ಕನ್ನಡ ಸುದ್ದಿ  /  ಮನರಂಜನೆ  /  Thandel Movie: ನಾಗ ಚೈತನ್ಯ, ಸಾಯಿ ಪಲ್ಲವಿ ನಟನೆಯ ತಾಂಡೇಲ್ ಡಿಜಿಟಲ್‌ ಹಕ್ಕು ಬಿಡುಗಡೆಗೆ ಮುನ್ನವೇ ದಾಖಲೆ ಮೊತ್ತಕ್ಕೆ ಮಾರಾಟ

Thandel Movie: ನಾಗ ಚೈತನ್ಯ, ಸಾಯಿ ಪಲ್ಲವಿ ನಟನೆಯ ತಾಂಡೇಲ್ ಡಿಜಿಟಲ್‌ ಹಕ್ಕು ಬಿಡುಗಡೆಗೆ ಮುನ್ನವೇ ದಾಖಲೆ ಮೊತ್ತಕ್ಕೆ ಮಾರಾಟ

Thandel OTT Rights: ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ನಟನೆಯ ತಾಂಡೇಲ್‌ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ತಾಂಡೇಲ್‌ ಡಿಜಿಟಲ್‌ ಹಕ್ಕುಗಳನ್ನು ನೆಟ್‌ಫ್ಲಿಕ್ಸ್‌ಗೆ 40 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ.

Thandel Movie: ನಾಗ ಚೈತನ್ಯ, ಸಾಯಿ ಪಲ್ಲವಿ ನಟನೆಯ ತಾಂಡೇಲ್ ಡಿಜಿಟಲ್‌ ಹಕ್ಕು ಮಾರಾಟ
Thandel Movie: ನಾಗ ಚೈತನ್ಯ, ಸಾಯಿ ಪಲ್ಲವಿ ನಟನೆಯ ತಾಂಡೇಲ್ ಡಿಜಿಟಲ್‌ ಹಕ್ಕು ಮಾರಾಟ

ಬೆಂಗಳೂರು: ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ನಟನೆಯ ತಾಂಡೇಲ್‌ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ನಿರ್ದೇಶಕ ಚಂದೂ ಮೊಂಡೆಟಿ ಮುಂದಿನ ಚಿತ್ರ ರಿಲೀಸ್‌ಗೆ ಮುನ್ನವೇ ಒಟಿಟಿ ಡೀಲ್‌ ನಡೆದಿದೆ. ಈ ಸಿನಿಮಾದ ನಿರ್ಮಾಪಕರು ತಾಂಡೇಲ್‌ ಡಿಜಿಟಲ್‌ ಹಕ್ಕುಗಳನ್ನು ನೆಟ್‌ಫ್ಲಿಕ್ಸ್‌ಗೆ 40 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಇದು ಚೈತನ್ಯ ಅವರ ಸಿನಿಮಾಗಳಲ್ಲಿಯೇ ಅತಿದೊಡ್ಡ ಒಪ್ಪಂದವಾಗಿದೆ.

ಟ್ರೆಂಡಿಂಗ್​ ಸುದ್ದಿ

ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ತಾಂಡೇಲ್‌ ಚಿತ್ರದ ತಯಾರಕರು ಹೀಗೆ ಬರೆದಿದ್ದಾರೆ. "ಚಿತ್ರದ ವ್ಯವಹಾರವು ಉತ್ತಮ ಆರಂಭ ಪಡೆದಿದೆ. ಪ್ರಮುಖ ಒಟಿಟಿ ಫ್ಲಾಟ್‌ಫಾರ್ಮ್‌ ನೆಟ್‌ಫ್ಲಿಕ್ಸ್‌ ಭಾರತ ಮತ್ತು ಹಿಂದಿ ಭಾಷೆಗಳಿಗೆ ತಾಂಡೇಲ್‌ ಡಿಜಿಟಲ್‌ ಹಕ್ಕುಗಳನ್ನು 40 ಕೋಟಿ ರೂಪಾಯಿಗೆ ಖರೀದಿಸಲಾಗಿದೆ. ಪ್ರೇಮಂ ಮತ್ತು ಸವ್ಯಸಾಚಿ ನಂತರ ತಾಂಡೇಲ್‌ ಚಿತ್ರಕ್ಕಾಗಿ ನಾಗ ಚೈತನ್ಯ ಮತ್ತು ಚಂದೂ ಒಂದಾಗಿದ್ದಾರೆ. ಶೇಖರ್ ಕಮ್ಮುಲಾ ಅವರ ಲವ್ ಸ್ಟೋರಿ ನಂತರ ಸಾಯಿ ಅವರೊಂದಿಗೆ ಚೈತನ್ಯ ಅವರ ಎರಡನೇ ಚಿತ್ರ ಇದಾಗಿದೆ. ದೇವಿ ಶ್ರೀ ಪ್ರಸಾದ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.

ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಅಲ್ಲು ಅರ್ಜುನ್ ಅವರ ಬನ್ನಿ ವಾಸು ನಿರ್ಮಿಸಿರುವ ತಾಂಡೇಲ್ ನೈಜ ಘಟನೆಗಳನ್ನು ಆಧರಿಸಿದ ಸಿನಿಮಾವಾಗಿದೆ. 2018 ರಲ್ಲಿ ಆಂಧ್ರಪ್ರದೇಶದ ಶ್ರೀಕಾಕುಳಂನ ಮೀನುಗಾರರು ತಪ್ಪಾಗಿ ಪಾಕಿಸ್ತಾನದ ಜಲಪ್ರದೇಶಕ್ಕೆ ಹೋಗಿ ಬಂಧನಕ್ಕೆ ಈಡಾದ ಘಟನೆಯನ್ನು ತಾಂಡೇಲ್‌ ಸಿನಿಮಾ ಆಧರಿಸಿದೆ ಎಂದು ನಾಗ ಚೈತನ್ಯ ಹೇಳಿದ್ದಾರೆ.

"ತಾಂಡೇಲ್‌ ಚಿತ್ರದ ಕೆಲಸದಲ್ಲಿದ್ದೇನೆ. ಇದು ನನಗೆ ಬಹಳ ವಿಶೇಷವಾದ ಚಿತ್ರ. ಮೊದಲನೆಯದಾಗಿ ನಾನು ಈ ರೀತಿಯ ಪಾತ್ರದಲ್ಲಿ ಇಲ್ಲಿಯವರೆಗೆ ನಟಿಸಿಲ್ಲ. 2018 ರಲ್ಲಿ ಶ್ರೀಕಾಕುಳಂನ ಈ ಮೀನುಗಾರರು ಅನುಭವಿಸಿದ ಕಷ್ಟದ ಕಥೆಯನ್ನು ಆಧರಿಸಿದೆ. ಸಾಮಾನ್ಯವಾಗಿ ಈ ಮೀನುಗಾರರು ಗುಜರಾತ್‌ಗೆ ಹೋಗಿ ಅಲ್ಲಿಂದ ಮೀನುಗಾರಿಕೆಗೆ ಹೋಗುತ್ತಾರೆ. ಒಂದು ಬಾರಿ ಸಮುದ್ರದ ಮೇರೆ ಮೀತಿ ಪಾಕಿಸ್ತಾನದ ಗಡಿಯಲ್ಲಿ ಗೊತ್ತಿಲ್ಲದೆ ಮೀನುಗಾರಿಕೆ ಮಾಡಿದರು. ನಾನು ಮತ್ತು ಸಾಯಿ ಪಲ್ಲವಿ ನಟಿಸಿರುವ ಈ ಪ್ರೇಮಕಥೆಯು ಈಗ ಮದುವೆಯಾಗಿರುವ ನಿಜವಾದ ದಂಪತಿ ಕಥೆಯನ್ನು ಆಧರಿಸಿದೆ ಎಂದು ನಾಗಚೈತನ್ಯ ಹೇಳಿದ್ದಾರೆ.

ಒಟಿಟಿಯಲ್ಲಿದೆ ಹಲವು ಸಿನಿಮಾ

ಕಿರಣ್‌ ರಾವ್‌ ನಿರ್ದೇಶನದ ಲಪಟಾ ಲೇಡಿಸ್‌ ಸಿನಿಮಾವು ಒಟಿಟಿಯಲ್ಲಿ ರಿಲೀಸ್‌ ಆಗಿದೆ. ಟಿಲ್ಲು ಸ್ಕ್ವೇರ್‌ ಒಟಿಟಿಯಲ್ಲಿ ರಿಲೀಸ್‌ ಆಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಇದೇ ಏಪ್ರಲ್‌ 26ರಂದು ಸಿದ್ದು ಜೊನ್ನಲಗಡ್ಡ ಮತ್ತು ಅನುಪಮಾ ಪರಮೇಶ್ವರನ್ ನಟನೆಯ ಟಿಲ್ಲು ಸ್ಕ್ವೇರ್‌ ಸಿನಿಮಾ ರಿಲೀಸ್‌ ಆಗಿದೆ. ಅಡ್ವೊಕೇಟ್ ಅಚಿಂತ ಐಚ್ ಹೊಸ ಸರಣಿಯಾಗಿದ್ದು, ಏಪ್ರಿಲ್ 26 ರಂದು ಹೋಯ್ಚೋಯ್ ನಲ್ಲಿ ಬಿಡುಗಡೆಯಾಗಿದೆ. ಸಂತೋಷ್‌ ಸಿಂಗ್‌ರ ರಣನೀತಿ: ಬಾಲಾಕೋಟ್‌ ಆಂಡ್‌ ಬಿಯಾಂಡ್‌ ವೆಬ್‌ ಸರಣಿಯು ಏಪ್ರಿಲ್‌ 25ರಿಂದ ಜಿಯೋ ಸಿನಿಮಾದಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಹೀಗೆ ಅಮೆಜಾನ್‌ ಪ್ರೈಮ್‌, ಜಿಯೋಸಿನಿಮಾ, ನೆಟ್‌ಫ್ಲಿಕ್ಸ್‌, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಹಲವು ಹೊಸ ಸಿನಿಮಾ, ವೆಬ್‌ ಸರಣಿಗಳು ರಿಲೀಸ್‌ ಆಗಿವೆ.

IPL_Entry_Point