ಕನ್ನಡ ಸುದ್ದಿ  /  Entertainment  /  Tollywood News Ram Charan Announces Maiden Production Venture The India House Nikhil Siddhartha To Play Lead Role Mnk

Ram charan: ರಾಮ್‌ಚರಣ್‌ ನಿರ್ಮಾಣದ ಚಿತ್ರದಲ್ಲಿ ನಿಖಿಲ್‌ ಸಿದ್ಧಾರ್ಥ್‌ ಹೀರೋ; ಸ್ವಾತಂತ್ರ್ಯ ಪೂರ್ವದ ಕಥೆಗೆ ದಿ ಇಂಡಿಯ ಹೌಸ್‌ ಶೀರ್ಷಿಕೆ

ಭಾರತೀಯ ಇತಿಹಾಸದಲ್ಲಿ ಮರೆತುಹೋದ ಅಧ್ಯಾಯ, 1905ರಲ್ಲಿ ನಡೆದ ಲಂಡನ್ ಕ್ರಾಂತಿ ಜೊತೆ ಪ್ರೇಮಕಥೆ‌ ಆಧರಿತ ಕಥಾಹಂದರ ಹೊಂದಿರುವ ದಿ ಇಂಡಿಯ ಹೌಸ್ ಚಿತ್ರದ ಮೂಲಕ ನಿರ್ಮಾಪಕರಾದ ರಾಮ್‌ಚರಣ್

ರಾಮ್‌ಚರಣ್‌ ನಿರ್ಮಾಣದ ಚಿತ್ರದಲ್ಲಿ ನಿಖಿಲ್‌ ಸಿದ್ಧಾರ್ಥ್‌ ಹೀರೋ; ಸ್ವಾತಂತ್ರ್ಯ ಪೂರ್ವದ ಕಥೆಗೆ ದಿ ಇಂಡಿಯ ಹೌಸ್‌ ಶೀರ್ಷಿಕೆ
ರಾಮ್‌ಚರಣ್‌ ನಿರ್ಮಾಣದ ಚಿತ್ರದಲ್ಲಿ ನಿಖಿಲ್‌ ಸಿದ್ಧಾರ್ಥ್‌ ಹೀರೋ; ಸ್ವಾತಂತ್ರ್ಯ ಪೂರ್ವದ ಕಥೆಗೆ ದಿ ಇಂಡಿಯ ಹೌಸ್‌ ಶೀರ್ಷಿಕೆ

Ram charan: ನಟನೆಯ ಜತೆಗೆ ಸಿನಿಮಾ ನಿರ್ಮಾಣಕ್ಕೂ ಇಳಿದಿದ್ದಾರೆ ತೆಲುಗು ನಟ ರಾಮ್‌ಚರಣ್‌. ಚೊಚ್ಚಲ ಸಿನಿಮಾದಲ್ಲಿಯೇ ಅಚ್ಚರಿ ಎನಿಸುವ ಕಥೆಯೊಂದಿಗೆ ಅವರ ಆಗಮನವಾಗಿದೆ. ವಿ ಮೆಗಾ ಪಿಕ್ಚರ್ಸ್‌ (V Mega Pictures) ಹೆಸರಿನ ಸಂಸ್ಥೆಯಡಿ ಪ್ಯಾನ್‌ ಇಂಡಿಯಾ ಸಿನಿಮಾ ನಿರ್ಮಾಣಕ್ಕೆ ರಾಮ್‌ಚರಣ್‌ ಕೈಹಾಕಿದ್ದಾರೆ. ಆ ಸಿನಿಮಾದ ಶೀರ್ಷಿಕೆ ಜತೆಗೆ ನಾಯಕ ಯಾರು ಎಂಬ ಕುತೂಹಲವನ್ನೂ ತಣಿಸಿದ್ದಾರವರು.

ವಿ ಮೆಗಾ ಪಿಕ್ಚರ್ಸ್ ಮೂಲಕ ಸಿನಿಮಾ ಮಾಡುತ್ತಿರುವ ರಾಮ್‌ಚರಣ್‌ಗೆ ಯುವಿ ಕ್ರಿಯೇಷನ್‌ನ ವಿಕ್ರಮ್ ರೆಡ್ಡಿ ಸಾಥ್ ಕೊಟ್ಟಿದ್ದಾರೆ. ಯುವ ಪ್ರತಿಭೆಗಳಿಗೆ ಅವಕಾಶ ನೀಡಲೆಂದು ಪ್ರಾರಂಭಿಸಿರುವ ವಿ ಮೆಗಾ ಪಿಕ್ಚರ್ಸ್ ಜೊತೆ ಅಭಿಷೇಕ್ ಅಗರ್ವಾಲ್ ಜತೆ ನಿಂತಿದ್ದಾರೆ.

ಹಿಂದಿಯ ಸೂಪರ್‌ ಹಿಟ್‌ ಸಿನಿಮಾ ದಿ ಕಾಶ್ಮೀರಿ ಫೈಲ್ಸ್ ಮತ್ತು ತೆಲುಗಿನ ಕಾರ್ತಿಕೇಯ ಸಿನಿಮಾದಂತಹ ಹಿಟ್ ಸಿನಿಮಾ ನೀಡಿರುವ ಅಭಿಷೇಕ್ ಅಗರ್ವಾಲ್ ಆರ್ಟ್ ಬ್ಯಾನರ್ ಹಾಗೂ ರಾಮ್ ಚರಣ್ ಸಾರಥ್ಯದ ವಿ ಮೆಗಾ ಪಿಕ್ಚರ್ಸ್ ಜಂಟಿಯಾಗಿ ದಿ ಇಂಡಿಯ ಹೌಸ್ ಹೆಸರಿನ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ಪ್ಯಾನ್‌ ಇಂಡಿಯಾ ಚಿತ್ರದಲ್ಲಿ ನಿಖಿಲ್‌ ಹೀರೋ

ವೀರ ಸಾವರ್ಕರ್ 140ನೇ ಜನ್ಮೋತ್ಸವದ ಶುಭ ಸಂದರ್ಭದಲ್ಲಿ ಈ ಸಿನಿಮಾವನ್ನು ರಾಮ್‌ಚರಣ್‌ ಘೋಷಣೆ ಮಾಡಿದ್ದಾರೆ. ಪವರ್ ಪ್ಯಾಕ್ಡ್ ವಿಡಿಯೋ ಮೂಲಕ ತಮ್ಮ ನಿರ್ಮಾಣದ ಚೊಚ್ಚಲ ಪ್ಯಾನ್ ಇಂಡಿಯಾ ಚಿತ್ರ ಯಾವುದು ಎಂಬ ಪ್ರಶ್ನೆಗೆ ಕೊನೆಗೂ ರಾಮಚರಣ್‌ ಉತ್ತರಕೊಟ್ಟಿದ್ದಾರೆ. ಕಾರ್ತಿಕೇಯ, ಕಾರ್ತಿಕೇಯ-2 ನಂತಹ ಮೆಗಾ ಬ್ಲಾಕ್ ಬಸ್ಟರ್ ಸಿನಿಮಾಗಳ ಹೀರೋ ನಿಖಿಲ್ ಸಿದ್ದಾರ್ಥ್ ದಿ ಇಂಡಿಯಾ ಹೌಸ್‌ ಚಿತ್ರದಲ್ಲಿ ನಾಯಕನಾಗಿ ಬಣ್ಣ ಹಚ್ಚುತ್ತಿದ್ದಾರೆ. ಬಾಲಿವುಡ್ ಹಿರಿಯ ನಟ ಅನುಪಮ್ ಕೇರ್ ಪ್ರಮುಖ ಪಾತ್ರದಲ್ಲಿರಲಿದ್ದಾರೆ.

ಭಾರತೀಯ ಇತಿಹಾಸದಲ್ಲಿ ಮರೆತುಹೋದ ಅಧ್ಯಾಯ, 1905ರಲ್ಲಿ ನಡೆದ ಲಂಡನ್ ಕ್ರಾಂತಿ ಜೊತೆ ಪ್ರೇಮಕಥೆಯಾಧಾರಿತ ಕಥಾಹಂದರ ಹೊಂದಿರುವ ದಿ ಇಂಡಿಯ ಹೌಸ್ ಚಿತ್ರವನ್ನು ರಾಮ್ ವಂಶಿ ಕೃಷ್ಣ ನಿರ್ದೇಶಿಸಲಿದ್ದಾರೆ. ಸ್ಪೈ ಸಿನಿಮಾಗಳಿಗೆ ಹೆಸರುವಾಸಿಯಾಗಿರುವ ನಿಖಿಲ್ ಸಿದ್ದಾರ್ಥ್ ಈ ಸಿನಿಮಾ ಮೂಲಕ ಮತ್ತೊಮ್ಮೆ ಮ್ಯಾಜಿಕ್ ಮಾಡುವ ತವಕದಲ್ಲಿದ್ದಾರೆ. ಇನ್ನೇನು ಸಿನಿಮಾ ಶೀಘ್ರದಲ್ಲಿ ಸೆಟ್ಟೇರಲಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ