ಜ್ಯೂ ಎನ್‌ಟಿಆರ್ ದೇವರ ಸಿನಿಮಾ ವಿಮರ್ಶೆ: ಪಕ್ಕಾ ಪೈಸಾ ವಸೂಲ್ ಸಿನಿಮಾ, ಆದರೆ ಅದೊಂದೇ ಕಿರಿಕಿರಿ ಎಂದ ಓವರ್‌ಸೀಸ್ ಡಿಸ್ಟ್ರಿಬ್ಯೂಟರ್‌ಗಳು
ಜ್ಯೂ. ಎನ್‌ಟಿಆರ್ ಹಾಗೂ ಜಾಹ್ನವಿ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ದೇವರ ಸಿನಿಮಾ ರಿಲೀಸ್‌ಗೆ ಇನ್ನು 2 ದಿನಗಳಷ್ಟೇ ಬಾಕಿ ಇದೆ. ಚಿತ್ರವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಜ್ಯೂ ಎನ್‌ಟಿಆರ್ ಫ್ಯಾನ್ಸ್ ಕಾಯುತ್ತಿದ್ದಾರೆ. ಈ ನಡುವೆ ಚಿತ್ರದ ಮೊದಲ ವಿಮರ್ಶೆ ಹೊರಬಿದ್ದಿದೆ. ವಿದೇಶದಲ್ಲಿ ಸಿನಿಮಾ ನೋಡಿದ ವಿತರಕರು ವಿಮರ್ಶೆ ನೀಡಿದ್ದಾರೆ.
ಟಾಲಿವುಡ್ ಬಹುನಿರೀಕ್ಷಿತ ಜೂನಿಯರ್ ಎನ್‌ಟಿಆರ್ ಅಭಿನಯದ ಹೈ ವೋಲ್ಟೇಜ್ ಆಕ್ಷನ್ ಥ್ರಿಲ್ಲರ್ ಚಿತ್ರ ದೇವರ ಸೆಪ್ಟೆಂಬರ್ 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕೊರಟಾಲ ಶಿವ ನಿರ್ದೇಶನದ ಈ ಸಿನಿಮಾ ಬಹಳ ಕ್ರೇಜ್ ಸೃಷ್ಟಿಸಿದೆ. ಸಿನಿಮಾ ರಿಲೀಸ್‌ಗೂ ಮುನ್ನವೇ ಸಾಕಷ್ಟು ಲಾಭ ಕೂಡಾ ಮಾಡಿದೆ.
ವಿದೇಶದಲ್ಲಿ ಚಿತ್ರ ನೋಡಿದ ವಿತರಕರು
ಇದು ಎನ್‌ಟಿಆರ್ ವೃತ್ತಿ ಜೀವನದ ಇತಿಹಾಸದಲ್ಲೇ ಅತ್ಯುತ್ತಮ ಚಿತ್ರವಾಗಿ ದಾಖಲೆ ಮಾಡಲಿದೆ ಎನ್ನಲಾಗುತ್ತಿದೆ. ಇದಕ್ಕೂ ಮುನ್ನ ಎನ್‌ಟಿಆರ್ ಸಿನಿಮಾ ಆರ್‌ಆರ್‌ಆರ್ ಬ್ಲಾಕ್ ಬಸ್ಟರ್ ಆಗಿತ್ತು. ಆ ಸಿನಿಮಾ ಮೂಲಕ ಎನ್‌ಟಿಆರ್ ಫ್ಯಾನ್ ಫಾಲೋಯಿಂಗ್ ಹೆಚ್ಚಾಗಿದೆ. ಇತ್ತೀಚೆಗೆ ಚಿತ್ರತಂಡ ಟಾಲಿವುಡ್ ಗಣ್ಯರಿಗಾಗಿ ವಿಶೇಷ ಪ್ರೀಮಿಯರ್ ಶೋ ಏರ್ಪಡಿಸಿತ್ತು. ಸಿನಿಮಾ ನೋಡಿದ ಸ್ಟಾರ್ ನಿರ್ದೇಶಕ ರಾಜಮೌಳಿ ಹಾಗೂ ಇನ್ನಿತರರು ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದೀಗ ವಿದೇಶದಲ್ಲಿ ಚಿತ್ರ ನೋಡಿದ ವಿತರಕರು ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಆಕ್ಷನ್ ದೃಶ್ಯಗಳು ಅದ್ಭುತ
ಓವರ್‌ಸೀಸ್ ಡಿಸ್ಟ್ರಿಬ್ಯೂಟರ್‌ಗಳ ಪ್ರಕಾರ, ದೇವರ ಚಿತ್ರದ ಫಸ್ಟ್ ಹಾಫ್ ಚೆನ್ನಾಗಿದೆ. ಚಿತ್ರದ ಆಕ್ಷನ್ ದೃಶ್ಯಗಳು ಕೂಡಾ ಬಹಳ ಅದ್ಭುತವಾಗಿದೆ ಎಂದು ಹೇಳಿದ್ದಾರೆ. ಸಾಹಸ ದೃಶ್ಯಗಳು ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿವೆ. ಅಲ್ಲದೆ, ಅದಕ್ಕೂ ಮಿಗಿಲಾಗಿ ಸೆಕೆಂಡ್ ಹಾಫ್ ಇನ್ನಷ್ಟು ಚೆನ್ನಾಗಿದೆ. ದೇವರ ಚಿತ್ರ ರಿವರ್ಸ್ ಸ್ಕ್ರೀನ್ ಪ್ಲೇನೊಂದಿಗೆ ಸಾಗಲಿದೆ ಎಂದು ವಿಮರ್ಶಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿತರಕರ ಪ್ರಕಾರ ದೇವರ ಚಿತ್ರಕಥೆಯಲ್ಲಿ ಸ್ವಲ್ಪ ಗೊಂದಲವಾಗುತ್ತದೆ. ಆದರೆ ಕ್ಲೈಮ್ಯಾಕ್ಸ್ ಸ್ಟ್ರಾಂಗ್ ಆಗಿದೆ ಹಾಗೂ ಕೊನೆಯಲ್ಲಿ ಬರುವ ಆಕ್ಷನ್ ಸೀನ್‌ಗಳು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ. ಅನಿರುದ್ಧ್ ರವಿಚಂದರ್ ನೀಡಿರುವ ಬಿಜಿಎಂ ಕೂಡ ಚೆನ್ನಾಗಿದ್ದು ಚಿತ್ರಕ್ಕೆ ಇನ್ನಷ್ಟು ಬೂಸ್ಟ್ ನೀಡಲಿದೆ ಎಂದು ವಿಮರ್ಶೆ ಬರೆದಿದ್ದಾರೆ.
ಬಾಹುಬಲಿ 1ನ್ನು ಹೋಲುವ ದೇವರ ಕ್ಲೈಮಾಕ್ಸ್
ದೇವರ ಚಿತ್ರದಲ್ಲಿ ಎನ್‌ಟಿಆರ್ ಅಭಿನಯ ಮತ್ತು ರತ್ನವೇಲು ಅವರ ಸಿನಿಮಾಟೋಗ್ರಫಿ ಪ್ರಮುಖ ಪ್ಲಸ್ ಪಾಯಿಂಟ್ ಎನ್ನಲಾಗುತ್ತಿದೆ. ಜಾಹ್ನವಿ ಕಪೂರ್ ಚಿತ್ರಕ್ಕೆ ಎಂಟ್ರಿ ಕೊಡುವುದು ಸ್ವಲ್ಪ ತಡವಾಗಲಿದೆ. ಆಚಾರ್ಯ ಚಿತ್ರದಿಂದ ಸೋಲು ಕಂಡಿದ್ದ ಕೊರಟಾಲ ಶಿವ ದೇವರ ಚಿತ್ರದಲ್ಲಿ ಅಭಿಮಾನಿಗಳನ್ನು ಸೆಳೆಯುವ ಹಲವು ಅಂಶಗಳನ್ನು ಅಳವಡಿಸಿದ್ದು ಸಾಮಾನ್ಯ ಪ್ರೇಕ್ಷಕರು ಕೂಡ ಮೆಚ್ಚುವಂತಹ ದೃಶ್ಯಗಳು ದೇವರ ಚಿತ್ರದಲ್ಲದೆಯಂತೆ.
ದೇವರ ಕ್ಲೈಮ್ಯಾಕ್ಸ್ ಬಾಹುಬಲಿ ಭಾಗ 1 ರಂತೆಯೇ ಇರುತ್ತದೆ ಎಂದು ಛಾಯಾಗ್ರಾಹಕ ರತ್ನವೇಲು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ ಎಂಬ ಪ್ರಶ್ನೆ ದೇಶಾದ್ಯಂತ ವೈರಲ್ ಆಗಿದ್ದು ಗೊತ್ತೇ ಇದೆ. ಇದೇ ರೀತಿ ದೇವರ ಕ್ಲೈಮಾಕ್ಸ್ ಕೂಡಾ ಪ್ರಶ್ನೆಯೊಂದಿಗೆ ಎಂಡ್ ಆಗಲಿದೆಯಂತೆ. ದ್ವಿತೀಯಾರ್ಧದಲ್ಲಿ ಜಾಹ್ನವಿ ಕಪೂರ್ ಎಂಟ್ರಿಯಾಗಲಿದೆ ಎಂದು ಸಿನಿಮಾ ನೋಡಿದವರು ಹೇಳಿದ್ದಾರೆ.
ಜಾಹ್ನವಿ ಕಪೂರ್ ಆಕ್ಟಿಂಗ್ ಕಿರಿಕಿರಿ
ಉಮರ್ ಸಂಧು ಕೂಡಾ ಚಿತ್ರದ ಬಗ್ಗೆ ವಿಮರ್ಶೆ ನೀಡಿದ್ದು ಸೆಕೆಂಡ್ ಆಫ್‌ನಲ್ಲಿ ದೇವರ ಆಕ್ಷನ್ ಸ್ಟಂಟ್‌ಗಳು ನೋಡುಗರನ್ನು ಸೆಳೆಯುತ್ತದೆ. ಎನ್‌ಟಿಆರ್ ಅಭಿನಯ್ ಅದ್ಭುತವಾಗಿದೆ. ಸಿನಿಮಾಗೇ ಅವರೇ ದೊಡ್ಡ ಶಕ್ತಿ, ಸೈಫ್ ಅಲಿ ಖಾನ್ ಕೂಡಾ ಓಕೆ, ಆದರೆ ಜಾಹ್ನವಿ ಅಭಿನಯ ಕಿರಿಕಿರಿಯುಂಟು ಮಾಡುತ್ತದೆ. ಇದು ಪಕ್ಕಾ ಪೈಸಾ ವಸೂಲ್ ಸಿನಿಮಾ ಎಂದು ಹೇಳಿ 3.5 ರೇಟಿಂಗ್ ನೀಡಿದ್ದಾರೆ.