ಕನ್ನಡ ಸುದ್ದಿ  /  ಮನರಂಜನೆ  /  Kalki 2898 Ad Public Review: ಹೇಗಿದೆ ಕಲ್ಕಿ 2898 ಎಡಿ? ಬೆಳ್ಳಂಬೆಳಗ್ಗೆ ಥಿಯೇಟರ್‌ಗೆ ಓಡಿ ಸಿನಿಮಾ ನೋಡಿದವರ ಅಭಿಪ್ರಾಯ ಹೀಗಿದೆ ನೋಡಿ

Kalki 2898 AD Public Review: ಹೇಗಿದೆ ಕಲ್ಕಿ 2898 ಎಡಿ? ಬೆಳ್ಳಂಬೆಳಗ್ಗೆ ಥಿಯೇಟರ್‌ಗೆ ಓಡಿ ಸಿನಿಮಾ ನೋಡಿದವರ ಅಭಿಪ್ರಾಯ ಹೀಗಿದೆ ನೋಡಿ

Kalki 2898 AD Public Review in Kannada: ಪ್ರಭಾಸ್‌-ದೀಪಿಕಾ ಪಡುಕೋಣೆ, ಅಮಿತಾಬ್‌ ಬಚ್ಚನ್‌, ಕಮಲ್‌ ಹಾಸನ್‌ ಸೇರಿದಂತೆ ಪ್ರಮುಖ ತಾರಾಗಣದ ಕಲ್ಕಿ 2898 ಎಡಿ ಸಿನಿಮಾ ದೇಶಾದ್ಯಂತ ಇಂದು ಮುಂಜಾನೆ 5 ಗಂಟೆಯಿಂದಲೇ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದ ಕುರಿತು ಜನರ ಟ್ವಿಟ್ಟರ್‌ ರಿವ್ಯೂ (ಪಬ್ಲಿಕ್‌ ರಿವ್ಯೂ) ಹೇಗಿದೆ ಎಂದು ತಿಳಿದುಕೊಳ್ಳೋಣ.

ಕಲ್ಕಿ 2898  ಎಡಿ ಸಿನಿಮಾದ ಟ್ವಿಟ್ಟರ್‌ ರಿವ್ಯೂ
ಕಲ್ಕಿ 2898 ಎಡಿ ಸಿನಿಮಾದ ಟ್ವಿಟ್ಟರ್‌ ರಿವ್ಯೂ

Kalki 2898 AD Public Review in Kannada: ಪ್ರಭಾಸ್‌- ದೀಪಿಕಾ ಪಡುಕೋಣೆ ನಟನೆಯ ಕಲ್ಕಿ 2898 ಎಡಿ ಸಿನಿಮಾ ಇಂದು (ಜೂನ್‌ 27) ಬಿಡುಗಡೆಯಾಗಿದೆ. ಕೆಲವು ಥಿಯೇಟರ್‌ಗಳಲ್ಲಿ ಈ ಚಿತ್ರದ ಪ್ರದರ್ಶನ ಬೆಳಗ್ಗೆ 5 ಗಂಟೆಯಿಂದಲೇ ಆರಂಭವಾಗಿದೆ. ಚಿತ್ರ ನೋಡುತ್ತ ಸಾಕಷ್ಟು ಜನರು ಟ್ವಿಟ್ಟರ್‌ಗಳಲ್ಲಿ ತಮ್ಮ ಅಭಿಪ್ರಾಯ ದಾಖಲಿಸುತ್ತಿದ್ದಾರೆ. ಬೆಳಗ್ಗಿನ ಸಿಹಿ ನಿದ್ದೆಗೆ ಟಾಟಾ ಹೇಳಿರುವ ಪ್ರಭಾಸ್‌ ಅಭಿಮಾನಿಗಳು 5 ಗಂಟೆಗೆ ಮೊದಲೇ ಥಿಯೇಟರ್‌ ತಲುಪಿದ್ದಾರೆ. ಕೆಲವು ಕಡೆ ಇದಕ್ಕೂ ಮೊದಲೇ ಪ್ರದರ್ಶನ ನಡೆದಿದೆ ಎನ್ನಲಾಗಿದೆ. ಚಿತ್ರದ ಮೊದಲಾರ್ಧವು ಕೊಂಚ ನಿಧಾನಗತಿಯಾಗಿದ್ದು, ಏನಿದು ಕಥೆ ಎಂದು ಪ್ರೇಕ್ಷಕರಿಗೆ ತಿಳಿಸುವ ಪ್ರಯತ್ನ ಹೆಚ್ಚಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಈ ಚಿತ್ರದ ವಿಷುಯಲ್‌ ಗ್ರಾಫಿಕ್ಸ್‌, ಪ್ರಸ್ತುತ ಪಡಿಸಿರುವ ರೀತಿ ರೋಮಾಂಚನ ಉಂಟು ಮಾಡುತ್ತಿದೆ ಎಂದು ಸಾಕಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಹೆಚ್ಚಿನ ವೀಕ್ಷಕರು "ಅದ್ಭುತ ಸಿನಿಮಾ" ಎಂದು ಷರಾ ಬರೆಯುತ್ತಿದ್ದಾರೆ. ಕಲ್ಕಿ ಚಿತ್ರದಲ್ಲಿ ಅನಿಮೇಷನ್ ಸೂಪರ್ ಎನ್ನುತ್ತಿದ್ದಾರೆ ಪ್ರೇಕ್ಷಕರು. ಪ್ರಭಾಸ್ ಲುಕ್ ಅದ್ಭುತವಾಗಿದ್ದು, ಬುಜ್ಜಿ ಪಾತ್ರ ಚೆನ್ನಾಗಿದೆ ಎನ್ನಲಾಗಿದೆ. "ಇದು ಕಲ್ಕಿ ಅಲ್ಲ ಬುಜ್ಜಿ ಮತ್ತು ಭೈರವ" " ಸೂಪರ್ ಹಿಟ್ ಸಿನಿಮಾ" ಎಂದು ಜೈಕಾರ ಹಾಕುವ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಕಲ್ಕಿ ವಿಮರ್ಶೆ ಓದೋಣ ಬನ್ನಿ.

 

ಟ್ರೆಂಡಿಂಗ್​ ಸುದ್ದಿ

ಆರಂಭದಲ್ಲಿಯೇ ಗೂಸ್‌ ಬಂಪ್ಸ್‌

"ಪ್ರಭಾಸ್ ಅವರ ಸ್ಕ್ರೀನ್ ಪ್ರೆಸೆನ್ಸ್ ಮೈಂಡ್ ಬ್ಲೋವಿಂಗ್ ಆಗಿದೆ. ಸ್ಟೋರಿ ಲೈನ್ ಒರಿಜಿನಲ್ ಅಲ್ಲ. ವಿಎಫ್‌ಎಕ್ಸ್ ಮತ್ತು ಬಿಜಿಎಂ ಅದ್ಭುತವಾಗಿದೆ. ಬ್ಲಾಕ್‌ಬಸ್ಟರ್ ಚಲನಚಿತ್ರ" ಎಂದು ಒಬ್ಬರು ಎಕ್ಸ್‌ನಲ್ಲಿ ವಿಮರ್ಶೆ ಮಾಡಿದ್ದಾರೆ. ಇದಲ್ಲದೆ, ಪ್ರಭಾಸ್‌ ಎಂಟ್ರಿ ದೃಶ್ಯವು ತುಂಬಾ ತೀವ್ರವಾಗಿದೆ. ಅದು ಸುಮಾರು 20 ನಿಮಿಷಗಳ ಕಾಲ ಇದೆ ಮತ್ತು ಗೂಸ್ ಬಂಪ್ಸ್ ನೀಡಿತು" ಎಂದು ಅಭಿಪ್ರಾಯಪಟ್ಟಿದ್ದಾರೆ

"ಕಲ್ಕಿ 2898 ಎಡಿ ಒಂದು ಸರಾಸರಿ ಚಿತ್ರ. ಆದರೆ, ಚಿತ್ರವು ಅತ್ಯುತ್ತಮ ಸಾಹಸ ದೃಶ್ಯಗಳು ಮತ್ತು ವಿಎಫ್‌ಎಕ್ಸ್‌ ಅನ್ನು ಹೊಂದಿದೆ. ಇದು ಖಂಡಿತಾ ಉತ್ತಮ ಬಿಸಿನೆಸ್‌ ಮಾಡಲಿದೆ. ಎಲ್ಲಾ ತಾರೆಯರು ಉತ್ತಮವಾಗಿ ನಟಿಸಿದ್ದಾರೆ. ಅಮಿತಾಬ್ ಬಚ್ಚನ್ ಅವರ ಸಾಹಸ ದೃಶ್ಯಗಳು ಅದ್ಭುತವಾಗಿದೆ. ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಇಷ್ಟವಾಗುತ್ತಾರೆ" ಎಂದು ಇನ್ನೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಪ್ರಭಾಸ್ ಅವರ ಲುಕ್ ಚೆನ್ನಾಗಿದ್ದು, ಪ್ರಭಾಸ್ ಅಭಿಮಾನಿಗಳಿಗೆ ತೃಪ್ತಿಯಾಗುವ ರೀತಿಯಲ್ಲಿ ಚಿತ್ರವಿದೆ ಎಂದು ಪ್ರೇಕ್ಷಕರೊಬ್ಬರು ಹೇಳಿದ್ದಾರೆ. ದೃಶ್ಯಗಳು ಒಂದು ರೇಂಜ್‌ನಲ್ಲಿವೆ, ನಾಗ್ ಅಶ್ವಿನ್ ನಿರ್ದೇಶನ ಅದ್ಭುತವಾಗಿದೆ, ಇದು ಹಾಲಿವುಡ್ ರೇಂಜ್‌ನಲ್ಲಿದೆ. ಪ್ರತಿ ದೃಶ್ಯ ನಿಮ್ಮ ಮನಸೂರೆಗೊಳಿಸುತ್ತದೆ ಎಂದು ಸಾಕಷ್ಟು ಜನರು ಹೇಳಿದ್ದಾರೆ.

ಅಲ್ಲಲ್ಲಿ ಬೋರಿಂಗ್‌ ದೃಶ್ಯಗಳೂ ಇವೆ

ಕಲ್ಕಿ 2898 ಎಡಿ ಸೂಪರ್ ಹಿಟ್ ಸಿನಿಮಾ. ಪ್ರಭಾಸ್ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಅಮಿತಾಬ್‌ ಬಚ್ಚನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ ಅದ್ಭುತವಾಗಿ ಕಾಣುತ್ತಾರೆ. ಕಮಲ್ ಹಾಸನ್ ಅವರ ನಟನೆ ಫಸ್ಟ್‌ ಕ್ಲಾಸ್‌. ಒಟ್ಟಾರೆ ಚಿತ್ರ ಅದ್ಭುತವಾಗಿದೆ. ಜತೆಗೆ ಅಲ್ಲಲ್ಲಿ ಬೋರಿಂಗ್‌ ದೃಶ್ಯಗಳೂ ಇವೆ. ನಾಗ್ ಅಶ್ವಿನ್ ಮತ್ತು ಅಶ್ವನಿ ಅವರಿಗೆ ಅಭಿನಂದನೆಗಳು." ಒಬ್ಬ ನೆಟಿಜನ್ 5 ರಲ್ಲಿ 4 ಸ್ಟಾರ್ ರೇಟಿಂಗ್ ನೀಡಿದ್ದಾರೆ.

ಕಲ್ಕಿ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕೆಲವೆಡೆ ನೀರಸ ಮತ್ತು ಸರಾಸರಿ ಎಂದು ನೆಗೆಟಿವ್ ಪ್ರತಿಕ್ರಿಯೆ ಬರುತ್ತಿದೆ. ಆದರೆ ಒಟ್ಟಾರೆ ಸಿನಿಮಾ ಚೆನ್ನಾಗಿದೆ ಎನ್ನಲಾಗಿದೆ. ಕ್ಲೈಮ್ಯಾಕ್ಸ್‌ ಅದ್ಭುತವಾಗಿದ್ದು, ನಿರೀಕ್ಷೆಗೂ ಮೀರಿದ ಪಾತ್ರಗಳಿವೆಯಂತೆ. ಕಲ್ಕಿ 2898 ಎಡಿ ಹಾಲಿವುಡ್ ರೇಂಜ್ ನಲ್ಲಿದ್ದು, ಭಾರತೀಯ ಬಾಕ್ಸ್ ಆಫೀಸ್ ನಡುಗಿಸುವ ಸಿನಿಮಾ ಎನ್ನುತ್ತಿದ್ದಾರೆ ಪ್ರೇಕ್ಷಕರು.

ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 ADಯಲ್ಲಿ ಪ್ರಭಾಸ್ ಭೈರವ ಮತ್ತು ಅಮಿತಾಬ್ ಬಚ್ಚನ್ ಅಶ್ವಥಾಮ. ಮತ್ತು ಕಮಲ್ ಹಾಸನ್ ಅವರು ಪ್ರಬಲ ಖಳನಾಯಕ, ಸುಪ್ರೀಂ ಯಾಸ್ಕಿನ್ ಆಗಿ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ದೀಪಿಕಾ ಪಡುಕೋಣೆ, ದಿಶಾ ಪಟಾನಿ, ಮಾಳವಿಕಾ ನಾಯರ್, ಅನ್ನಾ ಬೆನ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.