Rashmika Mandanna: ಕೆಂಪು ಸೀರೆಯಲ್ಲಿ ಶ್ರೀವಲ್ಲಿ, ಪುಷ್ಪಾ 2 ಸಿನಿಮಾ ಸೆಟ್‌ನಿಂದ ರಶ್ಮಿಕಾ ಮಂದಣ್ಣರ ವಿಡಿಯೋ ಸೋರಿಕೆ
ಕನ್ನಡ ಸುದ್ದಿ  /  ಮನರಂಜನೆ  /  Rashmika Mandanna: ಕೆಂಪು ಸೀರೆಯಲ್ಲಿ ಶ್ರೀವಲ್ಲಿ, ಪುಷ್ಪಾ 2 ಸಿನಿಮಾ ಸೆಟ್‌ನಿಂದ ರಶ್ಮಿಕಾ ಮಂದಣ್ಣರ ವಿಡಿಯೋ ಸೋರಿಕೆ

Rashmika Mandanna: ಕೆಂಪು ಸೀರೆಯಲ್ಲಿ ಶ್ರೀವಲ್ಲಿ, ಪುಷ್ಪಾ 2 ಸಿನಿಮಾ ಸೆಟ್‌ನಿಂದ ರಶ್ಮಿಕಾ ಮಂದಣ್ಣರ ವಿಡಿಯೋ ಸೋರಿಕೆ

ರಶ್ಮಿಕಾ ಮಂದಣ್ಣ ಅವರು ಕೆಂಪು ಮತ್ತು ಚಿನ್ನದ ಬಣ್ಣದ ಸೀರೆ ತೊಟ್ಟು, ಹಣೆಯಲ್ಲಿ ಸಿಂಧೂರವಿಟ್ಟು, ಸಾಕಷ್ಟು ಆಭರಣ ತೊಟ್ಟ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ರಶ್ಮಿಕಾ ಅವರು ಪುಷ್ಪಾ 2 ಸೆಟ್‌ನಲ್ಲಿದ್ದ ಸಂದರ್ಭದಲ್ಲಿ ಯಾರೋ ವಿಡಿಯೋ ಮಾಡಿದ್ದಾರೆ. ಆ ವಿಡಿಯೋದ ಸ್ಕ್ರೀನ್‌ಶಾಟ್‌ ಫೋಟೋಗಳು ವೈರಲ್‌ ಆಗುತ್ತಿವೆ.

Rashmika Mandanna: ಪುಷ್ಪಾ 2 ಸಿನಿಮಾ ಸೆಟ್‌ನಿಂದ ರಶ್ಮಿಕಾ ಮಂದಣ್ಣರ ವಿಡಿಯೋ ಸೋರಿಕೆ
Rashmika Mandanna: ಪುಷ್ಪಾ 2 ಸಿನಿಮಾ ಸೆಟ್‌ನಿಂದ ರಶ್ಮಿಕಾ ಮಂದಣ್ಣರ ವಿಡಿಯೋ ಸೋರಿಕೆ

ಪುಷ್ಪಾ ದಿ ರೂಲ್‌ ಸಿನಿಮಾದ ಸೆಟ್‌ನಿಂದ ರಶ್ಮಿಕಾ ಮಂದಣ್ಣರ ಹೊಸ ಫೋಟೋವೊಂದು ಹೊರಬಿದ್ದಿದೆ. ಪುಷ್ಪಾ 2 ಸಿನಿಮಾದ ಶೂಟಿಂಗ್‌ ಸೆಟ್‌ನಲ್ಲಿದ್ದ ವೇಳೆ ಯಾರೋ ಅಭಿಮಾನಿ ಈ ವಿಡಿಯೋ ಶೂಟ್‌ ಮಾಡಿದ್ದಾರೆ. ಆ ವಿಡಿಯೋದ ಚಿತ್ರಗಳು ವೈರಲ್‌ ಆಗುತ್ತಿವೆ. ಇದು "ಪುಷ್ಪಾ 2 ಸಿನಿಮಾದಲ್ಲಿ ರಶ್ಮಿಕಾ ಫಸ್ಟ್‌ ಲುಕ್‌" ಎಂದು ವೈರಲ್‌ ಆಗುತ್ತಿದೆ.

ಪುಷ್ಪಾ 2 ಸಿನಿಮಾದ ಶ್ರೀವಲ್ಲಿ

ಎಕ್ಸ್‌ನಲ್ಲಿ ವೈರಲ್‌ ಆದ ಈ ವಿಡಿಯೋದಲ್ಲಿ ರಶ್ಮಿಕಾ ಅವರು ಕೆಂಪು ಮತ್ತು ಚಿನ್ನದ ಬಣ್ಣದ ಸೀರೆ ಉಟ್ಟಿರುವುದನ್ನು ಗಮನಿಸಬಹುದು. ಇವರು ತಮ್ಮ ತಂಡದ ಜತೆಗೆ ನಡೆದಾಡುತ್ತಿರುವ ವಿಡಿಯೋ ಇದಾಗಿದೆ. ನಟಿ ಸಾಕಷ್ಟು ಸಾಂಪ್ರದಾಯಿಕ ಆಭರಣಗಳನ್ನು ಧರಿಸಿದ್ದಾರೆ. ತಲೆಗೆ ಹೂವು ಕೂಡ ಮುಡಿದಿದ್ದಾರೆ. ಇದೇ ಸಮಯದಲ್ಲಿ ನಟಿಯನ್ನು ನೋಡಲು ಬಂದ ಜನರಿಗೆ ಹಾಯ್‌ ಅಂದಿದ್ದಾರೆ. ಹಣೆಯಲ್ಲಿ ಸಿಂಧೂರ ಧರಿಸಿರುವ ಶ್ರೀವಲ್ಲಿಯ ಈ ಫೋಟೋಗಳು, ವಿಡಿಯೋ ವೈರಲ್‌ ಆಗುತ್ತಿದೆ. ಈ ವಿಡಿಯೋದಲ್ಲಿ ಆಕೆಯ ಭದ್ರತಾ ಸಿಬ್ಬಂದಿಗಳು, ಪೊಲೀಸ್‌ ಅಧಿಕಾರಿಗಳೂ ಕಾಣಿಸಿದ್ದಾರೆ.

ಶ್ರೀವಲ್ಲಿ ಫಸ್ಟ್‌ ಲುಕ್‌ಗೆ ಅಭಿಮಾನಿಗಳ ಪ್ರತಿಕ್ರಿಯೆ

"ವಾಹ್‌, ಇಲ್ಲಿದೆ ಶ್ರೀವಲ್ಲಿ ಫಸ್ಟ್‌ ಲುಕ್‌. ಪುಷ್ಪಾ ಸಿನಿಮಾ ನೋಡಲು ನಮ್ಮ ಕಾತರ ಹೆಚ್ಚಾಗಿದೆ" ಎಂದು ಅಭಿಮಾನಿಯೊಬ್ಬರು ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ. "ನಮ್ಮ ಸುಂದರಿ ಶ್ರೀವಲ್ಲಿ. 1000 ಕೋಟಿ ಲೋಡಿಂಗ್‌" ಎಂದು ಇನ್ನೊಬ್ಬರು ಬರೆದಿದ್ದಾರೆ. "ತುಂಬಾ ಅದ್ಭುತವಾಗಿ ಕಾಣಿಸುತ್ತಿದ್ದಾರೆ" "ಪುಷ್ಪಾ 2 ರಿಲೀಸ್‌ಗೆ ಕಾಯುತ್ತಿದ್ದೇವೆ" "ರಶ್ಮಿಕಾ ಮಂದಣ್ಣ ಬ್ಯೂಟಿಫುಲ್‌" ಎಂದೆಲ್ಲ ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಕೆಲವು ದಿನಗಳ ಹಿಂದೆ ಪುಷ್ಪಾ 2 ಸಿನಿಮಾದ ಒಂದು ಚಿತ್ರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಕಲ್ಲು ಬಂಡೆಯ ಗೋಡೆಯ ಮೇಲೆ ಹಣತೆ ಹಚ್ಚುವ ಫೋಟೋ ಅದಾಗಿದೆ. "ಯಗ್ನಾಟಿ ದೇಗುಲದ ಇಂದಿನ ಶೂಟಿಂಗ್‌ ಮುಗಿಯಿತು. ಈ ಸ್ಥಳದ ಇತಿಹಾಸ ಅದ್ಭುತವಾಗಿದೆ. ಇಲ್ಲಿನ ಜನರು, ಈ ಸ್ಥಳ, ನಿಜಕ್ಕೂ ಖುಷಿಕೊಟ್ಟಿದೆ" ಎಂದು ಅವರು ಬರೆದಿದ್ದಾರೆ.

ರಶ್ಮಿಕಾ ಮಂದಣ್ಣ ಹಂಚಿಕೊಂಡ ಫೋಟೋ
ರಶ್ಮಿಕಾ ಮಂದಣ್ಣ ಹಂಚಿಕೊಂಡ ಫೋಟೋ

ಫೆಬ್ರವರಿ ತಿಂಗಳಲ್ಲಿ ರಶ್ಮಿಕಾ ಮಂದಣ್ಣ ಅವರು ಪುಷ್ಪಾ 2 ಸೆಟ್‌ನಲ್ಲಿ ನಿರ್ದೇಶಕ ಸುಕುಮಾರ್‌ ಅವರ ಫೋಟೋ ಹಂಚಿಕೊಂಡಿದ್ದರು. ಸುಕುಮಾರ್‌ ಅವರು ಶೂಟಿಂಗ್‌ ಸೆಟ್‌ನಲ್ಲಿ ಫಿಲ್ಮ್‌ ಮೇಕಿಂಗ್‌ನಲ್ಲಿದ್ದಾಗ ಈ ಫಿಲ್ಮ್‌ ಕ್ಲಿಕ್ಕಿಸಲಾಗಿದೆ.

ಪುಷ್ಪಾ ದಿ ರೂಲ್‌ ಸಿನಿಮಾದ ಕುರಿತು

ಇತ್ತೀಚೆಗೆ ನಟ ಅಲ್ಲು ಅರ್ಜುನ್‌ ಅವರು ಪುಷ್ಪಾ ದಿ ರೂಲ್‌ ಸಿನಿಮಾದ ರಿಲೀಸ್‌ ದಿನಾಂಕದ ಪೋಸ್ಟರ್‌ ಬಿಡುಗಡೆ ಮಾಡಿದ್ದರು. ರಿಂಗ್‌ಗಳು, ಬ್ರೇಸ್‌ಲೆಟ್‌ ಧರಿಸಿರುವ ಅಲ್ಲು ಅರ್ಜುನ್‌ ಚೇರ್‌ನಲ್ಲಿ ಪುಷ್ಪಾ ಸ್ಟೈಲ್‌ನಲ್ಲಿ ಕುಳಿತಿರುವ ಚಿತ್ರವನ್ನು ಆ ಪೋಸ್ಟರ್‌ ಹೊಂದಿತ್ತು. ಆಗಸ್ಟ್‌ 15ರಂದು ಪುಷ್ಪಾ ದಿ ರೂಲ್‌ ಸಿನಿಮಾ ಬಿಡುಗಡೆಯಾಗಲಿದೆ.

ಪುಷ್ಪಾ ದಿ ರೈಸ್‌ ಸಿನಿಮಾದ ಬಗ್ಗೆ

ಪುಷ್ಪಾ ಸಿನಿಮಾದ ಮೊದಲ ಭಾಗವಿದು. ಸುಕುಮಾರ್‌ ನಿರ್ದೇಶನದ ಈ ಸಿನಿಮಾ ಡಿಸೆಂಬರ್‌ 17, 2021ರಂದು ಬಿಡುಗಡೆಯಾಗಿತ್ತು. ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಅತ್ಯುತ್ತಮವಾಗಿ ಗಳಿಕೆ ಮಾಡಿತ್ತು. ಈ ಸಿನಿಮಾದ ಹಾಡುಗಳು, ಡ್ಯಾನ್ಸ್‌ಗಳು ಕೂಡ ವೈರಲ್‌ ಆಗಿದ್ದವು.

ರಶ್ಮಿಕಾ ಮಂದಣ್ಣರ ಇತ್ತೀಚಿನ ಸಿನಿಮಾ

ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರು ಅನಿಮಲ್‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸಂದೀಪ್‌ ರೆಡ್ಡಿ ವಂಗಾ ನಿರ್ದೇಶನದ ಈ ಸಿನಿಮಾದಲ್ಲಿ ರಣಬೀರ್‌ ಕಪೂರ್‌, ಬಾಬಿ ಡಿಯೋಲ್‌ ಮತ್ತು ಅನಿಲ್‌ ಕಪೂರ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Whats_app_banner