ಕನ್ನಡ ಸುದ್ದಿ  /  ಮನರಂಜನೆ  /  Kalki 2898 Ad: ಪ್ರಭಾಸ್‌- ದೀಪಿಕಾ ಪಡುಕೋಣೆ ನಟನೆಯ ಕಲ್ಕಿ 2898 ಎಡಿ ಸಿನಿಮಾ ಬಿಡುಗಡೆಗೆ ದಿನಗಣನೆ; ಜೂನ್‌ 10ಕ್ಕೆ ಟ್ರೇಲರ್‌ ರಿಲೀಸ್‌

Kalki 2898 AD: ಪ್ರಭಾಸ್‌- ದೀಪಿಕಾ ಪಡುಕೋಣೆ ನಟನೆಯ ಕಲ್ಕಿ 2898 ಎಡಿ ಸಿನಿಮಾ ಬಿಡುಗಡೆಗೆ ದಿನಗಣನೆ; ಜೂನ್‌ 10ಕ್ಕೆ ಟ್ರೇಲರ್‌ ರಿಲೀಸ್‌

Kalki 2898 AD Movie: ಪ್ರಭಾಸ್‌ ಮತ್ತು ದೀಪಿಕಾ ಪಡುಕೋಣೆ ನಟನೆಯ ಕಲ್ಕಿ ಸಿನಿಮಾ ಇದೇ ಜೂನ್‌ 27ರಂದು ಬಿಡುಗಡೆಯಾಗಲಿದೆ. ಇದೇ ಜೂನ್‌ 10ರಂದು ಕಲ್ಕಿ 2898 ಎಡಿ ಸಿನಿಮಾದ ಟ್ರೇಲರ್‌ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್‌ ಆಗಲಿದೆ.

Kalki 2898 AD is directed by Nag Ashwin.
Kalki 2898 AD is directed by Nag Ashwin.

ಬೆಂಗಳೂರು: ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಬಹುನಿರೀಕ್ಷಿತ ಸಿನಿಮಾ ಕಲ್ಕಿ 2898 ಎಡಿ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಸಿನಿಮಾ ನೋಡಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ವೈಜ್ಞಾನಿಕ ಮಹಾಕಾವ್ಯವೆಂದು ಪ್ರಚಾರ ಪಡೆಯುತ್ತಿರುವ ಈ ಸಿನಿಮಾದ ಟ್ರೇಲರ್‌ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಪ್ರಕಟಿಸಿದೆ. ಇದರಿಂದ ಪ್ರಭಾಸ್‌ ಅಭಿಮಾನಿಗಳಿಗೆ ಕಲ್ಕಿಯ ಅವತಾರವನ್ನು ಕಣ್ತುಂಬಿಕೊಳ್ಳಲು ಕಾತರ ಹೆಚ್ಚಾಗಿದೆ. ಬುಜ್ಜಿ ಮತ್ತು ಭೈರವನ ನೋಡಲು ಕಾಯುತ್ತಿದ್ದಾರೆ. ಇದೀಗ ಚಿತ್ರತಂಡ ಹೊಸ ಪೋಸ್ಟರ್‌ ಬಿಡುಗಡೆ ಮಾಡಿದ್ದು, ಅದರಲ್ಲಿ ಕಲ್ಕಿ ಸಿನಿಮಾದ ಟ್ರೇಲರ್‌ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಜೂನ್‌ 10ರಂದು ಕಲ್ಕಿ 2898 ಎಡಿ ಟ್ರೇಲರ್‌ ಬಿಡುಗಡೆ

ಕಲ್ಕಿ 2898 ಎಡಿ ಸಿನಿಮಾದ ಬಹುನಿರೀಕ್ಷಿತ ಟ್ರೇಲರ್‌ ಇದೇ ಜೂನ್‌ 10ರಂದು ಕನ್ನಡ, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಪ್ರಭಾಷ್‌ ಸೋಷಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. "ಭವಿಷ್ಯವನ್ನುಅನಾವರಣಗೊಳಿಸುತ್ತಿದ್ದೇನೆ. ಜೂನ್‌ 10ರಂದು #Kalki2898AD ಟ್ರೇಲರ್‌ ಬಿಡುಗಡೆಯಾಗಲಿದೆ" ಎಂದು ಅವರು ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಪೋಸ್ಟ್‌ ಮಾಡಿದ್ದಾರೆ. ಜತೆಗೆ ಭೈರವನ ಹೊಸ ಲುಕ್‌ನ ಪೋಸ್ಟರ್‌ ಹಂಚಿಕೊಂಡಿದ್ದಾರೆ.

ಪ್ರಭಾಸ್‌ ಹಂಚಿಕೊಂಡಿರುವ ಪೋಸ್ಟರ್‌ನಲ್ಲಿ ಭೈರವ (ಪ್ರಭಾಸ್)‌ ಮರಳ ದಿಬ್ಬದ ಮೇಲೆ ನಿಂತಿದ್ದಾನೆ. ಹಿನ್ನೆಲೆಯಲ್ಲಿ ಅವರ ಭವಿಷ್ಯದ ಹಳ್ಳಿ ಕಾಣಿಸುತ್ತದೆ. ಕಾಂಪ್ಲೆಕ್ಸ್‌ ಎಂಬ ಹೊಸ ಸ್ಥಳವೂ ಕಾಣಿಸುತ್ತದೆ. ದೂರದ ಕಟ್ಟಡದಲ್ಲಿ ಆಲ್‌ಮೋಸ್ಟ್‌ ರಿಯಲ್‌ ಲಸ್ಸಿ ಎಂಬ ಅಂಗಡಿ ಹೆಸರು ಬೆಳಕಿನಲ್ಲಿ ಕಾಣಿಸುತ್ತದೆ. "ಇನ್ನು ಕಾಯಲು ಸಾಧ್ಯವಿಲ್ಲ" "ಬೇಗ ಟ್ರೇಲರ್‌ ಬರಲಿ" "ಇನ್ನೂ ಕೆಲವು ದಿನ ಕಾಯಬೇಕೆ" ಎಂದು ಅಭಿಮಾನಿಗಳು ಪ್ರಭಾಸ್‌ ಪೋಸ್ಟ್‌ಗೆ ಕಾಮೆಂಟ್‌ ನೀಡಿದ್ದಾರೆ.

ಇತ್ತೀಚೆಗೆ ಪ್ರಭಾಸ್‌ ಕಲ್ಕಿ ಸಿನಿಮಾವನ್ನು ಅಂತಾರಾಷ್ಟ್ರೀಯ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿದೆ ಎಂದು ಹೇಳಿದ್ದರು. "ಇಡೀ ಚಿತ್ರವನ್ನು ಅಂತಾರಾಷ್ಟ್ರೀಯ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿದೆ. ಇದೇ ಕಾರಣಕ್ಕೆ ಇದು ಅತ್ಯಧಿಕ ಬಜೆಟ್‌ನ ಸಿನಿಮಾವಾಗಿದೆ. ನಮ್ಮ ದೇಶ ಅತ್ಯುತ್ತಮ ನಟರನ್ನು ಹೊಂದಿದ್ದೇವೆ. ಜನರು ನನ್ನನ್ನು ಪ್ಯಾನ್‌ ಇಂಡಿಯಾ ಸ್ಟಾರ್‌ ಎಂದು ಕರೆಯುತ್ತಾರೆ. ನನಗೆ ಅದು ಇಷ್ಟವಿಲ್ಲ. ದೇಶದ ಎಲ್ಲಾ ಜನರು ನನ್ನನ್ನು ಇಷ್ಟಪಡುತ್ತಾರೆ ಎಂದು ಯೋಚಿಸುವುದು ಉತ್ತಮ" ಎಂದು ಅವರು ಹೇಳಿದ್ದಾರೆ.

ಕಲ್ಕಿ 2898 ಎಡಿ ಸಿನಿಮಾವು ಭವಿಷ್ಯದಲ್ಲಿ ನಡೆಯುವ ಪುರಾಣ ಪ್ರೇರಿತ ವೈಜ್ಞಾನಿಕ ಕಥಾಹಂದರವನ್ನು ಹೊಂದಿದೆ. 2020ರಲ್ಲಿ ಪ್ರಾಜೆಕ್ಟ್‌ ಕೆ ಹೆಸರಿನಲ್ಲಿ ಇದನ್ನು ಆರಂಭಿಸಲಾಗಿತ್ತು. ಚಿತ್ರದ ಕಥೆ ರಹಸ್ಯವಾಗಿದ್ದರೂ ಅಮಿತಾಬ್‌ ಬಚ್ಚನ್‌ ಅಶ್ವತ್ಥಾಮನ ಪಾತ್ರದಲ್ಲಿ ನಟಿಸಿರುವುದನ್ನು ಇತ್ತೀಚೆಗೆ ಬಹಿರಂಗಪಡಿಸಲಾಗಿತ್ತು.

ಜೂನ್‌ 27ರಂದು ಕಲ್ಕಿ 2898 ಎಡಿ ಸಿನಿಮಾ ಬಿಡುಗಡೆ

ದೇಶ-ವಿದೇಶದ ಚಿತ್ರಮಂದಿರಗಳಲ್ಲಿ ಕಲ್ಕಿ 2898 ಎಡಿ ಸಿನಿಮಾವು ಜೂನ್‌ 27ರಂದು ಬಿಡುಗಡೆಯಾಗಲಿದೆ. ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಮತ್ತು ದಿಶಾ ಪಟಾನಿ ನಟಿಸಿರುವ ಈ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

ಟಿ20 ವರ್ಲ್ಡ್‌ಕಪ್ 2024