18 ಗಂಟೆಗಳಲ್ಲಿ 9 ಮಿಲಿಯನ್‌ ವ್ಯೂವ್ಸ್ ಪಡೆದ ದೇವರ ಟ್ರೇಲರ್‌; ಸಿನಿಮಾ ಯಾರೂ ಮಿಸ್‌ ಮಾಡ್ಕೊಬೇಡಿ ಎಂದ ಫ್ಯಾನ್ಸ್‌-tollywood news positive response for jr ntr starring devara movie trailer got 9 million views in 18 hours rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  18 ಗಂಟೆಗಳಲ್ಲಿ 9 ಮಿಲಿಯನ್‌ ವ್ಯೂವ್ಸ್ ಪಡೆದ ದೇವರ ಟ್ರೇಲರ್‌; ಸಿನಿಮಾ ಯಾರೂ ಮಿಸ್‌ ಮಾಡ್ಕೊಬೇಡಿ ಎಂದ ಫ್ಯಾನ್ಸ್‌

18 ಗಂಟೆಗಳಲ್ಲಿ 9 ಮಿಲಿಯನ್‌ ವ್ಯೂವ್ಸ್ ಪಡೆದ ದೇವರ ಟ್ರೇಲರ್‌; ಸಿನಿಮಾ ಯಾರೂ ಮಿಸ್‌ ಮಾಡ್ಕೊಬೇಡಿ ಎಂದ ಫ್ಯಾನ್ಸ್‌

ತೆಲುಗು ಅಭಿಮಾನಿಗಳು ಬಹಳ ದಿನಗಳಿಂದ ಕಾಯುತಿದ್ದ ದೇವರ ಸಿನಿಮಾ ಟ್ರೇಲರ್‌ ಬಿಡುಗಡೆ ಅಗಿದೆ. ಬಿಡುಗಡೆಯಾಗಿ 18 ಗಂಟೆಗಳಲ್ಲಿ 9 ಮಿಲಿಯನ್‌ಗೂ ಹೆಚ್ಚು ವ್ಯೂವ್ಸ್‌ ಪಡೆದುಕೊಂಡಿದೆ. ಸೆಪ್ಟೆಂಬರ್‌ 27ಕ್ಕೆ ಸಿನಿಮಾ ತೆರೆ ಕಾಣುತ್ತಿದೆ. ಜ್ಯೂ ಎನ್‌ಟಿಆರ್‌, ಸೈಫ್‌ ಅಲಿ ಖಾನ್‌, ಜಾನ್ವಿ ಕಪೂರ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

18 ಗಂಟೆಗಳಲ್ಲಿ 9 ಮಿಲಿಯನ್‌ ವ್ಯೂವ್ಸ್ ಪಡೆದ ದೇವರ ಟ್ರೇಲರ್‌; ಸಿನಿಮಾ ಯಾರೂ ಮಿಸ್‌ ಮಾಡ್ಕೊಬೇಡಿ ಎಂದ ಫ್ಯಾನ್ಸ್‌
18 ಗಂಟೆಗಳಲ್ಲಿ 9 ಮಿಲಿಯನ್‌ ವ್ಯೂವ್ಸ್ ಪಡೆದ ದೇವರ ಟ್ರೇಲರ್‌; ಸಿನಿಮಾ ಯಾರೂ ಮಿಸ್‌ ಮಾಡ್ಕೊಬೇಡಿ ಎಂದ ಫ್ಯಾನ್ಸ್‌ (PC: @DevaraMovie)

ಜ್ಯೂನಿಯರ್‌ ಎನ್‌ಟಿಆರ್‌ ಜಾನ್ವಿ ಕಪೂರ್‌ ಅಭಿನಯದ ಬಹುನಿರೀಕ್ಷಿತ ದೇವರ ಟ್ರೇಲರ್‌ ಬಿಡುಗಡೆ ಆಗಿದೆ. ಸಿನಿಮಾ ಕೂಡಾ ಇದೇ ತಿಂಗಳು ಬಿಡುಗಡೆ ಆಗುತ್ತಿದ್ದು ಈಗಾಗಲೇ ಪ್ರೀ ಬುಕ್ಕಿಂಗ್‌ ಕೂಡಾ ಆರಂಭವಾಗಿದೆ. ಬಿಡುಗಡೆಗೂ ಮುನ್ನವೇ ಸಿನಿಮಾ ದಾಖಲೆ ಬರೆದಿದೆ. ರಿಲೀಸ್‌ ನಂತರ ಈ ಚಿತ್ರ ಆರ್‌ಆರ್‌ಆರ್‌ ಚಿತ್ರದ ದಾಖಲೆಯನ್ನೂ ಮುರಿಯಬಹುದು ಎಂಬ ಮಾತು ಕೇಳಿಬರುತ್ತಿದೆ.

ಮುಂಬೈನಲ್ಲಿ ಬಿಡುಗಡೆಯಾದ ಟ್ರೇಲರ್‌

ಮಂಗಳವಾರ ಸಂಜೆ 5 ಗಂಟೆಗೆ ಚಿತ್ರತಂಡ ಟ್ರೇಲರ್‌ ಬಿಡುಗಡೆ ಮಾಡಿದೆ. ಮುಂಬೈನಲ್ಲಿ ನಡೆದ ಟ್ರೇಲರ್‌ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಬಹುತೇಕ ಎಲ್ಲಾ ಸದಸ್ಯರು ಹಾಜರಿದ್ದರು. ಟ್ರೇಲರ್‌ ಬಿಡುಗಡೆ ಜೊತೆಗೆ ಸಿನಿಮಾ ತಂಡ ಅಧಿಕೃತವಾಗಿ ಪ್ರಚಾರ ಕಾರ್ಯ ಆರಂಭಿಸಿದೆ. ಮುಂಬೈ ನಂತರ ಹೈದರಾಬಾದ್‌, ಚೆನ್ನೈ, ಕೇರಳ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಿಗೆ ದೇವರ ಟೀಮ್‌ ಭೇಟಿ ನೀಡಲಿದ್ದು ಸಿನಿಮಾ ಪರ ಪಬ್ಲಿಸಿಟಿ ಶುರು ಮಾಡಲಿದೆ. ಸಿನಿಮಾ ನೋಡಲು ತೆಲುಗು ಅಭಿಮಾನಿಗಳಷ್ಟೇ ಅಲ್ಲ, ಕನ್ನಡಿಗರೂ ಕಾಯುತ್ತಿದ್ದಾರೆ. ಜ್ಯೂನಿಯರ್‌ ಎನ್‌ಟಿಆರ್‌ ಮೊದಲಿನಿಂದಲೂ ಕರ್ನಾಟಕ ಹಾಗೂ ಇಲ್ಲಿನ ನಟರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು ಅವರ ಸಿನಿಮಾ ನೋಡಲು ಕನ್ನಡ ಸಿನಿಪ್ರಿಯರು ಕೂಡಾ ಆಸಕ್ತಿಯಿಂದ ಇದ್ದಾರೆ.

ಟ್ರೇಲರ್‌ ನೋಡಿ ಸಿನಿಪ್ರಿಯರು ಏನಂದ್ರು?

ಇನ್ನು ನಿನ್ನೆ ಬಿಡುಗಡೆಯಾದ ಟ್ರೇಲರ್‌ 18 ಗಂಟೆಗಳಲ್ಲಿ 9 ಮಿಲಿಯನ್‌ಗೂ ಹೆಚ್ಚು ವ್ಯೂವ್ಸ್‌ ಪಡೆದುಕೊಂಡಿದೆ. ಅದ್ಭುತ ದೃಶ್ಯಾವಳಿಗಳು, ಮಾಸ್ ಡೈಲಾಗ್‌, ವಿಎಫ್‌ಎಕ್ಸ್‌, ದೇವರ ಸಿನಿಮಾ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಅಭಿಮಾನಿಗಳಿಗೆ ಈ ಸಿನಿಮಾ ಕಲೆಯ ಮೇಲಿನ ದಾಹವನ್ನು ಖಂಡಿತ ತೀರಿಸುತ್ತದೆ ಎಂದು ಅಭಿಮಾನಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಟ್ರೇಲರ್‌ ಈ ರೇಂಜ್‌ಗೆ ಇರುತ್ತದೆ ಎಂದು ನಾನು ಊಹಿಸಿರಲೇ ಇಲ್ಲ ಎಂದು ಮತ್ತೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತೆಲುಗು ಚಿತ್ರರಂಗದ ಎಲ್ಲಾ ದಾಖಲೆಗಳನ್ನೂ ಉಡೀಸ್‌ ಮಾಡುವುದು ಗ್ಯಾರಂಟಿ, ನಿಜಕ್ಕೂ ಟ್ರೇಲರ್‌ ಬೇರೆ ಲೆವೆಲ್‌, ಸಿನಿಮಾವನ್ನು ಮಾತ್ರ ಯಾರೂ ಮಿಸ್‌ ಮಾಡಿಕೊಳ್ಳಲೇಬೇಡಿ ಎಂದು ಅಭಿಮಾನಿಗಳು, ದೇವರ ಟ್ರೇಲರ್‌ ಬಗ್ಗೆ ಪ್ರತಿಕ್ರಿಯಿಸುತ್ತಿದ್ದಾರೆ.

2 ಭಾಗಗಳಲ್ಲಿ ತಯಾರಾಗುತ್ತಿರುವ ಸಿನಿಮಾ

ದೇವರ ಸಿನಿಮಾ 2 ಭಾಗಗಳಾಗಿ ತಯಾರಾಗುತ್ತಿದೆ. ಮೊದಲ ಭಾಗ ಸೆಪ್ಟೆಂಬರ್‌ 27 ರಂದು ತೆರೆ ಕಾಣುತ್ತಿದೆ. ಚಿತ್ರವನ್ನು ಯುವಸುಧಾ ಆರ್ಟ್ಸ್‌, ಎನ್‌ಟಿಆರ್‌ ಆರ್ಟ್ಸ್‌ ಬ್ಯಾನರ್‌ ಅಡಿ, ಸುಧಾಕರ್‌ ಮಿಕ್ಕಿಲಿನೇನಿ, ಕೋಸರಾಜು ಹರಿಕೃಷ್ಣ , ನಂದಮುರಿ ಕಲ್ಯಾಣ್‌ ರಾಮ್‌ ಜೊತೆ ಸೇರಿ ನಿರ್ಮಿಸಿದ್ದಾರೆ. ಕೊರಟಾಲ ಶಿವ, ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಅನಿರುದ್ಧ್‌ ರವಿಚಂದರ್‌ ಸಂಗೀತ ನೀಡಿದ್ದಾರೆ. ಜ್ಯೂ ಎನ್‌ಟಿಆರ್‌, ಸೈಫ್‌ ಅಲಿ ಖಾನ್‌, ಜಾನ್ವಿ ಕಪೂರ್‌ ಜೊತೆಗೆ ಚಿತ್ರದಲ್ಲಿ ಪ್ರಕಾಶ್‌ ರಾಜ್‌, ಶ್ರೀಕಾಂತ್‌, ಮುರಳಿ ಶರ್ಮಾ ಹಾಗೂ ಇನ್ನಿತರರು ನಟಿಸಿದ್ದಾರೆ. ಕರ್ನಾಟಕದಲ್ಲಿ ಕೆವಿಎನ್‌ ಪ್ರೊಡಕ್ಷನ್ಸ್‌ ಈ ಸಿನಿಮಾವನ್ನು ಹಂಚಿಕೆ ಮಾಡುತ್ತಿದೆ. ಚಿತ್ರದಲ್ಲಿ ಜಾನ್ವಿ ಕಪೂರ್‌ ಹಳ್ಳಿ ಹುಡುಗಿಯಾಗಿ ಗಮನ ಸೆಳೆದಿದ್ದಾರೆ. ಸೈಫ್‌ ಅಲಿ ಖಾನ್‌, ಜ್ಯೂ ಎನ್‌ಟಿಆರ್‌ ವಿರುದ್ದ ಖಳನಾಯಕನಾಗಿ ನಟಿಸಿದ್ದಾರೆ.

mysore-dasara_Entry_Point