ನಟಿಯ ನಗ್ನ ಫೋಟೋ ಬಳಸಿ ಬ್ಲ್ಯಾಕ್‌ ಮೇಲ್‌; ಖ್ಯಾತ ಯೂಟ್ಯೂಬರ್‌ ಹರ್ಷ ಸಾಯಿ ವಿರುದ್ಧ ರೇಪ್‌ ಕೇಸ್‌!-tollywood news rape and cheating case against famous telugu youtuber harsha sai youtuber harsha sai videos mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ನಟಿಯ ನಗ್ನ ಫೋಟೋ ಬಳಸಿ ಬ್ಲ್ಯಾಕ್‌ ಮೇಲ್‌; ಖ್ಯಾತ ಯೂಟ್ಯೂಬರ್‌ ಹರ್ಷ ಸಾಯಿ ವಿರುದ್ಧ ರೇಪ್‌ ಕೇಸ್‌!

ನಟಿಯ ನಗ್ನ ಫೋಟೋ ಬಳಸಿ ಬ್ಲ್ಯಾಕ್‌ ಮೇಲ್‌; ಖ್ಯಾತ ಯೂಟ್ಯೂಬರ್‌ ಹರ್ಷ ಸಾಯಿ ವಿರುದ್ಧ ರೇಪ್‌ ಕೇಸ್‌!

Case against YouTuber Harsha Sai: ಯೂಟ್ಯೂಬರ್ ಹರ್ಷ ಸಾಯಿ ವಿರುದ್ಧ ಹೈದರಾಬಾದ್‌ನಲ್ಲಿ ಕೇಸ್‌ ದಾಖಲಾಗಿದೆ. ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ, ಅತ್ಯಾಚಾರ ಎಸಗಿ ನಗ್ನ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದಾನೆ ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಹರ್ಷ ವಿರುದ್ಧ ಪ್ರಕರಣ ದಾಖಲಾಗಿದೆ.

ತೆಲುಗಿನ ಖ್ಯಾತ ಯೂಟ್ಯೂಬರ್‌ ಹರ್ಷ ಸಾಯಿ ವಿರುದ್ಧ ಹೈದರಾಬಾದ್‌ನಲ್ಲಿ ರೇಪ್‌ ಕೇಸ್‌ ದಾಖಲಾಗಿದೆ.
ತೆಲುಗಿನ ಖ್ಯಾತ ಯೂಟ್ಯೂಬರ್‌ ಹರ್ಷ ಸಾಯಿ ವಿರುದ್ಧ ಹೈದರಾಬಾದ್‌ನಲ್ಲಿ ರೇಪ್‌ ಕೇಸ್‌ ದಾಖಲಾಗಿದೆ.

YouTuber Harsha Sai: ತೆಲುಗಿನ ಜನಪ್ರಿಯ ಯೂಟ್ಯೂಬರ್ ಹರ್ಷ ಸಾಯಿ ವಿರುದ್ಧ ಹೈದರಾಬಾದ್‌ನ ನರಸಿಂಗಿ ಪೊಲೀಸ್‌ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ವಿರುದ್ಧವೂ ರೇಪ್‌ ಕೇಸ್‌ ದಾಖಲಾಗಿತ್ತು. ಆ ಘಟನೆಯ ನಡುವೆಯೇ ಇದೀಗ ಯೂಟ್ಯೂಬರ್‌ ಹರ್ಷ ಸಾಯಿ ವಿರುದ್ಧವೂ ಅತ್ಯಾಚಾರ ಮತ್ತು ವಂಚನೆ ಆರೋಪ ಕೇಳಿಬಂದಿದೆ. ಪ್ರೀತಿ ಮತ್ತು ಮದುವೆ ಹೆಸರಲ್ಲಿ ಹರ್ಷ ಸಾಯಿ ಮೋಸ ಮಾಡಿದ್ದಾರೆ ಎಂದು ನಟಿಯೊಬ್ಬರು ದೂರಿನಲ್ಲಿ ತಿಳಿಸಿದ್ದಾರೆ.

ಅತ್ಯಾಚಾರ ಮಾತ್ರವಲ್ಲದೆ 2 ಕೋಟಿ ರೂಪಾಯಿ ಹಣ ಪಡೆದು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿರುವ ಸಂತ್ರಸ್ತೆ, ಹರ್ಷ ಸಾಯಿ ತನ್ನ ಮೇಲೆ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದಿದ್ದಾರೆ. ಇದಲ್ಲದೆ, ಮದುವೆಯಾಗುವುದಾಗಿ ನಂಬಿಸಿ ತನ್ನ ಮೇಲೆ ಲೈಂಗಿಕ ಕಿರುಕುಳ ನೀಡುವಾಗ ನಗ್ನ ಚಿತ್ರಗಳನ್ನು ತೆಗೆದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಎಂದೂ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಸಂತ್ರಸ್ತೆ ತಮ್ಮ ಪರ ವಕೀಲರ ಜತೆ ಆಗಮಿಸಿ ನರಸಿಂಗಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಯೂಟ್ಯೂಬರ್‌ ಹರ್ಷ ಸಾಯಿ ವಿರುದ್ಧ ಕೇಸ್‌ ದಾಖಲಾಗಿದೆ. ಕೇಸ್‌ ಆಧರಿಸಿ ಆತನ ವಿರುದ್ಧ 328, 376, 354 ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಪೊಲೀಸರು.

ಇದೇ ಕೇಸ್‌ನಲ್ಲಿ ಹರ್ಷಸಾಯಿ ಅವರ ತಂದೆ ರಾಧಾಕೃಷ್ಣ ಅವರ ಕೈವಾಡವೂ ಇದೆ ಎಂಬುದು ಸಂತ್ರಸ್ತ ಯುವತಿಯ ಆರೋಪ. ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹರ್ಷ ಸಾಯಿ ಯೂಟ್ಯೂಬ್‌ನಲ್ಲಿ 10 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿದ್ದಾರೆ. ಬಡವರಿಗೆ ಸಹಾಯ ಮಾಡುವ ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುತ್ತ ಫೇಮಸ್‌ ಆಗಿದ್ದ ಹರ್ಷ, ಹೀಗೆ ಹಣ ಹಂಚುವ ವಿಚಾರಕ್ಕೂ ಕೇಸ್‌ ದಾಖಲಾಗಿತ್ತು. ಇದೀಗ ಅತ್ಯಾಚಾರ ಎಂಬ ಗಂಭೀರ ಆರೋಪ ಎದುರಿಸುತ್ತಿದ್ದಾರೆ.

ಸಾಕ್ಷಿ ಸಲ್ಲಿಸುವಂತೆ ಸಂತ್ರಸ್ತೆಗೆ ಆದೇಶ

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ರಾಜೇಂದ್ರ ನಗರ ಠಾಣೆ ಡಿಸಿಪಿ ಶ್ರೀನಿವಾಸ್‌, ಸಾಕ್ಷಿ ಸಲ್ಲಿಸುವಂತೆ ಸಂತ್ರಸ್ತೆಗೆ ತಿಳಿಸಿದ್ದಾರೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಜನ ಸಾಮಾನ್ಯರಿಗೆ ಆರ್ಥಿಕ ಸಹಾಯ ಮಾಡುವ, ಮಾನವೀಯತೆ ಮೆರೆಯುವ ವೀಡಿಯೋಗಳ ಮೂಲಕ ಯೂಟ್ಯೂಬರ್ ಆಗಿ ಜನಪ್ರಿಯತೆ ಗಳಿಸಿದ್ದ ಹರ್ಷ ಸಾಯಿ ಅವರಿಗೆ ಇಷ್ಟೊಂದು ಹಣ ಎಲ್ಲಿಂದ ಬಂತು ಎಂಬ ಚರ್ಚೆಯೂ ನಡೆಯುತ್ತಿದೆ. ಅಕ್ರಮ ಬೆಟ್ಟಿಂಗ್ ಆಪ್ ಗಳನ್ನು ನಡೆಸುತ್ತಿದ್ದಾರೆ ಎಂಬ ಆರೋಪವೂ ಅವರ ವಿರುದ್ಧ ಕೇಳಿಬಂದಿದೆ.

ಮೆಗಾ ಸಿನಿಮಾಕ್ಕೆ ಸಂತ್ರಸ್ತೆಯೇ ನಿರ್ಮಾಪಕಿ

ರಸ್ತೆಯಲ್ಲಿ ಸಿಕ್ಕ ಸಿಕ್ಕವರಿಗೆ ಹಣ ಹಂಚುವ ಮೂಲಕ ಜನರನ್ನು ಸೆಳೆದಿದ್ದ ಹರ್ಷ ಸಾಯಿ ವಿರುದ್ಧ ಈ ಮೊದಲು ದೂರು ದಾಖಲಾಗಿತ್ತು. ಜೈಲಿಗೂ ಹೋಗಿ ಬಂದಿದ್ದರು. ಯೂಟ್ಯೂಬರ್ ಕಮ್ ಪ್ರಭಾವಿಯಾಗಿ ಜನಪ್ರಿಯತೆ ಪಡೆದಿರುವ ಹರ್ಷ ಸಾಯಿ, ಸಿನಿಮಾದಲ್ಲೂ ನಟಿಸಿದ್ದಾರೆ. ಇತ್ತೀಚೆಗೆ ಪ್ಯಾನ್ ಇಂಡಿಯಾ ಮಟ್ಟದ ಮೆಗಾ ಎಂಬ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಚಿತ್ರದ ಟೀಸರ್ ಕೂಡ ಬಿಡುಗಡೆ ಆಗಿದೆ. ಅಚ್ಚರಿ ವಿಚಾರ ಏನೆಂದರೆ ಈ ಸಿನಿಮಾ ನಿರ್ಮಾಣ ಮಾಡಿದ್ದು ಕೂಡ ದೂರ ನೀಡಿದ ಸಂತ್ರಸ್ತೆಯೇ!

ಹಾಗಾದರೆ ದೂರು ನೀಡಿದ ನಟಿ ಯಾರು?

ಕೆಲ ಮೂಲಗಳ ಪ್ರಕಾರ ಮಹಾರಾಷ್ಟ್ರ ಮೂಲದ ನಟಿ, ಸಿನಿಮಾ ಆಸಕ್ತಿಯಿಂದ ಹೈದರಾಬಾದಿಗೆ ಆಗಮಿಸಿದ್ದರು. ಒಂದೆರಡು ಸಿನಿಮಾಗಳಲ್ಲಿ ನಟಿಸಿ, ಹರ್ಷ ಸಾಯಿ ಜತೆ ಸೇರಿಕೊಂಡರು. ಇದೀಗ ಇದೇ ನಟಿಗೆ 2 ಕೋಟಿ ವಂಚನೆ ಮಾಡಿದ ಆರೋಪವಿದೆ. ನಗ್ನ ಫೋಟೋ ತೆಗೆದು ಬ್ಲಾಕ್‌ಮೇಲ್‌ ಮಾಡಿ, ಅತ್ಯಾಚಾರ ಎಸಗಿದ ಬಗ್ಗೆಯೂ ಸಂತ್ರಸ್ತೆ ದೂರಿನಲ್ಲಿ ನಮೂದಿಸಿದ್ದಾರೆ. ಸದ್ಯ ಈ ಬಗ್ಗೆ ಹರ್ಷ ಸಾಯಿ ಪ್ರತಿಕ್ರಿಯೆ ನೀಡಿಲ್ಲ. ನಟಿಯು ಬಿಗ್‌ಬಾಸ್‌ ಒಟಿಟಿ ಸ್ಪರ್ಧಿಯಾಗಿದ್ದುಮ, ಸ್ವಂತ ನಿರ್ಮಾಣ ಸಂಸ್ಥೆಯನ್ನೂ ಹೊಂದಿದ್ದಾರಂತೆ.

mysore-dasara_Entry_Point