RGV: ರಾಮ್‌ ಗೋಪಾಲ್‌ ವರ್ಮಾ ತಲೆ ಕಡಿದು ತಂದವರಿಗೆ ಒಂದು ಕೋಟಿ ರೂ. ಬಹುಮಾನ ಘೋಷಿಸಿದ ಆಂಧ್ರ ಹೋರಾಟಗಾರ!
ಕನ್ನಡ ಸುದ್ದಿ  /  ಮನರಂಜನೆ  /  Rgv: ರಾಮ್‌ ಗೋಪಾಲ್‌ ವರ್ಮಾ ತಲೆ ಕಡಿದು ತಂದವರಿಗೆ ಒಂದು ಕೋಟಿ ರೂ. ಬಹುಮಾನ ಘೋಷಿಸಿದ ಆಂಧ್ರ ಹೋರಾಟಗಾರ!

RGV: ರಾಮ್‌ ಗೋಪಾಲ್‌ ವರ್ಮಾ ತಲೆ ಕಡಿದು ತಂದವರಿಗೆ ಒಂದು ಕೋಟಿ ರೂ. ಬಹುಮಾನ ಘೋಷಿಸಿದ ಆಂಧ್ರ ಹೋರಾಟಗಾರ!

ತೆಲುಗಿನ ವ್ಯೂಹಂ ಸಿನಿಮಾ ಬಿಡುಗಡೆಗೂ ಮುನ್ನವೇ ಸುದ್ದಿಯಲ್ಲಿದೆ. ಈ ಚಿತ್ರದಲ್ಲಿ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಪಕ್ಷದ ಪವನ್‌ ಕಲ್ಯಾಣ್‌ ಬಗ್ಗೆ ಕೆಟ್ಟದಾಗಿ ತೋರಿಸಲಾಗಿದೆ ಎಂದು ಹೋರಾಟಗಾರ ಕೊಲಿಕಿಪುಡಿ ಶ್ರೀನಿವಾಸ್‌ ರಾವ್‌ ಆರೋಪಿಸಿದ್ದಿ, ಆರ್‌ಜಿವಿ ತಲೆ ಕಡಿದು ತಂದವರಿಗೆ 1 ಕೋಟಿ ಬಹುಮಾನ ಘೋಷಿಸಿದ್ದಾರೆ.

RGV: ರಾಮ್‌ ಗೋಪಾಲ್‌ ವರ್ಮಾ ತಲೆ ಕಡಿದು ತಂದವರಿಗೆ ಒಂದು ಕೋಟಿ ರೂ. ಬಹುಮಾನ ಘೋಷಿಸಿದ ಆಂಧ್ರ ಹೋರಾಟಗಾರ!
RGV: ರಾಮ್‌ ಗೋಪಾಲ್‌ ವರ್ಮಾ ತಲೆ ಕಡಿದು ತಂದವರಿಗೆ ಒಂದು ಕೋಟಿ ರೂ. ಬಹುಮಾನ ಘೋಷಿಸಿದ ಆಂಧ್ರ ಹೋರಾಟಗಾರ!

Ram Gopal Varma: ಸೋಷಿಯಲ್‌ ಮೀಡಿಯಾದಲ್ಲಿ ಸದಾ ಒಂದಿಲ್ಲೊಂದು ಟೀಕೆ, ಟಿಪ್ಪಣಿ, ವಿವಾದಗಳ ಮೂಲಕವೇ ಸುದ್ದಿಯಲ್ಲಿರುವ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ, ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಒಂದು ಕಾಲದಲ್ಲಿ ಸಿನಿಮಾ ನಿರ್ಮಾಣದ ಫ್ಯಾಕ್ಟರಿ ಎಂದೇ ಕರೆಸಿಕೊಳ್ಳುತ್ತಿದ್ದ ಈ ನಿರ್ದೇಶಕ ಇದೀಗ ಸಿನಿಮಾಗಳ ಜತೆಗೆ ಕಾಂಟ್ರವರ್ಸಿಯಲ್ಲಿಯೂ ಮುಂದುವರಿಯುತ್ತಿದ್ದಾರೆ. ಇದೀಗ ಇನ್ನೊಂದು ವಿವಾದ ಇವರ ಹೆಗಲೇರಿದೆ.

ತೆಲಂಗಾಣ ಚುನಾವಣೆ ಮುಗಿದಿದೆ. ಇತ್ತ ಆಂಧ್ರಪ್ರದೇಶಲ್ಲೂ ಚುನಾವಣೆಗೆ ಹೆಚ್ಚು ಸಮಯ ಉಳಿದಿಲ್ಲ. ಈ ವೇಳೆ ತೆಲುಗು ನಾಡಲ್ಲಿ ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಅದಕ್ಕೆ ಕಾರಣ; ರಾಮ್‌ ಗೋಪಾಲ್‌ ವರ್ಮಾ ಅವರ ವ್ಯೂಹಂ ಸಿನಿಮಾ. ಈ ಸಿನಿಮಾದಲ್ಲಿನ ಸನ್ನಿವೇಶಗಳೇ ಇದೀಗ ವಿವಾದಕ್ಕೆ ಕಾರಣವಾಗಿವೆ. ಅದೇನೆಂದರೆ, ರಾಮ್‌ ಗೋಪಾಲ್‌ ವರ್ಮಾ ಅವರ ತಲೆ ಕಡಿದು ತಂದವರಿಗೆ 1 ಕೋಟಿ ರೂ. ಬಹುಮಾನ ಘೋಷಣೆ ಮಾಡಲಾಗಿದೆ.

ವ್ಯೂಹಂ ಸಿನಿಮಾದಲ್ಲಿ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರನ್ನು ಅವಮಾನಿಸುವ ರೀತಿಯಲ್ಲಿ ತೋರಿಸಲಾಗಿದೆ ಎಂದು ಟಿಡಿಪಿ ಮತ್ತು ಜನಸೇನಾ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇದೇ ವೇಳೆ ಟಿಡಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಚಿತ್ರ ಬಿಡುಗಡೆಗೆ ತಡೆ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸದ್ಯ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಇತ್ತ ಇದೇ ತಿಂಗಳ 29ಕ್ಕೆ ವ್ಯೂಹಂ ಸಿನಿಮಾ ಬಿಡುಗಡೆಯಾಗಲಿದೆ ಎಂದು ಆರ್‌ಜಿವಿ ಘೋಷಿಸಿದ ಬೆನ್ನಲ್ಲೇ, ಟಿಡಿಪಿ ಮತ್ತು ಜನಸೇನೆ ಸಿನಿಮಾ ಬಿಡುಗಡೆಗೆ ತಡೆಯೊಡ್ಡಲು ಹರಸಾಹಸ ಮಾಡುತ್ತಿದೆ. ಈ ಮಧ್ಯೆ, ಸುದ್ದಿ ವಾಹಿನಿಯಲ್ಲಿ ಚರ್ಚೆಗೆ ಕುಳಿತ ಅಮರಾವತಿ ಚಳವಳಿಯ ನಾಯಕ ಕೊಲಿಕಿ ಪುಡಿ ಶ್ರೀನಿವಾಸ ರಾವ್, ಆರ್‌ಜಿವಿ ವಿರುದ್ಧ ಮಾತಿನ ಚಾಟಿ ಬೀಸಿದ್ದಾರೆ. ರಾಮ್‌ಗೋಪಾಲ್‌ ಅವರ ತಲೆಯನ್ನು ಕತ್ತರಿಸಿ ತಂದವರಿಗೆ ಒಂದು ಕೋಟಿ ರೂ. ಬಹುಮಾನ ಎಂದಿದ್ದಾರೆ.

"ರಾಮಗೋಪಾಲ್ ವರ್ಮಾ ಅವರ ತಲೆಯನ್ನು ಯಾರೇ ಕತ್ತರಿಸಿ ತಂದರೂ, ಒಂದು ಕೋಟಿ ರೂಪಾಯಿ ನೀಡುತ್ತೇನೆ. ಆ ವ್ಯಕ್ತಿ ಸಮಾಜಕ್ಕೆ ಮಾರಕ. ಸಮಾಜಕ್ಕಿಂತ ದೊಡ್ಡದು ಯಾವುದೂ ಇಲ್ಲ" ಎಂದಿದ್ದಾರೆ. ಇತ್ತ ರಾಜಕಾರಣಿಯ ಬಹಿರಂಗ ಹೇಳಿಕೆಗೆ ಟಿವಿ ಡಿಬೇಟ್ ಶೋನಲ್ಲಿದ್ದ ಆ್ಯಂಕರ್ ಸಾಂಬಶಿವರಾವ್, ಶ್ರೀನಿವಾಸ ರಾವ್ ಅವರ ಕಾಮೆಂಟ್ ಹಿಂಪಡೆಯುವಂತೆ ಮನವಿ ಮಾಡಿದ್ದರೂ ಅವರು ಹಿಂದೆ ಸರಿಯಲಿಲ್ಲ. ಮತ್ತೆ ಅದನ್ನೇ ಹೇಳುತ್ತಾ.. ಆರ್‌ಜಿವಿ ತಲೆ ಕತ್ತರಿಸಿದವರಿಗೆ ಒಂದು ಕೋಟಿ ರೂಪಾಯಿ ನೀಡುವುದಾಗಿ ಘೋಷಿಸಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಆರ್‌ಜಿವಿ ಪ್ರತಿಕ್ರಿಯೆ ಹೀಗಿತ್ತು

ಕೊಲಿಕಿ ಪುಡಿ ಶ್ರೀನಿವಾಸ ರಾವ್ ಅವರ ಈ ಕಾಮೆಂಟ್‌ಗೆ ಪ್ರತಿಕ್ರಿಯಿಸಿದ ರಾಮ್ ಗೋಪಾಲ್ ವರ್ಮಾ, ನೇರವಾಗಿ ಆಂಧ್ರ ಪೊಲೀಸರನ್ನು ಟ್ಯಾಗ್ ಮಾಡುವ ವೀಡಿಯೊ ಕ್ಲಿಪ್ ಅನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. "ಕೊಲಿಕಿ ಪುಡಿ ಶ್ರೀನಿವಾಸ್ ರಾವ್ ನನ್ನನ್ನು ಕೊಲ್ಲಲು ಕೋಟ್ಯಂತರ ರೂಪಾಯಿಗಳ ಗುತ್ತಿಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಲಿಕಪುಡಿ ಶ್ರೀನಿವಾಸ ರಾವ್, ಸುದ್ದಿ ವಾಹಿನಿಯ ಆ್ಯಂಕರ್ ಸಾಂಬಶಿವರಾವ್ ಮತ್ತು ಚಾನೆಲ್ ಮಾಲೀಕ ಬಿ ಆರ್ ನಾಯ್ಡು ಅವರ ವಿರುದ್ಧ ದೂರು ನೀಡಲು ವಿಜಯವಾಡದಲ್ಲಿರುವ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ತಲುಪುತ್ತಿದ್ದೇನೆ" ಎಂದು ಬರೆದಿದ್ದಾರೆ. ಬಳಿಕ ಮತ್ತೊಂದು ಪೋಸ್ಟ್‌ನಲ್ಲಿ ದೂರು ನೀಡಿದ ಬಗ್ಗೆ ಹೇಳಿಕೊಂಡಿದ್ದಾರೆ.

Whats_app_banner