ಕನ್ನಡ ಸುದ್ದಿ  /  ಮನರಂಜನೆ  /  ಮೊದಲ ದಿನ ಅಬ್ಬರಿಸಿ ಬೊಬ್ಬಿರಿದ ಕಲ್ಕಿ ಕಲೆಕ್ಷನ್‌ನಲ್ಲಿ ಶೇ. 50 ಕುಸಿತ! ಎರಡನೇ ದಿನ ಪ್ರಭಾಸ್‌ ಸಿನಿಮಾ ಗಳಿಸಿದ್ದೆಷ್ಟು?

ಮೊದಲ ದಿನ ಅಬ್ಬರಿಸಿ ಬೊಬ್ಬಿರಿದ ಕಲ್ಕಿ ಕಲೆಕ್ಷನ್‌ನಲ್ಲಿ ಶೇ. 50 ಕುಸಿತ! ಎರಡನೇ ದಿನ ಪ್ರಭಾಸ್‌ ಸಿನಿಮಾ ಗಳಿಸಿದ್ದೆಷ್ಟು?

ಮೊದಲ ದಿನ ಅಬ್ಬರಿಸಿ ಬೊಬ್ಬಿರಿದಿದ್ದ ಪ್ರಭಾಸ್‌ ನಟನೆಯ ಕಲ್ಕಿ 2898 ಎಡಿ ಸಿನಿಮಾ, ಎರಡನೇ ದಿನ (ಶುಕ್ರವಾರ) ಅದ್ಯಾಕೋ ಕೊಂಚ ಮಂಕಾಗಿದೆ. ಆದರೆ, ವಾರಾಂತ್ಯ ಶನಿವಾರ ಮತ್ತು ಭಾನುವಾರ ಗಳಿಕೆಯ ಪ್ರಮಾಣ ಹೆಚ್ಚಾಗಲಿದೆ.

ಮೊದಲ ದಿನ ಅಬ್ಬರಿಸಿ ಬೊಬ್ಬಿರಿದ ಕಲ್ಕಿ ಕಲೆಕ್ಷನ್‌ನಲ್ಲಿ ಶೇ. 50 ಕುಸಿತ! ಎರಡನೇ ದಿನ ಪ್ರಭಾಸ್‌ ಸಿನಿಮಾ ಗಳಿಸಿದ್ದೆಷ್ಟು?
ಮೊದಲ ದಿನ ಅಬ್ಬರಿಸಿ ಬೊಬ್ಬಿರಿದ ಕಲ್ಕಿ ಕಲೆಕ್ಷನ್‌ನಲ್ಲಿ ಶೇ. 50 ಕುಸಿತ! ಎರಡನೇ ದಿನ ಪ್ರಭಾಸ್‌ ಸಿನಿಮಾ ಗಳಿಸಿದ್ದೆಷ್ಟು?

Kalki 2898 AD Box Office Collection Day 2: ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ಅಮಿತಾಬ್ ಬಚ್ಚನ್ ಅಭಿನಯದ 'ಕಲ್ಕಿ 2898 AD' ಚಿತ್ರ ಜೂನ್ 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಪಾಸಿಟಿವ್‌ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದೆ ಈ ಚಿತ್ರ. ಪೌರಾಣಿಕ ವೈಜ್ಞಾನಿಕ ಕಾಲ್ಪನಿಕ ಶೈಲಿಯ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿಯೂ ವಿಜಯಪತಾಕೆಯನ್ನೇ ಹಾರಿಸಿದೆ. ಮೊದಲ ದಿನವೇ ದೊಡ್ಡ ಮೊತ್ತವನ್ನು ಕಲೆಹಾಕುವ ಮೂಲಕ ಹೊಸ ದಾಖಲೆ ಬರೆದಿದೆ ಕಲ್ಕಿ. ಈ ಮೂಲಕ ಬಾಹುಬಲಿ ಬಳಿಕ ಪ್ರಭಾಸ್‌ ವೃತ್ತಿಜೀವನದ ಎರಡನೇ ಅತಿದೊಡ್ಡ ಓಪನಿಂಗ್ ಪಡೆದ ಚಿತ್ರವಾಗಿ ಕಲ್ಕಿ ಹೊರಹೊಮ್ಮಿದೆ. ಹಾಗಾದರೆ, ಎರಡನೇ ದಿನ ಈ ಸಿನಿಮಾ ಗಳಿಸಿದ್ದೆಷ್ಟು? 

ನಿರ್ದೇಶಕ ನಾಗ್ ಅಶ್ವಿನ್ ಅಭಿನಯದ ‘ಕಲ್ಕಿ 2898 ಎಡಿ’ ಚಿತ್ರ ದೇಶಾದ್ಯಂತ ಮಾತ್ರವಲ್ಲದೆ ವಿದೇಶಗಳಲ್ಲೂ ಸದ್ದು ಮಾಡುತ್ತಿದೆ. ವಿಶಿಷ್ಟ ಸೆಟ್‌ಗಳು ಮತ್ತು ವಿಎಫ್‌ಎಕ್ಸ್‌ನಿಂದಲೇ ಪ್ರೇಕ್ಷಕರ ಹೃದಯವನ್ನು ಗೆದ್ದಿದೆ. ಎರಡನೇ ದಿನವಾದ ಶುಕ್ರವಾರ ಈ ಚಿತ್ರವೂ ದೊಡ್ಡ ಮಟ್ಟದಲ್ಲಿಯೇ ಹೆಜ್ಜೆ ಇರಿಸಿದೆ. ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ವೇಗವಾಗಿ ಓಡುತ್ತಿದ್ದು, ಇದೀಗ ಕೇವಲ ಎರಡೇ ದಿನಗಳಲ್ಲಿ 150 ಕೋಟಿ ರುಪಾಯಿ (ಭಾರತದಾದ್ಯಂತ) ಗಡಿ  ದಾಟಲು ಇನ್ನು ಕೆಲವೇ ಹೆಜ್ಜೆಗಳು ಬಾಕಿ ಇವೆ.

ಟ್ರೆಂಡಿಂಗ್​ ಸುದ್ದಿ

ಕಲೆಕ್ಷನ್‌ನಲ್ಲಿ ಶೇ. 50 ಕುಸಿತ ಕಂಡ ಕಲ್ಕಿ

ಪ್ರಭಾಸ್ ಅಭಿನಯದ 'ಕಲ್ಕಿ' ಮೊದಲ ದಿನವೇ 191 ಕೋಟಿ ರೂಪಾಯಿ ಗಳಿಕೆಯೊಂದಿಗೆ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ. ದೇಶಾದ್ಯಂತ ಲೆಕ್ಕಹಾಕಿದರೆ 95.3 ಕೋಟಿ ರೂಪಾಯಿ ವ್ಯವಹಾರ ನಡೆಸಿತ್ತು ಈ ಸಿನಿಮಾ. ಇದರಲ್ಲಿ ತೆಲುಗಿನಿಂದ ಅತಿ ಹೆಚ್ಚು ಗಳಿಕೆ ಅಂದರೆ 65.8 ಕೋಟಿ ರೂ ಹರಿದು ಬಂದಿದೆ. ಹಿಂದಿಯಲ್ಲಿ 22.5 ಕೋಟಿ ಬಿಜಿನೆಸ್‌ ಮಾಡಿದೆ. ಬೇರೆ ಭಾಷೆಗಳ ಬಗ್ಗೆ ಹೇಳುವುದಾದರೆ ತಮಿಳಿನಲ್ಲಿ 4.5 ಕೋಟಿ, ಕನ್ನಡದಲ್ಲಿ 30 ಲಕ್ಷ ಮತ್ತು ಮಲಯಾಳಂನಲ್ಲಿ 2.2 ಕೋಟಿ ಗಳಿಸಿದೆ. ಎರಡನೇ ದಿನದ ಗಳಿಕೆ ನೋಡುವುದಾದರೆ, ಸಕ್ನಿಲ್ಕ್ ವರದಿ ಪ್ರಕಾರ ಶುಕ್ರವಾರ 54 ಕೋಟಿ ಕಲೆಕ್ಷನ್ ಮಾಡಿದೆ ಕಲ್ಕಿ ಸಿನಿಮಾ. ತೆಲುಗಿನಲ್ಲಿ 25.65 ಕೋಟಿ, ತಮಿಳಿನಲ್ಲಿ 3.5 ಕೋಟಿ, ಹಿಂದಿಯಲ್ಲಿ 22.5 ಕೋಟಿ, ಮಲಯಾಳಂನಲ್ಲಿ 2 ಕೋಟಿ, ಕನ್ನಡದಲ್ಲಿ 35 ಲಕ್ಷ ರೂಪಾಯಿ ವ್ಯವಹಾರ ಮಾಡಿದೆ.

ದಾಖಲೆ ಸೃಷ್ಟಿ

ಪ್ರಭಾಸ್ ಅಭಿನಯದ 'ಕಲ್ಕಿ 2898 ಎಡಿ' ಚಿತ್ರದ ಗಳಿಕೆಯಲ್ಲಿ ಎರಡನೇ ದಿನ ಶೇ 50ರಷ್ಟು ಕುಸಿತ ಕಂಡಿದ್ದರೂ, ಇನ್ನೂ ಹಲವು ದೊಡ್ಡ ಚಿತ್ರಗಳ ದಾಖಲೆಗಳನ್ನು ಚಿತ್ರ ಮುರಿದಿದೆ. ‘ಕೆಜಿಎಫ್ 2’ (46.79 ಕೋಟಿ), ‘ಜವಾನ್’ (46.23 ಕೋಟಿ), ‘ಗದರ್ 2’ (43.08), ‘ಬಾಹುಬಲಿ 2’ (40.5 ಕೋಟಿ) ಮತ್ತು ‘ಫೈಟರ್’ ಚಿತ್ರಗಳನ್ನು ಹಿಂದಿಕ್ಕಿ ಎರಡನೇ ದಿನವೇ ವಿಶ್ವದಾದ್ಯಂತ 50 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ.

8500 ಸ್ಕ್ರೀನ್ ಗಳಲ್ಲಿ 'ಕಲ್ಕಿ' ಬಿಡುಗಡೆ

ಪ್ರಭಾಸ್ ಅಭಿನಯದ 'ಕಲ್ಕಿ' ಸಿನಿಮಾ ಒಟ್ಟು 8500 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದೆ ಎಂದು ಹೇಳಲಾಗುತ್ತಿದೆ. ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಕಲ್ಕಿ ಸಿನಿಮಾ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಬರೋಬ್ಬರಿ 600 ಕೋಟಿ ಖರ್ಚು ಮಾಡಲಾಗಿದೆ. ಶುಕ್ರವಾರ ಕಲೆಕ್ಷನ್‌ನಲ್ಲಿ ಕುಸಿತ ಕಂಡುಬಂದರೂ, ವಾರಾಂತ್ಯ ಶನಿವಾರ ಮತ್ತು ಭಾನುವಾರದ ಲಾಭವನ್ನು ಕಲ್ಕಿ ಚಿತ್ರ ಪಡೆಯಲಿದ್ದು, ಹಲವು ದಾಖಲೆಗಳನ್ನು ಮುರಿಯಬಹುದು ಎಂದು ಬಾಕ್ಸ್‌ ಆಫೀಸ್‌ ಪಂಡಿತರು ಊಹಿಸಿದ್ದಾರೆ.

ಸ್ಟಾರ್‌ ತಾರಾಬಳಗ

ಕಲ್ಕಿ 2898 AD ಚಿತ್ರದ ತಾರಾಬಳಗವೇ ತುಂಬಾ ಬಲಿಷ್ಠವಾಗಿದೆ. ಅದು ಕೂಡ ಚಿತ್ರಕ್ಕೆ ಲಾಭ ತಂದುಕೊಡುತ್ತಿದೆ . ಪ್ರಭಾಸ್, ಅಮಿತಾಬ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ಜೊತೆಗೆ, ಕಮಲ್ ಹಾಸನ್, ದಿಶಾ ಪಟಾನಿ, ಶಾಶ್ವತ್ ಚಟರ್ಜಿ ಮತ್ತು ಕೀರ್ತಿ ಸುರೇಶ್ ಕೂಡ ನಟಿಸಿದ್ದಾರೆ. ಅದೇ ಸಮಯದಲ್ಲಿ, ಅನೇಕ ಕಲಾವಿದರು ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಮೃಣಾಲ್ ಠಾಕೂರ್, ವಿಜಯ್ ದೇವರಕೊಂಡ, ದುಲ್ಕರ್ ಸಲ್ಮಾನ್, ರಾಮ್ ಗೋಪಾಲ್ ವರ್ಮಾ ಮತ್ತು ಎಸ್ಎಸ್ ರಾಜಮೌಳಿಯಂತಹ ಕಲಾವಿದರ ಝಲಕ್‌ ಚಿತ್ರದಲ್ಲಿದೆ.