ಕನ್ನಡ ಸುದ್ದಿ  /  ಮನರಂಜನೆ  /  Rashmika Mandanna: ಪುಷ್ಪ 2ನಲ್ಲಿ ಶ್ರೀವಲ್ಲಿ 2.0 ನೋಡಲಿದ್ದೀರಿ; ತನ್ನ ಪವರ್‌ಫುಲ್‌ ಪಾತ್ರದ ಕುರಿತು ರಶ್ಮಿಕಾ ಮಂದಣ್ಣ ಮಾತು

Rashmika Mandanna: ಪುಷ್ಪ 2ನಲ್ಲಿ ಶ್ರೀವಲ್ಲಿ 2.0 ನೋಡಲಿದ್ದೀರಿ; ತನ್ನ ಪವರ್‌ಫುಲ್‌ ಪಾತ್ರದ ಕುರಿತು ರಶ್ಮಿಕಾ ಮಂದಣ್ಣ ಮಾತು

ಪುಷ್ಪ 2 ದಿ ರೂಲ್‌ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣರ ಪಾತ್ರ ಬೇರೆಯದ್ದೇ ಲೆವೆಲ್‌ನಲ್ಲಿ ಇರಲಿದೆಯಂತೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ "ನೀವು ಪುಷ್ಪ 2ನಲ್ಲಿ ಶ್ರೀವಲ್ಲಿ 2.0ರನ್ನು ನೋಡಲಿದ್ದೀರಿ" ಎಂದು ಮಾಹಿತಿ ನೀಡಿದ್ದಾರೆ. ಸುಕುಮಾರ್‌ ನಿರ್ದೇಶನದ ಈ ಸಿನಿಮಾ ಆಗಸ್ಟ್‌ 15ರಂದು ತೆರೆ ಕಾಣಲಿದೆ.

ಪುಷ್ಪ 2ನಲ್ಲಿ ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ
ಪುಷ್ಪ 2ನಲ್ಲಿ ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಅವರು ಸುಕುಮಾರ್ ನಿರ್ದೇಶಣದ ಪುಷ್ಪ 2: ದಿ ರೂಲ್ ಸಿನಿಮಾದಲ್ಲಿ ಶ್ರೀವಲ್ಲಿ ಪಾತ್ರದಲ್ಲೇ ಮುಂದುವರೆಯಲಿದ್ದಾರೆ. 2021ರ ಪುಷ್ಪ ದಿ ರೈಸ್‌ನ ಶ್ರೀವಲ್ಲಿಗೆ ಹೋಲಿಸಿದರೆ ಪುಷ್ಪ 2ನಲ್ಲಿ ಇವರ ಪಾತ್ರ ಹೆಚ್ಚು ಪವರ್‌ಫುಲ್‌ ಆಗಿರಲಿದೆ. ಈ ಕುರಿತು ಲೈಫ್‌ಸ್ಟೈಲ್‌ ಏಷ್ಯಾ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಮಾಹಿತಿ ನೀಡಿದ್ದಾರೆ. ಈ ಸಂದರ್ಶನದಲ್ಲಿ ಪುಷ್ಪ 1ರಿಂದ ಪುಷ್ಪ 2ರ ಚಿತ್ರದಲ್ಲಿ ತನ್ನ ಪಾತ್ರ ವಿಕಸನಗೊಂಡ ಬಗೆಯನ್ನು ವಿವರಿಸಿದ್ದಾರೆ. ಪುಷ್ಪ 2 ಸಿನಿಮಾದಲ್ಲಿಅಲ್ಲು ಅರ್ಜುನ್‌ ಬೇರೆಯದ್ದೇ ಲೆವೆಲ್‌ನಲ್ಲಿ ನಟಿಸಲಿದ್ದಾರೆ. ಅವರ ಪಾತ್ರಕ್ಕೆ ಸರಿಸಮಾನಾಗಿ ರಶ್ಮಿಕಾ ಮಂದಣ್ಣ ಕೂಡ ಶ್ರೀವಲ್ಲಿ 2.0 ವರ್ಷನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ನೀವು ಶ್ರೀವಲ್ಲಿ 2.0ರನ್ನು ನೋಡಲಿದ್ದೀರಿ

ಕುರಿತು ಲೈಫ್‌ಸ್ಟೈಲ್‌ ಏಷ್ಯಾ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ "ಪುಷ್ಪ 2 ಸಿನಿಮಾದಲ್ಲಿ ಶ್ರೀವಲ್ಲಿಯ ಪಾತ್ರವು ಸವಾಲಿನಿಂದ ಕೂಡಿದೆ ಮತ್ತು ಫನ್‌ ಕೂಡ ಹೊಂದಿದೆ" ಎಂದು ಹೇಳಿದ್ದಾರೆ. "ಪುಷ್ಪ ಸಿನಿಮಾದಲ್ಲಿ ನನ್ನ ಪಾತ್ರದ ಬಗ್ಗೆ ಮಾತ್ರ ಗೊತ್ತು. ಸಿನಿಮಾದ ಕಥೆ ನನಗೆ ಗೊತ್ತಿಲ್ಲ. ಪ್ರತಿದಿನ ಶೂಟಿಂಗ್‌ಗೆ ಹೋದಾಗ ನನಗೆ ಏನೂ ಗೊತ್ತಿರುವುದಿಲ್ಲ. ಆಕೆಯ ಪಾತ್ರವೇನು, ಇಂದು ಯಾವ ರೀತಿ ಇರಬೇಕು ಯಾವುದೂ ಗೊತ್ತಿರುವುದಿಲ್ಲ. ಪ್ರತಿದಿನ ಶೂಟಿಂಗ್‌ಗೆ ಹೋಗುವಾಗ ಮೈದಾನಕ್ಕೆ ಆಟಕ್ಕೆ ಹೋಗುವ ಸ್ಪರ್ಧಿಯಂತೆ ಹೋಗುತ್ತೇನೆ" ಎಂದು ಅವರು ಹೇಳಿದ್ದಾರೆ.

ಪುಷ್ಪ 2 ದಿ ರೂಲ್‌ ಸಿನಿಮಾದಲ್ಲಿ ನನ್ನ ಪಾತ್ರ, ನನ್ನ ಪ್ರಪಂಚದ ಕುರಿತು ಹೆಚ್ಚಿನ ವಿಷಯ ತಿಳಿದಿದ್ದರೂ ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ರಶ್ಮಿಕಾ ಹೇಳಿದ್ದಾರೆ. ಹೀಗಿದ್ದರೂ, ಈ ಸೀಕ್ವೆಲ್‌ನಲ್ಲಿ ನನ್ನ ಪಾತ್ರ "ಸೂಪರ್‌ ಸೋರ್ಟೆಡ್‌" ಎನ್ನಬಹುದು. ಪುಷ್ಪ ಭಾಗ 1ರಲ್ಲಿ ನಾನು ಏನಾಗಿದ್ದೆ ಎಂದು ನಿಮಗೆ ತಿಳಿದಿದೆ. ಪುಷ್ಪ 2ನಲ್ಲಿ ನನ್ನ ಮುಂದಿನ ವರ್ಷನ್‌ ನೋಡುವಿರಿ" ಎಂದು ಅವರು ಹೇಳಿದ್ದಾರೆ.

ಪುಷ್ಪ ಸಿನಿಮಾದಲ್ಲಿ ರಶ್ಮಿಕಾರ ಪಾತ್ರ

ಪುಷ್ಪ ಸಿನಿಮಾದಲ್ಲಿ ರಶ್ಮಿಕಾ ಅವರು ಗ್ರಾಮೀಣ ಯುವತಿ ಶ್ರೀವಲ್ಲಿಯಾಗಿ ನಟಿಸಿದ್ದರು. ಪುಷ್ಪ ರಾಜ್‌ನ ಜತೆ ಪ್ರೀತಿಯಲ್ಲಿದ್ದ ಈಕೆ ಕೊನೆಗೆ ಆತನನ್ನೇ ಮದುವೆಯಾಗುತ್ತಾಳೆ. ಮೊದಲ ಭಾಗದಲ್ಲಿ ಪುಷ್ಪನನ್ನು ರಿಜೆಕ್ಟ್‌ ಮಾಡುವ ಶ್ರೀವಲ್ಲಿ, ಬಳಿಕ ಆತನ ಪ್ರೀತಿಗೆ ಬೀಳುತ್ತಾಳೆ. ಪುಷ್ಪ ಮೊದಲ ಭಾಗದಲ್ಲಿ ಧನಂಜಯ್‌ ಜಾಲಿ ರೆಡ್ಡಿಯ ಕೈಯಿಂದ ಈಕೆಯನ್ನು ಪುಷ್ಪ ಪಾರು ಮಾಡುತ್ತಾನೆ. ಈಗಾಗಲೇ ಪುಷ್ಪ 2 ಚಿತ್ರತಂಡವು ರಶ್ಮಿಕಾರ ಫಸ್ಟ್‌ ಲುಕ್‌ ಬಿಡುಗಡೆ ಮಾಡಿದೆ. ಸಿಲ್ಕ್‌ ಸೀರೆ ಉಟ್ಟು, ಮೈತುಂಬಾ ಚಿನ್ನಾಭರಣ ತೊಟ್ಟು ಡಿಫರೆಂಟ್‌ ಲುಕ್‌ನಲ್ಲಿ ರಶ್ಮಿಕಾ ಮಂದಣ್ಣ ಪೋಸ್‌ ನೀಡಿದ್ದಾರೆ.

ಪುಷ್ಪ 2 ಚಿತ್ರತಂಡವು ಅಲ್ಲು ಅರ್ಜುನ್‌ ಅವರ 42ನೇ ಹುಟ್ಟುಹಬ್ಬಂದದು ಪುಷ್ಪ ದಿ ರೂಲ್‌ ಸಿನಿಮಾದ ಟೀಸರ್‌ ಬಿಡುಗಡೆ ಮಾಡಿತ್ತು. ಈ ಟೀಸರ್‌ನಲ್ಲಿ ಜಾತ್ರೆಯ ಸೀನ್‌ ಇದೆ. ಇದನ್ನು ಸಮ್ಮಕ್ಕ ಸರಲಾಮಾ ಜಾತರ ಎಂದು ಹೇಳಲಾಗುತ್ತದೆ. ಬುಡುಕಟ್ಟು ದೇವಿಗೆ ಪೂಜೆ ಸಲ್ಲಿಸುವಂತಹ ಪ್ರಮುಖ ಜಾತ್ರೆ ಇದಾಗಿದೆ. ಈ ಒಂದು ನಿಮಿಷದ ಟೀಸರ್‌ಗಾಗಿ ಚಿತ್ರತಂಡ ಬಹುಕೋಟಿ ಖರ್ಚು ಮಾಡಿದೆ ಎಂದು ಹೇಳಲಾಗಿದೆ. ಪುಷ್ಪ ದಿ ರೂಲ್‌ ನಲ್ಲಿ ರಶ್ಮಿಕಾ ಮಂದಣ್ಣ ಶ್ರೀವಲ್ಲಿಯಾಗಿ ನಟಿಸಿದ್ದಾರೆ. ರಶ್ಮಿಕಾ ಮಂದಣ್ಣರ ಹುಟ್ಟುಹಬ್ಬದಂದು ಶ್ರೀವಲ್ಲಿಯ ಫಸ್ಟ್‌ ಲುಕ್‌ ಫೋಟೋ ಬಿಡುಗಡೆ ಮಾಡಲಾಗಿತ್ತು. ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ ಮಾತ್ರವಲ್ಲದೆ ಫಹಾದ ಫಾಸಿಲ್‌, ಜಗಪತಿ ಬಾಬು, ಅನಸೂಯ ಭಾರದ್ವಾಜ್‌, ಧನಂಜಯ್‌ ಮುಂತಾದ ಹಲವು ನಟರು ಪುಷ್ಪ 2 ತಾರಾಗಣದಲ್ಲಿದ್ದಾರೆ.

IPL_Entry_Point