ಮಗಳು ಕ್ಲಿನ್‌ ಕಾರಾ ಫೋಟೋ ಹಂಚಿಕೊಂಡ ರಾಮ್‌ ಚರಣ್‌ ಪತ್ನಿ ಉಪಾಸನಾ ಕೊನಿಡೇಲ
ಕನ್ನಡ ಸುದ್ದಿ  /  ಮನರಂಜನೆ  /  ಮಗಳು ಕ್ಲಿನ್‌ ಕಾರಾ ಫೋಟೋ ಹಂಚಿಕೊಂಡ ರಾಮ್‌ ಚರಣ್‌ ಪತ್ನಿ ಉಪಾಸನಾ ಕೊನಿಡೇಲ

ಮಗಳು ಕ್ಲಿನ್‌ ಕಾರಾ ಫೋಟೋ ಹಂಚಿಕೊಂಡ ರಾಮ್‌ ಚರಣ್‌ ಪತ್ನಿ ಉಪಾಸನಾ ಕೊನಿಡೇಲ

ದೇವರ ಮನೆಯಲ್ಲಿ ಕುಳಿತಿರುವ ಫೋಟೋವನ್ನು ಉಪಾಸನಾ ಹಂಚಿಕೊಂಡಿದ್ದಾರೆ. ಪಕ್ಕದಲ್ಲೇ ಪುರೋಹಿತರು ದೇವರ ಪೂಜೆ ಮಾಡುತ್ತಿದ್ದಾರೆ. ಮಗುವಿನ ಮಖವನ್ನು ಸ್ಮೈಲಿ ಎಮೋಜಿಯಿಂದ ಮುಚ್ಚಲಾಗಿದೆ.

ಮಗಳು ಕ್ಲಿನ್‌ ಕಾರಾ ಫೋಟೋ ಹಂಚಿಕೊಂಡ ಉಪಾಸನಾ ಕೊನಿಡೇಲ
ಮಗಳು ಕ್ಲಿನ್‌ ಕಾರಾ ಫೋಟೋ ಹಂಚಿಕೊಂಡ ಉಪಾಸನಾ ಕೊನಿಡೇಲ

'ಆರ್‌ಆರ್‌ಆರ್‌' ಸಿನಿಮಾ ರಿಲೀಸ್‌ ಆದಾಗಿನಿಂದ ತೆಲುಗು ನಟ ರಾಮ್‌ ಚರಣ್‌ ಗ್ಲೋಬಲ್‌ ಸ್ಟಾರ್‌ ಆಗಿ ಪ್ರಮೋಷನ್‌ ಪಡೆದಿದ್ದಾರೆ. ಅವರು ಎಲ್ಲಿ ಹೋಗಲಿ ಫ್ಯಾನ್‌ ಫಾಲೋಯಿಂಗ್‌ ಇದ್ದೇ ಇರುತ್ತಾರೆ. ಜಪಾನಿನಲ್ಲಿ ಕೂಡಾ ರಾಮ್‌ ಚರಣ್‌ಗೆ ಅಭಿಮಾನಿ ಬಳಗವಿದೆ. ಸದ್ಯಕ್ಕೆ ರಾಮ್‌ ಚರಣ್‌ ಫಾದರ್‌ ಹುಡ್‌ ಎಂಜಾಯ್‌ ಮಾಡುತ್ತಿದ್ದಾರೆ.

ಜೂನ್‌ 20 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ಉಪಾಸನಾ

ಕಳೆದ ಜೂನ್‌ 20, ಮಂಗಳವಾರ ರಾಮ್‌ ಚರಣ್‌ ಪತ್ನಿ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಂಗಳವಾರ ಮನೆಗೆ ಮಹಾಲಕ್ಷ್ಮಿ ಬಂದ ಖುಷಿಯಲ್ಲಿ ಚಿರಂಜೀವಿ ಹಾಗೂ ಅನಿಲ್‌ ಕಾಮಿನೇನಿ ಕುಟುಂಬ ಮೊಮ್ಮಗಳಿಗೆ ಕ್ಲಿಕ್‌ ಕಾರಾ ಕೊನಿಡೇಲ ಎಂದು ಹೆಸರಿಟ್ಟಿದ್ದರು. 'ಲಲಿತಾ ಸಹಸ್ರನಾಮದಿಂದ ಮಗುವಿನ ಹೆಸರನ್ನು ಆರಿಸಲಾಗಿದೆ. ಈ ಹೆಸರು ಆಧ್ಯಾತ್ಮಿಕ ಜಾಗೃತಿಯನ್ನು ತರುವ ಪರಿವರ್ತಕ ಹಾಗೂ ಶುದ್ಧೀಕರಿಸುವ ಶಕ್ತಿಯನ್ನು ಸೂಚಿಸುತ್ತದೆ' ಎಂದು ಮಗುವಿನ ಹೆಸರಿನ ಅರ್ಥವನ್ನು ಕೂಡಾ ಉಪಾಸನಾ ಸೋಷಿಯಲ್‌ ಮೀಡಿಯಾದಲ್ಲಿ ವಿವರಿಸಿದ್ದರು.

ಮಗು ಹುಟ್ಟಿದ ನಂತರ ಒಂದೆರಡು ಬಾರಿ ರಾಮ್‌ ಚರಣ್‌ ಹಾಗೂ ಉಪಾಸನಾ, ಮಗಳ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಮತ್ತೆ ಉಪಾಸನಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮಗಳ ಫೋಟೋ ಹಂಚಿಕೊಂಡಿದ್ದಾರೆ. ಕಳೆದ ಆಗಸ್ಟ್‌ 25, ವರಮಹಾಲಕ್ಷ್ಮಿ ಹಬ್ಬದಂದು ತೆಗೆದ ಫೋಟೋ ಇದು. ಆದರೆ ಉಪಾಸನಾ 2 ದಿನಗಳ ಹಿಂದೆ ಈ ಫೋಟೋವನ್ನು ಹಂಚಿಕೊಂಡಿದ್ದು ಫೋಟೋ ಈಗ ವೈರಲ್ ಆಗುತ್ತಿದೆ. ''ಇದಕ್ಕಿಂತ ನಾನು ಮತ್ತೇನೂ ಬೇಡುವುದಿಲ್ಲ. ನನ್ನ ಕ್ಲಿನ್‌ ಕಾರಾ ಕೊನಿಡೇಲ ಜೊತೆ ಮೊದಲ ವರಮಹಾಲಕ್ಷ್ಮಿ ಹಬ್ಬ'' ಎಂದು ಉಪಾಸನಾ ಬರೆದುಕೊಂಡಿದ್ದಾರೆ.

ಶುಭ ಹಾರೈಸುತ್ತಿರುವ ನೆಟಿಜನ್ಸ್‌

ದೇವರ ಮನೆಯಲ್ಲಿ ಕುಳಿತಿರುವ ಫೋಟೋವನ್ನು ಉಪಾಸನಾ ಹಂಚಿಕೊಂಡಿದ್ದಾರೆ. ಪಕ್ಕದಲ್ಲೇ ಪುರೋಹಿತರು ದೇವರ ಪೂಜೆ ಮಾಡುತ್ತಿದ್ದಾರೆ. ಮಗುವಿನ ಮಖವನ್ನು ಸ್ಮೈಲಿ ಎಮೋಜಿಯಿಂದ ಮುಚ್ಚಲಾಗಿದೆ. ಉಪಾಸನಾ ಹಂಚಿಕೊಂಡಿರುವ ಫೋಟೋಗೆ ರಾಮ್‌ ಚರಣ್‌ ಕೂಡಾ ಎಮೋಜಿ ಕಾಮೆಂಟ್‌ ಮಾಡಿದ್ದಾರೆ. ಮಗುವಿಗೆ ಒಳ್ಳೆಯದಾಗಲಿ ಎಂದು ನೆಟಿಜನ್ಸ್‌ ಹಾರೈಸುತ್ತಿದ್ದಾರೆ. ಇನ್ನೂ ಕೆಲವರು ಮಗುವಿನ ಮುಖ ಮರೆ ಮಾಚಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಆಗಸ್ಟ್‌ 15ರಂದು ಉಪಾಸನಾ ತಂದೆ ತಾಯಿ, ಮಗುವಿನ ಕೈಯಿಂದ ಧ್ವಜಾರೋಹಣ ಮಾಡಿಸುತ್ತಿರುವ ಫೋಟೋವೊಂದನ್ನು ಉಪಾಸನಾ ಹಂಚಿಕೊಂಡಿದ್ದರು. ಈ ಫೋಟೋಗೆ ಕೂಡಾ ನೆಟಿಜನ್ಸ್‌ ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್‌ ಮಾಡಿದ್ದರು.

Whats_app_banner