ನೇರವಾಗಿ ಒಟಿಟಿಯಲ್ಲಿ ತೆರೆ ಕಾಣಲಿದೆ ನಾಗಚೈತನ್ಯ ಭಾವಿ ಪತ್ನಿ ಶೋಭಿತಾ ಧೂಳಿಪಾಲ ಅಭಿನಯದ ಲವ್ ಸಿತಾರಾ
ಭಾವೀ ಪತ್ನಿ ಶೋಭಿತಾ ಧೂಳಿಪಾಲ, ರಾಜೀವ್ ಸಿದ್ಧಾರ್ಥ್ ಅಭಿನಯದ ಲವ್ ಸಿತಾರಾ ಸಿನಿಮಾ ನೇರವಾಗಿ ಒಟಿಟಿಯಲ್ಲಿ ತೆರೆ ಕಾಣುತ್ತಿದೆ. ಸೆಪ್ಟೆಂಬರ್ 27 ರಂದು ಈ ಸಿನಿಮಾ ಸ್ಟ್ರೀಮ್ ಆಗಲಿದೆ. ಈ ಲವ್ ಕಂಟೆಂಟ್ ಸಿನಿಮಾ ನೋಡಲು ಸಿನಿಪ್ರಿಯರು ಎದುರು ನೋಡುತ್ತಿದ್ದಾರೆ.
ಲವ್ ಸಿತಾರಾ: ಟಾಲಿವುಡ್ ನಟಿ, ನಾಗಚೈತನ್ಯ ಭಾವೀ ಪತ್ನಿ ಶೋಭಿತಾ ಧೂಳಿಪಾಲ ಅಭಿನಯದ ಸಿನಿಮಾವೊಂದು ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ. ಈ ಸಿನಿಮಾ ಚಿತ್ರಮಂದಿರದಲ್ಲಿ ರಿಲೀಸ್ ಆಗದೆ ನೇರವಾಗಿ ಒಟಿಟಿಯಲ್ಲಿ ತೆರೆ ಕಾಣುತ್ತಿದೆ. ಲವ್ ಸಿತಾರಾ ಎಂಬ ಈ ಸಿನಿಮಾ ನೋಡಲು ಚೈತು ಅಭಿಮಾನಿಗಳು ಕಾಯುತ್ತಿದ್ದಾರೆ.
ಗೂಡಾಚಾರಿ ಚಿತ್ರದ ಮೂಲಕ ತೆಲುಗಿಗೆ ಪಾದಾರ್ಪಣೆ ಮಾಡಿದ ಶೋಭಿತಾ
ಟಾಲಿವುಡ್ ನಟ ನಾಗ ಚೈತನ್ಯ ಭಾವಿ ಪತ್ನಿ ಶೋಭಿತಾ ಧೂಳಿಪಾಲ, ಹೊಸ ಸಿನಿಮಾ ಮೂಲಕ ಸಿನಿಪ್ರಿಯರನ್ನು ರಂಜಿಸಲು ಸಿದ್ಧರಾಗಿದ್ದಾರೆ. ಅದ್ವಿಶೇಷ್ ಜೊತೆ ಗೂಡಾಚಾರಿ ಚಿತ್ರದ ಮೂಲಕ ತೆಲುಗಿಗೆ ಪಾದಾರ್ಪಣೆ ಮಾಡಿದ ಶೋಭಿತಾ ಧೂಳಿಪಾಲ ಟಾಲಿವುಡ್ ಜೊತೆಗೆ ಬಾಲಿವುಡ್ ಮತ್ತು ಹಾಲಿವುಡ್ ಸಿನಿಮಾಗಳಲ್ಲಿ ಕೂಡಾ ನಟಿಸಿದ್ದಾರೆ. ಇದೀಗ ಇವರು ಅಭಿನಯಿಸಿರುವ ಲವ್ ಸಿತಾರಾ ಸಿನಿಮಾ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ.
ಬಾಲಿವುಡ್ ರೊಮ್ಯಾಂಟಿಕ್ ವೆಬ್ ಸೀರಿಸ್‌ವೊಂದರಲ್ಲಿ ಹಾಟ್ ಆಗಿ ನಟಿಸಿ ಬೋಲ್ಡ್ ಹೀರೋಯಿನ್ ಎನಿಸಿಕೊಂಡಿದ್ದ ಶೋಭಿತಾ ಧೂಳಿಪಾಲ ಅವರ ಇತ್ತೀಚಿನ ಸಿನಿಮಾ ಲವ್ ಸಿತಾರ. ಈ ಚಿತ್ರವು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುವ ಬದಲು ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ತಯಾರಕರು ಇತ್ತೀಚೆಗೆ ಲವ್ ಸಿತಾರಾ ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದಾರೆ. 2:43 ನಿಮಿಷ ಅವಧಿಯ ಲವ್ ಸಿತಾರಾ ಚಿತ್ರದ ಟ್ರೈಲರ್ ನೋಡಿದರೆ ಹೆಸರಿಗೆ ತಕ್ಕಂತೆ ಇದೊಂದು ಲವ್, ರೊಮ್ಯಾಂಟಿಕ್ ಮತ್ತು ಫ್ಯಾಮಿಲಿ ಡ್ರಾಮಾ ಎನಿಸುತ್ತಿದೆ. ಈ ಟ್ರೈಲರ್‌ನಲ್ಲಿ ಕೇರಳದ ನಿಸರ್ಗದ ಸೊಬಗನ್ನು ತೋರಿಸಲಾಗಿದೆ. ತಾರಾ (ಶೋಭಿತಾ ಧೂಳಿಪಾಲ) ಸ್ವತಂತ್ಯ್ರ ಮನೋಭಾವದ ಇಂಟೀರಿಯರ್ ಡಿಸೈನರ್. ಆಕೆ ಅರ್ಜುನ್ (ರಾಜೀವ್ ಸಿದ್ಧಾರ್ಥ) ಎಂಬ ಅಂತಾರಾಷ್ಟ್ರೀಯ ಖ್ಯಾತಿಯ ಚೆಫ್ ಜೊತೆ ಪ್ರೀತಿಯಲ್ಲಿ ಬೀಳುತ್ತಾಳೆ. ತಾರಾ, ಪ್ರೇಮಿಯೊಂದಿಗೆ ತನ್ನ ಮನೆಗೆ ಹೋಗುತ್ತಾಳೆ.
ಸೆಪ್ಟೆಂಬರ್ 27 ರಂದು ನೇರವಾಗಿ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿರುವ ಲವ್ ಸಿತಾರಾ
ಮದುವೆಗೆ ಮುನ್ನ ಕುಟುಂಬಗಳಲ್ಲಿನ ಭಿನ್ನಾಭಿಪ್ರಾಯಗಳು ಮತ್ತು ಕೆಲವು ಸತ್ಯಗಳು ಬಹಿರಂಗಗೊಳ್ಳುತ್ತವೆ. ಇಷ್ಟೆಲ್ಲಾ ಆದ ನಂತರ ಈ ಜೋಡಿ ಮದುವೆ ಆಗುತ್ತಾರಾ? ಬ್ರೇಕಪ್ ಮಾಡಿಕೊಳ್ಳುವರಾ ಅನ್ನೋದು ಸಿನಿಮಾ ಕಥೆ. ಸೋಭಿತಾ ಧೂಳಿಪಾಲ ಅವರೊಂದಿಗೆ ರಾಜೀವ್ ಸಿದ್ಧಾರ್ಥ್, ಸೋನಾಲಿ ಕುಲಕರ್ಣಿ, ಬಿ. ಜಯಶ್ರೀ, ರೋಡ್ರಿಗಸ್, ಸಂಜಯ್ ಭುಟಿಯಾನಿ, ತಮಾರಾ ಡಿಸೋಜಾ, ರಿಜುಲ್ ರೇ ಹಾಗೂ ಇನ್ನಿತರರು ಲವ್ ಸಿತಾರಾ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಲವ್ ಸಿತಾರಾ ಸಿನಿಮಾ ನೇರವಾಗಿ ಸೆಪ್ಟೆಂಬರ್ 27 ರಂದು ಜೀ 5ನಲ್ಲಿ ನಲ್ಲಿ ಬಿಡುಗಡೆಯಾಗಲಿದೆ. ಇತ್ತೀಚೆಗೆ ಜಿ5 ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಶೋಭಿತಾ, "ಲವ್ ಸಿತಾರಾದಲ್ಲಿ ನಟಿಸಿದ್ದು ಉತ್ತಮ ಅನುಭವ. ನನ್ನ ಕೈಲಾದಷ್ಟು ಔಟ್ ಪುಟ್ ನೀಡಿದ್ದೇನೆ. ಒಬ್ಬ ಪ್ರಾಮಾಣಿಕ ಹುಡುಗಿ ತನ್ನ ಜೀವನದಲ್ಲಿ ಎದುರಾದ ಸವಾಲುಗಳನ್ನು ಹೇಗೆ ಧೈರ್ಯದಿಂದ ಎದುರಿಸುತ್ತಾಳೆ ಅನ್ನೋದು ಈ ಚಿತ್ರದ ಕಥೆ" ಎಂದು ಹೇಳಿದ್ದಾರೆ. ನಾಯಕ ರಾಜೀವ್ ಮಾತನಾಡಿ ಚಿತ್ರದಲ್ಲಿ ನಾನು ಅರ್ಜುನ್ ಪಾತ್ರದಲ್ಲಿ ನಟಿಸಿದ್ದೇನೆ. ನಾಯಕ , ತಾನು ಇಷ್ಟಪಟ್ಟು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗುವ ವಿಚಾರದಲ್ಲಿ ಏನೆಲ್ಲಾ ತಿರುವು ಉಂಟಾಗುತ್ತದೆ, ಅದನ್ನು ಹೇಗೆ ಎದುರಿಸುತ್ತಾನೆ ಎಂಬುದು ಎಲ್ಲರಿಗೂ ಇಷ್ಟವಾಗುತ್ತದೆ. ಎಲ್ಲರೂ ಸಿನಿಮಾ ನೋಡಿ ಹಾರೈಸಿ ಎಂದು ಮನವಿ ಮಾಡಿದ್ದಾರೆ. ಚಿತ್ರವನ್ನು ವಂದನಾ ಕಟಾರಿಯಾ ನಿರ್ದೇಶಿಸಿದ್ದಾರೆ.