Rashmika: ನಾನು ಮತ್ತು ವಿಜಯ ದೇವರಕೊಂಡ ಮಧ್ಯಮ ವರ್ಗದ ಕುಟುಂಬದಿಂದ ಬಂದವರು; ವಿಜ್ಜು ಬಗ್ಗೆ ಮನಬಿಚ್ಚಿ ಮಾತನಾಡಿದ ರಶ್ಮಿಕಾ ಮಂದಣ್ಣ
ಇಂದು ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ. ಈ ಸಮಯದಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಕುರಿತು ಒಂದಿಷ್ಟು ಗುಸುಗುಸು ಮಾತುಗಳು ಕೇಳಿಬರುತ್ತಿವೆ. ಇದೇ ಸಮಯದ್ಲಿ ವಿಡಿಯೋಕಾಸ್ಟ್ ಸಂದರ್ಶನದಲ್ಲಿ ನೇಹಾ ದೂಪಿಯಾರ ಬಳಿ ವಿಜಯ್ ದೇವರಕೊಂಡರ ಕುರಿತು ತಾನು ಇಷ್ಟಪಡುವ ಮತ್ತು ಇಷ್ಟಪಡದ ಸಂಗತಿಗಳನ್ನು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ವಿಜಯ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಿಜವಾದ ಪ್ರೇಮಿಗಳೋ, ಸ್ನೇಹಿತರೋ ಯಾರಿಗೂ ಸ್ಪಷ್ಟತೆ ಇಲ್ಲ. ಬಹುತೇಕರ ಪ್ರಕಾರ ಇವರು ಲವರ್‌ಗಳು, ಶೀಘ್ರದಲ್ಲಿ ಮದುವೆಯಾಗಲಿದ್ದಾರೆ. ಆದರೆ, ಸಂದರ್ಶನಗಳಲ್ಲಿ ರಶ್ಮಿಕಾ ಮಂದಣ್ಣ ಹೇಳೋದು "ವಿಜಯ ದೇವರಕೊಂಡ ಬೆಸ್ಟ್ ಫ್ರೆಂಡ್" ಎಂದು. ತಮ್ಮ ಬಗ್ಗೆ ಬರುವ ಗಾಸಿಪ್‌ಗಳ ಕುರಿತು ಇವರು ನಿರಾಕರಿಸುವುದೂ ಇಲ್ಲ, ಒಪ್ಪಿಕೊಳ್ಳುವುದೂ ಇಲ್ಲ, ಕೋಪಗೊಳ್ಳುವುದೂ ಇಲ್ಲ. ಇತ್ತೀಚೆಗೆ ನೇಹಾ ದೂಪಿಯಾ ಅವರು ತನ್ನ ವೊಡ್‌ಕಾಸ್ಟ್‌ನ ಇತ್ತೀಚಿನ ಸಂಚಿಕೆಯಲ್ಲಿ ರಶ್ಮಿಕಾ ಮಂದಣ್ಣರ ಜತೆ ಮಾತನಾಡಿದ್ದಾರೆ.
ನಿಮ್ಮ ಗೆಳೆಯ ವಿಜಯ್ ಬಗ್ಗೆ ಇಷ್ಟಪಡುವ ಅಂಶಗಳೇನು? ಎಂಬ ನೇಹ ಪ್ರಶ್ನೆಗೆ ರಶ್ಮಿಕಾ ಮಂದಣ್ಣ ಹೀಗೆ ಹೇಳಿದ್ದಾರೆ. "ನಾವು ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ನಮ್ಮ ಯೋಚನೆ ಮತ್ತು ದೃಷ್ಟಿಕೋನ ಒಂದೇ ರೀತಿ ಇದೆ. ನನಗೆ ಇದು ಖುಷಿ ಕೊಡುವ ಸಂಗತಿ. ಇದರಿಂದಾಗಿ ಅವರ ಜತೆ ಸ್ನೇಹ ಸುಲಭವಾಗಿದೆ" ಎಂದು ಅವರು ಹೇಳಿದ್ದಾರೆ. ವಿಜಯ್ ದೇವರಕೊಂಡರ ಕೆಟ್ಟ ಗುಣ ಯಾವುದು? ಎಂಬ ಪ್ರಶ್ನೆಗೆ ರಶ್ಮಿಕಾರ ಉತ್ತರ ಹೀಗಿತ್ತು. ""ಆತ ಯಾವಾಗಲೂ ತುಂಬಾ ಸೀರಿಯಸ್ ಆಗಿರುತ್ತಾನೆ. ಆತ ರಾಕೆಟ್ ರೀತಿ ಇರುತ್ತಾನೆ. ಇದು ಆತನಿಗೆ ಹೊಂದಾಣಿಕೆಯಾಗುತ್ತದೆ" ಎಂದು ಹೇಳಿದ್ದಾರೆ. ಇದೇ ಸಮಯದಲ್ಲಿ ವಿಜಯ್ ದೇವರಕೊಂಡರಿಗೆ ತಾನಿಟ್ಟ ನಿಕ್ ನೇಮ್ "ವಿಜ್ಜು" ಎಂದು ಅವರು ಹೇಳಿದ್ದಾರೆ. ನನ್ನ ಇತರೆ ಎಲ್ಲಾ ಸ್ನೇಹಿತರಿಗೆ ಹೋಲಿಸಿದರೆ ನನಗೆ ವಿಜಯ್ ದೇವರಕೊಂಡ ಅತ್ಯುತ್ತಮ ಸಲಹೆ ನೀಡುತ್ತಾರೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
ರಶ್ಮಿಕಾ ಬರ್ತ್‌ಡೇ ವಾರ
ರಶ್ಮಿಕಾ ಮಂದಣ್ಣ ಈಗ ಅಬುದಾಬಿಯಲ್ಲಿದ್ದಾರೆ. ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಇವರು ಇದು ನನ್ನ ಹುಟ್ಟುಹಬ್ಬದ ವಾರ ಎಂದು ಆನಂದಿಸುತ್ತಿದ್ದಾರೆ. ಈ ಪ್ರವಾಸದಲ್ಲಿ ವಿಜಯ್ ದೇವರಕೊಂಡ ಕೂಡ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಆದರೆ, ಈ ಕುರಿತು ಅಧಿಕೃತ ಮಾಹಿತಿ ಇಲ್ಲ. ರಶ್ಮಿಕಾ ಮಂದಣ್ಣ ಹಂಚಿಕೊಂಡ ಚಿತ್ರಗಳು ಮತ್ತು ವಿಜಯ್ ದೇವರಕೊಂಡ ಹಂಚಿಕೊಂಡಿರುವ ಚಿತ್ರಗಳಲ್ಲಿ ಇರುವ ಸಾಮ್ಯತೆಗಳನ್ನು ಅಭಿಮಾನಿಗಳು ಅವಲೋಕಿಸಿ "ಇಬ್ರೂ ಒಟ್ಟಿಗೆ ಇದ್ದಾರೆ" ಎಂದೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಬರೆಯುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಹಂಚಿಕೊಂಡು ಚಿತ್ರವೊಂದರ ಹಿಂದೆ ನವಿಲು ಇತ್ತು. ವಿಜಯ್ ದೇವರಕೊಂಡ ಅವರ ದಿ ಫ್ಯಾಮಿಲಿ ಸ್ಟಾರ್ ಸಿನಿಮಾದ ಪ್ರಮೋಷನ್ ವಿಡಿಯೋದ ಬ್ಯಾಕ್‌ಗ್ರೌಂಡ್‌ನಲ್ಲೂ ನವಿಲು ಇತ್ತು.
ರಶ್ಮಿಕಾ ಮಂದಣ್ಣರ ಅತ್ಯುತ್ತಮ 6 ಸಿನಿಮಾಗಳು
ರಶ್ಮಿಕಾ ಮಂದಣ್ಣ ಇಲ್ಲಿಯವರೆಗೆ ಸುಮಾರು ಹದಿನಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ಕಿರಿಕ್ ಪಾರ್ಟಿಯಿಂದ ಇತ್ತೀಚಿನ ಅನಿಮಲ್‌ವರೆಗೆ ಬಹುತೇಕ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ನಿರ್ಮಾಪಕರ ಪಾಲಿಗೆ ಭರವಸೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಕರ್ನಾಟಕದ ವಿರಾಜಪೇಟೆ ಮೂಲದ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಶ್, ಇವರು ನಟಿಸಿದ ಹತ್ತು ಹಲವು ಸಿನಿಮಾಗಳಲ್ಲಿ ತಪ್ಪದೇ ನೋಡಿ ಎನ್ನಬಹುದಾದ ಆರು ಸಿನಿಮಾಗಳ ವಿವರ ಇಲ್ಲಿದೆ.
