಟನೆಗೆ ಉಘೇ ಉಘೇ ಎಂದಿದ್ದರು. ಆದರೆ, ಬಾಕ್ಸ್‌ ಆಫೀಸ್‌ನಲ್ಲಿ ಸಿನಿಮಾ ಯಶಸ್ಸು ಕಂಡಿರಲಿಲ್ಲ. ರಾಜಮೌಳಿ ಜತೆಗಿನ ಇವರ ಮುಂದಿನ ಸಿನಿಮಾಕ್ಕೆ ವಿಜಯೇಂದ್ರ ಪ್ರಸಾದ್‌ ಕಥೆ ಬರೆದಿದ್ದಾರೆ.

ಒಟಿಟಿಯಲ್ಲಿದೆ ಗುಂಟೂರು ಕಾರಂ

ಗುಂಟೂರ್ ಕಾರಂ ಸಿನಿಮಾ ಫೆಬ್ರವರಿ 9ರಂದು ನೆಟ್‌ಫ್ಲಿಕ್ಸ್ OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗಿತ್ತು. ತೆಲುಗು, ಕನ್ನಡ, ಹಿಂದಿ, ತಮಿಳು, ಮತ್ತು ಮಲಯಾಳಂ ಭಾಷೆಗಳಿಗೆ ಡಬ್‌ ಆಗಿದೆ.ತ್ರಿವಿಕ್ರಮ್ ಶ್ರೀನಿವಾಸ್ ಗುಂಟೂರು ಕಾರಂ ಚಿತ್ರಕ್ಕೆ ಆ್ಯಕ್ಷನ್ ಕಟ್‌ ಹೇಳಿದ್ದಾರೆ. ಚಿತ್ರದಲ್ಲಿ ತಾಯಿ ಸೆಂಟಿಮೆಂಟ್ ಸಹ ಪ್ರಧಾನವಾಗಿದೆ. ಶ್ರೀಲೀಲಾ ನಾಯಕಿಯಾಗಿ ಕಾಣಿಸಿಕೊಂಡರೆ, ಮೀನಾಕ್ಷಿ ಚೌಧರಿ ಸಹ ನಟಿಸಿದ್ದರು. ನಟಿ ರಮ್ಯಾ ಕೃಷ್ಣ ಈ ಚಿತ್ರದಲ್ಲಿ ಮಹೇಶ್ ಬಾಬು ಅವರ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ.

ಇತ್ತೀಚಿನ ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Whats_app_banner