ಜಾನಿ ಮಾಸ್ಟರ್‌ ಕೇಸ್‌: ಸಂತ್ರಸ್ತೆಗೆ ಅಲ್ಲು ಅರ್ಜುನ್‌ ಬೆಂಬಲ ನೀಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಪುಷ್ಪ 2 ನಿರ್ಮಾಪಕ-tollywood news pushpa 2 producer react about allu arjun support to rape victim in jani master case rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಜಾನಿ ಮಾಸ್ಟರ್‌ ಕೇಸ್‌: ಸಂತ್ರಸ್ತೆಗೆ ಅಲ್ಲು ಅರ್ಜುನ್‌ ಬೆಂಬಲ ನೀಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಪುಷ್ಪ 2 ನಿರ್ಮಾಪಕ

ಜಾನಿ ಮಾಸ್ಟರ್‌ ಕೇಸ್‌: ಸಂತ್ರಸ್ತೆಗೆ ಅಲ್ಲು ಅರ್ಜುನ್‌ ಬೆಂಬಲ ನೀಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಪುಷ್ಪ 2 ನಿರ್ಮಾಪಕ

ಕೊರಿಯೋಗ್ರಾಫರ್‌ ಜಾನಿ ಮಾಸ್ಟರ್ ಪ್ರಕರಣ ಇದೀಗ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರದಲ್ಲಿ ಸಂತ್ರಸ್ತೆಗೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬೆಂಬಲ ನೀಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ವಿಚಾರದ ಬಗ್ಗೆ ಅಲ್ಲು ಅರ್ಜುನ್‌ ಮಾತನಾಡದಿದ್ರೂ ಪುಷ್ಪ 2 ಸಿನಿಮಾ ನಿರ್ಮಾಪಕ ಪ್ರತಿಕ್ರಿಯಿಸಿದ್ದಾರೆ.

ಜಾನಿ ಮಾಸ್ಟರ್‌ ಕೇಸ್‌: ಸಂತ್ರಸ್ತೆಗೆ ಅಲ್ಲು ಅರ್ಜುನ್‌ ಬೆಂಬಲ ನೀಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಪುಷ್ಪ 2 ನಿರ್ಮಾಪಕ
ಜಾನಿ ಮಾಸ್ಟರ್‌ ಕೇಸ್‌: ಸಂತ್ರಸ್ತೆಗೆ ಅಲ್ಲು ಅರ್ಜುನ್‌ ಬೆಂಬಲ ನೀಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಪುಷ್ಪ 2 ನಿರ್ಮಾಪಕ

ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಪ್ರಕರಣ ಟಾಲಿವುಡ್‌ನಲ್ಲಿ ಸಂಚಲನ ಮೂಡಿಸುತ್ತಿದೆ. ಮಹಿಳಾ ಕೊರಿಯೋಗ್ರಾಫರ್‌ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಜಾನಿ ಮಾಸ್ಟರ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಇಡಲಾಗಿದೆ. ತಾವು ಮಾಡಿದ ತಪ್ಪನ್ನು ಜಾನಿ ಮಾಸ್ಟರ್‌ ಒಪ್ಪಿಕೊಂಡಿದ್ದಾರೆ ಎಂಬ ಮಾತು ಕೂಡಾ ಕೇಳಿ ಬರುತ್ತಿದೆ.

ಅಪ್ತಾಪ್ತ ಸಂತ್ರಸ್ತೆಗೆ ಅಲ್ಲು ಅರ್ಜುನ್‌ ಬೆಂಬಲ?

ಸದ್ಯಕ್ಕೆ ಸಂತ್ರಸ್ತ ಯುವತಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರದಲ್ಲಿ ಸಹಾಯಕ ನೃತ್ಯ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದು ನಟ ಅಲ್ಲು ಅರ್ಜುನ್ ಹುಡುಗಿಗೆ ಧೈರ್ಯ ಹೇಳಿದ್ದು, ಆಕೆಯ ಬೆಂಬಲಕ್ಕೆ ನಿಂತಿದ್ದಾರೆ ಎನ್ನಲಾಗುತ್ತಿದೆ. ಇನ್ಮುಂದೆ ತಾವು ಕೆಲಸ ಮಾಡುವ ಎಲ್ಲಾ ಸಿನಿಮಾಗಳಲ್ಲೂ ಆ ಯುವತಿಗೆ ಕೊರಿಯೋಗ್ರಾಫರ್‌ ಆಗಿ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರವಾಗಿ ಪುಷ್ಪ ನಿರ್ಮಾಪಕರಿಗೆ ಪ್ರಶ್ನೆ ಎದುರಾಗಿದೆ.

ಸೋಮವಾರ, ಸಿನಿಮಾವೊಂದರ ಸುದ್ದಿಗೋಷ್ಟಿಯಲ್ಲಿ ಭಾಗವಹಿಸಿದ್ದ ನಿರ್ಮಾಪಕ ರವಿಶಂಕರ್‌ ಅವರಿಗೆ, ಅಲ್ಲು ಅರ್ಜುನ್‌ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳಿದ್ದಾರೆ. ರವಿಶಂಕರ್‌ ಕೂಡಾ ಈ ವಿಚಾರವಾಗಿ ಉತ್ತರ ನೀಡಿದ್ದಾರೆ. ಇದು ಜಾನಿ ಮಾಸ್ಟರ್ ಮತ್ತು ಆ ಯುವತಿಗೆ ಸಂಬಂಧಿಸಿದ ವಿಚಾರ. ಆ ಯುವತಿ, ಮೊದಲಿನಿಂದಲೂ ಪುಷ್ಪ 2 ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಹಾಡುಗಳಿಗೂ ಆ ಯುವತಿ ಸಹಾಯಕ ನೃತ್ಯ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್‌ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಜಾನಿ ಮಾಸ್ಟರ್‌ ವಿವಾದದ ಬಗ್ಗೆ ಅವರಿಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ. ಪುಷ್ಪ ಚಿತ್ರದ ವಿಶೇಷ ಹಾಡೊಂದಕ್ಕೆ ಜಾನಿ ಮಾಸ್ಟರ್‌ ಕೆಲಸ ಮಾಡಬೇಕಿದೆ. ಆದರೆ ಈಗ ಪರಿಸ್ಥತಿ ಬದಲಾಗಿದೆ. ಡ್ಯಾನ್ಸ್‌ ತಂಡದವರು ಅಲ್ಲು ಅರ್ಜುನ್‌ ಅವರನ್ನು ನೋಡಿದ ಕೂಡಲೇ ಖುಷಿಯಿಂದ ವಿಶ್‌ ಮಾಡುತ್ತಾರೆ. ಅವರಿಗೂ ಅಲ್ಲು ಅರ್ಜುನ್‌ ವಿಶ್‌ ಮಾಡುತ್ತಾರೆ ಅಷ್ಟೇ.

ಈ ವಿಚಾರದ ಬಗ್ಗೆ ಅಲ್ಲು ಅರ್ಜುನ್‌ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದ ನಿರ್ಮಾಪಕ

ಯಾವುದೇ ಒಂದು ವಿವಾದ ಉಂಟಾದಾಗ ಒಬ್ಬೊಬ್ಬರು ಒಂದೊಂದು ರೀತಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಸೆಟ್‌ನಲ್ಲಿ ಕೊರಿಯೋಗ್ರಾಫರ್‌ಗಳು ನಾಯಕ ಅಲ್ಲು ಅರ್ಜುನ್‌ಗೆ ಸ್ಟೆಪ್ಸ್‌ ಹೇಳಿಕೊಡುವುದು ಬಿಟ್ಟು ಬೇರೆ ವೈಯಕ್ತಿಕ ವಿಚಾರಗಳು ಚರ್ಚೆ ಆಗುವುದಿಲ್ಲ. ಅಲ್ಲು ಅರ್ಜುನ್‌ಗೆ ಜಾನಿ ಮಾಸ್ಟರ್‌ ಕೂಡಾ ಆತ್ಮೀಯರು, ಆ ಯುವತಿ ಕೂಡಾ ಗೊತ್ತು. ಆದರೆ ಜಾನಿ ಮಾಸ್ಟರ್‌ ವಿರುದ್ದ ನಿಲ್ಲುವುದಾಗಲೀ, ಯುವತಿಗೆ ಬೆಂಬಲ ನೀಡುತ್ತಿರುವ ವಿಚಾರದಲ್ಲಿ ಹುರುಳಿಲ್ಲ ಎಂದು ನಿರ್ಮಾಪಕ ರವಿಶಂಕರ್‌ ಪ್ರತಿಕ್ರಿಯಿಸಿದ್ದಾರೆ.

ಜಾನಿ ಮಾಸ್ಟರ್ ನನಗೆ ಬಹಳ ದಿನಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಇತ್ತೀಚೆಗೆ 21 ವರ್ಷದ ಸಹಾಯಕ ನೃತ್ಯ ನಿರ್ದೇಶಕಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಅಪ್ರಾಪ್ತೆಯಾಗಿದ್ದಾಗಲೇ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅಮಾನುಷವಾಗಿ ವರ್ತಿಸಿದ್ದಾರೆ, ಯಾರಿಗಾದರೂ ಹೇಳಿದರೆ ಅವಕಾಶಗಳನ್ನು ತಪ್ಪಿಸುವುದಾಗಿ ಎದುರಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದರು. ಯುವತಿ ನೀಡಿದ ಆಧಾರದ ಮೇಲೆ ಇತ್ತೀಚೆಗಷ್ಟೇ ಪೊಲೀಸರು ಜಾನಿ ಮಾಸ್ಟರ್‌ ಅರೆಸ್ಟ್‌ ಮಾಡಿದ್ದರು.

mysore-dasara_Entry_Point