ಟಾಲಿವುಡ್‌ ಸ್ಟಾರ್‌ ನಟ ಜೂನಿಯರ್‌ ಎನ್‌ಟಿಆರ್‌ ಅಭಿಮಾನಿಗಳಿಗೆ ಬೇಸರದ ಸುದ್ದಿ ಏನೆಂದರೆ..
ಕನ್ನಡ ಸುದ್ದಿ  /  ಮನರಂಜನೆ  /  ಟಾಲಿವುಡ್‌ ಸ್ಟಾರ್‌ ನಟ ಜೂನಿಯರ್‌ ಎನ್‌ಟಿಆರ್‌ ಅಭಿಮಾನಿಗಳಿಗೆ ಬೇಸರದ ಸುದ್ದಿ ಏನೆಂದರೆ..

ಟಾಲಿವುಡ್‌ ಸ್ಟಾರ್‌ ನಟ ಜೂನಿಯರ್‌ ಎನ್‌ಟಿಆರ್‌ ಅಭಿಮಾನಿಗಳಿಗೆ ಬೇಸರದ ಸುದ್ದಿ ಏನೆಂದರೆ..

ಜೂನಿಯರ್‌ ಎನ್‌ಟಿಆರ್‌ ಜೊತೆಗೆ ಕೈ ಜೋಡಿಸಿರುವ ಪ್ರಶಾಂತ್‌ ನೀಲ್‌, ಈಗಾಗಲೇ ಆ ಸಿನಿಮಾದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಒಂದಷ್ಟು ಭಾಗದ ಶೂಟಿಂಗ್‌ ಸಹ ಮುಗಿಸಿದ್ದಾರೆ. ಇದೀಗ ಇದೇ ಸಿನಿಮಾತಂಡದ ಒಂದು ನಿರ್ಧಾರ ಎನ್‌ಟಿಆರ್‌ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಏನಾಗಿದೆ? ಇಲ್ಲಿದೆ ಮಾಹಿತಿ.

ಟಾಲಿವುಡ್‌ ಸ್ಟಾರ್‌ ನಟ ಜೂನಿಯರ್‌ ಎನ್‌ಟಿಆರ್‌ ಅಭಿಮಾನಿಗಳಿಗೆ ಬೇಸರದ ಸುದ್ದಿ ಏನೆಂದರೆ..
ಟಾಲಿವುಡ್‌ ಸ್ಟಾರ್‌ ನಟ ಜೂನಿಯರ್‌ ಎನ್‌ಟಿಆರ್‌ ಅಭಿಮಾನಿಗಳಿಗೆ ಬೇಸರದ ಸುದ್ದಿ ಏನೆಂದರೆ..

ಟಾಲಿವುಡ್‌ ಸ್ಟಾರ್‌ ನಟ ಜೂನಿಯರ್‌ ಎನ್‌ಟಿಆರ್‌ ಸದ್ಯ ಹಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಅದರಲ್ಲಿಯೂ ಹೆಚ್ಚು ನಿರೀಕ್ಷೆ ಹುಟ್ಟುಹಾಕಿದ ಸಿನಿಮಾ ಎಂದರೆ ಅದು ಪ್ರಶಾಂತ್‌ ನೀಲ್‌ ಜತೆಗಿನ ಚಿತ್ರ. ʻಕೆಜಿಎಫ್‌ʼ, ʻಸಲಾರ್‌ʼ ಸಿನಿಮಾ ಬಳಿಕ ಜೂನಿಯರ್‌ ಎನ್‌ಟಿಆರ್‌ ಜೊತೆಗೆ ಕೈ ಜೋಡಿಸಿರುವ ನೀಲ್‌, ಈಗಾಗಲೇ ಈ ಸಿನಿಮಾದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಒಂದಷ್ಟು ಭಾಗದ ಶೂಟಿಂಗ್‌ ಸಹ ಮುಗಿಸಿದ್ದಾರೆ. ಇದೀಗ ಇದೇ ಸಿನಿಮಾತಂಡದ ಒಂದು ನಿರ್ಧಾರ ಎನ್‌ಟಿಆರ್‌ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಏನಾಗಿದೆ? ಇಲ್ಲಿದೆ ಮಾಹಿತಿ.

ಮೇ 20ರಂದು ಜೂನಿಯರ್‌ ಎನ್‌ಟಿಆರ್‌ ಬರ್ತ್‌ಡೇ ಆ ನಿಮಿತ್ತ ಪ್ರಶಾಂತ್‌ ನೀಲ್‌ ನಿರ್ದೇಶನದ ಸಿನಿಮಾದಿಂದ ಬಿಗ್‌ ಸರ್ಪ್ರೈಸ್‌ ಸಿಗಬಹುದು ಎಂದು ಅಭಿಮಾನಿಗಳು ಕಾದಿದ್ದರು. ಆದರೆ, ʻವಾರ್‌ 2ʼ ಸಿನಿಮಾದಿಂದ ಅಪ್‌ಡೇಟ್‌ ಬರುತ್ತಿರುವ ಹಿನ್ನೆಲೆಯಲ್ಲಿ, ನಮ್ಮ ಸಿನಿಮಾದ ಗ್ಲಿಂಪ್ಸ್‌ ಮುಂದೂಡುತ್ತಿದ್ದೇವೆ ಎಂದು ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್‌ ಮತ್ತು ಎನ್‌ಟಿಆರ್‌ ಆರ್ಟ್ಸ್‌ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದೆ. ಮುಂದಿನ ದಿನಗಳಲ್ಲಿ ಒಂದೊಳ್ಳೆಯ ಶುಭ ಸಂದರ್ಭದಲ್ಲಿ ವಿಶೇಷ ಅಪ್‌ಡೇಟ್ ಹಂಚಿಕೊಳ್ಳಲಿದ್ದೇವೆ ಎಂದಿದೆ.

ಸಿಗಲಿದೆ ವಾರ್‌ 2 ಗ್ಲಿಂಪ್ಸ್‌

"ನಮಗೆ ಹುರಿದುಂಬಿಸಲು ಲೆಕ್ಕವಿಲ್ಲದಷ್ಟು ಕಾರಣಗಳನ್ನು ನೀಡಿದ ವ್ಯಕ್ತಿಯನ್ನು ಆಚರಿಸಲು ನೀವು ಎಷ್ಟು ಉತ್ಸುಕರಾಗಿದ್ದೀರಿ ಎಂದು ನಮಗೆ ತಿಳಿದಿದೆ... ವಾರ್‌ 2 ಕಡೆಯಿಂದ ಗ್ಲಿಂಪ್ಸ್‌ ಬಿಡುಗಡೆಯಾಗುತ್ತಿದೆ. ಆ ಗ್ಲಿಂಪ್ಸ್‌ಗೆ ಅವಕಾಶ ನೀಡುವುದು ಉತ್ತಮ ಎಂದು ನಾವು ಭಾವಿಸಿದ್ದೇವೆ. #NTRNeel MASS MISSILE ಗ್ಲಿಂಪ್ಸ್‌ ಶೀಘ್ರದಲ್ಲಿ ನಿಮ್ಮ ಮುಂದೆ ಬರಲಿದೆ. ಈ ವರ್ಷ, ನಾವು ಮ್ಯಾನ್ ಆಫ್ ಮಾಸಸ್, ಎನ್‌ಟಿಆರ್‌ ಅವರ ಹುಟ್ಟುಹಬ್ಬದ ಆಚರಣೆಯನ್ನು ವಾರ್‌ 2 ಚಿತ್ರಕ್ಕಾಗಿ ಅರ್ಪಿಸುತ್ತಿದ್ದೇವೆ." ಎಂದು ಹೇಳಿದೆ.

2026 ಜೂನ್‌ 25ಕ್ಕೆ ತೆರೆಗೆ

ಇನ್ನೂ ಶೀರ್ಷಿಕೆ ಅಂತಿಮವಾಗದ ಪ್ರಶಾಂತ್ ನೀಲ್ ನಿರ್ದೇಶಿಸಿದ ಈ ಆಕ್ಷನ್- ಪ್ಯಾಕ್ಡ್ ಚಿತ್ರವು 2026ರ ಜೂನ್ 25 ರಂದು ಈ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಅಭಿಮಾನಿಗಳು ಚಿತ್ರದ ಆಗಮನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ತೆಲುಗು, ತಮಿಳು, ಹಿಂದಿ, ಕನ್ನಡ, ಮಲಯಾಳಂ ಮತ್ತು ಇತರ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.

ಈ ಚಿತ್ರವನ್ನು ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಾದ ಮೈತ್ರಿ ಮೂವಿ ಮೇಕರ್ಸ್ ಮತ್ತು ಎನ್‌ಟಿಆರ್‌ ಆರ್ಟ್ಸ್ ಬ್ಯಾನರ್‌ ಅಡಿಯಲ್ಲಿ ಕಲ್ಯಾಣ್ ರಾಮ್ ನಂದಮೂರಿ, ನವೀನ್ ಯೆರ್ನೇನಿ, ರವಿಶಂಕರ್ ಯಲಮಂಚಿಲಿ ಮತ್ತು ಹರಿ ಕೃಷ್ಣ ಕೊಸರಾಜು ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಗುಲ್ಶನ್ ಕುಮಾರ್, ಭೂಷಣ್ ಕುಮಾರ್ ಮತ್ತು ಟಿ-ಸೀರೀಸ್ ಫಿಲ್ಮ್ಸ್ ಪ್ರಸ್ತುತಪಡಿಸಿದ್ದಾರೆ. ಭುವನ್ ಗೌಡ ಛಾಯಾಗ್ರಹಣವನ್ನು ನಿರ್ವಹಿಸಿದರೆ, ರವಿ ಬಸ್ರೂರ್ ಸಂಗೀತವಿದೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.