ಹಲೋ ನಾನು ರಶ್ಮಿಕಾ, ನಿಮ್ಗೆ ಗುರುತು ಸಿಗ್ತಾ? ಆಸ್ಟ್ರೇಲಿಯಾದಲ್ಲಿ ಪುಷ್ಪ 2 ನಟಿ ರಶ್ಮಿಕಾ ಮಂದಣ್ಣ ಫೋಟೋಶೂಟ್
Rashmika Mandanna: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಆಸ್ಟ್ರೇಲಿಯಾದಲ್ಲಿ ಲೈಫ್‌ಸ್ಟೈಲ್ ಏಷ್ಯಾ ಮ್ಯಾಗಜಿನ್‌ಗಾಗಿ ಕ್ಲಿಕ್ಕಿಸಿರುವ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರು: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಂನಲ್ಲಿ ಆಸ್ಟ್ರೇಲಿಯಾದಲ್ಲಿ ಲೈಫ್‌ಸ್ಟೈಲ್ ಏಷ್ಯಾ ಮ್ಯಾಗಜಿನ್‌ಗಾಗಿ ಕ್ಲಿಕ್ಕಿಸಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಲೈಫ್‌ಸ್ಟೈಲ್ ಏಷ್ಯಾ ಇಂಡಿಯಾ ನಿಯತಕಾಲಿಕೆಯಲ್ಲಿ ರಶ್ಮಿಕಾ ಮಂದಣ್ಣರ ಫೋಟೋ ಪ್ರಕಟವಾಗಿದೆ. ಈ ಫೋಟೋ ಪ್ರಕಟವಾದ ಬಳಿಕ ಇತರೆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ರಶ್ಮಿಕಾ ಹಂಚಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣರ ಫೋಟೋವನ್ನು ಮುಖಪುಟವಾಗಿಸಿಕೊಂಡಿರುವ ಲೈಫ್‌ಸ್ಟೈಲ್ ಏಷ್ಯಾ ಮ್ಯಾಗಜಿನ್ ಈ ಮುಂದಿನಂತೆ ಟಿಪ್ಪಣಿ ಬರೆದಿದೆ. "ಬಾರ್ನ್ ಅಡ್ವೆಂಚರ್ ರಶ್ಮಿಕಾ ಮಂದಣ್ಣರ ಸಾಹಸಗಳು ಆಕೆಯನ್ನು ಜಗತ್ತಿನ ಪ್ರಮುಖ ಕಡೆಗಳಿಗೆ ಮಾತ್ರವಲ್ಲದೆ ಕರಿಯರ್‌ನಲ್ಲೂ ತುಂಬಾ ದೂರದವರೆಗೆ ಕರೆದೊಯ್ದಿವೆ. ಸಿನಿರಂಗಕ್ಕೆ ಈಕೆ ಆಗಮಿಸಿದ ಎಂಟು ವರ್ಷಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ 56 ದಶಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ದೇಶದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಅವರ ಕೊನೆಯ ಚಿತ್ರ ಅನಿಮಲ್ ಬ್ಲಾಕ್‌ಬಸ್ಟರ್ ಆಗಿತ್ತು. ಈಗ ಎಲ್ಲರ ಕಣ್ಣುಗಳು ಮುಂದಿನ ಸಿನಿಮಾ ಪುಷ್ಪ 2: ದಿ ರೂಲ್ ಮೇಲೆ ನೆಟ್ಟಿದೆ. ನಮ್ಮ ಏಪ್ರಿಲ್ 2024ರ ಕವರ್ ಪೇಜ್‌ಗಾಗಿ ಪ್ಯಾನ್ ಇಂಡಿಯಾ ತಾರೆಯನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಪ್ರಪಂಚದ ಅತ್ಯಂತ ಸುಂದರವಾದ ನಗರಗಳಲ್ಲಿ ಒಂದಾದ ಪರ್ತ್‌ನಲ್ಲಿ ಈ ಫೋಟೋವನ್ನು ಶೂಟ್ ಮಾಡಿದ್ದೇವೆ" ಎಂದು ಲೈಫ್‌ಸ್ಟೈಲ್ ಏಷ್ಯಾ ಬರೆದುಕೊಂಡಿದೆ.
ರಶ್ಮಿಕಾ ಮಂದಣ್ಣ ಹಲವು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವೆಸ್ಟರ್ನ್ ಆಸ್ಟ್ರೇಲಿಯಾದ ಪೆರ್ತ್‌ನಲ್ಲಿರುವ ಉದ್ಯಾನವನ, ಕಿಂಗ್ಸ್ ಪಾರ್ಕ್‌ನಲ್ಲಿ ಫೋಟೋ ತೆಗೆಯಲಾಗಿದೆ. ಇದು ಆಸ್ಟ್ರೇಲಿಯಾದ ನಗರದೊಳಗಿರುವ ಬೃಹತ್ ಪಾರ್ಕ್ ಆಗಿದೆ. ಇದು ಆಸ್ಟ್ರೇಲಿಯಾದವರಿಗೆ ಶ್ರೀಮಂತ ಪಾರಂಪರಿಕ ಸ್ಥಳವಾಗಿದೆ.
ರಶ್ಮಿಕಾ ಮಂದಣ್ಣರ ಬಗ್ಗೆ
ಕೊಡಗು ಜಿಲ್ಲೆಯ ವಿರಾಜಪೇಟೆಯ ರಶ್ಮಿಕಾ ಮಂದಣ್ಣ ಸ್ಯಾಂಡಲ್‌ವುಡ್ ಮೂಲಕ ಸಿನಿಜಗತ್ತಿಗೆ ಪ್ರವೇಶಿಸಿದರು. ರಕ್ಷಿತ್ ಶೆಟ್ಟಿಯ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಇವರು ಜನಪ್ರಿಯತೆ ಪಡೆದರು. ಕಿರಿಕ್ ಪಾರ್ಟಿ ಸಿನಿಮಾವು ರಿಷಬ್ ಶೆಟ್ಟಿ ನಿರ್ದೇಶನದ, ಜಿಎಸ್ ಗುಪ್ತಾ ಮತ್ತು ರಕ್ಷಿತ್ ಶೆಟ್ಟಿ ನಿರ್ಮಾಣದ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ, ಸಂಯುಕ್ತ ಹೆಗ್ಡೆ, ಅಚ್ಚುತ್ ಕುಮಾರ್, ಅರವಿಂದ್ ಅಯ್ಯರ್ ಮುಂತಾದ ಕಲಾವಿದರು ನಟಿಸಿದ್ದಾರೆ.
ಇದಾದ ಬಳಿಕ ತೆಲುಗಿನ ಚಲೋ ಸಿನಿಮಾದಲ್ಲಿ ನಟಿಸಿದರು. ಗೀತಾ ಗೋವಿಂದಂ ಟಾಲಿವುಡ್‌ನಲ್ಲಿ ರಶ್ಮಿಕಾರ ಜನಪ್ರಿಯತೆ ಹೆಚ್ಚಿಸಿತು. ತೆಲುಗಿನಲ್ಲಿ ಕ್ಲಾಸಿಕ್ ಲವ್ ಸ್ಟೋರಿಯಾಗಿ ಗೀತಾ ಗೋವಿದಂ ರಿಲೀಸ್ ಆಗಿತ್ತು. ಈ ಸಿನಿಮಾದ ಹೀರೋ ವಿಜಯ್ ದೇವರಕೊಂಡ. ಈಗ ಈತನೇ ರಶ್ಮಿಕಾ ಮಂದಣ್ಣರ ಬಾಯ್‌ಫ್ರೆಂಡ್ ಎಂಬ ವದಂತಿಗಳಿವೆ. ತೆಲುಗು ಸಿನಿಮೋದ್ಯಮದಲ್ಲಿ ರಶ್ಮಿಕಾ ಮಂದಣ್ಣರಿಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ತಂದುಕೊಟ್ಟಿದೆ. ಗೀತಾ ಗೋವಿದಂ ಬಳಿಕ ದೇವದದಾಸ್, ಯಜಮಾನ, ಡಿಯರ್ ಕಾಮ್ರೆಡ್, ಸರಿಲೇರು ನೀಕೆವರು, ಭೀಷ್ಮ, ಪೊಗರು, ಸುಲ್ತಾನ್ ಮುಂತಾದ ಹಲವು ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ಬಾಲಿವುಡ್ ಸಿನಿಮಾ ಅನಿಮಲ್. ಇದು ರಶ್ಮಿಕಾ ಮಂದಣ್ಣರ ಕರಿಯರ್‌ನಲ್ಲಿ ಇನ್ನೊಂದು ಮೈಲಿಗಲ್ಲು ಎನ್ನಬಹುದು. ಇದೇ ಆಗಸ್ಟ್ 15ರಂದು ರಶ್ಮಿಕಾ ನಟನೆಯ ಪುಷ್ಪ 2 ಸಿನಿಮಾ ಬಿಡುಗಡೆಯಾಗಲಿದೆ.
ವಿಭಾಗ