Rashmika Mandanna: ವರ್ಕೌಟ್ ವಿಡಿಯೋ ಹಂಚಿಕೊಂಡ ರಶ್ಮಿಕಾ ಮಂದಣ್ಣ; ಫಿಟ್ನೆಸ್‌ಗಾಗಿ ಇಷ್ಟೊಂದು ಶ್ರಮ ವಹಿಸ್ತಾರ ಅನಿಮಲ್ ನಟಿ
Rashmika Mandanna workout: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ಇನ್‌ಸ್ಟಾಗ್ರಾಂನಲ್ಲಿ ಸರಳ ವರ್ಕೌಟ್ ವಿಡಿಯೋ ಹಂಚಿಕೊಂಡಿದ್ದಾರೆ. ಇದರೊಂದಿಗೆ ರಶ್ಮಿಕಾ ಮಂದಣ್ಣ ಅವರ ವರ್ಕೌಟ್ ಮತ್ತು ಡಯೆಟ್ ಹೇಗಿರುತ್ತದೆ ಎಂದು ತಿಳಿದುಕೊಳ್ಳೋಣ.
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ಇನ್‌ಸ್ಟಾಗ್ರಾಂನಲ್ಲಿ ಸರಳ ವರ್ಕೌಟ್ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕಿರಿಕ್ ಪಾರ್ಟಿ ಬಳಿಕ ಟಾಲಿವುಡ್‌ಗೆ ನೆಗೆದ ರಶ್ಮಿಕಾ ಅವರು ತಮ್ಮ ವರ್ಕೌಟ್‌ನ ಕೆಲವು ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ತನ್ನ ಅಭಿಮಾನಿಗಳಿಗೆ ಸೌಂದರ್ಯ ಮತ್ತು ಫಿಟ್ನೆಸ್‌ನ ಗುಟ್ಟು ತುಸು ರಟ್ಟು ಮಾಡಿದ್ದಾರೆ.
"ಅತ್ಯುತ್ತಮ ವರ್ಕೌಟ್ ಮಾಡಿದರೆ ನಿಮ್ಮ ದಿನ ಅತ್ಯುತ್ತಮವಾಗಿರುತ್ತದೆ ಎನ್ನುವುದು ನಿಮಗೆ ಗೊತ್ತಿರಬಹುದು. ಜುನೈದ್ ಅವರೇ (ರಶ್ಮಿಕಾ ವರ್ಕೌಟ್ ಕೋಚ್) ನನಗೆ ನೀವು ಸೂಚಿಸುವಂತಹ ಸರಳ ವ್ಯಾಯಾಮ ಇದೇನ? ನನ್ನನ್ನು ಯಾವಾಗಲೂ ಸಾಯಿಸುತ್ತಿರುವುದಕ್ಕೆ ಧನ್ಯವಾದ. ನಾನು ಇನ್ನಷ್ಟು ಸದೃಢವಾಗಿ ಹೊರಬರುವೆ. ಸದೃಢ ನಾಳೆಗೆ ಚೀಯರ್ಸ್" ಎಂದು ತನ್ನ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ರಶ್ಮಿಕಾ ಮಂದಣ್ಣ ಕ್ಯಾಪ್ಷನ್ ಬರೆದಿದ್ದಾರೆ.
ಈ ವಿಡಿಯೋದಲ್ಲಿ ರಶ್ಮಿಕಾ ಮಂದಣ್ಣ ಅವರು ಕಠಿಣ ವ್ಯಾಯಾಮ ಮಾಡುತ್ತಿರುವುದು ಕಾಣಿಸುತ್ತದೆ. ಜತೆಗೆ ಈ ವ್ಯಾಯಾಮಗಳನ್ನು ಖುಷಿಖುಷಿಯಿಂದ ಮಾಡುತ್ತಿರುವುದನ್ನು ಗಮನಿಸಬಹುದು. ರಶ್ಮಿಕಾ ಮಂದಣ್ಣ ಅವರ ಪೋಸ್ಟ್‌ಗೆ ಸಾಕಷ್ಟು "ರೆಸ್ಪೆಕ್ಟ್" ಎಂದು ಕಾಮೆಂಟ್ ಮಾಡಿದ್ದಾರೆ. ಈ ಮೂಲಕ ಕಠಿಣ ಪರಿಶ್ರಮ ಪಡುವ ಮತ್ತು ಆರೋಗ್ಯದ ಕಾಳಜಿ ವಹಿಸುವವರಿಗೆ ರಶ್ಮಿಕಾ ಮಂದಣ್ಣ ಸ್ಪೂರ್ತಿಯಾಗಿದ್ದಾರೆ.
ಇವರ ಈ ಪೋಸ್ಟ್‌ಗೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ಡೀಪ್‌ಫೇಕ್ ವಿಷಯವನ್ನೂ ಕೆಲವರು ಎಳೆದು ತಂದಿದ್ದಾರೆ. "ಎಲಾನ್ ಮಸ್ಕ್ ಅವತ್ತೇ ಎಐ ಕುರಿತು ಎಚ್ಚರಿಸಿದ್ದರು" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. "ಚೀಪ್ ವಿಷಯಗಳಿಗೆ ಜನರು ಎಐ ಅನ್ನು ತಪ್ಪಾಗಿ ಬಳಸಬಾರದು" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು "ನನ್ನ ಕ್ರಶ್" ಬ್ಯೂಟಿಫುಲ್" "ಮುದ್ದಾಗಿದ್ದೀರಿ" ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.
ರಶ್ಮಿಕಾ ಮಂದಣ್ಣ ವರ್ಕೌಟ್ ಹೀಗಿರುತ್ತೆ
ನಟಿ ರಶ್ಮಿಕಾ ಮಂದಣ್ಣ ತನ್ನ ಫಿಟ್ನೆಸ್ ಮತ್ತು ಸೌಂದರ್ಯ ಕಾಪಾಡಲು ನಿಯಮಿತವಾಗಿ ವ ರ್ಕೌಟ್ ಮಾಡುತ್ತಾರೆ. ಕಾರ್ಡಿಯೊ, ಸ್ಟ್ರೆಂಥ್ ಟ್ರೈನಿಂಗ್ ಮತ್ತು ಯೋಗ ಮಾಡುತ್ತಾರೆ.
ಕಾರ್ಡಿಯೊ: ಪ್ರತಿನಿತ್ಯ 30 ನಿಮಿಷ ಕಾರ್ಡಿಯೋ ಮಾಡುತ್ತಾರೆ. ರನ್ನಿಂಗ್, ಸೈಕ್ಲಿಂಗ್, ಸ್ವಿಮ್ಮಿಂಗ್ ಇತ್ಯಾದಿಗಳನ್ನು ಮಾಡುತ್ತಾರೆ.
ಸ್ಟ್ರೆಂಥ್ ಟ್ರೈನಿಂಗ್: ಸ್ನಾಯು ಬಲ ಹೆಚ್ಚಿಸಲು ಮತ್ತು ಜೀರ್ಣಕ್ರಿಯೆ ಉತ್ತಮಪಡಿಸಿಕೊಳ್ಳಲು ಸ್ಟ್ರೆಂಥ್ ಟ್ರೈನಿಂಗ್ ಮಾಡುತ್ತಾರೆ. ಇದಕ್ಕಾಗಿ ಸ್ಕಾಟ್ಸ್, ಲುಂಗ್ಸ್, ಪುಶ್‌ಅಪ್ ಇತ್ಯಾದಿಗಳನ್ನು ಮಾಡುತ್ತಾರೆ.
ಯೋಗ: ರಶ್ಮಿಕಾ ಮಂದಣ್ಣ ಅವರು ಯೋಗದ ಅಭಿಮಾನಿ. ಮಾನಸಿಕ ಒತ್ತಡ, ಶಾಂತಿ, ನೆಮ್ಮದಿ, ಖುಷಿಖುಷಿಯಾಗಿರಲು ಯೋಗದ ನೆರವು ಪಡೆಯುತ್ತಾರೆ.
ಡಯೆಟ್ ಹೀಗಿರುತ್ತದೆ
ರಶ್ಮಿಕಾ ಮಂದಣ್ಣ ಅವರು ಆರೋಗ್ಯಕಾರಿ ಮತ್ತು ಸಮತೋಲಿನ ಡಯೆಟ್ ಪ್ಲಾನ್ ಹೊಂದಿದ್ದಾರೆ. ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜ ಸಮೃದ್ಧವಾಗಿರುವ ಆಹಾರ ಸೇವಿಸುತ್ತಾರೆ. ಬೆಳಗ್ಗಿನ ಉಪಹಾರಕ್ಕೆ ಮೊಟ್ಟೆ, ಧಾನ್ಯದ ಟೋಸ್ಟ್, ತಾಜಾ ಹಣ್ಣು ಒಳಗೊಂಡಿರುವ ಆರೋಗ್ಯಕಾರ ಉಪಹಾರ ಮಾಡುತ್ತಾರೆ ಎಂದು ಫಿಟ್‌ಪಾ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.
ಮಧ್ಯಾಹ್ನದ ಊಟಕ್ಕೆ, ರಶ್ಮಿಕಾ ಸಾಮಾನ್ಯವಾಗಿ ಸಲಾಡ್ ಅಥವಾ ಕ್ವಿನೋವಾ ಬೌಲ್ ಅನ್ನು ಬೇಯಿಸಿದ ಚಿಕನ್ ಅಥವಾ ಮೀನಿನೊಂದಿಗೆ ತಿನ್ನುತ್ತಾರೆ. ಅವಳು ಸಾಕಷ್ಟು ತರಕಾರಿಗಳು ಮತ್ತು ಆವಕಾಡೊ ಮತ್ತು ಬೀಜಗಳಂತಹ ಆರೋಗ್ಯಕರ ಕೊಬ್ಬನ್ನು ಸಹ ಸೇವಿಸುತ್ತಾರೆ ಎಂದು ಹೇಳಲಾಗಿದೆ. ಹುರಿದ ತರಕಾರಿಗಳೊಂದಿಗೆ ಬೇಯಿಸಿದ ಮೀನು ಅಥವಾ ಚಿಕನ್ ಮತ್ತು ಬ್ರೌನ್ ರೈಸ್ ಅಥವಾ ಸಿಹಿ ಆಲೂಗಡ್ಡೆ ಒಳಗೊಂಡ ಭೋಜನ ಮಾಡುತ್ತಾರೆ. ಸಂಸ್ಕರಿಸಿದ ಆಹಾರ, ಸಕ್ಕರೆ ಪಾನೀಯ ಮತ್ತು ಸಿಹಿ ತಿಂಡಿ ತಿನ್ನುವುದನ್ನು ಆದಷ್ಟು ತಪ್ಪಿಸಿಕೊಳ್ಳುತ್ತಾರೆ ಎಂದು ಫಿಟ್‌ಪಾ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.