ಕನ್ನಡ ಸುದ್ದಿ  /  Entertainment  /  Tollywood News Ram Gopal Varma Announces He Is Joining Politics, To Contest Lok Sabha Election From Pithapuram In Ap Pcp

ಸಿನಿಮಾ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ರಾಜಕೀಯಕ್ಕೆ ಎಂಟ್ರಿ; ಪೀಠಾಪುರಂನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ

ಸಿನಿಮಾ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಗುರುವಾರ ಅನಿರೀಕ್ಷಿತ ಸುದ್ದಿಯೊಂದನ್ನು ತಿಳಿಸಿದ್ದಾರೆ. 2024ರ ಲೋಕಸಭೆ ಚುನಾವಣೆಗೆ ಮುನ್ನ ತಾನು ರಾಜಕೀಯಕ್ಕೆ ಸೇರುವುದಾಗಿ ತಿಳಿಸಿದ್ದಾರೆ. ಪೀಠಾಪುರಂ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಸಿನಿಮಾ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ರಾಜಕೀಯಕ್ಕೆ ಎಂಟ್ರಿ; ಪೀಠಾಪುರಂನಿಂದ ಸ್ಪರ್ಧೆ
ಸಿನಿಮಾ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ರಾಜಕೀಯಕ್ಕೆ ಎಂಟ್ರಿ; ಪೀಠಾಪುರಂನಿಂದ ಸ್ಪರ್ಧೆ

ಲೋಕಸಭೆ ಚುನಾವಣೆ 2024ಕ್ಕೆ ದಿನಗಣನೆ ಆರಂಭವಾಗಿದೆ. ಇದೇ ಸಮಯದಲ್ಲಿ ಸಿನಿಮಾ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಅನಿರೀಕ್ಷಿತವಾದ ಸುದ್ದಿಯೊಂದನ್ನು ತಿಳಿಸಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಗೆ ಆಂಧ್ರಪ್ರದೇಶದಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಆಂಧ್ರ ಪ್ರದೇಶ ರಾಜ್ಯದ ಪೀಠಾಪುರಂ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಟಾಲಿವುಡ್ ನಟ ಮತ್ತು ಜೆಎಸ್‌ಪಿ ಮುಖ್ಯಸ್ಥ ಪವನ್ ಕಲ್ಯಾಣ್ ಅವರನ್ನು ಪೀಠಾಪುರಂ ಕ್ಷೇತ್ರದಲ್ಲಿ ಸ್ಪರ್ಧಿಸುವ ಸೂಚನೆ ದೊರಕಿದ ಬಳಿಕ ರಾಮ್‌ ಗೋಪಾಲ್‌ ವರ್ಮಾ ಈ ಘೋಷಣೆ ಮಾಡಿದ್ದಾರೆ.

ಪವನ್‌ ಕಲ್ಯಾಣ್‌ ಎದುರು ರಾಮ್‌ ಗೋಪಾಲ್‌ ವರ್ಮಾ ಸ್ಪರ್ಧೆ

"ಇದು ತಕ್ಷಣದ ನಿರ್ಧಾರ. ನಾನು ಪೀಠಾಪುರಂನಿಂದ ಸ್ಪರ್ಧಿಸುವುದನ್ನು ಘೋಷಿಸಲು ಸಂತೋಷವಾಗುತ್ತಿದೆ" ಎಂದು ಎಕ್ಸ್‌ ಸೋಷಿಯಲ್‌ ಮೀಡಿಯಾದಲ್ಲಿ ರಾಮ್‌ ಗೋಪಾಲ್‌ ವರ್ಮಾ ಟ್ವೀಟ್‌ ಮಾಡಿದ್ದಾರೆ. ಹೆಚ್ಚಿನ ವಿವರ ಇವರು ನೀಡಿಲ್ಲ. ತೆಲುಗು ದೇಶಂ ಪಕ್ಷ-ಭಾರತೀಯ ಜನತಾ ಪಕ್ಷ-ಜನಸೇನಾ ಪಕ್ಷ (ಜೆಎಸ್‌ಪಿ) ಮೈತ್ರಿಕೂಟವು ಟಾಲಿವುಡ್ ನಟ ಮತ್ತು ಜೆಎಸ್‌ಪಿ ಮುಖ್ಯಸ್ಥ ಪವನ್ ಕಲ್ಯಾಣ್ ಅವರನ್ನು ಪಿಠಾಪುರಂ ಕ್ಷೇತ್ರದಿಂದ ಕಣಕ್ಕಿಳಿಸುವುದಾಗಿ ಘೋಷಿಸಿದ ಬೆನ್ನಲ್ಲೇ ರಾಮ್ ಗೋಪಾಲ್ ವರ್ಮಾ ಅವರ ಈ ಘೋಷಣೆ ಹೊರಬಿದ್ದಿದೆ.

ವ್ಯೋಹಂ ವಿವಾದ

ಕಳೆದ ವರ್ಷ ರಾಮ್‌ ಗೋಪಾಲ್‌ ವರ್ಮಾರ ವ್ಯೋಹಂ ಸಿನಿಮಾದ ಕುರಿತು ವಿವಾದ ಭುಗಿಲೆದ್ದಿತ್ತು. ಆಂಧ್ರ ಪ್ರದೇಶದ ರಾಜಕೀಯವನ್ನು ಆಧಾರವಾಗಿಟ್ಟುಕೊಂಡು ವ್ಯೋಹಂ ಸಿನಿಮಾ ಮಾಡಿದ್ದರು. ಈ ಸಿನಿಮಾವನ್ನು ಆಂಧ್ರ ಪ್ರದೇಶದಲ್ಲಿ ಬಿಡುಗಡೆ ಮಾಡಬಾರದು ಎಂದು ಹಲವು ಸ್ಥಳೀಯ ರಾಜಕೀಯ ನಾಯಕರು ಆಗ್ರಹಿಸಿದ್ದರು. ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್‌ ರಾಜಶೇಖರ ರೆಡ್ಡಿ ಅವರ ಸಾವಿನ ಸುತ್ತಮುತ್ತ ಈ ಸಿನಿಮಾ ತೆಗೆಯಲಾಗಿದೆ ಎಂದು ವಿವಾದ ಮಾಡಲಾಗಿತ್ತು. ಈ ಸಿನಿಮಾದಲ್ಲಿ ಮಾನಸ ರಾಧಕೃಷ್ಣನ್‌, ಅಜ್ಮಲ್‌ ಅಮೀರ್‌ ಮತ್ತು ಸುರಭಿ ಪ್ರಭಾವತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

ಇದಕ್ಕೂ ಮುನ್ನ ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ತಮ್ಮ ರಾಜಕೀಯ ಸಿನಿಮಾ ವ್ಯೂಹಂ ಕುರಿತು ಪ್ರತಿಭಟನೆ ನಡೆಸಿರುವ ಟಿಡಿಪಿ ಮುಖ್ಯಸ್ಥ ನಾರಾ ಚಂದ್ರಬಾಬು ನಾಯ್ಡು, ಟಿಡಿಪಿ ನಾಯಕ ನಾರಾ ಲೋಕೇಶ್ ಮತ್ತು ನಟ-ರಾಜಕಾರಣಿ ಪವನ್ ಕಲ್ಯಾಣ್ ವಿರುದ್ಧ ವಾಗ್ದಾಳಿ ನಡೆಸಿದ್ದರು.ಇದೀಗ ರಾಮ್‌ ಗೋಪಾಲ್‌ ವರ್ಮಾ ಅವರು ತಾವು ರಾಜಕೀಯಕ್ಕೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆಂಧ್ರಪ್ರದೇಶದ ಪೀಠಾಪುರಂ ಕ್ಷೇತ್ರದಲ್ಲಿ ಪವನ್‌ ಕಲ್ಯಾಣ್‌ ಮತ್ತು ರಾಮ್‌ ಗೋಪಾಲ್‌ ವರ್ಮಾರ ನಡುವೆ ಸ್ಪರ್ಧೆ ಏರ್ಪಡುವ ಸೂಚನೆ ದೊರಕಿದೆ.

ಪೆನ್‌ಮೆಸ್ಟಾ ರಾಮ್‌ ಗೋಪಾಲ್‌ ವರ್ಮಾ ಅವರು 1962ರ ಏಪ್ರಿಲ್‌ 7ರಂದು ಜನಿಸಿದರು. ಇವರು ಆರ್‌ಜಿವಿ ಎಂದೇ ಫೇಮಸ್‌. ಇವರು ಸಿನಿಮಾ ನಿರ್ದೇಶಕರಾಗಿ, ಸಿನಿಮಾ ಬರಹಗಾರರಾಗಿ, ನಿರ್ಮಾಪಕರಾಗಿ ಜನಪ್ರಿಯತೆ ಪಡೆದಿದ್ದಾರೆ. ತೆಲುಗು ಮಾತ್ರವಲ್ಲದೆ ಹಿಂದಿ ಮತ್ತು ಕನ್ನಡದಲ್ಲೂ ಸಿನಿಮಾ ನಿರ್ಮಿಸಿದ್ದಾರೆ. ಹಲವು ಪ್ರಯೋಗಶೀಲ ಸಿನಿಮಾಗಳನ್ನೂ ಮಾಡಿದ್ದಾರೆ.

IPL_Entry_Point