ಕನ್ನಡ ಸುದ್ದಿ  /  ಮನರಂಜನೆ  /  ನಾಳೆ ಪುಷ್ಪ 2 ಸೆಕೆಂಡ್‌ ಸಿಂಗಲ್‌ ರಿಲೀಸ್‌; ಅಲ್ಲು ಅರ್ಜುನ್‌ ಜತೆ ರಶ್ಮಿಕಾ ಮಂದಣ್ಣ ಕಲರ್‌ಫುಲ್‌ ಡ್ಯಾನ್ಸ್‌ ನೋಡಲು ಫ್ಯಾನ್ಸ್‌ ಕಾತರ

ನಾಳೆ ಪುಷ್ಪ 2 ಸೆಕೆಂಡ್‌ ಸಿಂಗಲ್‌ ರಿಲೀಸ್‌; ಅಲ್ಲು ಅರ್ಜುನ್‌ ಜತೆ ರಶ್ಮಿಕಾ ಮಂದಣ್ಣ ಕಲರ್‌ಫುಲ್‌ ಡ್ಯಾನ್ಸ್‌ ನೋಡಲು ಫ್ಯಾನ್ಸ್‌ ಕಾತರ

Pushpa 2 Second Single: ಈ ವರ್ಷ ಬಿಡುಗಡೆಯಾಗಲಿರುವ ಪುಷ್ಪ 2 ಸಿನಿಮಾದ ಎರಡನೇ ಹಾಡು ನಾಳೆ ಅಂದರೆ ಮೇ 29ರಂದು ಬಿಡುಗಡೆಯಾಗಲಿದೆ. ಸದ್ಯ ರಶ್ಮಿಕಾ ಮಂದಣ್ಣ ಈ ಕುರಿತಾದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಸೆಕೆಂಡ್‌ ಸಿಂಗಲ್‌ನಲ್ಲಿ ಮಸ್ತಾದ ಹಾಡು, ಡ್ಯಾನ್ಸ್‌ ಇರುವ ಸೂಚನೆಯಿದೆ.

ನಾಳೆ ಪುಷ್ಪ 2 ಸೆಕೆಂಡ್‌ ಸಿಂಗಲ್‌ ರಿಲೀಸ್‌; ಅಲ್ಲು ಅರ್ಜುನ್‌ ಜತೆ ರಶ್ಮಿಕಾ ಮಂದಣ್ಣ ಕಲರ್‌ಫುಲ್‌ ಡ್ಯಾನ್ಸ್‌
ನಾಳೆ ಪುಷ್ಪ 2 ಸೆಕೆಂಡ್‌ ಸಿಂಗಲ್‌ ರಿಲೀಸ್‌; ಅಲ್ಲು ಅರ್ಜುನ್‌ ಜತೆ ರಶ್ಮಿಕಾ ಮಂದಣ್ಣ ಕಲರ್‌ಫುಲ್‌ ಡ್ಯಾನ್ಸ್‌

ಬೆಂಗಳೂರು: ಈ ವರ್ಷ ಬಿಡುಗಡೆಯಾಗಲಿರುವ ಪುಷ್ಪ 2 ಸಿನಿಮಾದ ಎರಡನೇ ಹಾಡು ನಾಳೆ ಅಂದರೆ ಮೇ 29ರಂದು ಬಿಡುಗಡೆಯಾಗಲಿದೆ. ಸದ್ಯ ರಶ್ಮಿಕಾ ಮಂದಣ್ಣ ಈ ಕುರಿತಾದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಸೆಕೆಂಡ್‌ ಸಿಂಗಲ್‌ನಲ್ಲಿ ಮಸ್ತಾದ ಹಾಡು, ಡ್ಯಾನ್ಸ್‌ ಇರುವ ಸೂಚನೆಯಿದೆ. ಈ ಕುರಿತಾದ ಫೋಟೋವನ್ನು ರಶ್ಮಿಕಾ ಮಂದಣ್ಣ ಹಂಚಿಕೊಂಡಿದ್ದಾರೆ. ಶ್ರೇಯಾ ಘೋಷಲ್‌ ಪುಷ್ಪ 2 ಸಿನಿಮಾದ ಸೆಕೆಂಡ್‌ ಸಿಂಗಲ್‌ಗೆ ಧ್ವನಿಯಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸದ್ಯ ಹಂಚಿಕೊಂಡಿರುವ ಫೋಟೋದಲ್ಲಿ ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್‌ ಡ್ಯಾನ್ಸ್‌ ಮಾಡುವ ಸೀನ್‌ನ ಚಿತ್ರಣವಿದೆ. ಈ ಫೋಟೋ ನೋಡಿ ಫ್ಯಾನ್ಸ್‌ ಖುಷಿಯಾಗಿದ್ದು, "ಕ್ರಶ್‌ ಹುಟ್ಟಿಸುವಂತಹ ಫೋಟೋ ಇದು" ಎಂದು ಕಾಮೆಂಟ್‌ ಮಾಡಿದ್ದಾರೆ. "ನೀವು ನಕ್ಕಾಗ ತುಂಬಾ ಕ್ಯೂಟಾಗಿ ಕಾಣಿಸುವಿರಿ" "ಟೀ ಶರ್ಟ್‌, ಪ್ಯಾಂಟ್‌ ಮೇಲೆ ಸೀರೆ ಉಟ್ರಾ" "ತುಂಬಾ ಕ್ಯೂಟ್‌" ಬ್ಯೂಟಿಫುಲ್‌" ಎಂದೆಲ್ಲ ಕಾಮೆಂಟ್‌ಗಳು ಬಂದಿವೆ.

ಆಗಸ್ಟ್‌ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಪುಷ್ಪ 2 ಸಿನಿಮಾದ ಕುರಿತು ಅಲ್ಲು ಅರ್ಜುನ್‌ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ. ಕೆಲವು ದಿನಗಳ ಹಿಂದೆ ಪುಷ್ಪ 2 ಸಿನಿಮಾದ ಮೊದಲ ಹಾಡು ರಿಲೀಸ್‌ ಆಗಿತ್ತು. ಕನ್ನಡ ವರ್ಷನ್‌ನಲ್ಲಿ " " ನೀ ಭುಜವ ಎತ್ತಿ ನಡೆಯುತ್ತಿದ್ದರೆ ಭುವಿಯೇ ಬೆದರುತ್ತಿತ್ತಂತೆ" ಎಂಬ ಹಾಡು ರಿಲೀಸ್‌ ಆಗಿತ್ತು. ಹಿನ್ನೆಲೆಯಲ್ಲಿ ಪುಷ್ಪ ಪುಷ್ಪ ಪುಷ್ಪ ಕೋರಸ್‌ ಇತ್ತು. ಈ ಪುಷ್ಪ ಪುಷ್ಪ ಹಾಡು ಸಾಕಷ್ಟು ಟ್ರೆಂಡ್‌ ಆಗಿದೆ.

ಸಾಮಾನ್ಯ ಕಾರ್ಮಿಕ ಪುಷ್ಪರಾಜ್ ಶ್ರೀಮಂತನಾಗಿ ಬೆಳೆದ ರೀತಿಯನ್ನು ಫಸ್ಟ್‌ ಸಿಂಗಲ್‌ನಲ್ಲಿ ತೋರಿಸಲಾಗಿತ್ತು. ಪುಷ್ಪರಾಜ್‌ನ ಹೊಸ ಸಾಮ್ರಾಜ್ಯದ ಝಲಕ್‌ ತೋರಿಸಲಾಗಿತ್ತು. ಪುಷ್ಪ ಪುಷ್ಪ ಅಂತಾ ಶುರುವಾಗುವ ಹಾಡಿಗೆ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದರು. ಈ. ತೆಲುಗು ಹಾಡಿಗೆ ಚಂದ್ರಬೋಸ್ ಸಾಹಿತ್ಯ ಬರೆದಿದ್ದು,ನಕಾಶ್ ಅಜೀಜ್, ದೀಪಕ್ ಬ್ಲೂ ಧ್ವನಿಯಾಗಿದ್ದಾರೆ. ಕನ್ನಡ ಹಾಡಿಗೆ ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್ ಕಂಠದಲ್ಲಿ ಈ ಪುಷ್ಪ ಪುಷ್‌ ಹಾಡು ರಿಲೀಸ್‌ ಆಗಿತ್ತು. ಇದೀಗ ಎರಡನೇ ಹಾಡು ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿದೆ.

ಪುಷ್ಪ 2 ಸಿನಿಮಾ ರಿಲೀಸ್‌ ಯಾವಾಗ?

ಟಾಲಿವುಡ್‌ನ ಬಹುನಿರೀಕ್ಷಿತ ಪುಷ್ಪ 2 ಈ ಸಿನಿಮಾ ಆಗಸ್ಟ್‌ 15ರಂದು ಬಿಡುಗಡೆಯಾಗಲಿದೆ. ಪುಷ್ಪ 2 ಸಿನಿಮಾಕ್ಕೆ ಸುಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಟೈಟಲ್‌ ಟ್ರ್ಯಾಕ್‌ನಲ್ಲಿರುವ ಅಲ್ಲು ಹೊಸ ಸ್ಟೈಲ್ ತಗ್ಗೋದೇ ಇಲ್ಲ ಎಂಬ ಡೈಲಾಗ್ ಅಭಿಮಾನಿಗಳಿಗೆ ಕಿಕ್ ಕೊಡ್ತಿದೆ. ಮೈತ್ರಿ ಮೂವೀ‌ ಮೇಕರ್ಸ್ ದುಬಾರಿ ಬಜೆಟ್ ನಲ್ಲಿ ಚಿತ್ರ ನಿರ್ಮಾಣ ಮಾಡಿದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಗೆ ಜೊತೆಯಾಗಿ ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಫಹದ್ ಫಾಸಿಲ್ , ಡಾಲಿ ಧನಂಜಯ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

ಟಿ20 ವರ್ಲ್ಡ್‌ಕಪ್ 2024