Puspa 2: ನೀ ಭುಜವ ಎತ್ತಿ ನಡೆಯುತ್ತಿದ್ದರೆ ಭುವಿಯೇ ಬೆದರುತ್ತಿತ್ತಂತೆ; ಪುಷ್ಪ ಪುಷ್ಪ ಕೋರಸ್‌ನಲ್ಲೇ ಹಲವು ಝಲಕ್ ತೋರಿಸಿದ ಚಿತ್ರತಂಡ
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ 2 ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಲಾಗಿದೆ. . ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ ಹಾಗೂ ಬೆಂಗಾಲಿ ಸೇರಿದಂತೆ ಆರು ಭಾಷೆಗಳಲ್ಲಿ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ.
ಬೆಂಗಳೂರು: ಆಗಸ್ಟ್ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಪುಷ್ಪ 2 ಸಿನಿಮಾದ ಕುರಿತು ಎಲ್ಲರಲ್ಲಿಯೂ ಸಾಕಷ್ಟು ನಿರೀಕ್ಷೆಗಳಿವೆ. ಇದೀಗ ಚಿತ್ರತಂಡವು ಪುಷ್ಪ 2 ಸಿನಿಮಾದ ಮೊದಲ ಹಾಡನ್ನು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಮಾಡಿದೆ. ಕಾರ್ಮಿಕರ ದಿನದಂದು ಬಿಡುಗಡೆಯಾದ ಈ ಟೈಟಲ್ ಟ್ರ್ಯಾಕ್‌ನಲ್ಲಿ "ನೀ ಭುಜವ ಎತ್ತಿ ನಡೆಯುತ್ತಿದ್ದರೆ ಭುವಿಯೇ ಬೆದರುತ್ತಿತ್ತಂತೆ" ಎಂಬ ಹಾಡಿದೆ. ಜತೆಗೆ, ಹಾಡಿನಲ್ಲು ಪುಷ್ಪ ಪುಷ್ಪ ಪುಷ್ಪ ಎಂಬ ಕೋರಸ್ ಇದೆ.
ಸಾಮಾನ್ಯ ಕಾರ್ಮಿಕ ಪುಷ್ಪರಾಜ್ ಶ್ರೀಮಂತನಾಗಿ ಬೆಳೆದ ರೀತಿಯನ್ನು ಈ ಹಾಡಿನಲ್ಲಿ ತೋರಿಸಿದ್ದಾರೆ. ಇದೇ ಸಮಯದಲ್ಲಿ ಪುಷ್ಪನ ಹೊಸ ಲುಕ್, ಹೊಸ ಸಾಮ್ರಾಜ್ಯದ ಚಿತ್ರಣವೂ ಈ ಟೈಟಲ್ ಟ್ರ್ಯಾಕ್‌ನಲ್ಲಿ ದೊರಕುತ್ತದೆ. ಪುಷ್ಪ ಪುಷ್ಪ ಅಂತಾ ಶುರುವಾಗುವ ಹಾಡಿಗೆ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ.. ತೆಲುಗು ಹಾಡಿಗೆ ಚಂದ್ರಬೋಸ್ ಸಾಹಿತ್ಯ ಬರೆದಿದ್ದು,ನಕಾಶ್ ಅಜೀಜ್, ದೀಪಕ್ ಬ್ಲೂ ಧ್ವನಿಯಾಗಿದ್ದಾರೆ. ಕನ್ನಡ ಹಾಡಿಗೆ ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್ ಕಂಠದಲ್ಲಿ ಈ ಪುಷ್ಪ ಪುಷ್ ಹಾಡು ಸೊಗಸಾಗಿ ಮೂಡಿ ಬಂದಿದೆ.
ಆಗಸ್ಟ್ 15 ರಂದು ಪುಷ್ಪ 2 ರಿಲೀಸ್
ಪುಷ್ಪ 2 ಸಿನಿಮಾಕ್ಕೆ ಸುಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಟೈಟಲ್ ಟ್ರ್ಯಾಕ್‌ನಲ್ಲಿರುವ ಅಲ್ಲು ಹೊಸ ಸ್ಟೈಲ್ ತಗ್ಗೋದೇ ಇಲ್ಲ ಎಂಬ ಡೈಲಾಗ್ ಅಭಿಮಾನಿಗಳಿಗೆ ಕಿಕ್ ಕೊಡ್ತಿದೆ. ಮೈತ್ರಿ ಮೂವೀ ಮೇಕರ್ಸ್ ದುಬಾರಿ ಬಜೆಟ್ ನಲ್ಲಿ ಚಿತ್ರ ನಿರ್ಮಾಣ ಮಾಡಿದ್ದು, ಸ್ವಾತಂತ್ರ್ಯ ದಿನಾಚರಣೆಯಂದು ರಿಲೀಸ್ ಆಗಲಿದೆ.
ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಗೆ ಜೊತೆಯಾಗಿ ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಫಹದ್ ಫಾಸಿಲ್ , ಡಾಲಿ ಧನಂಜಯ್ ಸೇರಿದಂತೆ ಹಲವರು ತಾರಾ ಬಳಗದಲ್ಲಿದ್ದಾರೆ. ಪ್ಯಾನ್ ಇಂಡಿಯಾ ಮಾತ್ರವಲ್ಲದೆ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಪುಷ್ಪ 2: ದಿ ರೂಲ್ ಆಗಸ್ಟ್ 15 ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ.
ಪುಷ್ಪ 2 ಸಿಂಗಲ್ ಬಿಡುಗಡೆಗೆ ಮುನ್ನ ಸಾಕಷ್ಟು ಮೀಮ್ಸ್‌ಗಳು ಹುಟ್ಟಿಕೊಂಡಿದ್ದವು. ಪುಷ್ಪ 2: ದಿ ರೂಲ್ ಸಿನಿತಂಡವು ಮೇ 1ರಂದು ಪುಷ್ಪ 2 ಸಿನಿಮಾದ ಮೊದಲ ಸಿಂಗಲ್ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದ ಸಮಯದಲ್ಲಿ ಈ ಕೋರಸ್‌ಗೆ ತಕ್ಕಂತೆ ಹಲವು ಮೀಮ್ಸ್‌ಗಳು ಹುಟ್ಟಿಕೊಂಡಿದ್ದವು. ಕೆಲವೊಂದು ನೆಗೆಟಿವ್ ಮೀಮ್ಸ್‌ಗಳು ಹರಿದಾಡಿದ್ದವು.
ವಾಟ್ ಈಸ್ ದಿಸ್ ರಾ ರಾಣ ಎಂದು ಎಕ್ಸ್ ಬಳಕೆದಾರರೊಬ್ಬರು ರವಿತೇಜಾರ ವಿಡಿಯೋವನ್ನು ಹಂಚಿಕೊಂಡಿದ್ದರು. ಇನ್ನೊಬ್ಬರು 2005ರ ನುವ್ವೋಸ್ತಾನಂಟೆ ನೆನೊಡ್ಡಂಟಾನಾರ ರಘುಬಾಬು ಒಳಗೊಂಡಿರುವ ವಿಡಿಯೋಗೆ ಪುಷ್ಪ ತಂಡ ಬಿಡುಗಡೆ ಮಾಡಿರುವ ಆಡಿಯೋವನ್ನು ಸಿಂಕ್ ಮಾಡಿದ್ದರು.
2021ರಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪ 1: ದಿ ರೈಸ್' ಬಿಡುಗಡೆಯಾಗಿ ಹಿಟ್ ಆಗಿತ್ತು. ಈ ಸಿನಿಮಾದ ಮೂಲಕ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದರು. ಎಲ್ಲರ ಪ್ರೀತಿಯ ಪುಷ್ಪಾ ರಾಜ್ ಆದರು.. ಈ ಸಿನಿಮಾದ ಮುಂದುವರೆದ ಭಾಗವಾಗಿ ಬಿಡುಗಡೆಯಾಗುತ್ತಿರುವ ಪುಷ್ಪಾ 2 ಮೇಲೆ ನಿರೀಕ್ಷೆ ಹಚ್ಚಾಗಿದೆ. ಇದೇ ಕಾರಣಕ್ಕೆ ಈ ಸಿನಿಮಾದ ಬಜೆಟ್ ಅನ್ನು ಹೆಚ್ಚಿಸಲಾಗಿದೆ.