Pushpa 2: ಬಹುನಿರೀಕ್ಷಿತ ಪುಷ್ಪ 2 ಟೀಸರ್‌ ಬಿಡುಗಡೆ ದಿನಾಂಕ ಪ್ರಕಟ; ಅಲ್ಲು ಅರ್ಜುನ್‌ ಅಭಿಮಾನಿಗಳಿಗೆ ಖುಷಿಯೋ ಖುಷಿ-tollywood news much anticipated pushpa 2 teaser release date april 8 allu arjun birthday rashmika mandanna pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Pushpa 2: ಬಹುನಿರೀಕ್ಷಿತ ಪುಷ್ಪ 2 ಟೀಸರ್‌ ಬಿಡುಗಡೆ ದಿನಾಂಕ ಪ್ರಕಟ; ಅಲ್ಲು ಅರ್ಜುನ್‌ ಅಭಿಮಾನಿಗಳಿಗೆ ಖುಷಿಯೋ ಖುಷಿ

Pushpa 2: ಬಹುನಿರೀಕ್ಷಿತ ಪುಷ್ಪ 2 ಟೀಸರ್‌ ಬಿಡುಗಡೆ ದಿನಾಂಕ ಪ್ರಕಟ; ಅಲ್ಲು ಅರ್ಜುನ್‌ ಅಭಿಮಾನಿಗಳಿಗೆ ಖುಷಿಯೋ ಖುಷಿ

Pushpa 2 teaser Release Date: ಪುಷ್ಪಾ 2 ತಂಡದ ಬಹುನಿರೀಕ್ಷಿತ ಪ್ರಕಟಣೆ ಹೊರಬಿದ್ದಿದೆ. ಏಪ್ರಿಲ್‌ 8ರಂದು ಪುಷ್ಪಾ 2 ಟೀಸರ್‌ ರಿಲೀಸ್‌ ಮಾಡುವುದಾಗಿ ಚಿತ್ರತಂಡ ಪ್ರಕಟಿಸಿದೆ. ಅಲ್ಲು ಅರ್ಜುನ್‌ ಹುಟ್ಟುಹಬ್ಬದಂದೇ ಟೀಸರ್‌ ಬಿಡುಗಡೆಯಾಗಲಿದೆ.

Pushpa 2: ಬಹುನಿರೀಕ್ಷಿತ ಪುಷ್ಪಾ 2 ಟೀಸರ್‌ ಬಿಡುಗಡೆ ದಿನಾಂಕ ಪ್ರಕಟ
Pushpa 2: ಬಹುನಿರೀಕ್ಷಿತ ಪುಷ್ಪಾ 2 ಟೀಸರ್‌ ಬಿಡುಗಡೆ ದಿನಾಂಕ ಪ್ರಕಟ

ಬೆಂಗಳೂರು: ದಕ್ಷಿಣ ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ಪುಷ್ಪ 2 ಸಿನಿಮಾದ ಹೊಸ ಅಪ್‌ಡೇಟ್‌ ಹೊರಬಿದ್ದಿದೆ. ಏಪ್ರಿಲ್‌ 8ರಂದು ಪುಷ್ಪಾ 2 ಟೀಸರ್‌ ರಿಲೀಸ್‌ ಮಾಡುವುದಾಗಿ ಚಿತ್ರತಂಡ ಪ್ರಕಟಿಸಿದೆ. ಅಲ್ಲು ಅರ್ಜುನ್‌ ಹುಟ್ಟುಹಬ್ಬದಂದೇ ಟೀಸರ್‌ ಬಿಡುಗಡೆಯಾಗಲಿದೆ. ಈ ಕುರಿತಾದ ಪೋಸ್ಟರ್‌ ಬಿಡುಗಡೆ ಮಾಡಲಾಗಿದೆ. ಪುಷ್ಪಾ 2 ಸಿನಿಮಾವು ಆಗಸ್ಟ್‌ 15, 2024ರಂದು ಬಿಡುಗಡೆಯಾಗಲಿದೆ. ರಶ್ಮಿಕಾ ಮಂದಣ್ಣ ಅವರು ನಾಯಕಿಯಾಗಿ ನಟಿಸುವ ಈ ಸಿನಿಮಾಕ್ಕೆ ಸುಕುಮಾರ್‌ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ.

“ಪುಷ್ಪ ಸಾಮೂಹಿಕ ಜಾತ್ರೆ ಶುರು ಮಾಡೋಣ. ಬಹು ನಿರೀಕ್ಷಿತ ಪುಷ್ಪ 2 ದಿ ರೂಲ್ ಟೀಸರ್ ಏಪ್ರಿಲ್ 8 ರಂದು ಬಿಡುಗಡೆಯಾಗಲಿದೆ. ಬೆಂಕಿಯನ್ನು ದ್ವಿಗುಣಗೊಳಿಸಲು ಬರುತ್ತಿದ್ದಾರೆ” ಎಂದು ಮೈತ್ರಿ ಮೂವೀ ಮೇಕರ್ಸ್ ಟ್ವೀಟ್ ಮಾಡಿದೆ. ಆಗಸ್ಟ್ 15 ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಇದೇ ಸಮಯದಲ್ಲಿ ಚಿತ್ರತಂಡ ಸ್ಪಷ್ಟಪಡಿಸಿದೆ.

ಟಾಲಿವುಡ್‌ನಿಂದ ಬಾಲಿವುಡ್‌ವರೆಗೆ ಇಡೀ ದೇಶವೇ ಪುಷ್ಪ 2 ಸಿನಿಮಾಕ್ಕಾಗಿ ಕಾಯುತ್ತಿದೆ. 2021ರಲ್ಲಿ ಅಲ್ಲು ಅರ್ಜುನ್ 'ಪುಷ್ಪ 1: ದಿ ರೈಸ್' ಬಿಡುಗಡೆಯಾಗಿ ಬ್ಲಾಕ್‌ಬಸ್ಟರ್‌ ಸಿನಿಮಾವಾಗಿ ಹೊರಹೊಮ್ಮಿತ್ತು. ಈ ಸಿನಿಮಾದ ಮೂಲಕ ಅಲ್ಲು ಅರ್ಜುನ್‌ ಪ್ಯಾನ್‌ ಇಂಡಿಯಾ ಸ್ಟಾರ್‌ ಆದರು. ಪುಷ್ಪಾ ರಾಜ್‌ ಎಂದೇ ಖ್ಯಾತಿ ಪಡೆದರು. ಈ ಸಿನಿಮಾದ ಮುಂದುವರೆದ ಭಾಗವಾಗಿ ಬಿಡುಗಡೆಯಾಗುತ್ತಿರುವ ಪುಷ್ಪಾ 2 ಮೇಲೆ ನಿರೀಕ್ಷೆ ಹಚ್ಚಾಗಿದೆ. ಇದೇ ಕಾರಣಕ್ಕೆ ಈ ಸಿನಿಮಾದ ಬಜೆಟ್‌ ಹೆಚ್ಚಿಸಲಾಗಿದೆ. ಆಗಸ್ಟ್‌ 15ರಂದು ಬಿಡುಗಡೆಯಾಗುವ ಈ ಸಿನಿಮಾದ ಟೀಸರ್‌ ಬಿಡುಗಡೆಯಾಗುವ ಸುದ್ದಿ ಕೇಳಿ ಸಿನಿಪ್ರೇಮಿಗಳು ಖುಷಿಗೊಂಡಿದ್ದಾರೆ.

ಪುಷ್ಪ 2 ಟೀಸರ್ ಬಿಡುಗಡೆ ದಿನಾಂಕ ಪ್ರಕಟ

ಏಪ್ರಿಲ್ 8 ರಂದು ಪುಷ್ಪ 2 ಚಿತ್ರದ ಟೀಸರ್ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಬಹಿರಂಗಪಡಿಸಿದೆ. ಏಪ್ರಿಲ್ 8 ರಂದು ಅಲ್ಲು ಅರ್ಜುನ್ ಹುಟ್ಟುಹಬ್ಬದ ದಿನದಂದೇ ಟೀಸರ್ ಬಿಡುಗಡೆಯಾಗುವುದು ಅಲ್ಲು ಅಭಿಮಾನಿಗಳಿಗೆ ಡಬಲ್‌ ಖುಷಿ ತಂದಿದೆ. ಚಿತ್ರತಂಡವು ಪುಷ್ಪಾ 2 ಟೀಸರ್ ದಿನಾಂಕದ ಪೋಸ್ಟರ್ ಅನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್‌ ಅವರ ಕಾಲು ಮಾತ್ರ ಕಾಣಿಸುತ್ತದೆ. ಹಿಂಬದಿಯಲ್ಲಿ ದೀಪಗಳು ಉರಿಯುತ್ತಿವೆ. ಪುಷ್ಪ ಮಾಸ ಜಾತ್ರೆ ಆರಂಭವಾಗುತ್ತಿದ್ದಂತೆಯೇ ಈ ಟೀಸರ್ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಪ್ರಕಟಿಸಿದೆ.

mysore-dasara_Entry_Point