ಪುಷ್ಪ ದಿ ರೂಲ್ ಟೀಸರ್: ಸೀರೆಯುಟ್ಟು ನೀಲವರ್ಣದಲ್ಲಿ ಘಲ್ ಘಲ್ ಝಲ್ ಝಲ್ ಝಲಕ್ ತೋರಿಸಿದ ಪುಷ್ಪ ರಾಜ್
Pushpa: The Rule teaser: ಅಲ್ಲು ಅರ್ಜುನ್ ಹುಟ್ಟುಹಬ್ಬದಂದು ಪುಷ್ಪ ದಿ ರೂಲ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್‌ನಲ್ಲಿ ಅಲ್ಲು ಅರ್ಜುನ್ ಸೀರೆಯುಟ್ಟು, ಕೊರಳಲ್ಲಿ ಘಲ್ ಘಲ್ ಗೆಜ್ಜೆ ಮಣಿಗಳ ಮಾಲೆತೊಟ್ಟು ಅಭಿಮಾನಿಗಳಿಗೆ ಮನಸ್ಸಿನಲ್ಲಿ ಝಲ್ ಝಲ್ ನಗಾರಿ ಮೂಡಿಸಿದ್ದಾರೆ.
Pushpa: The Rule teaser: ಬಹುನಿರೀಕ್ಷಿತ ಪುಷ್ಪ ದಿ ರೂಲ್ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಪುಷ್ಪ 2 ಚಿತ್ರತಂಡವು ಅಲ್ಲು ಅರ್ಜುನ್ ಅವರ 42ನೇ ಹುಟ್ಟುಹಬ್ಬಂದದು ಪುಷ್ಪ ದಿ ರೂಲ್ ಸಿನಿಮಾದ ಟೀಸರ್ ಬಿಡುಗಡೆಯ ಮಾಡಿದೆ. ಈ ಪುಟ್ಟ ಟೀಸರ್‌ನಲ್ಲಿ ಅಗಾಧವಾದ ಅಂಶಗಳು ಇದ್ದು, ಪುಷ್ಪ ದಿ ರೂಲ್ ಬ್ಲಾಕ್‌ಬಸ್ಟರ್ ಸಿನಿಮಾವಾಗುವ ಎಲ್ಲಾ ಸೂಚನೆಯನ್ನು ನೀಡಿದೆ. ಸುಕುಮಾರ್ ನಿರ್ದೇಶನದ ಪುಷ್ಪ ದಿ ರೂಲ್ ಸಿನಿಮಾವು ಪುಷ್ಪ ದಿ ರೈಸ್ ಸಿನಿಮಾದ ಸೀಕ್ವೆಲ್ ಆಗಿದೆ. 2021ರಲ್ಲಿ ಪುಷ್ಪ ದಿ ರೂಲ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಇದೀಗ ಪುಷ್ಪ ದಿ ರೂಲ್ ಆಗಸ್ಟ್ 15ರಂದು ಬಿಡುಗಡೆಯಾಗಲು ಸಜ್ಜಾಗಿದೆ.
ಪುಷ್ಪ ದಿ ರೂಲ್ ಟೀಸರ್ ಬಿಡುಗಡೆ
ಪುಷ್ಪ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ಇದೀಗ ಪುಷ್ಪ ದಿ ರೂಲ್ ಸಿನಿಮಾದ ಟೀಸರ್ ಬಿಡುಗಡೆ ಮಾಡಿದೆ. ಅಲ್ಲು ಅರ್ಜುನ್ ಇದನ್ನು ಹಂಚಿಕೊಂಡಿದ್ದಾರೆ. ನನಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ ಎಲ್ಲರಿಗೂ ಧನ್ಯವಾದ. ಹುಟ್ಟುಹಬ್ಬದ ಉಡುಗೊರೆಯಾಗಿ ಟೀಸರ್ ಬಿಡುಗಡೆ ಮಾಡಲಾಗಿದೆ ಎಂದು ಅಲ್ಲು ಅರ್ಜುನ್ ಟ್ವೀಟ್ ಮಾಡಿದ್ದಾರೆ. "ಅಲ್ಲ ಅರ್ಜುನ್ ಆಗಮನವನ್ನು ಸಂಭ್ರಮಿಸಿ. ಆತನೊಳಗಿನ ಬೆಂಕಿಯನ್ನು ನೋಡಿ. ರೋಮಾಂಚನದ ಅನುಬವ ಪಡೆಯಿರಿ. ಐಕಾನ್ ಸ್ಟಾರ್ ಅಲ್ಲು ಅರ್ಜುನ್‌ಗೆ ಹ್ಯಾಪಿ ಹುಟ್ಟುಹಬ್ಬದ ಶುಭಾಶಯ " ಎಂದು ಮೈತ್ರಿ ಮೂವಿ ಮೇಕರ್ಸ್ ಟ್ವೀಟ್ ಮಾಡಿದೆ.
ಟೀಸರ್‌ನಲ್ಲಿ ಏನಿದೆ?
ಪುಷ್ಪ ದಿ ರೂಲ್‌ನ ಒಂದು ನಿಮಿಷದ ಟೀಸರ್ ಹಂಚಿಕೊಳ್ಳಲಾಗಿದೆ. ಯಾವುದೇ ದೇಗುಲದ ಹಬ್ಬ, ಜಾತ್ರೆಯ ವಾತಾವರಣದಂತೆ ಇದೆ. ಅಲ್ಲಿ ಎದುರಾಳಿಯ ಎದೆಯ ಮೇಲೆ ಕಾಲಿಟ್ಟ ಅಲ್ಲು ಅರ್ಜುನ್ ಬರುತ್ತಾರೆ. ಅಲ್ಲು ಅರ್ಜುನ್ ಇಲ್ಲಿ ಸೀರೆ ಉಟ್ಟಿದ್ದಾರೆ. ಕಾಲಲ್ಲಿ ಘಲ್ ಘಲ್ ಗೆಜ್ಜೆಯಿದೆ. ಕೊರಳಲ್ಲಿಯೂ ಗೆಜ್ಜೆಗಳು ತುಂಬಿರುವ ದೊಡ್ಡದೊಡ್ಡ ಸರಗಳಿವೆ. ಆತ ಹೆಜ್ಜೆಯಿಟ್ಟಾಗ, ಎದೆಯನ್ನು ಅಲ್ಲಾಡಿಸಿದಗ ಝಲ್ ಘಲ್ ಎನಿಸುತ್ತದೆ. ಒಟ್ಟಾರೆ ಈತನ ಲುಕ್‌ಗೆ ಅಭಿಮಾನಿಗಳು "ಗೋಸ್‌ಬಂಪ್ಸ್" "ಅದ್ಭುತ ಬ್ಯಾಕ್‌ಗ್ರೌಂಡ್ ಮ್ಯೂಸಿಕ್" "ಈ ಸಿನಿಮಾ ಬ್ಲಾಕ್‌ಬಸ್ಟರ್ ಆಗೋದು ಗ್ಯಾರಂಟಿ" ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.
ಈ ಟೀಸರ್‌ನಲ್ಲಿ ಜಾತ್ರೆಯ ಸೀನ್ ಇದೆ. ಇದನ್ನು ಸಮ್ಮಕ್ಕ ಸರಲಾಮಾ ಜಾತರ ಎಂದು ಹೇಳಲಾಗುತ್ತದೆ. ಬುಡುಕಟ್ಟು ದೇವಿಗೆ ಪೂಜೆ ಸಲ್ಲಿಸುವಂತಹ ಪ್ರಮುಖ ಜಾತ್ರೆ ಇದಾಗಿದೆ. ಪ್ರತಿವರ್ಷ ತೆಲಂಗಾನದಲ್ಲಿ ನಡೆಯುವ ಈ ಜಾತ್ರೆಯಲ್ಲಿ ಹತ್ತು ದಶಲಕ್ಷಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುತ್ತಾರೆ. ಇದೇ ಜಾತ್ರೆಯ ಹಿನ್ನೆಲೆಯಲ್ಲಿ ಸೀರೆಯುಟ್ಟ ಅಲ್ಲು ಅರ್ಜುನ್ ಎಂಟ್ರಿ ಸೀನ್ ಟೀಸರ್‌ನಲ್ಲಿದೆ.
ಈ ಟೀಸರ್‌ನಲ್ಲಿ ಜಾತ್ರೆಯ ಸೀನ್ ಇದೆ. ಇದನ್ನು ಸಮ್ಮಕ್ಕ ಸರಲಾಮಾ ಜಾತರ ಎಂದು ಹೇಳಲಾಗುತ್ತದೆ. ಬುಡುಕಟ್ಟು ದೇವಿಗೆ ಪೂಜೆ ಸಲ್ಲಿಸುವಂತಹ ಪ್ರಮುಖ ಜಾತ್ರೆ ಇದಾಗಿದೆ. ಪ್ರತಿವರ್ಷ ತೆಲಂಗಾನದಲ್ಲಿ ನಡೆಯುವ ಈ ಜಾತ್ರೆಯಲ್ಲಿ ಹತ್ತು ದಶಲಕ್ಷಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುತ್ತಾರೆ. ಇದೇ ಜಾತ್ರೆಯ ಹಿನ್ನೆಲೆಯಲ್ಲಿ ಸೀರೆಯುಟ್ಟ ಅಲ್ಲು ಅರ್ಜುನ್ ಎಂಟ್ರಿ ಸೀನ್ ಟೀಸರ್‌ನಲ್ಲಿದೆ.
ಪುಷ್ಪ ದಿ ರೂಲ್ ಸಿನಿಮಾದಲ್ಲಿ ರಶ್ಮಿಕಾ ಅವರು ಶ್ರೀವಲ್ಲಿಯಾಗಿ ನಟಿಸಿದ್ದಾರೆ. ರಶ್ಮಿಕಾ ಮಂದಣ್ಣರ ಹುಟ್ಟುಹಬ್ಬದಂದು ಶ್ರೀವಲ್ಲಿಯ ಲುಕ್ ಬಿಡುಗಡೆ ಮಾಡಲಾಗಿತ್ತು. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮಾತ್ರವಲ್ಲದೆ ಫಹಾದ ಫಾಸಿಲ್, ಜಗಪತಿ ಬಾಬು, ಅನಸೂಯ ಭಾರದ್ವಾಜ್, ಧನಂಜಯ್ ಮುಂತಾದ ಹಲವು ನಟರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ದೇವಿ ಶ್ರೀ ಪ್ರಸಾದ್ ಅವರ ಸಂಗೀತ ನಿರ್ದೇಶನವಿದೆ. ಪುಷ್ಪ ದಿ ರೂಲ್ ಸಿನಿಮಾ ಚಿತ್ರಮಂದಿರಗಳಲ್ಲಿ ಇದೇ ವರ್ಷ ಆಗಸ್ಟ್ 15ರಂದು ರಿಲೀಸ್ ಆಗಲಿದೆ.
