Pushpa 2 Update: ಪುಷ್ಪ 2 ಚಿತ್ರದಲ್ಲಿ ರಣವೀರ್ ಸಿಂಗ್‌ಗೇನು ಪಾತ್ರ?; ಬಿಡುಗಡೆ ಬಗ್ಗೆ ಅಭಿಮಾನಿ ವಲಯದಲ್ಲಿ ಅಸಮಾಧಾನ
ಪುಷ್ಪ ಸಿನಿಮಾ ನಿತ್ಯ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತದೆ. ಇದೀಗ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿರುವ ಬಗ್ಗೆ ಮತ್ತು ಇದೇ ಬಳಗಕ್ಕೆ ರಣವೀರ್ ಸಿಂಗ್ ಎಂಟ್ರಿಯಾಗಲಿದ್ದಾರೆ ಎಂಬ ಮಾತೂ ಕೇಳಿಬರುತ್ತಿದೆ.
Pushpa 2 Update: ಟಾಲಿವುಡ್‌ನ ಈ ವರ್ಷದ ಬಹುನಿರೀಕ್ಷಿತ ಪುಷ್ಪ 2 (Pushpa 2) ಸಿನಿಮಾ ಸಲುವಾಗಿ ಕೋಟ್ಯಂತರ ಸಿನಿಮಾ ಪ್ರೇಕ್ಷಕರು ಕಾಯುತ್ತಿದ್ದಾರೆ. ಇತ್ತೀಚೆಗೆ ಅಲ್ಲು ಅರ್ಜುನ್ (Allu Arjun) ಬರ್ತ್‌ಡೇ ಪ್ರಯುಕ್ತ ಪುಷ್ಪ 2 ಚಿತ್ರದ ಟೀಸರ್ ಬಿಡುಗಡೆ ಆಗಿತ್ತು. ಇದೀಗ ಸದ್ದಿಲ್ಲದೆ ಇದೇ ಸಿನಿಮಾ ಕುರಿತಾಗಿ ಎರಡೆರಡು ಅಪ್‌ಡೇಟ್ ಸುದ್ದಿಗಳು ಹೊರಬಿದ್ದಿವೆ.
ಎಲ್ಲ ಅಂದುಕೊಂಡಂತೆ ಆಗಿದ್ದರೆ ಸುಕುಮಾರ್ ನಿರ್ದೇಶನದ ಪುಷ್ಪ 2 ಸಿನಿಮಾ ಇದೇ ವರ್ಷ ಬಿಡುಗಡೆ ಆಗಬೇಕಿತ್ತು. ಆದರೆ ಸದ್ಯ ಹರಿದಾಡುತ್ತಿರುವ ಸುದ್ದಿಗಳನ್ನು ಗಮನಿಸಿದರೆ, ಪುಷ್ಪ 2 ಸಿನಿಮಾ 2024ರಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗಿಲ್ಲ. ಮೊದಲ ಭಾಗಕ್ಕಿಂತ ಅಧಿಕ ಬಜೆಟ್ ಮತ್ತು ಹೆಚ್ಚು ಕಾಳಜಿ ವಹಿಸಿ ನಿರ್ದೇಶಕರು ಸಿನಿಮಾ ಮಾಡುತ್ತಿದ್ದಾರೆ. ಹಾಗಾಗಿ ಸಹಜವಾಗಿಯೇ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಲಿದೆಯಂತೆ.
ಇನ್ನು ಪುಷ್ಪ ಸಿನಿಮಾ ಕೇವಲ ಬಿಡುಗಡೆ ವಿಚಾರಕ್ಕೆ ಮಾತ್ರವಲ್ಲದೆ, ನಾಯಕಿಯ ವಿಚಾರದಲ್ಲೂ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಚಿತ್ರದ ನಾಯಕಿ ಶ್ರೀವಲ್ಲಿ ಸಾವಿಗೀಡಾದ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹೈಪ್ ಕ್ರಿಯೇಟ್ ಮಾಡಿತ್ತು. ಹಾಗಾದ್ರೆ ಸಿನಿಮಾದಲ್ಲಿ ರಶ್ಮಿಕಾ ಪಾತ್ರ ಇರಲ್ವಾ ಎಂದೇ ನೆಟ್ಟಿಗರು ಊಹಿಸಿದ್ದರು. ಕೊನೆಗೆ ಅದು ಬೇರೆ ಸಿನಿಮಾದ ಫೋಟೋ ಎಂದ ಸುದ್ದಿ ಹೊರಬಿದ್ದಿತ್ತು. ಅಷ್ಟೇ ಅಲ್ಲ ಅದರಲ್ಲಿರುವುದು ನಾನಲ್ಲ ಎಂದು ಸ್ವತಃ ರಶ್ಮಿಕಾ ಮಂದಣ್ಣ ಹೇಳಿಕೊಂಡಿದ್ದರು.
ಪುಷ್ಪ ಎದುರು ನಿಲ್ತಾರಾ ರಣವೀರ್ ಸಿಂಗ್?
ಇದೆಲ್ಲದರ ನಡುವೆ ಇದೀಗ ಅಭಿಮಾನಿ ವಲಯದ ಕೌತುಕಕ್ಕೆ ತುಪ್ಪ ಸುರಿದಿದ್ದು ಎಂದರೆ, ಇದೇ ಸಿನಿಮಾದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಸಹ ನಟಿಸಲಿದ್ದಾರೆ ಎಂಬುದು. ಬೆಂಕಿ ಇಲ್ಲದೆ ಹೊಗೆಯಾಡದು ಎಂಬ ಮಾತಿನಂತೆ, ಈಗ ಪುಷ್ಪ 2 ಸಿನಿಮಾಕ್ಕೆ ರಣವೀರ್ ಸಿಂಗ್ ಸಹ ಅತಿಥಿ ಪಾತ್ರದಲ್ಲಿ ಎಂಟ್ರಿಕೊಡಲಿದ್ದಾರಂತೆ. ಕೆಲ ಮೂಲಗಳ ಪ್ರಕಾರ ಅವರದ್ದಿಲ್ಲಿ ಉತ್ತರ ಭಾರತ ಮೂಲದ ಖಡಕ್ ಪೊಲೀಸ್ ಪಾತ್ರ ಎಂದೇ ಹೇಳಲಾಗುತ್ತಿದೆ. ಈಗಾಗಲೇ ಫಹಾದ್ ಫಾಸಿಲ್ ಪೊಲೀಸ್ ಅಧಿಕಾರಿಯಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ
Kichcha 46: ಕಿಚ್ಚ ಸುದೀಪ್ ಮುಂದಿನ ಸಿನಿಮಾ ಬಗ್ಗೆ ಸಿಕ್ತು ಅಪ್‌ಡೇಟ್; ಸುದೀಪ್ ಜತೆ ಕೈ ಜೋಡಿಸಿದ ಕಬಾಲಿ, ಅಸುರನ್ ನಿರ್ಮಾಪಕ
Kichcha 46: ಕಿಚ್ಚ ಸುದೀಪ್ ಮುಂದಿನ ಸಿನಿಮಾ ಯಾವುದು? ಈ ಪ್ರಶ್ನೆಗೆ ಸೋಷಿಯಲ್ ಮೀಡಿಯಾದಲ್ಲಿ ತರಹೇವಾರಿ ಉತ್ತರಗಳು ಹರಿದಾಡುತ್ತಿದ್ದವು. ಆದರೆ, ಅದಕ್ಕೆ ಸೂಕ್ತ ಉತ್ತರ ಮಾತ್ರ ಸಿಕ್ಕಿರಲಿಲ್ಲ. ಹೀಗಿರುವಾಗಲೇ ಚುನಾವಣೆ ಪ್ರಚಾರದ ಸಂದರ್ಭದಲ್ಲಿಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದರು. ಇದೇ ಮೇ 22ರಂದು ಒಂದು ಸಿನಿಮಾದ ಪ್ರೋಮೋ ಶೂಟ್ ಶುರುವಾಗಲಿದೆ. ಜೂನ್ 1ರಂದು ಆ ಸಿನಿಮಾ ಲಾಂಚ್ ಆಗಲಿದೆ ಎಂದಿದ್ದರು. ಈಗ ಆ ಚಿತ್ರದ ಬಗ್ಗೆಯೇ ಅಪ್‌ಡೇಟ್ ಮಾಹಿತಿ ಲಭ್ಯವಾಗಿದೆ. ಪೂರ್ತಿ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಲೇಖನ